ETV Bharat / state

Hair transplant: ಒತ್ತಡಕ್ಕೆ ಉದುರುವ ತಲೆಗೂದಲು: ನಿಮ್ಮ ಸಮಸ್ಯೆಗೆ ಕೂದಲು ಕಸಿ ಸರಳ ಪರಿಹಾರ ಅಂತಾರೆ ವೈದ್ಯರು

ತಲೆಗೂದಲು ಉದುರುವ ಸಮಸ್ಯೆಗೆ ಸದ್ಯ ಬಳಸುತ್ತಿರುವ ವಿಧಾನಗಳಲ್ಲಿ ನಾಟಿ ವಿಧಾನ ಅತ್ಯಂತ ಯಶಸ್ವಿ ಜನಪ್ರಿಯ ಎನ್ನುತ್ತಾರೆ ವೈದ್ಯರು. ತಲೆಯ ಹಿಂಭಾಗದ ಕೂದಲನ್ನೇ ನಾಟಿ ಮಾಡುವ ಕುರಿತಾಗಿ ವೈದ್ಯರ ಸಲಹೆ ಇಲ್ಲಿದೆ.

author img

By

Published : Jun 17, 2023, 10:44 PM IST

Hair Transplant procedure
ತಲೆಯ ಹಿಂಭಾಗದ ಕೂದಲನ್ನೇ ನಾಟಿ ಮಾಡುವ ಕಸಿ ವಿಧಾನ
ಕೂದಲನ್ನು ನಾಟಿ ಮಾಡುವ ಕಸಿ ವಿಧಾನ

ಬೆಂಗಳೂರು: ಅತಿಯಾದ ಒತ್ತಡವೇ ಮನುಷ್ಯನ ತಲೆಗೂದಲು ಉದುರಲು ಪ್ರಮುಖ ಕಾರಣ ಎನ್ನುವ ವೈದ್ಯರು, ಇಂದು ಯುವ ಪೀಳಿಗೆಯಲ್ಲಿ ಶೇ.60ರಷ್ಟು ಮಂದಿ ಒತ್ತಡದಿಂದಾಗಿ ತಲೆಗೂದಲನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ಸತ್ಯ, ಇದನ್ನು ಒಪ್ಪುವದು ಸಹಜ..

ದಿನದಿಂದ ದಿನಕ್ಕೆ ಯುವ ಸಮುದಾಯ ಒಂದಲ್ಲಾ ಒಂದು ಸಮಸ್ಯೆಗೆ ಸಿಲುಕಿ ತಮ್ಮ ಆರೋಗ್ಯ ಜೀವನವನ್ನು ಹದಗೆಡಿಸಿಕೊಳ್ಳುತ್ತಿದೆ. ಜೀವನಕ್ರಮ, ಆಹಾರ ಪದ್ಧತಿ, ನಿದ್ರಾ ಹೀನತೆ, ದುಷ್ಚಟಗಳು ಸೇರಿದಂತೆ ಹಲವು ಕಾರಣಕ್ಕೆ ಯುವಕರು ಇಂದು ಹತ್ತು ಹಲವು ಸಮಸ್ಯೆಯನ್ನು ಯೌವನದಲ್ಲಿಯೇ ಹೊಂದುತ್ತಿದ್ದಾರೆ. ಇಳಿವಯಸ್ಸಿನಲ್ಲಿ, ನಡುವಯಸ್ಸು ಮೀರಿದ ಬಳಿಕ ಬರಬೇಕಿದ್ದ ಹಲವು ಸಮಸ್ಯೆಗಳು ಇಂದು 20 ರಿಂದ 30ರ ವಯೋಮಾನದ ಯುವಕರನ್ನು ಕಾಡುತ್ತಿದೆ.

ಸೌಂದರ್ಯ ಸೂಚಕಗಳಲ್ಲಿ ಹುಲುಸಾದ ತಲೆಗೂದಲು ಸಹ ಒಂದು. ಆಕರ್ಷಕ ತಲೆಗೂದಲನ್ನು ಹೊಂದಿರುವ ಯುವಕ-ಯುವತಿಯರು ನೂರಾರು ಮಂದಿ ಮಧ್ಯೆಯೂ ಎದ್ದು ಕಾಣುತ್ತಾರೆ. ಆದರೆ ಯುವಕರಲ್ಲಿ ಹಲವು ದುಷ್ಚಟಗಳು, ಬದಲಾದ ಬದುಕಿನ ಪದ್ಧತಿ ಕೂದಲು ಉದುರಲು ಕಾರಣವಾದರೆ. ಯುವತಿಯರಿಗೆ ಇವುಗಳ ಜತೆ ಅತಿಯಾದ ಸೌಂದರ್ಯ ಪ್ರಜ್ಞೆ ಮತ್ತು ರಾಸಾಯನಿಕಗಳ ಬಳಕೆಯಿಂದ ತಲೆಗೂದಲು ಉದುರುವ ಸಮಸ್ಯೆ ಎದುರಾಗಿದೆ. ಇದೆಲ್ಲಕ್ಕೂ ಇಂದಿನ ವೈದ್ಯಲೋಕದಲ್ಲಿ ಪರಿಹಾರವಿದೆ. ಆದರೆ ಅದನ್ನು ಅಳವಡಿಸಿಕೊಳ್ಳಲು ಹಲವರು ಹೆದರುತ್ತಾರೆ.

ಕಳೆದ ಕೆಲ ವರ್ಷಗಳ ಹೀಂದೆ ವಿಗ್‌ ಧರಿಸುವುದು ಒಂದು ಪರಿಹಾರವಾಗಿತ್ತು. ಆದರೆ ಇದು ಧರಿಸಿದವರಿಗೆ ಸರಿಯಾಗಿ ಹೊಂದಾಣಿಕೆ ಆಗದಿದ್ದರೆ ಆಭಾಸಕ್ಕೂ ಕಾರಣವಾಗುತ್ತಿತ್ತು. ಕೃತಕ ಕೂದಲು ಅನ್ನುವುದು ಪ್ರತಿಯೊಬ್ಬರಿಗೂ ತಿಳಿದು ಹೋಗುತ್ತಿತ್ತು. ನಿಧಾನವಾಗಿ ಕೂದಲು ಕಸಿ ದೇಶದಲ್ಲಿ ಜನಪ್ರಿಯವಾಗಲು ಆರಂಭಿಸಿತು. ಹತ್ತಾರು ವರ್ಷ ಹಿಂದೆಯೇ ಇದು ಆರಂಭವಾಗಿದ್ದೂ, ಜನ ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ಈಗಲೂ ಸಾಕಷ್ಟು ಹಿಂಜರಿಕೆ ಇದ್ದೇ ಇದೆ. ಆದರೆ ವೈದ್ಯರು ಹೇಳುವ ಪ್ರಕಾರ, ತಲೆಗೂದಲು ಉದುರುವ ಸಮಸ್ಯೆಗೆ ಸದ್ಯದ ಸಂದರ್ಭದಲ್ಲಿ ಬಳಸುತ್ತಿರುವ ವಿಧಾನಗಳಲ್ಲಿ ನಾಟಿ ವಿಧಾನ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯವಾಗಿದೆ.

ಆದರೆ ಇಲ್ಲಿಯೂ ಜನರಲ್ಲಿ ಕೆಲ ಅನುಮಾನಗಳು ಇವೆ. ತಮ್ಮ ತಲೆಗೆ ಬೇರೊಬ್ಬರ ಕೂದಲನ್ನು ನಾಟಿ ಮಾಡಲಾಗುತ್ತದೆ. ನಾಟಿ ಸಂದರ್ಭದಲ್ಲಿ ರಕ್ತ ಒಸರುವುದರಿಂದ ಮಾರಕ ರೋಗ ಸಹ ಅಂಟಿಕೊಳ್ಳಬಹುದು, ಇದೊಂದು ಕಠಿಣ ವಿಧಾನ ಎಂಬಿತ್ಯಾದಿ ಯೋಚನೆ ಹೊಂದಿದ್ದಾರೆ. ಆದರೆ ಇದೇ ವಿಚಾರದಲ್ಲಿ ತಜ್ಞ ವೈದ್ಯರು ಅಂತಹ ಅನುಮಾನಗಳು ಬೇಡ ಎನ್ನುತ್ತಾರೆ. ತಲೆಯ ಹಿಂಭಾಗದ ಕೂದಲನ್ನೇ ನಾಟಿ ಮಾಡಲಾಗುತ್ತದೆ. ಬೇರೆಯವರ ಕೂದಲನ್ನು ಬಳಸುವುದಿಲ್ಲ. ಈ ಪ್ರಕ್ರಿಯೆ ಅತ್ಯಂತ ಸುಲಭ ಹಾಗೂ ಕ್ರಮಬದ್ಧವಾಗಿ ನಡೆಯುವಂತದ್ದಾಗಿದೆ. ಯಾವುದೇ ಅನುಮಾನ ಬೇಡ. ಇಲ್ಲಿ ಯಾವುದೇ ಅಪಾಯದ ಸಾಧ್ಯತೆ ಇರುವುದಿಲ್ಲ ಎಂದು ಭರವಸೆ ಕೊಡುತ್ತಾರೆ.

ಕೋರಮಂಗಲದ ಹೇರ್ಲೈನ್ ಇಂಟರ್ನ್ಯಾಷನಲ್​​ನ ಕೂದಲು ಕಸಿ ಚಿಕಿತ್ಸಕ ಡಾ ದಿನೇಶ್ ಗೌಡ ಪ್ರಕಾರ, ಕೂದಲು ಬೋಳಾಗುವುದು ಒಂದು ನಿರ್ದಿಷ್ಟ ವಯಸ್ಸನ್ನು ಮೀರಿ ಎಲ್ಲರೂ ಎದುರಿಸುವ ಒಂದು ಸಮಸ್ಯೆಯಾಗಿದೆ. ಅದರಲ್ಲೂ ಯುವ ಸಮುದಾಯವನ್ನು ಹೆಚ್ಚಾಗಿ ಕಾಡುತ್ತಿರುವುದು ವಿಪರ್ಯಾಸ.

ಕೂದಲು ಕಸಿ ಸದ್ಯ ಉತ್ತಮ ಪರಿಹಾರವಾಗಿ ಕಾಣುತ್ತಿದೆ. ಇದು ಸರಳ ವಿಧಾನ. ಹೊರರೋಗಿ(ಔಟ್ ಪೇಷೆಂಟ್) ವಿಧಾನವಾಗಿದೆ, ಇದು ಕನಿಷ್ಠ ಅಡ್ಡ ಪರಿಣಾಮಗಳನ್ನು ಒಳಗೊಂಡಿದೆ. ಇದು ಶಸ್ತ್ರಚಿಕಿತ್ಸೆ ಅನ್ನುವುದಕ್ಕಿಂತ ಮುಳ್ಳು ತೆಗೆದಷ್ಟು ಸುಲಭ ವಿಧಾನ ಅಂದರೆ ತಪ್ಪಾಗದು. ಅದೇ ದಿನ ರೋಗಿಯು ಕೆಲಸ ಮಾಡಬಹುದು ಮಾತ್ರವಲ್ಲ ಚಿಕಿತ್ಸೆ ಪಡೆದುಕೊಂಡ ದಿನ ಪ್ರಪಂಚದ ಯಾವುದೇ ಸ್ಥಳಕ್ಕೆ ಟ್ರಾವೆಲ್ ಮಾಡಬಹುದು. ಇದಕ್ಕೆ ಯಾವುದೇ ವಿಶ್ರಾಂತಿ ಬೇಕಿಲ್ಲ. ಬ್ಯಾಂಡೇಜ್ ಇಲ್ಲ, ಹೊಲಿಗೆ ಇಲ್ಲ ಮತ್ತು ಇದು ರೋಗಿಯ ಸ್ನೇಹಿ ಕಾರ್ಯವಿಧಾನವಾಗಿದೆ ಎನ್ನುತ್ತಾರೆ.

ರೋಗಿಗಳು ತಲೆಯ ಹಿಂಭಾಗದ ಕೂದಲನ್ನು ಕಸಿಗೆ ಬಳಸಲಾಗುತ್ತದೆ. ದೃಢವಾದ ಕೂದಲುಗಳು ಮತ್ತು ಟೆಸ್ಟೋಸ್ಟೆರಾನ್ ಹಾರ್ಮೋನ್‌ ನಿರೋಧಕವಾಗಿರುವ ಈ ಪ್ರದೇಶದ ಕೂದಲುಗಳನ್ನು ಯಾವುದೇ ಗಾಯದ ಗುರುತುಗಳಿಲ್ಲದೆಯೇ ನೋವುರಹಿತವಾಗಿ ತೆಗೆದುಹಾಕಲಾಗುತ್ತದೆ ಮತ್ತು ಪಂಚ್ ಚರ್ಮದ ಮೇಲಿನ ಪದರವನ್ನು ಸ್ಕೋರ್ ಮಾಡುತ್ತದೆ (ಚರ್ಮವನ್ನು ಕತ್ತರಿಸುವುದಿಲ್ಲ) ಮತ್ತು ಕಿರುಚೀಲಗಳನ್ನು ಹೊರತೆಗೆಯಲಾಗುತ್ತದೆ.

ಕೂದಲಿನ ಕೋಶಕ (ಫಾಲಿಕಲ್) ಗಳನ್ನು ತೆಗೆದ ಬಳಿಕ, ಚರ್ಮವು ಯಾವುದೇ ಗಾಯವಿಲ್ಲದೆ ಎರಡು ದಿನಗಳಲ್ಲಿ ಗುಣವಾಗುತ್ತದೆ. ಗಾಯವು ಸಣ್ಣ ಗೀರು ಗಾಯದಂತಿದ್ದು ಮೂರು ದಿನಗಳಲ್ಲಿ ಗುಣವಾಗುತ್ತದೆ. ಸಂಪೂರ್ಣ ಕಾರ್ಯವಿಧಾನವನ್ನು ಸ್ಥಳೀಯ ಅನಸ್ತೇಸಿಯಾ ನೀಡುವ ಮೂಲಕ ನೋವುರಹಿತವಾಗಿ ಮಾಡಲಾಗುತ್ತದೆ. ಇದು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಅಂದರೆ ಕೂದಲು ತೆಗೆಯಲು ಎರಡು ಗಂಟೆಗಳು, ಆಹಾರ ವಿರಾಮಕ್ಕಾಗಿ ಒಂದು ಗಂಟೆ ಮತ್ತು ಬೋಳು ಸ್ಥಳಗಳಲ್ಲಿ ಕೂದಲನ್ನು ಇರಿಸಲು ಎರಡು ಗಂಟೆಗಳು ಮಾತ್ರ ಸಾಕು ಎಂದು ವೈದ್ಯರು ಹೇಳುತ್ತಾರೆ.

ಇದನ್ನೂಓದಿ:Dandruff Problem?: ತಲೆಹೊಟ್ಟು ನಿವಾರಣೆಗೆ ಇಲ್ಲಿದೆ 5 ಮನೆ ಮದ್ದುಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.