ETV Bharat / state

ಉರಿಗೌಡ, ನಂಜೇಗೌಡ ಇದ್ರೋ, ಇಲ್ಲವೋ ಗೊತ್ತಿಲ್ಲ: ಹೆಚ್ ಡಿ ಕುಮಾರಸ್ವಾಮಿ

ಉರಿಗೌಡ, ನಂಜೇಗೌಡರದ್ದು ಕಾಲ್ಪನಿಕ ಕಥೆ - ಇಬ್ಬರ ಹೆಸರಲ್ಲಿ ಸಿನಿಮಾ ಮಾಡಬಹುದು, ಹಣ ಮಾಡಬಹುದು ಅಷ್ಟೇ - ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

Former Chief Minister HD Kumaraswamy
ಉರಿಗೌಡ, ನಂಜೇಗೌಡ ಇದ್ರೋ, ಇಲ್ಲವೋ ಗೊತ್ತಿಲ್ಲ: ಹೆಚ್ ಡಿ ಕುಮಾರಸ್ವಾಮಿ
author img

By

Published : Mar 18, 2023, 3:50 PM IST

ಉರಿಗೌಡ, ನಂಜೇಗೌಡ ಇದ್ರೋ, ಇಲ್ಲವೋ ಗೊತ್ತಿಲ್ಲ: ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಉರಿಗೌಡ, ನಂಜೇಗೌಡ ಇದ್ರೋ, ಇಲ್ಲವೋ ಗೊತ್ತಿಲ್ಲ. ಜೀವಂತ ಬದುಕಿದ್ದ ಉರಿಗೌಡ, ನಂಜೇಗೌಡ ಇರೋರ ಬಗ್ಗೆ ಯೋಚಿಸಬೇಕು. ಈ ವಿಚಾರ ಈಗ ಅಪ್ರಸ್ತುತ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದರು. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಸಮಾಜ, ಇನ್ನೊಂದು ಸಮಾಜವನ್ನು ಅನುಮಾನದಿಂದ ನೋಡುವಂತಾಗಿದೆ. ಬಿಜೆಪಿ ನೈತಿಕತೆ ಉಳಿಸಿಕೊಳ್ಳದೆ ಇದನ್ನ ಎತ್ತಿಕಟ್ಟುತ್ತಿದೆ. ನಿಮಗೆ ನೈತಿಕತೆ ಇಲ್ಲ, ಇದನ್ನ ಕೇಳಿದ್ದು ಯಾರು ನಿಮಗೆ? ಬಾಲಗಂಗಾಧರನಾಥ ಸ್ವಾಮೀಜಿ ಹೆಸರಿದ್ದ ಜಾಗದಲ್ಲಿ, ಇವರಿಬ್ಬರ ಹೆಸರನ್ನು ದ್ವಾರಕ್ಕೆ ಹಾಕಿದ್ರು. ಯಾರೋ ಆಕ್ಷೇಪ ಎತ್ತಿದ ಬಳಿಕ ತೆಗೆದರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಘಟನೆಯಿಂದ ಒಕ್ಕಲಿಗರ ಮತ ಬದಲಾಗಲ್ಲ. ಒಕ್ಕಲಿಗ ಮತಗಳು ಭದ್ರವಾಗಿವೆ. ಇದರಿಂದ ಮತ ಒಡೆಯಲು ಸಾಧ್ಯವಿಲ್ಲ. ಯಾವ ವಿಷಯವನ್ನು ಸಹ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇವೆಲ್ಲ ಕಾಲ್ಪನಿಕ ಕಥೆ. ಇಬ್ಬರ ಹೆಸರಲ್ಲಿ ಸಿನಿಮಾ ಮಾಡಬಹುದು. ಇದರಿಂದ ಹಣ ಮಾಡಬಹುದು ಅಷ್ಟೇ, ಬೇರೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಹೆಚ್​ ಡಿಕೆ ಹೇಳಿದರು.

ಕಾಂಗ್ರೆಸ್, ಬಿಜೆಪಿ ರೌಡಿ ಶೀಟರ್ ಗಳಿಗೆ ಪಕ್ಷದಲ್ಲಿ ಟಿಕೆಟ್ ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಆಸೆಗೆ ಅಮಾಯಕರ ಜೀವನ ಬಲಿ ಪಡೆದವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೊಡ್ತಿದ್ದಾರೆ. ಅದೇ ಅವರ ಪಕ್ಷಕ್ಕೆ ಮುಳುವಾಗಲಿದೆ‌. ಪಾಪದ ಹಣ ಮಾಡಲು ಹೊರಟಿದ್ದು, ಅವರಿಗೆ ಮುಳುವಾಗಲಿದೆ ಎಂದು ಟೀಕಿಸಿದರು.

ಮಾ. 26 ರಂದು ಪಂಚರತ್ನ ರಥಯಾತ್ರೆ ಸಮಾವೇಶ: ಪಕ್ಷದ ಪಂಚರತ್ನ ರಥಯಾತ್ರೆ ರಾಜ್ಯದ 85 ಕ್ಷೇತ್ರದಲ್ಲಿ ಪೂರ್ಣಗೊಳಿಸಿದ್ದೇನೆ. ಇದೇ ತಿಂಗಳ 26ರಂದು ಪಂಚರತ್ನ ರಥಯಾತ್ರೆಯ ಬೃಹತ್ ಸಮಾವೇಶ ಮಾಡಲು ನಿರ್ಧರಿಸಿದ್ದೇವೆ. ಕನಿಷ್ಠ 10 ಲಕ್ಷ ಅಭಿಮಾನಿಗಳು, ಮತದಾರರನ್ನು ಸೇರಿಸಲು ನಿರ್ಧಾರ ಮಾಡಲಾಗಿದೆ. ಇದರ ಜೊತೆಗೆ ರೋಡ್ ಶೋ ನಡೆಸಲು ತೀರ್ಮಾನಿಸಲಾಗಿದೆ ಎಂದ ಕುಮಾರಸ್ವಾಮಿ, ಯಾವ ರೀತಿ ಪಕ್ಷದ ಅಭ್ಯರ್ಥಿ, ಕಾರ್ಯಕರ್ತರು ಕೆಲಸ ಮಾಡಬೇಕು ಅಂತ ಪೂರ್ವಭಾವಿ ಸಭೆ ನಡೆಸುತ್ತಿರುವುದಾಗಿ ತಿಳಿಸಿದರು.

ಪಕ್ಷ ಸೇರ್ಪಡೆ : ಇದೇ ವೇಳೆ ಜೆಡಿಎಸ್ ಕಚೇರಿಯಲ್ಲಿ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೇವದುರ್ಗ ತಾಲೂಕಿನ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಹಲವಾರು ಮುಖಂಡರು ಹಾಗೂ ನೂರಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್ ಗೆ ಸೇರ್ಪಡೆಯಾದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಶಾಲು ಹೊದಿಸಿ ಮುಖಂಡರನ್ನು ಬರಮಾಡಿಕೊಂಡರು.

ಬಿಜೆಪಿಯವರಿಗೆ ಉರಿ ಹತ್ತಿದೆ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ಮಾತನಾಡಿ, ಉರಿಗೌಡ, ನಂಜೇಗೌಡ ವಿಚಾರದಲ್ಲಿ ಬಿಜೆಪಿಯವರಿಗೆ ಉರಿ ಹತ್ತಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದು ಹೋಗಿದ್ದಾರೆ. ಅವರ ಉರಿ ಕಡಿಮೆ ಆಗಬೇಕು ಅಂದರೆ ಚುನಾವಣೆ ಮುಗೀಬೇಕು. ಅವರು ವಿರೋಧ ಪಕ್ಷದಲ್ಲಿ ಕೂರಬೇಕು ಎಂದರು. ಟಿಪ್ಪು ಸುಲ್ತಾನನ ಮಕ್ಕಳ ಒತ್ತೆ ಇಟ್ಟಾಗ ಅವರಿಗೆ ಮಕ್ಕಳನ್ನು ಬಿಡಿಸಿಕೊಂಡು ಬರಲು ಒಕ್ಕಲಿಗರು ಹಣ ಕೊಟ್ರು. ಒಕ್ಕಲಿಗರಿಗೂ ಟಿಪ್ಪುಗೂ ಏನು ಸಂಬಂಧ ಇತ್ತು ಅನ್ನೋದು ಯಾರಿಗೂ ಗೊತ್ತಿಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ. ನಂಜೇಗೌಡ, ಉರಿಗೌಡ ಹೆಸರನ್ನು ಈಗ ಮುನ್ನಲೆಗೆ ತಂದಿದ್ದಾರೆ ಎಂದು ಹೇಳಿದರು.

ಬೀದರ್‌ನಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗ್ತಿದೆ. ಬೀದರಿನ ಎಲ್ಲಾ ಸೀಟು ಗೆಲ್ಲಲು ಜನತಾದಳಕ್ಕೆ ಅವಕಾಶ ಸಿಕ್ಕಿದೆ. ಕಾಂಗ್ರೆಸ್, ಬಿಜೆಪಿ ಟಿಕೆಟ್ ಬಿಡುಗಡೆ ಆಗಲಿ. ತುಮಕೂರಿನಲ್ಲಿ ಎಷ್ಟು ಸ್ಥಾನ ಗೆಲ್ತಾರೆ ಅಂತ ನೀವೇ ಹೇಳ್ತಿದ್ದೀರಾ. ಮೊದಲು ಜೆಡಿಎಸ್ ಎರಡು ಅಂತಿದ್ರಿ. ಈಗ ಏಳು, ಹತ್ತು ಸ್ಥಾನ ಅಂತ ಹೇಳ್ತಿದ್ದಿರಾ, ಕಾಂಗ್ರೆಸ್​ಗೆ ಒಂದೇ ಸ್ಥಾನ, ಬಿಜೆಪಿಗೆ ಎರಡು ಸ್ಥಾನ. ದಿನದಿಂದ ದಿನಕ್ಕೆ ಜನತಾದಳಕ್ಕೆ ಹೆಚ್ಚು ಸೀಟು ಗೆಲ್ಲುವ ಅವಕಾಶ ಬರುತ್ತಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದರಲ್ಲಿ ಅನುಮಾನ ಇಲ್ಲ ಎಂದು ಭವಿಷ್ಯ ನುಡಿದರು.

ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಅವರು ದೊಡ್ಡ ನಾಯಕರು. ನಾನು ಏನು ಹೇಳಲಿ. ಏನಾದ್ರೂ ಹೇಳಿದರೆ ಅವನು ಹೇಳಿದ ಅಂತ ಬಿಟ್ಟೋದೆ ಅಂತಾರೆ. ವಿರೋಧ ಪಕ್ಷದಲ್ಲಿ ಸಿದ್ದರಾಮಯ್ಯ ಇದ್ರೆ ಕುಮಾರಸ್ವಾಮಿಗೆ ಒಳ್ಳೆಯ ಸಲಹೆ ಕೊಡ್ತಾರೆ. ಶಿವಕುಮಾರ್ ಗೆ ಹೇಳ್ತೀನಿ ಹಣ ಕೊಡ್ತಿರೋ, ಸೀರೆ ಹಂಚ್ತಿರೋ. ಅದೆಲ್ಲಾ ಬಿಟ್ಟು ನಮ್ಮ ಕಾರ್ಯಕ್ರಮ ಜಾರಿಗೆ ತರಲು ಬನ್ನಿ. ವೃದ್ಧರಿಗೆ, ವಿಧವೆಯರಿಗೆ ಮೂರು ಸಾವಿರ ಕೊಡುವ ಕಾರ್ಯಕ್ರಮಕ್ಕೆ ಬನ್ನಿ ಎಂದು ಲೇವಡಿ ಮಾಡಿದರು.

ಶಿವನಗೌಡ ನಾಯಕರಿಗೆ ಸೋಲುವ ಭೀತಿ ಇದೆ- ಕರೆಮ್ಮ: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅಭ್ಯರ್ಥಿ ಕರೆಮ್ಮ ಮಾತನಾಡಿ, ಬೆದರಿಕೆ ವಿಚಾರ ಸತ್ಯದ ಮಾತು. ತಾಲ್ಲೂಕಿನಾದ್ಯಂತ ಭಯದ ವಾತಾವರಣ ಇದೆ. ಶಿವನಗೌಡ ನಾಯಕರಿಗೆ ಸೋಲುವ ಭೀತಿ ಇದೆ. ಸೋಲಿಸೋದು, ಗೆಲ್ಲಿಸೋದು ಜನರ ಕೈಯಲ್ಲಿದೆ. ಶಿವನಗೌಡ ನಾಯಕರಿಗೆ ಸೋಲುವ ಭೀತಿ ಎದುರಾಗಿದೆ. ನಮ್ಮ ಪರ ನಮ್ಮ ನಾಯಕ ದೇವೇಗೌಡರು ಇದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ್ದು, ಅನೇಕರಿಗೆ ಉಪಯೋಗ ಆಗಿದೆ. ನಮ್ಮ ಪಕ್ಷದ ಮೇಲೆ ಜನರ ಆಶೀರ್ವಾದ ಇದೆ. ಶಿವನಗೌಡ ನಾಯಕರ ಬಲಗೈ ಆಗಿ ಕೆಲಸ ಮಾಡಿದವರು ನಮ್ಮ ಜೊತೆ ಸೇರಿದ್ದಾರೆ. ಕನ್ನಡಪರ ಸಂಘಟನೆಗಳು ನಮ್ಮ ಜೊತೆ ಬಂದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ರಾಮನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ವರಿಷ್ಠರು ಅವಕಾಶ ಕೊಟ್ಟಿದ್ದಾರೆ: ನಿಖಿಲ್ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.