ಬೆಂಗಳೂರು/ನವದೆಹಲಿ : ಗುರುವಾರ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಎ-320 ವಿಮಾನಗಳಿಗೆ ಎಂಆರ್ಓ (ನಿರ್ವಹಣೆ, ದುರಸ್ತಿ ಮತ್ತು ಕಾರ್ಯಾಚರಣೆ) ಸೌಲಭ್ಯಗಳನ್ನು ಸ್ಥಾಪಿಸುವ ಒಪ್ಪಂದಕ್ಕೆ ಎಚ್‌ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಮತ್ತು ಏರ್‌ಬಸ್ ಸಹಿ ಹಾಕಿವೆ.
ಯುರೋಪಿನ ಅತಿದೊಡ್ಡ ವಿಮಾನ ತಯಾರಿಕಾ ಕಂಪನಿಯೊಂದಿಗಿನ ಈ ಸಹಯೋಗವು ಭಾರತದಲ್ಲಿ ವಿಮಾನ ನಿರ್ವಹಣೆ, ದುರಸ್ತಿ ಉದ್ಯಮದಲ್ಲಿ ಸ್ವಾವಲಂಬನೆ ಸಾಧಿಸುವ ಮೂಲಕ ಮೇಕ್ ಇನ್ ಇಂಡಿಯಾ ಮಿಷನ್ ಅನ್ನು ಬಲಪಡಿಸುತ್ತಿದೆ. ಎಚ್‌ಎಎಲ್ ಭಾರತದಲ್ಲಿ ಸಮಗ್ರ ಎಂಆರ್ಓ ಸೇವೆಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ವಾಣಿಜ್ಯ ವಿಮಾನಯಾನ ಸಂಸ್ಥೆಗಳಿಗೆ ಒಂದು ಸ್ಟಾಪ್ ಎಂಆರ್ಓ ಪರಿಹಾರವನ್ನು ಒದಗಿಸಲು ಇದು ಮೊದಲ ಹೆಜ್ಜೆಯಾಗಿದೆ.
ಸಹಯೋಗದ ಅಡಿ ಏರ್‌ಬಸ್ ಎ320 ಟೂಲ್ ಪ್ಯಾಕೇಜ್ ಅನ್ನು ಪೂರೈಸಲಿದೆ ಮತ್ತು ಈ ವಿಮಾನಗಳಿಗೆ ಎಂಆರ್ಓ ಸೌಲಭ್ಯವನ್ನು ಸ್ಥಾಪಿಸಲು ಎಚ್‌ಎಎಲ್ ವಿಶೇಷ ಸಲಹಾ ಸೇವೆಗಳನ್ನು ನೀಡಲಿದೆ. ಎಚ್‌ಎಎಲ್ ಮತ್ತು ಏರ್‌ಬಸ್ ನಡುವಿನ ಪಾಲುದಾರಿಕೆಯು ದೇಶದಲ್ಲಿ ಎಂಆರ್ಓ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲಿದ್ದು, ವಾಣಿಜ್ಯ ವಿಮಾನಗಳನ್ನು ಹೆಚ್ಚಿಸಲಿದೆ.
ಇದನ್ನೂ ಓದಿ : ಭಾರತ - ಪೋರ್ಚುಗಲ್ ಬಾಂಧವ್ಯ ಹೆಚ್ಚಳಕ್ಕೆ ನೇರ ವಿಮಾನ ಸಂಪರ್ಕದ ಅಗತ್ಯತೆ ಪ್ರತಿಪಾದಿಸಿದ ಸಚಿವ ಜೈಶಂಕರ್
ಈ ಸೌಲಭ್ಯವು ಭಾರತದಲ್ಲಿ ಲೀಡ್ ಟೈಮ್‌ನಲ್ಲಿ ಗಣನೀಯ ಕಡಿತ, ಸುಧಾರಿತ ಟರ್ನ್ ಅರೌಂಡ್ ಸಮಯ ಮತ್ತು ಕಡಿಮೆ ವೆಚ್ಚದ್ದಾಗಿದೆ. ವಿಮಾನ ಕಾರ್ಯಾಚರಣೆಗಳಿಗಾಗಿ ವಿಮಾನಗಳ ಲಭ್ಯತೆಯನ್ನು ಹೆಚ್ಚಿಸಲಿದೆ. ಅಗತ್ಯವಿರುವ ಡಿ.ಜಿ.ಸಿ.ಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಅನುಮೋದನೆಯನ್ನು 2024ರ ನವೆಂಬರ್ ಒಳಗೆ ಪಡೆಯಲಾಗಲಿದೆ. ಅನುಮೋದನೆ ಪಡೆದ ನಂತರ ಏಷ್ಯಾ ಖಂಡಕ್ಕೆ ಈ ಸೌಲಭ್ಯ ಲಭ್ಯವಿರಲಿದೆ.
ಮೇಕ್ ಇನ್ ಇಂಡಿಯಾ ಮಿಷನ್ನ ಮತ್ತೊಂದು ಹೆಜ್ಜೆ : ಎಚ್‌ಎಎಲ್ ದೇಶದಲ್ಲಿ ಒಂದು ಸಂಯೋಜಿತ ಎಂಆರ್ಓ ಹಬ್ ಅನ್ನು ಸ್ಥಾಪಿಸಲು ಬಯಸುತ್ತಿದೆ. ಪರಿಣಾಮಕಾರಿ ಪರಿಹಾರವನ್ನು ಏರ್‌ಲೈನ್ಸ್‌ಗೆ ಒದಗಿಸಲಿದೆ. ಈ ಒಪ್ಪಂದದಿಂದ ನಾಗರಿಕ - ಮಿಲಿಟರಿ ವಿಮಾನಯಾನವನ್ನು ಒಂದೇ ಸೂರಿನಡಿ ತಂದಂತಾಗುತ್ತದೆ ಮತ್ತು ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಮಿಷನ್ ಇನ್ನೊಂದು ಹೆಜ್ಜೆ ಮುಂದೆ ಹೊಂದಿಂತಾಗುತ್ತದೆ ಎಂದು ಎಚ್‌ಎಎಲ್ ಸಿಇಒ (ಮಿಗ್) ಸಾಕೇತ್ ಚತುರ್ವೇದಿ ಹೇಳಿದ್ದಾರೆ.
ಏರ್ ಬಸ್ ಇಂಡಿಯಾದ ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೆಮಿ ಮೈಲಾರ್ಡ್ ಮಾತನಾಡಿ, ಭಾರತದಲ್ಲಿ ವಾಯುಯಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಏರ್‌ಬಸ್ ಬದ್ಧವಾಗಿದೆ ಮತ್ತು ಬಲವಾದ ಎಂಆರ್ಓ ಮೂಲಸೌಕರ್ಯ ಅಭಿವೃದ್ಧಿಯು ಈ ವ್ಯವಸ್ಥೆಯ ಪ್ರಮುಖ ಅಂಶವಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಿಂದ ಮ್ಯೂನಿಚ್ಗೆ ತಡೆರಹಿತ ವಿಮಾನ ಸೇವೆ ಆರಂಭಿಸಿದ ಲುಫ್ತಾನ್ಸ