ETV Bharat / state

ಹರ್ಷ ಹತ್ಯೆ ಆರೋಪಿಗಳಿಗೆ ಹೆಚ್ಚುವರಿ ಜೈಲು ಶಿಕ್ಷೆ ಸಂಭವ: ಏಕೆ ಗೊತ್ತೇ? - ಆರೋಪಿಗಳಿಂದ ಮೊಬೈಲ್​ ಬಳಕೆ

ಜೈಲಿನಲ್ಲಿ ಮೊಬೈಲ್​ ಬಳಸಿದ್ದ ಹರ್ಷ ಕೊಲೆ ಪ್ರಕರಣದ ಆರೋಪಿಗಳಿಗೆ ಪ್ರತ್ಯೇಕ ಜೈಲು ಶಿಕ್ಷೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.

Accused of Harsha murder case used mobile in jail
ಜೈಲಿನಲ್ಲಿ ಮೊಬೈಲ್​ ಬಳಸಿದ ಹರ್ಷ ಕೊಲೆ ಆರೋಪಿಗಳು
author img

By

Published : Jul 6, 2022, 7:18 AM IST

Updated : Jul 6, 2022, 10:24 AM IST

ಬೆಂಗಳೂರು: ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷನನ್ನು ಭೀಕರವಾಗಿ ಹತ್ಯೆಗೈದ ಆರೋಪಿಗಳ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಜೈಲಿನೊಳಗೆ ಮೊಬೈಲ್ ಬಳಸಿದ್ದಕ್ಕಾಗಿ ಅವರು ಪ್ರತ್ಯೇಕ ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಹರ್ಷ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಆರೋಪಿಗಳು ತಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಮಾತನಾಡಿರುವ ವಿಡಿಯೋಗಳು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಮೋಹನ್, ಜೈಲಿನ ಚೀಫ್​ ಸೂಪರಿಂಟೆಂಡೆಂಟ್ ರಂಗನಾಥ್ ಸೇರಿದಂತೆ 6 ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ತನಿಖೆಗೂ ಆದೇಶಿಸಿದ್ದರು.

ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಸೇರಿದಂತೆ ಅನೇಕ ಆರೋಪಿಗಳು ತಮ್ಮ ಬ್ಯಾರಕ್‌ಗಳಲ್ಲಿ ಮೊಬೈಲ್ ಬಳಸಿದ್ದಾರೆಂಬುದು ವಿಚಾರಣೆಯಲ್ಲಿ ಸಾಬೀತಾಗಿದ್ದು "ಈ ಆರೋಪಕ್ಕಾಗಿ ಮೂಲ ಪ್ರಕರಣದ ಶಿಕ್ಷೆಯನ್ನು ಹೊರತುಪಡಿಸಿ ಪ್ರತ್ಯೇಕ ಐದು ವರ್ಷಗಳ ಶಿಕ್ಷೆಗೆ ಆರೋಪಿಗಳು ಗುರಿಯಾಗಬಹುದು" ಎಂದು ಅಲೋಕ್ ಮೋಹನ್ ಹೇಳಿದರು.

ಇದನ್ನೂ ಓದಿ: ಹರ್ಷನ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಮೊಬೈಲ್ ಸಿಕ್ಕ ಬಗ್ಗೆ ತನಿಖೆ : ಆರಗ ಜ್ಞಾನೇಂದ್ರ

ಇದಲ್ಲದೇ ಎರಡು ದಿನಗಳ ಹಿಂದಷ್ಟೇ ನೂತನ ಸೂಪರಿಂಟೆಂಡೆಂಟ್ ಪಿ.ಎಸ್.ರಮೇಶ್ ನೇತೃತ್ವದಲ್ಲಿ ಜೈಲಿನಲ್ಲಿರುವ 900 ವಿಚಾರಣಾ ಕೈದಿಗಳು ಮತ್ತು 330 ಹೈಸೆಕ್ಯುರಿಟಿ ವಲಯದ ಕೈದಿಗಳ ತಪಾಸಣೆ ನಡೆದಿದೆ. ದಾಳಿಯ ಸಂದರ್ಭದಲ್ಲಿ ಅನೇಕ ಕೈದಿಗಳ ಬಳಿ 80,000 ರೂಪಾಯಿಗೂ ಹೆಚ್ಚು ನಗದು, ಮೆಮೊರಿ ಕಾರ್ಡ್ಸ್, ಸಿಮ್ ಕಾರ್ಡ್ಸ್, ಪೆನ್ ಡ್ರೈವ್ಸ್, ಅಲ್ಯೂಮಿನಿಯಂ ಬಳಸಿ ತಯಾರಿಸಿರುವ ನಾಲ್ಕು ಚಾಕುಗಳು ಪತ್ತೆಯಾಗಿವೆ. ಇದಕ್ಕೆ ಸಂಬಂಧಿಸಿದಂತೆ ಹರ್ಷ ಹತ್ಯೆ ಪ್ರಕರಣದ ಮೂವರು ಸೇರಿದಂತೆ 9 ಆರೋಪಿಗಳ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಕರ್ನಾಟಕ ಕಾರಾಗೃಹ ತಿದ್ದುಪಡಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Last Updated : Jul 6, 2022, 10:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.