ಕೆ.ಆರ್.ಪುರ : ಬೆಂಗಳೂರು ಪೂರ್ವ ತಾಲ್ಲೂಕು ಕೆಆರ್ ಪುರದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಾಲ್ಮೀಕಿ ಜಯಂತಿ ಆಚರಿಸಾಗಿದ್ದು, ಪೂರ್ವ ತಾಲ್ಲೂಕಿ ಸಾವಿರಾರು ವಾಲ್ಮೀಕಿ ಸಮುದಾಯದವರು ಭಾಗವಹಿಸಿದರು.
ಮೊದಲಿಗೆ ಕೆಆರ್ ಪುರ ವೆಂಗಯ್ಯನ ಕೆರೆ ಯಿಂದ ತಾಲ್ಲೂಕು ಕಚೇರಿಯವರೆಗೆ ಸಂಜಯ್ ಕುಮಾರನಂದ ಸ್ವಾಮಿಜಿ, ಬ್ರಹ್ಮನಂದಗುರುಜಿ, ಈಶ್ವರಾನಂದ ಸ್ವಾಮಿಜಿಯನ್ನು ಶ್ರೀ ಮಹರ್ಷಿ ವಾಲ್ಮೀಕಿ ಮಹಾರಥದಲ್ಲಿ ಕೂರಿಸಿಕೊಂಡು ಮೆರವಣಿಗೆನ್ನು ಮಾಡಲಾಯಿತು. ನಂತರ ಕೆ.ಆರ್.ಪುರದ ತಾಲ್ಲೂಕು ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಸಂಜಯ್ ಕುಮಾರನಂದ ಸ್ವಾಮಿಜಿ,ಉದ್ಘಾಟಿಸಿದರು.
ಶ್ರೀ ಮಹರ್ಷಿ ವಾಲ್ಮೀಕಿ ತತ್ವಸಿದ್ದಾಂತಗಳು ಇಂದಿಗೂ ಪ್ರಸ್ತುತ ಎಂದು ಸಮಾಜದ ಈಶ್ವರಾನಂದ ಸ್ವಾಮಿಜಿ ತಿಳಿಸಿದರು. ಶ್ರೀ ವಾಲ್ಮೀಕಿ ಮಹರ್ಷಿ ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಮನವಿ ಮಾಡಿದರು. ಮಹರ್ಷಿ ವಾಲ್ಮೀಕಿ ಅವರು ಒಂದು ಸಮುದಾಯಕ್ಕೆ ಮಾತ್ರ ಸಿಮೀತವಲ್ಲ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರ ಎಂದು ಹೇಳಿದರು.
ವಾಲ್ಮೀಕಿ ಸಮಾಜದ ಹಾಗೂ ಬೆಂಗಳೂರು ಜಿಲ್ಲಾ ಎಸ್ಟಿ ಘಟಕ ದ ಅಧ್ಯಕ್ಷ ಬಾಕ್ಸರ್ ನಾಗರಾಜ್ ಮಾತನಾಡಿ, ವಾಲ್ಮೀಕಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಹಾಗೂ ಸಂಘದಿಂದ ಶೈಕ್ಷಣಿಕ ಹಾಗೂ ಸಮಾಜದ ಅಭಿವೃದ್ಧಿಗೆ ಏಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಮಾದಾಯವನ್ನು ಶೈಕ್ಷಣಿಕವಾಗಿ ಮುಂಚೂಣಿಗೆ ತರುವಂತೆ ಮುಂದಿನ ದಿನಗಳಲ್ಲಿಶ್ರಮಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಸಂಜಯ್ ಕುಮಾರನಂದ ಸ್ವಾಮಿಜಿ,ಬ್ರಹ್ಮನಂದಗರುಜಿ, ಮುಖಂಡರಾದ ಶ್ರೀ ಮಹರ್ಷಿ ವಾಲ್ಮೀಕಿನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಂ.ಗಣೇಶ್,ಮುಖಂಡರಾದ ಬಾಕ್ಸರ್ ನಾಗರಾಜ್, ಎಂ.ಮಂಜುನಾಥ್,ನಾಗರಾಜ್,ದುಶ್ಯಂತ್ ರಾಜ್, ಕೆ.ಎಮ್.ಗಣೇಶ್, ಕಟ್ಟುಗೊಲ್ಲಹಳ್ಳಿ ಶಿವಕುಮಾರ್ ಭಾಗವಹಿಸಿದರು.