ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಡಿ ಮಾರ್ಟ್, ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ, ರಿಲ್ಯಾಯನ್ಸ್, ಬಿಗ್ ಬಜಾರ್, ಮೋರ್ ನಂತಹ ಸೂಪರ್ ಮಾರ್ಕೆಟ್ಗಳನ್ನ ತೆರೆಯಲು ಅನುಮತಿ ನೀಡಲಾಗಿದೆ ಎಂದು ಆಯುಕ್ತರಾದ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ಜನರಿಗೆ ಆಹಾರ ಪದಾರ್ಥಗಳು, ತರಕಾರಿಗಳು, ನೀರು ಸೇರಿದಂತೆ ಅಗತ್ಯ ವಸ್ತುಗಳ ಲಭ್ಯತೆಗೆ ಕಷ್ಟ ಆಗಬಾರದು ಎಂದು ತೆರೆಯಲು ಸೂಚಿಸಲಾಗಿದೆ. ಆದರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಬಾರದು ಎಂದು ಆದೇಶಿಸಲಾಗಿದೆ.
ಇದೇ ವೇಳೆ ಜನಸಾಂದ್ರತೆ ಆಗಬಾರದು, ನೈರ್ಮಲ್ಯ ಕಾಪಾಡಬೇಕು. ವಿಶೇಷ ಆಫರ್ಗಳಲ್ಲಿ ಸೇಲ್ಗಳನ್ನ ಮಾಡಬಾರದು ಎಂದು ಸೂಚಿಸಲಾಗಿದೆ ಎಂದಿದ್ದಾರೆ.