ಬೆಂಗಳೂರು: ರಾಮಮಂದಿರ ಶಂಕುಸ್ಥಾಪನೆಗೆ ಮಾಜಿ ಉಪಪ್ರಧಾನಿ ಎಲ್. ಕೆ. ಅಡ್ವಾಣಿ ಅವರನ್ನು ಆಹ್ವಾನಿಸದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ. ಅಯೋಧ್ಯೆಗಾಗಿ ಹೋರಾಡಿದವರು ಅಡ್ವಾಣಿ. ಅವರ ಹೆಸರನ್ನೇ ನೆನಪಿಸಿಕೊಳ್ಳೋಕೆ ಆಗಲಿಲ್ವೇ? ಉಪಕಾರ ಸ್ಮರಣೆ ಇಲ್ಲವಾಯಿತೇ ಪ್ರಧಾನಿ ಮೋದಿಯವರಿಗೆ ಎಂದು ವ್ಯಂಗ್ಯವಾಡಿದ್ದಾರೆ.
-
ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಎಂಬಂತೆ, ಅಯೋಧ್ಯೆಗಾಗಿ ಹೋರಾಡಿದ ಅಡ್ವಾಣಿಯವರ ಹೆಸರು ನೆನಪಿಸಿಕೊಳ್ಳದಷ್ಟು ಉಪಕಾರ ಸ್ಮರಣೆ ಇಲ್ಲವಾಯಿತೇ ಪ್ರಧಾನಿ ಮೋದಿಯವರಿಗೆ..??
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 5, 2020 " class="align-text-top noRightClick twitterSection" data="
">ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಎಂಬಂತೆ, ಅಯೋಧ್ಯೆಗಾಗಿ ಹೋರಾಡಿದ ಅಡ್ವಾಣಿಯವರ ಹೆಸರು ನೆನಪಿಸಿಕೊಳ್ಳದಷ್ಟು ಉಪಕಾರ ಸ್ಮರಣೆ ಇಲ್ಲವಾಯಿತೇ ಪ್ರಧಾನಿ ಮೋದಿಯವರಿಗೆ..??
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 5, 2020ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಎಂಬಂತೆ, ಅಯೋಧ್ಯೆಗಾಗಿ ಹೋರಾಡಿದ ಅಡ್ವಾಣಿಯವರ ಹೆಸರು ನೆನಪಿಸಿಕೊಳ್ಳದಷ್ಟು ಉಪಕಾರ ಸ್ಮರಣೆ ಇಲ್ಲವಾಯಿತೇ ಪ್ರಧಾನಿ ಮೋದಿಯವರಿಗೆ..??
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 5, 2020
ರಾಮ ಮಂದಿರ ಶಂಕುಸ್ಥಾಪನೆ ಸಮಾರಂಭಕ್ಕೆ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿಲ್ಲ ಎಂದು ಕೆಲವರು ಈ ಹಿಂದೆ ಅಭಿಪ್ರಾಯಪಟ್ಟಿದ್ದರು. ಅಲ್ಲದೇ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ರಾಮಮಂದಿರ ನಿರ್ಮಾಣಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದರು. ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರಿಗೆ ಆಹ್ವಾನ ನೀಡಿಲ್ಲ ಎಂಬ ಟೀಕೆ ಕೇಳಿ ಬಂದಿತ್ತು. ಕೇಂದ್ರ ಸರ್ಕಾರದ ಕೋವಿಡ್ ನಿಯಮಾವಳಿ ಪ್ರಕಾರ 65 ವರ್ಷಕ್ಕೂ ಹೆಚ್ಚು ವಯೋಮಾನದವರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ 92 ವರ್ಷದ ಅಡ್ವಾಣಿ ಹಾಗೂ 86 ವರ್ಷದ ಜೋಶಿ ಅವರಿಗೆ ಆಮಂತ್ರಣ ನೀಡಿಲ್ಲ ಎಂಬ ಮಾಹಿತಿ ಇದೆ.