ಬೆಂಗಳೂರು : ಸಿಎಂ ಯಡಿಯೂರಪ್ಪ, ರಾಜ್ಯಪಾಲ ವಜುಭಾಯಿವಾಲಾರಿಂದ ಉದ್ಘಾಟನೆಗೊಂಡ ಕಂಠೀರವ ಕ್ರೀಡಾಂಗಣದಲ್ಲಿನ ರಾಜ್ಯ ಒಲಿಂಪಿಕ್ ಸಂಸ್ಥೆಯ ಕಟ್ಟಡದಲ್ಲಿ ನಿರ್ಮಾಣವಾಗಿರುವ 'ಹಾಲ್ ಆಫ್ ಫೇಮ್' ಎಂಬುದು ಅದ್ಭುತ ಕಲ್ಪನೆಯಾಗಿದೆ.
ಅದರಲ್ಲೇ ಈ ಚಿತ್ರ ಲೋಕ ಸೃಷ್ಟಿಯಾಗಿದೆ. ಈ ಬಗ್ಗೆ ಸಂಸ್ಥೆಯ ಅಧ್ಯಕ್ಷರಾದ ಗೋವಿಂದ್ ರಾಜ್ ಮಾಹಿತಿ ನೀಡಿದ್ದು, ಅವರು ವಿದೇಶಗಳಲ್ಲಿ ಈ ರೀತಿಯ ಕ್ರೀಡಾ ವಿಶೇಷ ಜಾಗಗಳನ್ನು ನೋಡಿ ನಮ್ಮ ದೇಶದಲ್ಲಿ ಯಾಕೆ, ಅದರಲ್ಲೂ ಬೆಂಗಳೂರಿನಲ್ಲಿ ಯಾಕೆ ಇದನ್ನು ಮಾಡಬಾರದು ಎಂಬ ಯೋಚನೆ ಈ ಹಾಲ್ ಆಫ್ ಫೇಮ್ ಸೃಷ್ಟಿಗೆ ಕಾರಣ ಎಂದು ಹೇಳಿದ್ರು.
ಇಲ್ಲಿ ಸುಮಾರು 57 ಜನ ಪದ್ಮಶ್ರೀ, ದ್ರೋಣಾಚಾರ್ಯ, ಅರ್ಜುನ ಪ್ರಶಸ್ತಿ, ಒಲಿಂಪಿಕ್ನಲ್ಲಿ ಭಾಗವಹಿಸಿದವರ ವಿಶೇಷ ಚಿತ್ರಗಳಿವೆ. ಕ್ರೀಡಾ ರಂಗಕ್ಕೆ ವಿಶೇಷ ಕೊಡುಗೆ ನೀಡಿದ ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಚಿತ್ರಗಳಿದ್ದು, ನೋಡುಗರನ್ನು ನೆನಪಿನಂಗಳಕ್ಕೆ ಕರೆದೊಯ್ಯುತ್ತವೆ. 1952ರಿಂದ ಅಧಿಕಾರ ನಡೆಸಿದ ಮುಖ್ಯಮಂತ್ರಿಗಳ, ಸಚಿವರ, ಶಾಸಕರ, ಕ್ರೀಡಾ ಚಟುವಟಿಕೆಗಳ ಛಾಯಾಚಿತ್ರಗಳು ಇವೆ.
ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಶ್ರೀಕಂಠದತ್ತ ಒಡೆಯರ್ ಅವರ ಕಾಲದವರೆಗಿನ ಕ್ರೀಡಾ ಚಟುವಟಿಕೆಗಳ ಚಿತ್ರಗಳು ಇವೆ. ಹಾಲ್ ಆಫ್ ಫೇಮ್ ಸಿಲಿಕಾನ್ ಸಿಟಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗುವುದರಲ್ಲಿ ಸಂಶಯವಿಲ್ಲ.
ಇದನ್ನೂ ಓದಿ:ಸರ್ಜರಿ ವೇಳೆ ಪಿಯಾನೋ ನುಡಿಸಿ, ಹಾಡು ಹೇಳಿ ಬ್ರೈನ್ ಟ್ಯೂಮರ್ ಗೆದ್ದ ಬಾಲಕಿ!