ETV Bharat / state

ಏಪ್ರಿಲ್ 16ರ ಹನುಮ ಜಯಂತಿಯಂದು ಜನತಾ ಜಲಧಾರೆ ಆರಂಭ: ಹೆಚ್​ಡಿಕೆ - ಜನತಾ ಜಲಧಾರೆ ಆರಂಭದ ಕುರಿತು ಹೆಚ್​ಡಿಕೆ ಪ್ರತಿಕ್ರಿಯೆ

ಇದೇ ತಿಂಗಳ 16ರಿಂದ ಪಕ್ಷದ ಮಹತ್ವಾಕಾಂಕ್ಷೆ ಕಾರ್ಯಕ್ರಮ ಜನತಾ ಜಲಧಾರೆ ಗಂಗಾ ರಥಯಾತ್ರೆಯನ್ನು ಆರಂಭ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಹೆಚ್​ಡಿಕೆ
ಹೆಚ್​ಡಿಕೆ
author img

By

Published : Apr 8, 2022, 10:54 PM IST

ಬೆಂಗಳೂರು: ಕಳೆದ 75 ವರ್ಷಗಳಿಂದ ನೀರಾವರಿ ಕ್ಷೇತ್ರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಐದೇ ವರ್ಷದಲ್ಲಿ ಸರಿಪಡಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಅವರು ಈ ಬಗ್ಗೆ ವಿವರ ನೀಡಿದರು.

ಇದೇ ತಿಂಗಳ 16ರಿಂದ ಪಕ್ಷದ ಮಹತ್ವಾಕಾಂಕ್ಷೆ ಕಾರ್ಯಕ್ರಮವಾದ ಜನತಾ ಜಲಧಾರೆ ಗಂಗಾ ರಥಯಾತ್ರೆಯನ್ನು ಆರಂಭ ಮಾಡಲಾಗುವುದು ಎಂದು ಅವರು ಘೋಷಣೆ ಮಾಡಿದರು. ಈಗಾಗಲೇ 15 ಗಂಗಾ ರಥಗಳು ಸಿದ್ಧ ಆಗಿವೆ. ಈ ತಿಂಗಳ 12ರಂದು ರಾಮನಗರದ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಈ ರಥಗಳಿಗೆ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು ಹಸಿರು ನಿಶಾನೆ ತೋರಲಿದ್ದಾರೆ ಎಂದು ತಿಳಿಸಿದರು.

ಹನುಮ ಜಯಂತಿ ದಿನವಾದ ಈ ತಿಂಗಳ 16ರ ದಿನಕ್ಕೆ ಜಲ ಸಂಗ್ರಹ ಮಾಡುವ ನಿಗದಿತ ಸ್ಥಳಗಳನ್ನು ಅಷ್ಟೂ ರಥಗಳು ತಲುಪಲಿವೆ. ಆ ಪುಣ್ಯದಿನವೇ ಹದಿನೈದು ಕಡೆಗಳಲ್ಲಿ ಜಲ ಸಂಗ್ರಹ ಮಾಡಲಾಗುವುದು. ಕಳೆದ 75 ವರ್ಷಗಳಿಂದ ಕನ್ನಡಿಗರು ನೀರಾವರಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರ ನಮಗೆ ಅನ್ಯಾಯ ಮಾಡುತ್ತಲೇ ಇದೆ. ಜತೆಗೆ, ಅಕ್ಕಪಕ್ಕದ ರಾಜ್ಯಗಳಿಂದ ದೌರ್ಜನ್ಯಕ್ಕೆ ತುತ್ತಾಗಿದ್ದೇವೆ. ಇದೆಲ್ಲಕ್ಕೂ ಚರಮ ಗೀತೆ ಹಾಡುವ ಉದ್ದೇಶದಿಂದ ನಮ್ಮ ಪಕ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಲಧಾರೆ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಸಂಪುಟದಿಂದ ಕೈಬಿಟ್ಟರೂ ಸಂತೋಷ, ಟಿಕೆಟ್ ಕೊಡದಿದ್ದರೂ ಬೇಸರವಿಲ್ಲ: ಸಚಿವ ಸೋಮಣ್ಣ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.