ETV Bharat / state

ಹಳ್ಳಿ ತೀರ್ಪು : 91,339 ಸ್ಥಾನಗಳ ಪೈಕಿ 54,041ರ ಫಲಿತಾಂಶ ಘೋಷಣೆ - ಮತ ಎಣಿಕೆ ಕಾರ್ಯಕ್ಕೆ ಕ್ಷಣಗಣನೆ

Gram panchayat election
Gram panchayat election
author img

By

Published : Dec 30, 2020, 7:12 AM IST

Updated : Dec 30, 2020, 10:20 PM IST

22:14 December 30

36,781 ಸ್ಥಾನಗಳ ಫಲಿತಾಂಶ ನಾಳೆ ಘೋಷಣೆ

ಬೆಂಗಳೂರು : ಎರಡು ಹಂತಗಳಲ್ಲಿ 5,728 ಗ್ರಾಮ ಪಂಚಾಯತ್​ಗಳ 91,339 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆದಿದ್ದು, 54,041 ಸ್ಥಾನಗಳ ಫಲಿತಾಂಶ ಘೋಷಿಸಲಾಗಿದೆ.

ಇನ್ನುಳಿದ 36,781 ಸ್ಥಾನಗಳ ಫಲಿತಾಂಶ ನಾಳೆ ಘೋಷಿಸುವುದಾಗಿ ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.  

22:06 December 30

ಚೀಟಿ ಎತ್ತಿ ಗೆಲುವು ಘೋಷಣೆ

Gram panchayat election
ಚೀಟಿ ಎತ್ತಿ ಗೆಲುವು ಘೋಷಣೆ

ರಾಯಚೂರು : ಜಿಲ್ಲೆಯ ಸಿರವಾರ ತಾಲೂಕಿನ ನವಲಕಲ್ ಗ್ರಾಮ ಪಂಚಾಯತ್​ನಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ಸಮಮತ ಬಂದ ಹಿನ್ನೆಲೆ , ಚೀಟಿ ಎತ್ತಿ ಗೆಲುವು ಘೋಷಿಸಲಾಯಿತು.  

ಸತ್ಯವತಿ ಮತ್ತು ಮಹಾದೇವಮ್ಮ ಎಂಬ ಇಬ್ಬರು ಅಭ್ಯರ್ಥಿಗಳು ತಲಾ 180 ಮತಗಳನ್ನ ಪಡೆದಿದ್ದರು. ಹೀಗಾಗಿ, ಚೀಟಿ ಎತ್ತಿ ಜಯಗಳಿಸಿದವರನ್ನು ಘೋಷಿಸಲಾಯಿತು. ಚೀಟಿಯಲ್ಲಿ ಅಭ್ಯರ್ಥಿ ಸತ್ಯವತಿ ಹೆಸರು ಬಂದಿದ್ದರಿಂದ, ಮಹಾದೇವಮ್ಮ ಸೋಲೊಪ್ಪಿಕೊಳ್ಳಬೇಕಾಯಿತು. 

22:05 December 30

ದಂಪತಿಗೆ ಗೆಲುವು

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಗ್ರಾಮ ಪಂಚಾಯತ್​​ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಪತ್ನಿ ಮತ್ತು ಮೂರನೇ ಬಾರಿ ಸ್ಪರ್ಧಿಸಿದ್ದ ಪತಿ ಜಯಗಳಿಸಿದ್ದಾರೆ.

ಇಬ್ಬರೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದು, 1ನೇ ವಾರ್ಡ್​ನಲ್ಲಿ ಪತ್ನಿ ಅಶ್ವಿನಿ ರವಿಕುಮಾರ್ ಹಾಗೂ 2ನೇ ವಾರ್ಡ್​ನಲ್ಲಿ ಪತಿ ರವಿಕುಮಾರ್ ಜಯಗಳಿಸಿದ್ದಾರೆ.

22:04 December 30

ಪತಿ-ಪತ್ನಿಗೆ ಗೆಲುವು

Gram panchayat election
ಪತಿ-ಪತ್ನಿಗೆ ಗೆಲುವು

ಹಾವೇರಿ :  ಹಿರೇಕೆರೂರು ತಾಲೂಕು ಹಂಸಭಾವಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪತಿ ಪತ್ನಿ ಗೆಲುವು ಸಾಧಿಸಿದ್ದಾರೆ. ಪತಿ ಮುತ್ತಯ್ಯ 4 ನೇ ವಾರ್ಡ್​ನಲ್ಲಿ ಜಯ ಸಾಧಿಸಿದರೆ, ಪತ್ನಿ ಸುಮಂಗಲಾ ಹಿರೇಮಠ 3 ನೇ ವಾರ್ಡ್‌ನಲ್ಲಿ ಜಯಗಳಿಸಿದ್ದಾರೆ.

21:25 December 30

ಬಲೂನ್ ವ್ಯಾಪಾರಿ, ಸ್ನಾತಕೋತ್ತರ ಪದವೀದರೆಗೆ ಗೆಲುವು

Gram panchayat election
ಸ್ನಾತಕೋತ್ತರ ಪದವೀದರೆಗೆ ಗೆಲುವು

ಮೈಸೂರು : ಹಳೇ ಚಿಕ್ಕ ಹುಣಸೂರು ಗ್ರಾಮದ ನಿವಾಸಿ, ಬಲೂನ್ ವ್ಯಾಪಾರಿ ಪ್ರೇಮ ನಂದೀಶ್ 262 ಮತಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಸೋಲಿಗ ಸಮುದಾಯದವರಾದ ಇವರು, ಹಳೇ ಚಿಕ್ಕ ಹುಣಸೂರು ಗ್ರಾಮದಿಂದ ಸ್ಪರ್ಧಿಸಿದ್ದರು. ಅದೇ ರೀತಿ, ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಸ್ಪರ್ಧಿಸಿದ್ದ ಸ್ನಾತಕೋತ್ತರ ಪದವೀದರೆ ರುಕ್ಮಿಣಿ ಕೂಡ ಗೆಲುವಿನ ನಗೆ ಬೀರಿದ್ದಾರೆ.  

21:24 December 30

ಗೆದ್ದವರ ಬೆಂಬಲಿಗರಿಂದ ಸಂಭ್ರಮಾಚರಣೆ

ಹುಬ್ಬಳ್ಳಿ : ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಗೆಲುವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು, ನಗರದ ನೆಹರೂ ಮೈದಾನದ ಎದುರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಾಚರಣೆ ಮಾಡಿದರು. 

20:56 December 30

ಒಂದು ಮತದ ಅಂತರದಿಂದ ಸೋತ ಅಭ್ಯರ್ಥಿ

Gram panchayat election
ಸೋತ ಅಭ್ಯರ್ಥಿಯಿಂದ ಮರು ಮತ ಎಣಿಕೆಗೆ ಪಟ್ಟು

ಗುಂಡ್ಲುಪೇಟೆ : ಒಂದು ಮತದಿಂದ ಸೋತ ಹಳ್ಳದ ಮಾದಹಳ್ಳಿ ಗ್ರಾಮ ಪಂಚಾಯತ್​ನ ಗೋಪಾಲಪುರ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹದೇವ ಸ್ವಾಮಿ, ಮರು ಎಣಿಕೆ ಮಾಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ಅದಕ್ಕೆ ಒಪ್ಪದಿದ್ದಾಗ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. 

20:55 December 30

ಕಳೆದ ಬಾರಿ ಸೋತವನಿಗೆ ಈ ಬಾರಿ ಗೆಲುವು

Gram panchayat election
ಕಳೆದ ಬಾರಿ ಸೋತವನಿಗೆ ಈ ಬಾರಿ ಗೆಲುವು

ಹಾಸನ : 2015 ರ ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ 35 ಮತಗಳ ಅಂತರದಿಂದ ಸೋತಿದ್ದ ಆಲೂರು ತಾಲೂಕು ಬಸವೇಶಪುರ ಗ್ರಾಮದ ವಕೀಲ ಬಿ.ಆರ್.ಮೋಹನ್ ಕುಮಾರ್, ಈ ಬಾರಿ 100 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬೈರಾಪುರ ಗ್ರಾಮ ಪಂಚಾಯತ್​ ವ್ಯಾಪ್ತಿಯ ಶಿವಸಾಗರ-ಮಲ್ಲೇಶ್ವರ ಕ್ಷೇತ್ರದಿಂದ ಇವರು ಗೆಲುವು ದಾಖಲಿಸಿದ್ದಾರೆ.  

20:55 December 30

ಆವಾಜ್ ಹಾಕಿದವನಿಗೆ ಲಾಠಿ ರುಚಿ

Gram panchayat election
ಆವಾಜ್ ಹಾಕಿದವನಿಗೆ ಲಾಠಿ ರುಚಿ

ಚಿತ್ರದುರ್ಗ : ನಿಷೇಧಾಜ್ಞೆ ಉಲ್ಲಂಘಿಸಿ ಪೊಲೀಸರಿಗೆ ಅವಾಜ್ ಹಾಕಿದ ಯುವಕನಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ನಿಷೇಧಾಜ್ಞೆ ಇರುವುದರಿಂದ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದ ರಸ್ತೆಯಲ್ಲಿ ಸೇರಿದ್ದ ಜನರಿಗೆ ವಾಪಾಸ್​ ಹೋಗುವಂತೆ ಪೊಲೀಸರು ಸೂಚಿಸಿದ್ದರು. ಈ ವೇಳೆ ಓರ್ವ ಯುವಕ ಪೊಲೀಸರಿಗೆ ಆವಾಜ್ ಹಾಕಿದ್ದಾನೆ ಎನ್ನಲಾಗಿದ್ದು, ಪೊಲೀಸರು ಆತನಿಗೆ ಲಾಠಿ ರುಚಿ ತೋರಿಸಿ ನಿಯಮ ಉಲ್ಲಂಘಿಸಿದ ಆರೋಪದಡಿ ಕೆಎಸ್‌ಆರ್‌ಪಿ ವಾಹನಕ್ಕೆ ಹತ್ತಿಸಿದ್ದಾರೆ.  

20:54 December 30

ಸತತ ಆರನೇ ಬಾರಿ ಗೆಲುವು

Gram panchayat election
ಸತತ ಆರನೇ ಬಾರಿ ಗೆದ್ದ ಅಭ್ಯರ್ಥಿ

ದಾವಣಗೆರೆ : ತಾಲೂಕಿನ ಕಡ್ಲೆಬಾಳು ಗ್ರಾ.ಪಂನ ಮಾಳಗೊಂಡನ ಹಳ್ಳಿ (ಮಾಗನಹಳ್ಳಿ) ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿ ಪರಶುರಾಮ್ ಸತತ ಆರನೇ ಬಾರಿ ಗೆಲುವಿನ ನಗೆ‌ ಬೀರಿದ್ದಾರೆ.

20:22 December 30

ಲಾಠಿ ಬೀಸಿ ಗುಂಪು ಚದುರಿಸಿದ ಪೊಲೀಸರು

Gram panchayat election
ಲಾಠಿ ಬೀಸಿ ಜನರನ್ನು ಚದುರಿಸಿದ ಪೊಲೀಸರು

ಕಲಬುರಗಿ : ರಾತ್ರಿಯಾದರೂ ಮತ ಎಣಿಕೆ ಕೇಂದ್ರದ ಮುಂದೆ ಜಮಾಯಿಸಿದ್ದವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಮತ ಎಣಿಕೆ ಕೇಂದ್ರದ ಮುಂಭಾಗ ಬೆಳಗ್ಗೆಯಿಂದ ಜಮಾಯಿಸಿದವರು ರಾತ್ರಿಯಾದರೂ ಕದಲಿರಲಿಲ್ಲ. ಹೀಗಾಗಿ ಪೊಲೀಸರು ಲಾಠಿ ಬೀಸಿ ನೆರೆದಿದ್ದವರನ್ನು ಚದುರಿಸಿದರು. 

20:15 December 30

ನಶೆಯಲ್ಲೇ ಎಣಿಕೆ ಕೇಂದ್ರಕ್ಕೆ ಬಂದ ಅಭ್ಯರ್ಥಿ

Gram panchayat election
ನಶೆಯಲ್ಲೇ ಎಣಿಕೆ ಕೇಂದ್ರಕ್ಕೆ ಬಂದ ಅಭ್ಯರ್ಥಿ

ವಿಜಯಪುರ : ಮತ ಎಣಿಕೆ ಹಿನ್ನೆಲೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧವಿದ್ದರೂ, ಕೊಲ್ಹಾರ ತಾಲೂಕಿನ ಹಣಮಾಪುರ ಗ್ರಾಮ ಪಂಚಾಯತ್​ನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಯೋರ್ವ ಕಂಟಪೂರ್ತಿ ಕುಡಿದು ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದ.  

ವಿಚಿತ್ರವೆಂದರೆ ಅದೇ ಅಭ್ಯರ್ಥಿ ಗೆಲುವು ಸಾಧಿಸಿ, ನಶೆಯಲ್ಲೇ ಚುನಾವಣಾ ಅಧಿಕಾರಿಯಿಂದ ಗೆಲುವಿನ ಪ್ರಮಾಣ ಪತ್ರ ತೆಗೆದುಕೊಂಡಿದ್ದಾನೆ. ಆತ ಕುಡಿದಿದ್ದಾನೆ ಎಂದು ಗೊತ್ತಿದ್ದರೂ, ಅಧಿಕಾರಿಗಳು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. 

20:14 December 30

ಶಪಥ ಮಾಡಿ ಗೆದ್ದ ಅಭ್ಯರ್ಥಿ

Gram panchayat election
ಶಪಥ ಮಾಡಿ ಗೆದ್ದ ಅಭ್ಯರ್ಥಿ

ಬಳ್ಳಾರಿ : ಹೂವಿನ ಹಡಗಲಿ ತಾಲೂಕಿನ ನಾಗತಿಬಸಾಪುರ ಗ್ರಾಮ ಪಂಚಾಯತ್​ ಮಿರಾಕೊರನಹಳ್ಳಿ ಗ್ರಾಮದ ಹನುಮಂತಪ್ಪ ಗೆಲುವು ಸಾಧಿಸಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದ ಹನುಮಂತಪ್ಪ, ಚುನಾವಣೆ ಗೆಲ್ಲುವವರೆಗೆ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ಮಾಡಿ, ಐದು ವರ್ಷಗಳಿಂದ ಚಪ್ಪಲಿ ಧರಿಸಿರಲಿಲ್ಲ. ಈ ಬಾರಿ 111 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

20:13 December 30

ವಾಮಾಚಾರದ ವಸ್ತುಗಳು ಪತ್ತೆ

Gram panchayat election
ಮತ ಎಣಿಕೆ ಕೇಂದ್ರದ ಬಳಿ ವಾಮಚಾರದ ವಸ್ತುಗಳು ಪತ್ತೆ

ಅಥಣಿ : ಪಟ್ಟಣದ ಮತ ಎಣಿಕೆ ಕೇಂದ್ರವೊಂದರ ಬಳಿ ವಾಮಾಚಾರದ ವಸ್ತುಗಳು ಪತ್ತೆಯಾಗಿವೆ. ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳು ವಾಮಾಚಾರದ ಮೊರೆ ಹೋಗಿದ್ದಾರೆ ಎಂದು ಹೇಳಲಾಗ್ತಿದೆ. 

20:12 December 30

ತಾಯಿ ಮಗಳಿಗೆ ಗೆಲುವು

Gram panchayat election
ಗೆದ್ದು ಬೀಗಿದ ತಾಯಿ ಮಗಳು

ದೊಡ್ಡಬಳ್ಳಾಪುರ : ತಾಲೂಕಿನಲ್ಲಿ ತಾಯಿ ಮಗಳು ಗೆಲುವು ಸಾಧಿಸಿದ್ದಾರೆ. ತಾಯಿ ನಂಜಮ್ಮ ದೊಡ್ಡಬಳ್ಳಾಪುರ ತಾಲೂಕು ಪೆರಮಗೊಂಡನಹಳ್ಳಿ ಕ್ಷೇತ್ರದಿಂದ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಹಾಡೋನಹಳ್ಳಿ ಗ್ರಾಮ ಪಂಚಾಯತ್​ಗೆ ಸದಸ್ಯೆಯಾಗಿ ಆಯ್ಕೆಯಾದರೆ, ಮಗಳು  ಪವಿತ್ರ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ತಪಸಿಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಕಂಟನಕುಂಟೆ ಗ್ರಾಮ ಪಂಚಾಯತ್​ಗೆ ಆಯ್ಕೆಯಾಗಿದ್ದಾರೆ.

19:40 December 30

ಗೆದ್ದ ಅಭ್ಯರ್ಥಿಗೆ ಕ್ಷೀರಾಭಿಷೇಕ

Gram panchayat election
ಗೆದ್ದ ಅಭ್ಯರ್ಥಿಗೆ ಕ್ಷೀರಾಭಿಷೇಕ

ಹಾವೇರಿ : ಶಿಗ್ಗಾವಿ ತಾಲೂಕು ಶಿವಪುರ ತಾಂಡಾದಲ್ಲಿ ಗೆದ್ದ ಅಭ್ಯರ್ಥಿಗೆ ಹಾಲಿನ ಅಭಿಷೇಕ ಮಾಡಲಾಗಿದೆ. ಕೋಣನಕೇರಿ ಗ್ರಾಮ ಪಂಚಾಯತ್​ ವ್ಯಾಪ್ತಿಯ ಶಿವಪುರ ತಾಂಡಾದ ಸುಧೀರ್ ಲಮಾಣಿ ಜಯಗಳಿಸುತ್ತಿದ್ದಂತೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ.

ಅಲ್ಲದೆ, ಸುಧೀರ್‌ ಲಮಾಣಿಯನ್ನು ಮನೆಯವರು ಆರತಿ ಮಾಡಿ ಬರಮಾಡಿಕೊಂಡಿದ್ದಾರೆ.

19:32 December 30

ತಾಲೂಕು ಬಿಜೆಪಿ ಅಧ್ಯಕ್ಷನಿಗೆ ಸೋಲು

Gram panchayat election
ತಾಲೂಕು ಬಿಜೆಪಿ ಅಧ್ಯಕ್ಷನಿಗೆ ಸೋಲು

ಧಾರವಾಡ : ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಧಾರವಾಡ ತಾಲೂಕು ಬಿಜೆಪಿ ಅಧ್ಯಕ್ಷನಿಗೆ ಸೋಲಾಗಿದೆ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ತಾಲೂಕು ಅಧ್ಯಕ್ಷ ರುದ್ರಪ್ಪ ಅರಿವಾಳ ಕುರುಬಗಟ್ಟಿ ಪಂಚಾಯತ್​​ನಿಂದ ಸ್ಪರ್ಧಿಸಿದ್ದರು, ತಾಲೂಕು ಕಾಂಗ್ರೆಸ್​ ಅಧ್ಯಕ್ಷ ಉಳಿವಯ್ಯ ಪೂಜಾರ ಗರಗ ಪಂಚಾಯತ್​ನಿಂದ ಕಣಕ್ಕಿಳಿದಿದ್ದರು.  

19:31 December 30

ಏಜೆಂಟ್ ಇಲ್ಲದೆ ಮತ ಎಣಿಕೆ

Gram panchayat election
ಸೋತ ಅಭ್ಯರ್ಥಿ ಬೆಂಬಲಿಗರಿಂದ ವಾಗ್ವಾದ

ಮುದ್ದೇಬಿಹಾಳ : ಪಟ್ಟಣದ ಎಂಜಿವಿಸಿ ಕಾಲೇಜಿನಲ್ಲಿ ನಡೆದ ಮತ ಎಣಿಕೆ ವೇಳೆ ಹಿರೇಮುರಾಳ ಗ್ರಾ.ಪಂನ ವಣಕಿಹಾಳ ಗ್ರಾಮದ ಸದಸ್ಯ ಸ್ಥಾನಕ್ಕೆ ಒಬ್ಬ ಅಭ್ಯರ್ಥಿ ಪರ ಏಜೆಂಟ್​ನ್ನು ಇಟ್ಟುಕೊಂಡು ಮತ ಎಣಿಕೆ ನಡೆಸಿ ಫಲಿತಾಂಶ ಘೋಷಣೆ ಮಾಡಲಾಗಿದೆ ಎಂದು ಪರಾಜಿತ ಅಭ್ಯರ್ಥಿ ನೀಲಮ್ಮ ಬಸರಕೋಡ ಅವರ ಏಜೆಂಟ್​​ ಹಣಮಂತ್ರಾಯ ಬಸರಕೋಡ ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಸಿದ ಚುನಾವಣಾಧಿಕಾರಿ ಎಸ್.ಜಿ. ಲೊಟಗೇರಿ, ವಣಕಿಹಾಳ ಗ್ರಾಮದಲ್ಲಿ 3 ಬಿ ಸ್ಥಾನಕ್ಕೆ  ಸ್ಪರ್ಧಿಸಿದ್ದ ಕಾಶೀಬಾಯಿ ಬಿರಾದಾರ 110 ಮತಗಳು ಪಡೆದಿದ್ದರೆ, ಅವರ ಪ್ರತಿಸ್ಪರ್ಧಿ ನೀಲಮ್ಮ ಬಸರಕೋಡ ಅವರಿಗೆ 91 ಮತಗಳು ಬಂದಿವೆ. ಮತ ಎಣಿಕೆ ವೇಳೆ ಏಜೆಂಟ್​ ಅಥವಾ ಅಭ್ಯರ್ಥಿ ಇರಬೇಕು ಎಂದು ತಿಳಿಸಲಾಗಿದೆ. ಆದರೆ, ಅವರು ಬಾರದ ಕಾರಣ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಹೇಳಿದರು.

19:30 December 30

ತಾಲೂಕು ಪಂಚಾಯತ್​ ಸದಸ್ಯನಿಗೆ ಸೋಲು

ಕಾರವಾರ : ಗ್ರಾಮ ಪಂಚಾಯತ್​ಗೆ ಸ್ಪರ್ಧಿಸಿದ್ದ ಮೂವರು ತಾಲೂಕು ಪಂಚಾಯತ್​ ಸದಸ್ಯರ ಪೈಕಿ ಇಬ್ಬರು ಆಯ್ಕೆಯಾಗಿ ಓರ್ವ ಸೋತಿದ್ದಾರೆ.

ತಾಲೂಕಿನ ಮುಡಗೇರಿ ಗ್ರಾ.ಪಂನ ಅಂಗಡಿ ವಾರ್ಡ್‌ನಿಂದ ಸ್ಪರ್ಧಿಸಿದ್ದ ಸುರೇಂದ್ರ ಗಾಂವ್ಕರ್ ಮತ್ತು ಅಮದಳ್ಳಿ ಗ್ರಾ.ಪಂ‌ನ ಸಾಣೇಮಕ್ಕಿ ವಾರ್ಡ್‌ನಿಂದ ಸ್ಪರ್ಧಿಸಿದ್ದ ಪುರುಷೋತ್ತಮ ಗೌಡ ಗೆದ್ದಿದ್ದಾರೆ. ಕಿನ್ನರ ಗ್ರಾ.ಪಂ‌ನ ಘಾಡಸಾಯಿ ವಾರ್ಡ್‌ನಿಂದ ಸ್ಪರ್ಧಿಸಿದ್ದ ಪ್ರಶಾಂತ ಗೋವೇಕರ್‌ ಸೋತಿದ್ದಾರೆ.

ತಾಲೂಕು ಪಂಚಾಯತ್​ ಅವಧಿ ಮುಗಿಯುತ್ತಿರುವ ಹಿನ್ನಲೆ, ಈ ಮೂವರು ಗ್ರಾ.ಪಂ‌ ಅಖಾಡಕ್ಕೆ ಧುಮುಕಿದ್ದರು.

19:00 December 30

ಅಮ್ಮ ಸೋತಿದ್ದಕ್ಕೆ ಮಗ ಆತ್ಮಹತ್ಯೆ ಯತ್ನ

ಹಾಸನ : ಗ್ರಾ.ಪಂ ಚುನಾವಣೆಯಲ್ಲಿ ತಾಯಿ ಸೋತಿದ್ದರಿಂದ ಮನನೊಂದು ಮಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಅರುಣ್ ಕುಮಾರ್ ‌ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತನ ತಾಯಿ ಕುಮಾರಿ ಹೊಳೆನರಸೀಪುರ ತಾಲೂಕು ಕಡುವಿನಹೊಸಳ್ಳಿಯ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಇದರಿಂದ ನೊಂದ ಅರುಣ್ ಕುಮಾರ್​ ಆತ್ಮಹತ್ಯೆಗೆ ಯತ್ನಿಸಿದ್ದಾನೆ.  

19:00 December 30

ಶ್ರೀರಾಮುಲು ಆಪ್ತ ಪಾಲಯ್ಯಗೆ ಗೆಲುವು

Gram panchayat election
ಶ್ರೀರಾಮುಲು ಆಪ್ತ ಪಾಲಯ್ಯಗೆ ಗೆಲುವು

ಚಿತ್ರದುರ್ಗ: ಸಚಿವ ಶ್ರೀರಾಮುಲು ಆಪ್ತ ಪಾಲಯ್ಯ ಗೆಲುವು ಸಾಧಿಸಿದ್ದಾರೆ.

ಕಾಲುವೇಹಳ್ಳಿ ಗ್ರಾಮ ಪಂಚಾಯತ್​ನ ವಾರ್ಡ್​ನಿಂದ ಸ್ಪರ್ಧಿಸಿದ್ದ ಪಾಲಯ್ಯ 173 ಮತಗಳಿಂದ ಪ್ರತಿಸ್ಪರ್ಧಿ ವಿರುದ್ಧ ಗೆದ್ದು ಬೀಗಿದ್ದಾರೆ.   

18:58 December 30

ಸತತ 5ನೇ ಬಾರಿ ಗೆದ್ದು ಬೀಗಿದ ಅಭ್ಯರ್ಥಿ

Gram panchayat election
ಸತತ 5ನೇ ಬಾರಿ ಗೆದ್ದು ಬೀಗಿದ ಅಭ್ಯರ್ಥಿ

ರಾಯಚೂರು: ಜಿಲ್ಲೆಯಲ್ಲಿ ನಡೆದ ಗ್ರಾಮ ಪಂಚಾಯತ್​​ ಚುನಾವಣೆಯಲ್ಲಿ ಓರ್ವ ಅಭ್ಯರ್ಥಿ ಸತತವಾಗಿ 5 ಬಾರಿ ಜಯ ಸಾಧಿಸಿದ್ದಾರೆ.

ಜಿಲ್ಲೆಯ ಸಿಂಧನೂರು ತಾಲೂಕಿನ ಗಾಂಧಿನಗರ ಪಂಚಾಯತ್​ ವ್ಯಾಪ್ತಿಯ ವಾರ್ಡ್ 4 ರಿಂದ ಸ್ಪರ್ಧಿಸಿದ ಗೋಪಿನಿಡಿ ಕೃಷ್ಣ ಎನ್ನುವವರು ಸತತವಾಗಿ ಗೆಲುವು ಸಾಧಿಸಿದ ಅಭ್ಯರ್ಥಿಯಾಗಿದ್ದಾರೆ. 4 ಬಾರಿ ಜಯಭೇರಿ ಬಾರಿಸಿದ್ದ ಗೋಪಿನಿಡಿ ಕೃಷ್ಣ ಈ ಬಾರಿಯೂ ಸ್ಪರ್ಧಿಸಿ ಗೆದ್ದಿದ್ದಾರೆ.

18:03 December 30

ಗೆಲುವಿನ ನಗೆ ಬೀರಿದ ದಂಪತಿ

Gram panchayat election
ಗೆಲುವಿನ ನಗೆ ಬೀರಿದ ದಂಪತಿ

ಕಾರವಾರ : ಮಾಜಿ ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕರನ್ನು ಸೋಲಿಸುವ ಮೂಲಕ ದಂಪತಿ ಗೆಲುವಿನ ನಗೆ ಬೀರಿದ್ದಾರೆ.

ತಾಲೂಕಿನ ಚಿತ್ತಾಕುಲ ಗ್ರಾ.ಪಂನ ಕಿಲ್ಲೆ ವಾರ್ಡ್​ನಿಂದ ಸ್ಪರ್ಧಿಸಿದ್ದ ಸೂರಜ್ ದೇಸಾಯಿ 109 ಮತಗಳಿಂದ ಗೆಲುವು ಸಾಧಿಸಿದರೆ, ಚಿತ್ತಾಕುಲ ಗ್ರಾ.ಪಂ ಮಾಜಿ ಅಧ್ಯಕ್ಷ ರಾಜು ತಾಂಡೇಲ್ ವಿರುದ್ಧ ಸ್ಪರ್ಧಿಸಿದ್ದ ಸೂರಜ್ ದೇಸಾಯಿ ಪತ್ನಿ ಸ್ವಾತಿ ದೇಸಾಯಿ 440 ಮತಗಳನ್ನು ಪಡೆದು ಗೆದ್ದಿದ್ದಾರೆ.

18:02 December 30

ಶಾಸಕ ಭೀಮಾನಾಯ್ಕ್ ಸಹೋದರಿಗೆ ಗೆಲುವು

Gram panchayat election
ಶಾಸಕ ಭೀಮಾನಾಯ್ಕ್ ಸಹೋದರಿಗೆ ಗೆಲುವು

ಹೊಸಪೇಟೆ : ತಾಲೂಕಿನ ಕಲ್ಲಹಳ್ಳಿ ಗ್ರಾ.ಪಂ ಮೂರನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಭೀಮಾನಾಯ್ಕ್ ಸಹೋದರಿ ಶಕುಂತಲಾ ಗೆಲುವು ಸಾಧಿಸಿದ್ದಾರೆ.

509 ಮತಗಳನ್ನು ಪಡೆದು ಶಕುಂತಲಾ ಗೆದ್ದಿದ್ದು, ಕಲ್ಲಹಳ್ಳಿ ಗ್ರಾಮ ಪಂಚಾಯತ್​​ನಲ್ಲಿ ಕಳೆದ 26 ವರ್ಷಗಳಿಂದ ಅವಿರೋಧ ಆಯ್ಕೆ ಮಾಡಿಕೊಂಡು ಬರಲಾಗುತ್ತಿತ್ತು. ಈ ಬಾರಿ ಚುನಾವಣೆಗೆ ಚುನಾವಣೆ ನಡೆಸಲಾಗಿತ್ತು.  

17:40 December 30

ಬಾಣಂತಿ‌ಗೆ ಗೆಲುವು

Gram panchayat election
ಬಾಣಂತಿ‌ಗೆ ಗೆಲುವು

ಹಾವೇರಿ : ತಾಲೂಕಿನ ಹೊಸರಿತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಕೂರ ಗ್ರಾಮದ 2ನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಬಾಣಂತಿ ಗೆಲುವಿನ ನಗೆ ಬೀರಿದ್ದಾರೆ.

ನೇತ್ರಾವತಿ ಮರಿಗೌಡ್ರ ಪಂಚಾಯತಿ ಚುನಾವಣೆ ಗೆದ್ದವರು. ಡಿ.6ರಂದು ಇವರು ಗಂಡು ಮಗುವಿಗೆ ಜನ್ಮ ‌ನೀಡಿದ್ದರು. ನೇತ್ರಾವತಿ ಪರ ಸೂಚಕರು ನಾಮಪತ್ರ ಸಲ್ಲಿಸಿದ್ದರು.

17:38 December 30

ಏಜೆಂಟ್​ಗೆ ಕಪಾಳಮೋಕ್ಷ

Gram panchayat election
ಏಜೆಂಟ್​ಗೆ ಕಪಾಳಮೋಕ್ಷ

ಹೊಸಪೇಟೆ : ಲಿಟಲ್ ಪ್ಲವರ್ ಶಾಲೆ ಮುಂಭಾಗದಲ್ಲಿ ಏಜೆಂಟ್ ಒಬ್ಬರಿಗೆ ಪೊಲೀಸ್ ಕಾನ್​​ಸ್ಟೇಬಲ್ ಕಪಾಳಮೋಕ್ಷ ಮಾಡಿದ್ದಾರೆ.  

ಪೊಲೀಸರು ತಪಾಸಣೆ ಮಾಡಿದಾಗ ಏಜೆಂಟ್​ ಬಳಿ ಮೊಬೈಲ್ ದೊರಕಿತ್ತು. ಹೀಗಾಗಿ, ಕೋಪದಿಂದ ಕಾನ್​ಸ್ಟೇಬಲ್ ಕಪಾಳಮೋಕ್ಷ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬೆಳಗ್ಗೆ ಡಿವೈಎಸ್ಪಿ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದು ಸುದ್ದಿಯಾಗಿತ್ತು. ಇದೀಗ ‌ಪೇದೆ ಕಪಾಳ ಮೋಕ್ಷ ಮಾಡಿದ್ದಾರೆ.  

17:20 December 30

ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿಗೆ 'ಲಾಟರಿ'

ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿಗೆ 'ಲಾಟರಿ'

ಹಾಸನ : ಜಿಲ್ಲೆಯ ಚನ್ನರಾಯಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ಸುಂಡಹಳ್ಳಿ ಗ್ರಾಮ ಪಂಚಾಯತ್​ನಲ್ಲಿ​ ಸಮನಾಗಿ ಮತಗಳು ಬಂದಿದ್ದರಿಂದ ಲಾಟರಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.

ಸುಂಡಹಳ್ಳಿ ಗ್ರಾಮ ಪಂಚಾಯತ್​ಗೆ ಸೇರಿದ ಸಾಣೇನಹಳ್ಳಿ ಕ್ಷೇತ್ರದಿಂದ ವಿಜಯಮ್ಮ ಮತ್ತು ಸುಮ ರಮೇಶ್ ಸ್ಪರ್ಧಿಸಿದ್ದರು. ಮತ ಎಣಿಕೆ ವೇಳೆ ಇಬ್ಬರು ಅಭ್ಯರ್ಥಿಗಳಿಗೂ ತಲಾ 353 ಮತಗಳು ಬಂದಿತ್ತು.  ಹೀಗಾಗಿ, ಇಬ್ಬರ ಒಪ್ಪಿಗೆ ಪಡೆದು ಚುನಾವಣಾಧಿಕಾರಿ ಚೀಟಿ ಎತ್ತುವ ಮೂಲಕ ಗೆಲುವು ಘೋಷಿಸಿದರು. ಚೀಟಿಯಲ್ಲಿ  ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿ ಸುಮಾ ಸುರೇಶ್ ಹೆಸರು ಬಂದಿದ್ದರಿಂದ ಪ್ರತಿಸ್ಪರ್ಧಿ ವಿಜಯಮ್ಮ ಸೋಲೊಪ್ಪಿಕೊಂಡರು.

17:19 December 30

ಒಂದು ಮತದಿಂದ ಗೆಲುವು

ಕೊಪ್ಪಳ : ತಾಲೂಕಿನ ಓಜಿನಹಳ್ಳಿ ಗ್ರಾಮ ಪಂಚಾಯತ್​​ 1ನೇ ವಾರ್ಡ್​ನ ಸಾಮಾನ್ಯ ಮಹಿಳೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅನ್ನಪೂರ್ಣ ಎಂಬವರು ಒಂದು ಮತದ ಅಂತರದಿಂದ ಗೆದ್ದಿದ್ದಾರೆ.  

ಅನ್ನಪೂರ್ಣ 365 ಮತಗಳನ್ನು ಪಡೆದರೆ ಇವರ ಪ್ರತಿಸ್ಪರ್ಧಿ ತೋಟವ್ವ ಮೇಟಿ 364 ಮತಗಳನ್ನು ಪಡೆದಿದ್ದಾರೆ. ಮೊದಲು ಇಬ್ಬರು 364 ಸಮ ಮತಗಳನ್ನು ಪಡೆದಿದ್ದರು. ಬಳಿಕ ಚುನಾವಣಾಧಿಕಾರಿಗಳ ಮೇಲೆ ಒತ್ತಡ ಹಾಕಿ ಅನ್ನಪೂರ್ಣ ಗೆದಿದ್ದಾರೆ ಎಂದು ತೋಟವ್ವ ಮೇಟಿ ಬೆಂಬಲಿಗರು ಆರೋಪಿಸಿದ್ದಾರೆ.

17:18 December 30

ಬಿಜೆಪಿ- ಎಸ್​ಡಿಪಿಐ ಬೆಂಬಲಿಗರಿಂದ ಹರ್ಷೋದ್ಘಾರ

ಮಂಗಳೂರು: ಬಿಜೆಪಿ ಹಾಗೂ ಎಸ್​ಡಿಪಿಐ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ ಸಾಧಿಸಿರುವ ಹಿನ್ನೆಲೆ ಮಂಗಳೂರು ಮತ ಎಣಿಕೆ ಕೇಂದ್ರದ ಹೊರಗಡೆ ಎರಡೂ ಪಕ್ಷಗಳ ಕಾರ್ಯಕರ್ತರಿಂದ ಹರ್ಷೋದ್ಘಾರ ಮುಗಿಲು‌ ಮುಟ್ಟಿತ್ತು.

ಎರಡೂ ಪಕ್ಷಗಳ ಕಾರ್ಯಕರ್ತರು ರಸ್ತೆಯಲ್ಲಿ ಪಕ್ಷದ ಧ್ವಜ ಹಿಡಿದು ಹರ್ಷೋದ್ಘಾರ ಮೊಳಗಿಸಿದರು. ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. 

16:55 December 30

ಎರಡು ಮತಗಳ ಅಂತರದಿಂದ ಗೆಲುವು

Gram panchayat election
ಗೆದ್ದ ಅಭ್ಯರ್ಥಿ ಮಂಜುನಾಥ ಬಂಡೆಪ್ಪನವರ

ಧಾರವಾಡ : ಎರಡು ಮತಗಳ ಅಂತರದಿಂದ ಅಭ್ಯರ್ಥಿಯೊಬ್ಬರು ವಿಜಯಶಾಲಿಯಾಗಿದ್ದಾರೆ. ಧಾರವಾಡ ತಾಲೂಕಿನ ಯಾದವಾಡ ಗ್ರಾಮ ಪಂಚಾಯತ್​ 1 ನೇ ವಾರ್ಡ್​ನ ಅಭ್ಯರ್ಥಿ ಮಂಜುನಾಥ ಬಂಡೆಪ್ಪನವರ ಗೆದ್ದ ಅಭ್ಯರ್ಥಿ.

ಇವರು ಪ್ರತಿಸ್ಪರ್ಧಿ ಶೇಖಪ್ಪ ತಳವಾರ ವಿರುದ್ಧ 218 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ, ಶೇಖಪ್ಪ ತಳವಾರಗೆ 216 ಮತಗಳು ದೊರೆತಿವೆ.

16:53 December 30

5 ಗಂಟೆ ಕಳೆದರೂ ಬಾರದ ಫಲಿತಾಂಶ

Gram panchayat election
ರೊಚ್ಚಿಗೆದ್ದ ಅಭ್ಯರ್ಥಿಗಳ ಬೆಂಬಲಿಗರು

ಕಾರವಾರ : ಐದು ಗಂಟೆ ಕಳೆದರೂ ಫಲಿತಾಂಶ ಬಾರದಿದ್ದರಿಂದ ಸಿಟ್ಟಿಗೆದ್ದ ಅಭ್ಯರ್ಥಿಗಳ ಬೆಂಗಲಿಗರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಮಟಾದ ಡಾ.ಎ.ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯದ ಎಣಿಕೆ ಕೇಂದ್ರದಲ್ಲಿ ಹೊಲನಗದ್ದೆ ಗ್ರಾಮ ಪಂಚಾಯತ್​ನ​ ಮತ ಎಣಿಕೆ ಆರಂಭಗೊಂಡಿತ್ತು. ಆದರೆ, ಐದು ಗಂಟೆ ಕಳೆದರೂ ಫಲಿತಾಂಶ ಬಂದಿರಲಿಲ್ಲ. ಹೀಗಾಗಿ ಎಣಿಕೆ ಕೇಂದ್ರದ ಬಳಿ ನೆರೆದಿದ್ದ ಅಭ್ಯರ್ಥಿಗಳ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾದ ಹಿನ್ನೆಲೆ, ತಹಶೀಲ್ದಾರ್ ವಿ.ಎಸ್ ಕಡಕಬಾವಿ, ಸಿಪಿಐ ಪರಮೇಶ್ವರ ಗುನಗಾ ಜನರ ಮನವೊಲಿಕೆಗೆ ಪ್ರಯತ್ನ ನಡೆಸಿದ್ದಾರೆ.  

16:53 December 30

ಸಾಮಾಜಿಕ ಅಂತರ ಮರೆತ ಜನ

Gram panchayat election
ಸಾಮಾಜಿಕ ಅಂತರ ಮರೆತ ಜನ

ಚಾಮರಾಜನಗರ : ಜಿಲ್ಲೆಯ ಮತ ಎಣಿಕೆ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಸಾಮಾಜಿ ಅಂತರ ಮರೆತು ಗುಂಪು ಸೇರಿದ್ದು ಕಂಡು ಬಂತು. 

ವಿಜಯೋತ್ಸವ ಮಾಡುವಂತಿಲ್ಲ ಎಂಬ ನಿಯಮವಿದ್ದರೂ ಕೆಲವೆಡೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ನೆರೆದಿದ್ದ ಬಹುತೇಕರು ಮಾಸ್ಕ್​ ಧರಿಸಿರಲಿಲ್ಲ. 

16:33 December 30

ಆರತಕ್ಷತೆಗೆ ಅಡ್ಡಿ

ಆರತಕ್ಷತೆಗೆ ಅಡ್ಡಿ

ರಾಯಚೂರು: ಮತ ಎಣಿಕೆಯಿಂದ ನಗರದ ಎಲ್‌ವಿಡಿ ಕಾಲೇಜು ಹತ್ತಿರದ ಶ್ರೀಕೃಷ್ಣ ದೇವಾಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಯ ಆರತಕ್ಷತೆಗೆ ಅಡಚಣೆಯಾಗಿದೆ.

ಶ್ರೀಕೃಷ್ಣ ದೇವಾಸ್ಥಾನದ ಕಲ್ಯಾಣ ಮಂಟಪದಲ್ಲಿ ವೀರಯ್ಯ ಸ್ವಾಮಿ ಎಂಬವರ ಪುತ್ರಿಯ ಮದುವೆಯ ಆರತಕ್ಷತೆ ಸಮಾರಂಭ ನಡೆಯುತ್ತಿತ್ತು, ಮತ ಎಣಿಕೆ ಕೇಂದ್ರಕ್ಕೆ ಬಂದವರೆಲ್ಲ ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗಿ ಊಟ ಮಾಡಿದ್ದರಿಂದ ಸಮಸ್ಯೆ ಉಂಟಾಗಿದೆ. ಬಳಿಕ ಆಹ್ವಾನಿತರನ್ನು ಪರಿಶೀಲಿಸಿ ಊಟಕ್ಕೆ ಬಿಡುವ ವ್ಯವಸ್ಥೆ ಮಾಡಲಾಯಿತು.

16:27 December 30

ಮತ ಎಣಿಕೆ ಕೇಂದ್ರಗಳಿಗೆ ಅಪರ ಜಿಲ್ಲಾಧಿಕಾರಿ ಭೇಟಿ

ಸುಳ್ಯ : ತಾಲೂಕಿನ ಮತ ಎಣಿಕೆ ಕೇಂದ್ರಗಳಿಗೆ ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

16:26 December 30

ಏಜೆಂಟರ ಬಳಿ ನಿಂಬೆ ಹಣ್ಣು ಪತ್ತೆ

ಏಜೆಂಟರ ಬಳಿ ನಿಂಬೆ ಹಣ್ಣು ಪತ್ತೆ

ಹೊಸಪೇಟೆ : ನಗರದ ಲಿಟಲ್ ಪ್ಲವರ್ ಶಾಲೆಯ ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿ ಪೊಲೀಸರು ಏಜೆಂಟರನ್ನು ತಪಾಸಣೆ ಮಾಡುವ ವೇಳೆ ನಿಂಬೆ ಹಣ್ಣು ಪತ್ತೆಯಾಗಿವೆ.

ಅಭ್ಯರ್ಥಿ ಗೆಲುವಿಗಾಗಿ ಏಜೆಂಟರು ನಿಂಬೆ ಹಣ್ಣು ತಂದಿದ್ದಾರೆ ಎನ್ನಲಾಗಿದೆ. ಮತ ಎಣಿಕೆ ಕೊಠಡಿಗೆ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂದು ಮೊದಲೇ ತಿಳಿಸಲಾಗಿತ್ತು. ಆದರೂ, ಏಜೆಂಟರು ನಿಂಬೆ ಹಣ್ಣು ತಂದು ಸಿಕ್ಕಿ ಹಾಕಿಕೊಂಡಿದ್ದಾರೆ. 

15:50 December 30

ಮಂಗಳಮುಖಿಗೆ ಗೆಲುವು

Gram panchayat election
ಗೆಲುವಿನ ನಗೆ ಬೀರಿದ ಮಂಗಳಮುಖಿ ದೇವಿಕಾ

ಮೈಸೂರು : ಕೆ.ಆರ್. ನಗರ ತಾಲೂಕು ಸಾಲಿಗ್ರಾಮ ಗ್ರಾಮ ಪಂಚಾಯತ್​​ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಂಗಳಮುಖಿ ದೇವಿಕಾ ಗೆಲುವಿನ ನಗೆ ಬೀರಿದ್ದಾರೆ.

ಪ್ರತಿಸ್ಪರ್ಧಿಯನ್ನು 5 ಮತಗಳ ಅಂತರದಿಂದ ಸೋಲಿಸಿರುವ ಮಂಗಳಮುಖಿ ದೇವಿಕಾ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

15:50 December 30

ಅಸ್ವಸ್ಥರಾದ ಅಭ್ಯರ್ಥಿ

Gram panchayat election
ಮತ ಎಣಿಕೆ ಕೇಂದ್ರದಲ್ಲಿ ಅಸ್ವಸ್ಥರಾದ ಅಭ್ಯರ್ಥಿ

ಮಂಗಳೂರು: ಮತ ಎಣಿಕೆ ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ನಗರದ ಹೊರವಲಯದ ಅತಿಕಾರಿಬೆಟ್ಟು 2ನೇ ವಾರ್ಡ್​ನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೃಷ್ಣ ಶೆಟ್ಟಿಗಾರ್ ಮತ ಎಣಿಕಾ ಕೇಂದ್ರದ ಒಳಗೆ ಎರಡು ಬಾರಿ ಫಿಟ್ಸ್ ರೋಗದಿಂದ ಅಸ್ವಸ್ಥರಾದರು.  ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

15:44 December 30

ಅಜ್ಜಿಯ ಕ್ಷೇತ್ರದಲ್ಲಿ ಗೆದ್ದ ಮೊಮ್ಮಗಳು

Gram panchayat election
ಅಜ್ಜಿಯ ಕ್ಷೇತ್ರದಲ್ಲಿ ಗೆದ್ದ ಮೊಮ್ಮಗಳು

ಧಾರವಾಡ: ಅಜ್ಜಿ ಪ್ರತಿನಿಧಿಸಿದ್ದ ವಾರ್ಡ್​ನಲ್ಲಿ ಮೊಮ್ಮಗಳು ಸ್ಪರ್ಧೆ ಮಾಡಿ ವಿಜಯಶಾಲಿಯಾಗಿದ್ದಾರೆ.

ತಾಲೂಕಿನ ರಾಮಾಪೂರ ಗ್ರಾಮದ 21 ವರ್ಷದ ಲಕ್ಷ್ಮೀ ಮಾದರ ಗೆಲುವು ಸಾಧಿಸಿದ್ದಾರೆ. ರಾಮಾಪೂರ ಗ್ರಾಮದ ವಾರ್ಡ್ ನಂಬರ್​​​ 1 ರಿಂದ ಸ್ಪರ್ಧೆ ಮಾಡಿದ್ದರು. ಈ ಹಿಂದೆ ಅವರ ಅಜ್ಜಿ ರುಕ್ಮವ್ವ ಪ್ರತಿನಿಧಿಸಿದ್ದರು. ಅಜ್ಜಿ ಬದಲಿಗೆ ಮೊಮ್ಮಗಳು ಚುನಾವಣೆಗೆ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ.

15:33 December 30

ಎರಡು ಚಿಹ್ನೆಗಳ ನಡುವೆ ಗೊಂದಲ

Gram panchayat election
ಸ್ಕೇಲ್​ನಿಂದ ಮತ ಅಳೆದ ಚುನಾವಣಾಧಿಕಾರಿ

ಕೊಪ್ಪಳ : ಎರಡು ಚಿಹ್ನೆಗಳಗಳ ಮಧ್ಯದಲ್ಲಿ ಮತದಾರನೊಬ್ಬ ಹಕ್ಕು ಚಲಾಯಿಸಿದ್ದರಿಂದ ಮತ ಎಣಿಕೆ ಸಂದರ್ಭದಲ್ಲಿ ಮತವನ್ನು ಸ್ಕೇಲ್​ನಿಂದ ಅಳೆದ ಘಟನೆ ನಗರದ ಶ್ರೀ ಗವಿಸಿದ್ದೇಶ್ವರ ಹೈಸ್ಕೂಲ್​ನ ಮತ ಎಣಿಕೆ ಕೇಂದ್ರದಲ್ಲಿ ನಡೆಯಿತು.

ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮ ಪಂಚಾಯತ್​ನ ಮುದ್ದಾಬಳ್ಳಿ ಗ್ರಾಮದ 1 ವಾರ್ಡ್​ನ ಮತ ಎಣಿಕೆಯ ವೇಳೆ ಟಿವಿ ಚಿಹ್ನೆ ಹಾಗೂ ಆಟೋ ಚಿಹ್ನೆಯ ಮಧ್ಯೆ ಮತದಾರನೋರ್ವ ಮತ ಚಲಾಯಿಸಿದ್ದನು. ಗೊಂದಲದ ಹಿನ್ನೆಲೆ, ಈ ಮತವನ್ನು ಎಣಿಕೆಯಿಂದ ಹೊರಗಿಟ್ಟು, ಕೊನೆ ಹಂತದಲ್ಲಿ ಚುನಾವಣಾಧಿಕಾರಿ ಸ್ಕೇಲ್​ನಿಂದ ಅಳತೆ ಮಾಡಿ ಟಿವಿ ಚಿಹ್ನೆಯ ಮತಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದಿದ್ದರಿಂದ ಟಿವಿ ಅಭ್ಯರ್ಥಿಗೆ ಮತ ಎಂದು ಘೋಷಿಸಿದರು.  

15:32 December 30

Gram panchayat election
ಜಯಗಳಿಸಿದ ಇಂಜಿನಿಯರ್​ ಓಂಕಾರ ಹಳದನಕರ

ಬೆಳಗಾವಿ : ತಾಲೂಕಿನ ಹಿಂಡಲಗಾ ಗ್ರಾಮ ಪಂಚಾಯತ್​ನ 8ನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಇಂಜಿನಿಯರ್ 246 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಡಿಪ್ಲೊಮಾ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಓಂಕಾರ ಹಳದನಕರ ಗೆದ್ದ ಅಭ್ಯರ್ಥಿ.

15:07 December 30

ಮೃತ ಅಭ್ಯರ್ಥಿಗೆ ಗೆಲುವು

ದಾವಣಗೆರೆ: ಹೃದಯಘಾತದಿಂದ ಮೃತ ಅಭ್ಯರ್ಥಿ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮ ಪಂಚಾಯಯತ್​​ ವ್ಯಾಪ್ತಿಯ ಸುಂಕದಕಟ್ಟೆ ಗ್ರಾಮದ ಡಿ. ಬಸಪ್ಪ ಗೆದ್ದ ಅಭ್ಯರ್ಥಿ.

ಇವರು ಮೊದಲ‌ ಹಂತದ ಚುನಾವಣೆಯ ದಿನ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದು, ಇಂದು ಮತ ಎಣಿಕೆಯಲ್ಲಿ 444 ಮತಗಳನ್ನು ಪಡೆದು ಗೆದಿದ್ದಾರೆ. 

14:55 December 30

ತಾಯಿ ಮಗನಿಗೆ ಗೆಲುವು

Gram panchayat election
ಗ್ರಾಮ ಸಮರದಲ್ಲಿ ಗೆದ್ದ ತಾಯಿ ಮಗ

ಬಾಗಲಕೋಟೆ : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪಧಿಸಿದ್ದ ಇಳಕಲ್ ತಾಲೂಕು ಗೋನಾಳದ ತಾಯಿ-ಮಗ ಜಯಗಳಿಸಿದ್ದಾರೆ.

ಹನಮವ್ವ ಕುರಿ ಹಾಗೂ ದೊಡ್ಡಪ್ಪ ಕುರಿ ಗೆದ್ದ ಅಭ್ಯರ್ಥಿಗಳು. ಓತಗೇರಿ ಪಂಚಾಯತ್​ನ ಗೋನಾಳ ಗ್ರಾಮದ ವಾರ್ಡ್​ನಿಂದ ಹನಮವ್ವ ಕುರಿ ಸ್ಪರ್ಧೆ ಮಾಡಿದ್ದರೆ, ಮಗ ದೊಡ್ಡಬಸವ ಕುರಿ ಗೊರಬಾಳ ಪಂಚಾಯತ್​ನ ತೊಂಡಿಹಾಳ ಗ್ರಾಮದ ವಾರ್ಡ್​ನಿಂದ ಸ್ಪರ್ಧಿಸಿದ್ದರು. 

14:49 December 30

ಮಾಜಿ ಅಧ್ಯಕ್ಷನ ವಿರುದ್ಧ ಗೆದ್ದ ಗಿರಿಜನ ಅಭ್ಯರ್ಥಿ

ಮೈಸೂರು : ಗ್ರಾ.ಪಂ ಮಾಜಿ ಅಧ್ಯಕ್ಷನ ವಿರುದ್ಧ ಗಿರಿಜನ ಅಭ್ಯರ್ಥಿ ಅಣ್ಣಯ್ಯ ಗೆಲುವು ಸಾಧಿಸಿದ್ದಾರೆ.

ಹುಣಸೂರು ತಾಲೂಕು ಹರಳಹಳ್ಳಿ ಕ್ಷೇತ್ರದಿಂದ ಮಾಜಿ ಅಧ್ಯಕ್ಷ ರಾಜನಾಯ್ಕರ ವಿರುದ್ಧ ಸ್ಪರ್ಧಿಸಿದ್ದ ಗಿರಿಜನ ಅಭ್ಯರ್ಥಿ ಅಣ್ಣಯ್ಯ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಗೆಲುವಿನ ನಿರೀಕ್ಷೆಯಲ್ಲಿದ್ದ ರಾಜನಾಯ್ಕರಿಗೆ ನಿರಾಸೆಯಾಗಿದೆ.  

14:16 December 30

ಉಡುಪಿಯಲ್ಲಿ ಬೆಟ್ಟಿಂಗ್ ಬಲು ಜೋರು

ಉಡುಪಿಯಲ್ಲಿ  ಬೆಟ್ಟಿಂಗ್ ಭರಾಟೆ
ಉಡುಪಿಯಲ್ಲಿ ಬೆಟ್ಟಿಂಗ್ ಭರಾಟೆ

ಉಡುಪಿ:

  • ಮತ ಎಣಿಕೆ ಕೇಂದ್ರದ ಹೊರಭಾಗ ಬೆಟ್ಟಿಂಗ್ ಬಲು
  • ಹತ್ತು ಸಾವಿರದಿಂದ 1 ಲಕ್ಷ ರೂ.ವರೆಗೂ ಬೆಟ್ಟಿಂಗ್ ನಡೆಸಲಾಗ್ತಿದೆ ಎನ್ನಲಾಗುತ್ತಿದೆ
  • ಕುತೂಹಲ ಮೂಡಿಸಿದ ಪೆರ್ಡೂರು ಬೈರಂಪಳ್ಳಿ ಪಂಚಾಯತ್ ಫಲಿತಾಂಶ
  • ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ವ್ಯವಹಾರ ನಡೆಸುತ್ತಿರುವ ಬುಕ್ಕಿಗಳು
  • ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬೆಟ್ಟಿಂಗ್ ನಡೆಸುತ್ತಿರುವ ಆರೋಪ

14:01 December 30

52 ಮತಗಳಿಂದ ಗೆಲುವು ಸಾಧಿಸಿದ ಚವ್ಹಾಣ್
52 ಮತಗಳಿಂದ ಗೆಲುವು ಸಾಧಿಸಿದ ಚವ್ಹಾಣ್

ಯಾದಗಿರಿ:

  • ಆಟೋ ಚಾಲಕನಿಗೆ ಒಲಿದ ಅದೃಷ್ಟ
  • ಅಲ್ಲಿಪುರ ಗ್ರಾಪಂ ವಾರ್ಡ್ ಸಂಖ್ಯೆ 3 ರಲ್ಲಿ ಸ್ಪರ್ಧಿಸಿದ ಆಟೋ ಚಾಲಕ ಸೋಮು ಚವ್ಹಾಣ್ ಗೆ ಜಯ
  • 52 ಮತಗಳಿಂದ ಗೆಲುವು ಸಾಧಿಸಿದ ಚವ್ಹಾಣ್
  • ಮೊದಲ ಪ್ರಯತ್ನದಲ್ಲೇ ಗೆಲುವು
  • ಕಳೆದ 20 ವರ್ಷದಿಂದ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಭ್ಯರ್ಥಿ

14:01 December 30

ತುಮಕೂರು:

ಮತ ಎಣಿಕೆ ಕೇಂದ್ರದ ಬಳಿ ಪಟಾಕಿ ಮಾರಾಟ

ಕೋವಿಡ್ ನಿಯಮಾವಳಿ ಗಾಳಿಗೆ ತೂರಿದ ಜನ

13:28 December 30

ಗೆಲುವು ಸಾಧಿಸಿದ ಅಭ್ಯರ್ಥಿ ಮಾಜಿ ಸೈನಿಕ ನಾಗರಾಜ ವೆಂಕಟಾಪೂರ್

ಕೊಪ್ಪಳ:

  • ಗ್ರಾಪಂ ಚುನಾವಣೆಯಲ್ಲಿ ಜಯಗಳಿಸಿದ ಮಾಜಿ ಸೈನಿಕ
  • ಮಾಜಿ ಸೈನಿಕ ನಾಗರಾಜ ವೆಂಕಟಾಪೂರ್​ಗೆ ಜಯ
  • 107 ಮತಗಳಿಂದ ಗೆಲುವು ಸಾಧಿಸಿದ ಅಭ್ಯರ್ಥಿ
  • 17 ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದ ನಾಗರಾಜ

13:18 December 30

ಸಿ.ಬಿ.ಅಂಬೋಜಿ
ಸಿ.ಬಿ.ಅಂಬೋಜಿ

ಬೆಳಗಾವಿ:

  • ಮೂರು ದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದ ಅಭ್ಯರ್ಥಿಗೆ ಭರ್ಜರಿ ಗೆಲುವು
  • ಅನಾರೋಗ್ಯದ ಹಿನ್ನೆಲೆ ಸಾವನ್ನಪ್ಪಿದ್ದ ಸಿ.ಬಿ.ಅಂಬೋಜಿ
  • 414 ಮತಗಳ ಅಂತರದಿಂದ ಭರ್ಜರಿ ಗೆಲುವು
  • ಡಿಸೆಂಬರ್ 27 ರಂದು ಮೃತಪಟ್ಟ ಅಂಬೋಜಿ

13:17 December 30

ಸಹೋದರರ ಗೆಲುವು

ಗ್ರಾಮ ಪಂಚಾಯತ್ ಅಖಾಡದಲ್ಲಿ ಗೆಲುವು ಸಾಧಿಸಿದ ಸಹೋದರರು

ಉತ್ತರಕನ್ನಡ:

  • ಗ್ರಾಮ ಪಂಚಾಯತ್ ಅಖಾಡದಲ್ಲಿ ಗೆಲುವು ಸಾಧಿಸಿದ ಸಹೋದರರು
  • ಕಾರವಾರದ ಘಾಡಸಾಯಿ‌ ಪಂಚಾಯಿತಿಗೆ ಸ್ಪರ್ಧಿಸಿದ್ದ ಅಣ್ಣ-ತಮ್ಮ
  • ಬೋಳಶಿಟ್ಟಾ ವಾರ್ಡ್‌ನಿಂದ ಸ್ಪರ್ಧಿಸಿದ್ದ ಗಿರೀಶ ಕೊಠಾರಕರ್ 181 ಮತಗಳನ್ನು ಪಡೆದು 61 ಮತಗಳ  ಅಂತರದಿಂದ ಗೆಲುವು ಸಾಧಿಸಿದ್ದಾರೆ.
  • ಹಳಗೆಜೂಗದ ವಾರ್ಡ್‌ನಿಂದ ಸ್ಪರ್ಧಿಸಿದ್ದ ತಮ್ಮ ಅವಿನಾಶ ಕೊಠಾರಕರ್‌ಗೂ ಗೆಲುವು
  • 221 ಮತಗಳನ್ನ ಪಡೆದು 19 ಮತಗಳ ಅಂತರದಿಂದ ಗೆಲುವು ಸಾಧಿಸಿದ ಅವಿನಾಶ
  • ಗೆಲುವಿಗೆ ಹರ್ಷ ವ್ಯಕ್ತಪಡಿಸಿದ ಸಹೋದರರು

13:03 December 30

ಜಯ ಗಳಿಸಿದ ಅಭ್ಯರ್ಥಿ ವೆಲಿಂಡಾ ಡಿಸೋಜಾ
ಜಯ ಗಳಿಸಿದ ಅಭ್ಯರ್ಥಿ ವೆಲಿಂಡಾ ಡಿಸೋಜಾ

ಕಾರವಾರ:

  • ಗ್ರಾಪಂ ಮೆಟ್ಟೆಲೇರಿದ ಎಂಜಿನಿಯರಿಂಗ್ ಪದವೀಧರೆ
  • 12 ಮತಗಳ ಅಂತರದಿಂದ ಗೆಲುವು ಸಾಧಿಸಿದ ವೆಲಿಂಡಾ ಡಿಸೋಜಾ
  • 268 ಮತಗಳನ್ನು ಪಡೆದು ಜಯ ಗಳಿಸಿದ ಅಭ್ಯರ್ಥಿ
  • ಕಿರಿಯ ವಯಸ್ಸಿನಲ್ಲೇ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದ ಡಿಸೋಜಾ
  • ಕಾರವಾರದ ನೆವೆಲ್ ಬೇಸ್​ನ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಭ್ಯರ್ಥಿ

13:02 December 30

ಗೆಲುವು ಸಾಧಿಸಿದ ಮಂಗಳಮುಖಿ
ಗೆಲುವು ಸಾಧಿಸಿದ ಮಂಗಳಮುಖಿ

ಹೊಸಪೇಟೆ:

  • ಭರ್ಜರಿ ಗೆಲುವು ಸಾಧಿಸಿದ ಮಂಗಳಮುಖಿ
  • ಮಂಗಳಮುಖಿ ಸುಧಾ ಜೋಗತಿ ಗೆಲುವು ಸಾಧಿಸಿದ ಅಭ್ಯರ್ಥಿ
  • ತಾಲೂಕಿನ ಕಲ್ಲಹಳ್ಳಿ ಗ್ರಾಪಂ ರಾಜಾಪುರದ ಮತ ಕ್ಷೇತ್ರದಿಂದ ಗೆಲುವು ಸಾಧಿಸಿದ ಸುಧಾ ಜೋಗತಿ
  • 622 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಸಾಧಿಸಿದ ಅಭ್ಯರ್ಥಿ

12:50 December 30

ಸುರಪುರ:

  • 10 ಜನ ಅಭ್ಯರ್ಥಿಗಳ ಫಲಿತಾಂಶ ಪ್ರಕಟ
  • ಮತ ಎಣಿಕೆ ಕೇಂದ್ರದ ಬಳಿಯಲ್ಲಿ ಸೇರಿದ ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ
  • ಶಾಂತಿಯುತವಾಗಿ ನಡೆಯುತ್ತಿರುವ ಮತ ಎಣಿಕೆ ಕಾರ್ಯ

12:50 December 30

ಜಯ ಗಳಿಸಿದ ಅಭ್ಯರ್ಥಿ ಲೋಕೇಶ ಸಿದ್ದಪ್ಪ ಢವಳಗಿ
ಜಯ ಗಳಿಸಿದ ಅಭ್ಯರ್ಥಿ ಲೋಕೇಶ ಸಿದ್ದಪ್ಪ ಢವಳಗಿ

ಮುದ್ದೇಬಿಹಾಳ:

  • ಒಂದು ಅಂಚೆ ಮತದಿಂದ ಜಯ ಗಳಿಸಿದ ಅಭ್ಯರ್ಥಿ
  • ಹಿರೇಮುರಾಳ ಪಂಚಾಯತಿಯ ಜಂಗಮುರಾಳ ಗ್ರಾಮದ ಲೋಕೇಶ ಸಿದ್ದಪ್ಪ ಢವಳಗಿಗೆ ಜಯ
  • ಒಟ್ಟು ಮೂರು ಅಂಚೆಮತ ಪಡೆದ ಲೋಕೇಶ

12:38 December 30

ಲಾಟರಿ ಗೆಲುವು:

ಲಕ್ಷ್ಮಿ
ಲಕ್ಷ್ಮಿ

ಮೈಸೂರು:

  • ಗ್ರಾಪಂ ಚುನಾವಣೆ ಫಲಿತಾಂಶದಲ್ಲಿ ಸಮಬಲ ಸಾಧಿಸಿದ ಹಿನ್ನೆಲೆ ಲಾಟರಿ ಮೂಲಕ ವಿಜೇತರ ಆಯ್ಕೆ
  • ಲಾಟರಿ ಮೂಲಕ ಗೆಲುವು ಸಾಧಿಸಿದ ಲಕ್ಷ್ಮಿ
  • ಹುಣಸೂರು ತಾಲೂಕಿನ ಚಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಗೋಹಳ್ಳಿ ಕ್ಷೇತ್ರದಲ್ಲಿ ನಡೆದ ಘಟನೆ
  • 100 ಸಮ ಮತ ಗಳಿಸಿದ ಅಭ್ಯರ್ಥಿಗಳು

12:30 December 30

ದಾವಣಗೆರೆ:

  • ಲಾಟರಿ ಮೂಲಕ ಗೆಲುವು ಸಾಧಿಸಿದ ಮಹಿಳೆ
  • ಉಷಾ ವಿಜೇತೆ ಅಭ್ಯರ್ಥಿ
  • ಹೊನ್ನಾಳಿ ತಾಲೂಕಿನ ಚಿಕ್ಕಬಾಸೂರ ಗ್ರಾಪಂ ಚುನಾವಣೆಯಲ್ಲಿ ಸಮ ಮತ ಪಡೆದ ವೀಣಾ ಮತ್ತು ಉಷಾ
  • 199 ಸಮ ಮತ ಗಳಿಸಿದ ಅಭ್ಯರ್ಥಿಗಳು
  • ಲಾಟರಿ ಮೂಲಕ ವಿಜೇತರ ಆಯ್ಕೆ

12:24 December 30

ಅಸಭ್ಯವಾಗಿ ಮಾತನಾಡಿದ ವ್ಯಕ್ತಿ ಪೊಲೀಸ್​ ವಶಕ್ಕೆ

  • ಪೊಲೀಸರಿಗೆ ಅಸಭ್ಯವಾಗಿ ಮಾತನಾಡಿದ ವ್ಯಕ್ತಿ ವಶಕ್ಕೆ
  • ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಡಿವೈಎಸ್​ಪಿ ವಿ.ರಘುಕುಮಾರ
  • ನಗರದ ಮತ ಎಣಿಕೆ ಕೇಂದ್ರ ಲಿಟಲ್ ಪ್ಲವರ್ ಶಾಲೆ ಮುಂಭಾಗ ನಡೆದ ಘಟನೆ
  • ಜನರನ್ನು ಪೊಲೀಸರು ಚದುರಿಸಲು ಮುಂದಾಗ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ
  • ಜನರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ

12:23 December 30

ಉತ್ತರಕನ್ನಡ:

  • ಪತ್ನಿಯ ಹಿನ್ನಡೆ ಸುದ್ದಿ ಕೇಳಿ ತಲೆ ತಿರುಗಿ ಬಿದ್ದ ಪತಿ
  • ಅಂಕೋಲಾದ ಮತ ಎಣಿಕೆ ಕೇಂದ್ರದ ಆವರಣದಲ್ಲಿ ನಡೆದ ಘಟನೆ
  • ಮುಕುಂದ ಹುಲಸ್ವಾರ ಅಸ್ವಸ್ಥರಾದ ವ್ಯಕ್ತಿ
  • ಪತ್ನಿಯ ಹಿನ್ನಡೆ ಸುದ್ದಿ ಕೇಳಿ ಅಸ್ವಸ್ಥ

12:13 December 30

ಉತ್ತರಕನ್ನಡ :

  • ತಿರಸ್ಕೃತ ಮತದಿಂದ ಗೆಲುವು ಕಂಡ ಅಭ್ಯರ್ಥಿ
  • ವೀಣಾ ಗೌಡ ಗೆಲುವು ಕಂಡ ಅಭ್ಯರ್ಥಿ
  • ಶಿರಸಿ ತಾಲೂಕಿನ ವಾನಳ್ಳಿ ಗ್ರಾಪಂ ಗೋಣಸರ ವಾರ್ಡಿನ ಅಭ್ಯರ್ಥಿ
  • ಪಾರ್ವತಿ ಗೌಡ ವಿರುದ್ಧ ಒಂದು ಮತದ ಅಂತರದಿಂದ ಗೆಲುವು
  • ಪಾರ್ವತಿ ಗೌಡಗೆ ಹಾಕಿದ ಮತದ ಶಾಹಿ ಗುರುತು ವೀಣಾ ಗೌಡರವರ ಚಿಹ್ನೆಗೆ ತಾಗಿದ ಹಿನ್ನೆಲೆ ಮತ ತಿರಸ್ಕಾರ

12:03 December 30

ಕುಷ್ಟಗಿ:

  • 2 ಮತಗಳ ಅಂತರದಿಂದ ವಿಜಯ ಸಾಧಿಸಿದ ಅಭ್ಯರ್ಥಿ
  • ರುದ್ರಮ್ಮ ಹನಮಪ್ಪಗೆ ವಿಜಯಮಾಲೆ
  • ಮೆಣೆದಾಳ ಗ್ರಾಪಂನ ಮುಕ್ತಾ ರಾಂಪೂರ ಮತ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ರುದ್ರಮ್ಮ ಹನಮಪ್ಪ
  • ಒಟ್ಟು 180 ಮತಗಳನ್ನು ಪಡೆದ ರುದ್ರಮ್ಮ

12:02 December 30

ಕೇವಲ 1 ಮತದಿಂದ ಭರ್ಜರಿ ಗೆಲುವು ಸಾಧಿಸಿದ ಅಭ್ಯರ್ಥಿ

ರಾಣಿ ನಾಗೇಂದ್ರ
ರಾಣಿ ನಾಗೇಂದ್ರ

ಗಂಗಾವತಿ:

  • ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ ಅಭ್ಯರ್ಥಿ
  • ರಾಣಿ ನಾಗೇಂದ್ರ ಭರ್ಜರಿ ಗೆಲುವು ಸಾಧಿಸಿದ ಮಹಿಳಾ ಅಭ್ಯರ್ಥಿ
  • 79 ಮತ ಪಡೆದು ವಿಜಯಶಾಲಿಯಾದ ರಾಣಿ ನಾಗೇಂದ್ರ
  • ಗಂಗಾವತಿಯ ಸಣಾಪುರ ಗ್ರಾಮ ಪಂಚಾಯತ್​ ವ್ಯಾಪ್ತಿಯ ಅಂಜನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿ

11:42 December 30

ಜೈಲಿನಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದ ಅಭ್ಯರ್ಥಿ

ಬಿಜೆಪಿ ಬೆಂಬಲಿತ ಅಭ್ಯರ್ಥಿ ಪುಷ್ಪಾ ಮತ್ತು ಬೋಪಣ್ಣ

ಕೊಡಗು:

  • ಜೈಲಿನಿಂದ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು
  • ವಿರಾಜಪೇಟೆ ತಾಲೂಕಿನ ಎಮ್ಮೆಗುಂಡಿ ಕ್ಷೇತ್ರದ ಪುಲಿಯಂಡ ಬೋಪಣ್ಣಗೆ ಜಯ
  • ಜೈಲಿನಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದ ಅಭ್ಯರ್ಥಿ
  • ಸತತ ನಾಲ್ಕನೇ ಬಾರಿಗೆ ಜಯಭೇರಿ ಬಾರಿಸಿದ ಬೋಪಣ್ಣ
  • ಪಾಲಿಬೆಟ್ಟ ಪಂಚಾಯತಿಯ ಎಮ್ಮೆಗುಂಡಿ ವಾರ್ಡ್‌ನಿಂದ ಸ್ಪರ್ಧಿಸಿದ ಅಭ್ಯರ್ಥಿ

ಅಕ್ಕನ ವಿರುದ್ಧ ತಂಗಿ ಭರ್ಜರಿ ಗೆಲುವು:

  • ಅಕ್ಕನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ತಂಗಿ
  • ಜಯಭೇರಿ ಬಾರಿಸಿದ ಬಿಳಿಗೇರಿ ವಾರ್ಡ್ 1 ರ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪುಷ್ಪಾ
  • ಕೇವಲ 80 ಮತಗಳ ಅಂತರದಿಂದ ಪರಾಜಿತರಾದ ಅಕ್ಕ ಸುಮಾವತಿ

11:32 December 30

ಚುನಾವಣಾಧಿಕಾರಿ ಚಂದ್ರಶೇಖರ್​
ಚುನಾವಣಾಧಿಕಾರಿ ಚಂದ್ರಶೇಖರ್​

ರಾಯಚೂರು:

  • ಆರ್‌ಒ ಆರೋಗ್ಯದಲ್ಲಿ ಏರುಪೇರು
  • ರಾಯಚೂರು ನಗರದ ಎಲ್‌ವಿಡಿ ಕಾಲೇಜಿನ ಮತಗಟ್ಟೆ ಕೇಂದ್ರದಲ್ಲಿ ನಡೆದ ಘಟನೆ
  • ಚುನಾವಣಾಧಿಕಾರಿ ಚಂದ್ರಶೇಖರ್​ ಆರೋಗ್ಯದಲ್ಲಿ ಏರುಪೇರು

11:06 December 30

ಕೊಪ್ಪಳ:

  • ಮತ ಎಣಿಕೆ ಸಿಬ್ಬಂದಿ ಅಸ್ವಸ್ಥ
  • ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಹೈಸ್ಕೂಲ್ ಮೈದಾನದಲ್ಲಿ ನಡೆದ ಘಟನೆ
  • ಮತ ಎಣಿಕೆ ಕೊಠಡಿ ಮೇಲ್ವಿಚಾರಕ ವಿಜಯಕುಮಾರ್ ಬಾರಕೇರ ಅಸ್ವಸ್ಥಗೊಂಡ ವ್ಯಕ್ತಿ
  • ಮಧುಮೇಹ ಹಿನ್ನೆಲೆ ಅಸ್ವಸ್ಥಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲು

11:05 December 30

ಗೆಲುವಿನ ನಗೆ ಬೀರಿದ ಅಭ್ಯರ್ಥಿಗಳು

ಕಾರವಾರ:

  • ವೈಲವಾಡ ಗ್ರಾಪಂನ ಖಾರ್ಗೆಜೂಗ್ ರಾಜೇಶ  ಸುಧಾಕರ ನಾಯ್ಕ ಗೆ ಗೆಲುವು
  • ಕೆರವಡಿ  ಗ್ರಾಪಂನ ಕಡಿಯೆ ವಾರ್ಡ್ ಅಭ್ಯರ್ಥಿ ಬಾಲಚಂದ್ರ ನಾರಾಯಣ ಕಾಮತ್​ ಗೆ ಗೆಲುವು
  • ಮೂಡಗೇರಿ ಗ್ರಾಪಂನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುರೇಂದ್ರ ಗಾಂವಕರ್​ಗೆ ಜಯ
  • ದೇವಗಿರಿ ವಾರ್ಡ್ ಚಂದ್ರಶೇಖರ ಗಣಪತಿ ಬಾಂದೇಕರ್​ಗೆ ಗೆಲುವು
  • ಗೆಲುವು ಸಾಧಿಸಿದ ಕೈಗಾದ ಸುಜಾತ ಶಾಂತಾರಾಮ ಕುಣಬಿ
  • ವಿಜಯ ಸಾಧಿಸಿದ ಕುಚೇಗಾರ್ ವಾರ್ಡ್ ಸಂತೋಷ ಪ್ರಕಾಶ ದೇವಳಿ
  • ಗೆಲುವಿನ ನಗೆ ಬೀರಿದ ಸಂತೋಷ್ ಬಿಜೆಪಿ ಬೆಂಬಲಿತ ಅಭ್ಯರ್ಥಿ

10:46 December 30

ಗೆಲುವಿನ ನಗೆ ಬೀರಿದ ಇಬ್ಬರು ಬಿಜೆಪಿ, ಓರ್ವ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು

ಉತ್ತರಕನ್ನಡ:

  • ಬಿಜೆಪಿ ಬೆಂಬಲಿತ ಕಿರಣ್ ಭಟ್​ಗೆ ಗೆಲುವು
  • ಬೈರುಂಬೆ ಪಂಚಾಯತ್‌ ಬೈರುಂಬೆ ವಾರ್ಡ್‌ನಿಂದ ಸ್ಪರ್ಧಿಸಿದ ಕಿರಣ್ ಭಟ್
  • 104 ಮತಗಳ ಅಂತರದಿಂದ ಗೆದ್ದ ಕಿರಣ್
  • ಜಯಭೇರಿ ಬಾರಿಸಿದ ಜೆಡಿಎಸ್ ಬೆಂಬಲಿತ ಮಂಜುನಾಥ್ ವಿ. ಹೆಗಡೆ
  • ಶಿರಸಿ ಹುಣಸೆಕೊಪ್ಪ ಪಂಚಾಯತ್ ಕಳವೆ ವಾರ್ಡ್‌ನಿಂದ ಸ್ಪರ್ಧಿಸಿದ ಮಂಜುನಾಥ್ ವಿ. ಹೆಗಡೆ
  • 146 ಮತಗಳನ್ನು ಪಡೆದಿದ್ದು, 46 ಮತಗಳ ಅಂತರದಿಂದ ಗೆಲುವು
  • ವಾನಳ್ಳಿ ಪಂಚಾಯತ್ ಮಸ್ಕಿ ವಾರ್ಡ್‌ನಿಂದ ಸ್ಪರ್ಧಿಸಿದ ಗೀತಾ ಸಿದ್ಧಿಗೆ ಗೆಲುವು
  • 172 ಮತಗಳನ್ನು ಪಡೆದಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೀತಾ ಸಿದ್ಧಿ

10:37 December 30

ಶಾಸಕ ಎಂ.ಎಸ್. ಸೋಮಲಿಂಗಪ್
ಶಾಸಕ ಎಂ.ಎಸ್. ಸೋಮಲಿಂಗಪ್

ಬಳ್ಳಾರಿ:

  • ಮತ ಎಣಿಕೆ ಕೇಂದ್ರಕ್ಕೆ ಶಾಸಕ ಎಂ.ಎಸ್. ಸೋಮಲಿಂಗಪ್ಪ ಭೇಟಿ
  • ಮತ ಎಣಿಕೆ ಕಾರ್ಯ ವೀಕ್ಷಣೆ ಮಾಡಿದ ಶಾಸಕ
  • ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಸೋಮಲಿಂಗಪ್ಪ

10:25 December 30

ಚುನಾವಣಾಧಿಕಾರಿ ಸಾವು:

ಬೋರೇಗೌಡ
ಬೋರೇಗೌಡ

ಮೈಸೂರು:

  • ಕರ್ತವ್ಯನಿರತ ಚುನಾವಣಾಧಿಕಾರಿ ಸಾವು
  • ಮತ ಎಣಿಕೆ ಕೇಂದ್ರದಲ್ಲಿ ಹೃದಯಾಘಾತದಿಂದ ಮೃತಪಟ್ಟ ಅಧಿಕಾರಿ
  • ಮೈಸೂರಿನ ಪಿರಿಯಾಪಟ್ಟಣದ ಪುಷ್ಪ ಕಾನ್ವೆಂಟ್ ಮತ ಎಣಿಕೆ ಕೇಂದ್ರದಲ್ಲಿ ನಡೆದ ಘಟನೆ
  • ಬೋರೇಗೌಡ (52) ಮೃತ ಚುನಾವಣಾಧಿಕಾರಿ
  • ಎನ್.ಶೆಟ್ಟಹಳ್ಳಿ ಗ್ರಾ.ಪಂ ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡಿದ್ದ ಬೋರೇಗೌಡ

10:19 December 30

ಹುಬ್ಬಳ್ಳಿ:

  • ಮತ ಎಣಿಕೆ ಬಹಿಷ್ಕರಿಸಿದ ಶಿರಗುಪ್ಪಿ ಹಾಗೂ ಹಳ್ಯಾಳ ಗ್ರಾಪಂ ಅಭ್ಯರ್ಥಿಗಳು
  • ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆ ಮತ ಎಣಿಕೆ ಬಹಿಷ್ಕರ
  • ಒಂದೇ ಕೊಠಡಿಯಲ್ಲಿ ಜಮಾವಣೆಗೊಂಡ 45-50 ಜನ
  • ಪ್ರತ್ಯೇಕ ಕೊಠಡಿಯಲ್ಲಿ ಮತ ಎಣಿಕೆ ಮಾಡುವಂತೆ ಒತ್ತಾಯ

10:18 December 30

ದಾವಣಗೆರೆ:

  • ಮರು ಮತ ಎಣಿಕೆಗೆ ಅವಕಾಶವಿಲ್ಲ
  • ಮರು ಮತ ಎಣಿಕೆಗೆ ಅವಕಾಶವಿಲ್ಲವೆಂದು ಅಪರ ಜಿಲ್ಲಾಧಿಕಾರಿ ವೀರಮಲ್ಲಯ್ಯ ಸ್ಪಷ್ಟನೆ
  • ನಗರದ ಮೋತಿ ವೀರಪ್ಪ ಕಾಲೇಜಿಗೆ ಭೇಟಿ ನೀಡಿದ ವೀರಮಲ್ಲಯ್ಯ
  • ಶಾಂತಿಯುತವಾಗಿ ಮತ ಎಣಿಕೆ ಮಾಡುವಂತೆ ಡಿಸಿ ಸೂಚನೆ

10:11 December 30

ಅಂಚೆ ಮತ ಎಣಿಕೆ ಮುಕ್ತಾಯ

ಮತ ಎಣಿಕೆ ಕೇಂದ್ರದತ್ತ ಜಮಾಯಿಸಿದ ಜನ
ಮತ ಎಣಿಕೆ ಕೇಂದ್ರದತ್ತ ಜಮಾಯಿಸಿದ ಜನ

ಉತ್ತರಕನ್ನಡ:

  • ಕಾರವಾರ ತಾಲೂಕಿನಲ್ಲಿ ಅಂಚೆ ಮತಗಳ ಎಣಿಕೆ ಪೂರ್ಣ
  • ಒಟ್ಟು 18 ಗ್ರಾಮ ಪಂಚಾಯತಿಗಳಲ್ಲಿ 57 ಅಂಚೆ ಮತ ಚಲಾವಣೆ
  • ಮಾಜಾಳಿ 5, ಚಿತ್ತಾಕುಲಾ 11, ಮದೇವಾಡ 4, ಮುಡಗೇರಿ 1, ಹಣಕೋಣ 2, ಘಾಡಸಾಯಿ 3, ಗೋಟೆಗಾಳಿ 2, ಕದ್ರಾ 1, ಮಲ್ಲಾಪುರ 4, ಕೆರವಡಿ 0, ದೇವಳಮಕ್ಕಿ 3, ವೈಲವಾಡ 4, ಕಿನ್ನರ 2, ಕಡವಾಡ 1, ಶಿರವಾಡ 8, ಚೆಂಡಿಯಾ 1, ಅಮದಳ್ಳಿ 4, ತೊಡುರು 1 ಮತದಾನವಾಗಿದೆ.

10:01 December 30

ಝರಾಕ್ಸ್ ಅಂಗಡಿಗೆ ಮುಗಿಬಿದ್ದ ಏಜೆಂಟ್​ಗಳು

ಝರಾಕ್ಸ್ ಅಂಗಡಿಗೆ ಮುಗಿಬಿದ್ದ ಜನ
ಝರಾಕ್ಸ್ ಅಂಗಡಿಗೆ ಮುಗಿಬಿದ್ದ ಜನ

ಮುದ್ದೇಬಿಹಾಳ: ಮತ ಎಣಿಕೆ ವೇಳೆ ತಮಗೆ ಎಷ್ಟು ಮತಗಳು ಬಿದ್ದಿವೆ ಎಂದು ನೋಟ್ ಮಾಡಿಕೊಳ್ಳುವ ಹಾಳೆಗಾಗಿ ಏಜೆಂಟ್​ಗಳು ಮತ್ತು ಅಭ್ಯರ್ಥಿಗಳು ಝರಾಕ್ಸ್ ಅಂಗಡಿಗೆ ಮುಗಿಬಿದ್ದ ಘಟನೆ ನಡೆಯಿತು. ಈ ವೇಳೆ ಕೆಲವರು ಮಾಸ್ಕ್​ ಧರಿಸದೆ, ಸಾಮಾಜಿಕ ಅಂತರ ಗಾಳಿಗೆ ತೂರಿದರು.

09:50 December 30

ಮಂಗಳೂರು:

  • 13 ಕೇಂದ್ರಗಳಲ್ಲಿ ಮತ ಎಣಿಕೆ ಆರಂಭ
  • ಉತ್ಸಾಹದಿಂದ ಮತ ಎಣಿಕೆ ಕೇಂದ್ರದ ಸುತ್ತ ನೆರದ ಜನ
  • 220 ಗ್ರಾಮ ಪಂಚಾಯತಿಗಳ 3,222 ಸ್ಥಾನಗಳಿಗೆ ನಡೆದ ಚುನಾವಣೆ
  • ನಗರದ ಮಹಾತ್ಮ ಗಾಂಧಿ ಕಾಲೇಜಿನಲ್ಲಿ ಮುಂದುವರೆದ ಮತ ಎಣಿಕೆ
  • 7,275 ಮಂದಿಯ ಭವಿಷ್ಯ ಇಂದು ನಿರ್ಧಾರ

09:49 December 30

ಬೆಂಗಳೂರು:

  • ಮಹದೇವಪುರ ಮತ್ತು ಹೊಸಕೋಟೆಯಲ್ಲಿ ಮತ ಎಣಿಕೆ ವಿಳಂಬ
  • ಏಜೆಂಟ್​ಗಳು ಮತ್ತು ಅಭ್ಯರ್ಥಿಗಳು ಬರುವುದು ವಿಳಂಬವಾದ ಹಿನ್ನೆಲೆ ತಡವಾಗಿ ಆರಂಭವಾದ ಮತ ಎಣಿಕೆ
  • ಹೊಸಕೋಟೆ ತಾಲೂಕಿನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆಗೆ 71 ಟೇಬಲ್‌ ವ್ಯವಸ್ಥೆ
  • 213 ಮತ ಎಣಿಕೆ ಸಿಬ್ಬಂದಿ, 21 ಮೀಸಲು ಸೇರಿದಂತೆ ಒಟ್ಟು 234 ಸಿಬ್ಬಂದಿ ಮತ ಎಣಿಕೆಗೆ ನಿಯೋಜನೆ
  • ಮತ ಎಣಿಕೆ ವೇಳೆ ಮಾಸ್ಕ್ ಕಡ್ಡಾಯ

09:37 December 30

ಗೆಲುವಿಗಾಗಿ ನಿಂಬೆಹಣ್ಣಿನ ಮೊರೆ ಹೋದ ಅಭ್ಯರ್ಥಿಗಳು

ಕೇಂದ್ರಕ್ಕೆ ನಿಂಬೆಹಣ್ಣು ತಂದ ಅಭ್ಯರ್ಥಿಗಳು
ಕೇಂದ್ರಕ್ಕೆ ನಿಂಬೆಹಣ್ಣು ತಂದ ಅಭ್ಯರ್ಥಿಗಳು

ಕಲಬುರಗಿ:

  • ಮತ ಎಣಿಕೆ ಕೇಂದ್ರಕ್ಕೆ ನಿಂಬೆಹಣ್ಣು, ತಾಯಿತದ ಜೊತೆ ಬಂದ ಅಭ್ಯರ್ಥಿಗಳು
  • ಪೊಲೀಸ್​ ತಪಾಸಣೆ ವೇಳೆ ನಿಂಬೆಹಣ್ಣು ಪತ್ತೆ
  • ನಿಂಬೆಹಣ್ಣು, ತಾಯಿತವನ್ನು ವಶಪಡಿಸಿಕೊಂಡ ಪೊಲೀಸರು

09:31 December 30

ಶಿವಮೊಗ್ಗ:

  • ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಪ್ರಥಮ ಸುತ್ತಿನ ಎಣಿಕೆ ಪ್ರಾರಂಭ
  • ಶಿವಮೊಗ್ಗ ಹೆಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಪ್ರಾರಂಭ
  • ಮೂರು ಸುತ್ತುಗಳಲ್ಲಿ ಮತ ಎಣಿಕೆ ನಡೆಸಲು ನಿರ್ಧಾರ
  • ಮತ ಎಣಿಕ ಕೇಂದ್ರಕ್ಕೆ ಸಂಬಂಧಿಸಿದ ಅಭ್ಯರ್ಥಿ ಅಥವಾ ಏಜೆಂಟ್​ಗಳಿಗೆ ಮಾತ್ರ ಪ್ರವೇಶ

09:31 December 30

ರಾಮನಗರ:

  • ಶಾಂತಿಯುತ ಮತ ಎಣಿಕೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
  • 118 ಗ್ರಾಮ ಪಂಚಾಯತ್​ನ 1660 ಸ್ಥಾನಗಳಿಗೆ ನಡೆದ ಚುನಾವಣೆ
  • 4 ಕೇಂದ್ರಗಳಲ್ಲಿ ಮುಂದುವರೆದ ಮತ ಎಣಿಕೆ
  • 4,266 ಅಭ್ಯರ್ಥಿಗಳು ಭವಿಷ್ಯ ನಿರ್ಧಾರ
  • ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್
  • ಎಣಿಕೆ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ

09:19 December 30

ರಾಣೆಬೆನ್ನೂರು:

  • ರಾಣೆಬೆನ್ನೂರು ರೋಟರಿ ಶಾಲೆಯಲ್ಲಿ ಮತ ಎಣಿಕೆ ‌ಪ್ರಾರಂಭ
  • ಬೆಳಿಗ್ಗೆ 7.30ಕ್ಕೆ ಅಭ್ಯರ್ಥಿಗಳ ಸಮ್ಮುಖದಲ್ಲಿ ಭದ್ರತಾ ಕೊಠಡಿಗಳನ್ನು ತೆರೆದ ಚುನಾವಣಾಧಿಕಾರಿಗಳು
  • 15 ಕೊಠಡಿಗಳಲ್ಲಿ 60 ಟೇಬಲ್ ವ್ಯವಸ್ಥೆ
  • ಅಂಚೆ ಮತಗಳ‌ ಎಣಿಕೆ ಕಾರ್ಯ ಪ್ರಾರಂಭ

09:13 December 30

ಮೈಸೂರು:

  • ಮತ ಎಣಿಕೆ ಕೇಂದ್ರದ ಮುಂದೆ ಪೊಲೀಸರು ಹಾಗೂ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ
  • ಹೊಸ ಮಹಾರಾಣಿ ಕಾಲೇಜು ಕಟ್ಟಡದಲ್ಲಿ ನಡೆಯುತ್ತಿರುವ ಮತ ಎಣಿಕೆ
  • ಗುರುತಿನ ಚೀಟಿ ತೋರಿಸುವಂತೆ ಪೊಲೀಸರು ಕೇಳಿದ್ದಕ್ಕೆ ರೊಚ್ಚಿಗೆದ್ದ ಬೆಂಬಲಿಗರು

09:07 December 30

ಮತ ಎಣಿಕೆಗೆ ಕೊಠಡಿ ಕೊರತೆ
ಮತ ಎಣಿಕೆಗೆ ಕೊಠಡಿ ಕೊರತೆ

ತುಮಕೂರು:

  • ಅಂಚೆ ಮತ ಪತ್ರಗಳ ಎಣಿಕೆಗೆ ಕೊಠಡಿ ಕೊರತೆ
  • ಮಾಧ್ಯಮ ಕೇಂದ್ರದಲ್ಲಿ ಮತ ಎಣಿಕೆ ಆರಂಭ
  • ಉಪವಿಭಾಗಧಿಕಾರಿ ಅಜಯ್ ನೇತೃತ್ವದಲ್ಲಿ ಮತ ಎಣಿಕೆ ಆರಂಭ
  • ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ ಕಾರ್ಯ

08:57 December 30

ಲಘು ಲಾಠಿ ಪ್ರಹಾರ
ಲಘು ಲಾಠಿ ಪ್ರಹಾರ

ರಾಯಚೂರು:

  • ಲಘು ಲಾಠಿ ಪ್ರಹಾರ
  • ರಾಯಚೂರು ನಗರದ ಎಲ್‌ವಿಡಿ ಕಾಲೇಜು ಬಳಿ ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು
  • ಮತ ಎಣಿಕೆ ಕೇಂದ್ರದೊಳಗೆ ನುಗ್ಗಲು ಮುಂದಾದ ಸಾವಿರಾರು ಜನ
  • ಕೋವಿಡ್-19 ನಿಯಮಗಳನ್ನು ಗಾಳಿಗೆ ತೂರಿದ ಜನ
  • ಪಾಸ್​ ಇಲ್ಲದಿದ್ದರೂ ಮತ ಎಣಿಕೆ ಕೇಂದ್ರದೊಳಗೆ ನುಗ್ಗಲು ಯತ್ನ

08:57 December 30

ಉಡುಪಿ:

  • ಉಡುಪಿಯ 7 ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಪ್ರಾರಂಭ
  • ಮತ ಎಣಿಕೆಗೆ 284 ಟೇಬಲ್ ವ್ಯವಸ್ಥೆ
  • ಮತ ಎಣಿಕೆ ಕಾರ್ಯದಲ್ಲಿ 948 ಸಿಬ್ಬಂದಿ ಭಾಗಿ
  • ಇಂದು 5,057 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
  • 128 ಸ್ಥಾನಗಳಿಗೆ ಅವಿರೋಧ ಆಯ್ಕೆ

08:57 December 30

ಸ್ಟ್ರಾಂಗ್ ರೂಮ್ ಓಪನ್​ ಮಾಡಿದ ತಹಶೀಲ್ದಾರ್
ಸ್ಟ್ರಾಂಗ್ ರೂಮ್ ಓಪನ್​ ಮಾಡಿದ ತಹಶೀಲ್ದಾರ್

ಕೋಲಾರ:

  • ಸ್ಟ್ರಾಂಗ್ ರೂಮ್ ಓಪನ್​ ಮಾಡಿದ ತಹಶೀಲ್ದಾರ್
  • 14 ಕೇಂದ್ರಗಳಲ್ಲಿ ಮತ ಎಣಿಕೆ ಆರಂಭ
  • 4 ಸುತ್ತುಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಸಲು ನಿರ್ಧಾರ
  • ಕೊರೊನಾ‌ ಹಿನ್ನೆಲೆ ಸಂಭ್ರಮಾಚರಣೆಗೆ ಬ್ರೇಕ್

08:57 December 30

ಬೆಳಗಾವಿ: ಗ್ರಾಮ ಪಂಚಾಯತ್​ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್​ ಕೈಗೊಳ್ಳಲಾಗಿದೆ.

08:35 December 30

ಕೊಪ್ಪಳ:

  • ಶ್ರೀ ಗವಿಸಿದ್ದೇಶ್ವರ ಹೈಸ್ಕೂಲ್ ಕಟ್ಟಡದಲ್ಲಿ ಮತ ಎಣಿಕೆ ಪ್ರಾರಂಭ
  • ಸ್ಟ್ರಾಂಗ್ ರೂಮ್ ಓಪನ್ ಮಾಡಿದ ತಹಶೀಲ್ದಾರ್ ಜೆ.ಬಿ. ಮಜ್ಜಗಿ
  • ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಸಿಬ್ಬಂದಿ
  • ಜಿಲ್ಲೆಯ 149 ಗ್ರಾಮ ಪಂಚಾಯತಿಗಳ 1,004 ಕ್ಷೇತ್ರಗಳಿಗೆ ನಡೆದ ಚುನಾವಣೆ
  • 82 ಕೊಠಡಿಗಳಲ್ಲಿ 478 ಟೇಬಲ್ ವ್ಯವಸ್ಥೆ
  • ಮತ ಎಣಿಕೆ ಕೇಂದ್ರಗಳ ಮುಂದೆ ಜಮಾಯಿಸಿದ ಜನ

08:35 December 30

ಶಿಕಾರಿಪುರ ತಾಲೂಕಿನಲ್ಲಿ ಮತ ಎಣಿಕೆ ಪ್ರಾರಂಭ
ಶಿಕಾರಿಪುರ ತಾಲೂಕಿನಲ್ಲಿ ಮತ ಎಣಿಕೆ ಪ್ರಾರಂಭ

ಶಿವಮೊಗ್ಗ:

  • ಶಿಕಾರಿಪುರ ತಾಲೂಕಿನಲ್ಲಿ ಮತ ಎಣಿಕೆ ಪ್ರಾರಂಭ
  • ಶಿಕಾರಿಪುರ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆಗೆ ಸಿದ್ಧತೆ
  • 39 ಗ್ರಾಮ ಪಂಚಾಯತಿಗಳ ಮತ ಎಣಿಕೆ ಕಾರ್ಯಕ್ಕೆ 60 ಎಣಿಕೆ ಮೇಲ್ವಿಚಾರಕರು, 120 ಎಣಿಕೆ ಸಹಾಯಕರ ನಿಯೋಜನೆ
  • ಒಟ್ಟು 165 ಚುನಾವಣಾ ಕ್ಷೇತ್ರಗಳ ಮತ ಎಣಿಕೆಗೆ 60 ಟೇಬಲ್ ವ್ಯವಸ್ಥೆ

08:34 December 30

ಉತ್ತರಕನ್ನಡ:

  • ಉತ್ತರಕನ್ನಡ ಜಿಲ್ಲೆಯಲ್ಲಿ ಮತ‌ ಎಣಿಕೆ ಆರಂಭ
  • ಜಿಲ್ಲೆಯ 12 ತಾಲೂಕು ಕೇಂದ್ರಗಳಲ್ಲಿ ನಡೆಯುತ್ತಿರುವ ಮತ‌ ಎಣಿಕೆ ಪ್ರಕ್ರಿಯೆ
  • ಒಟ್ಟು 1,077 ಸಿಬ್ಬಂದಿ ಮತ‌ ಎಣಿಕೆ ಕಾರ್ಯಕ್ಕೆ ಆಯೋಜನೆ
  • 227 ಗ್ರಾಮ ಪಂಚಾಯತಿಗಳ 2,467 ಸ್ಥಾನಗಳಿಗೆ ನಡೆದಿದ್ದ ಚುನಾವಣೆ
  • 184 ಮಂದಿ ಅವಿರೋಧ ಆಯ್ಕೆ, 11 ವಾರ್ಡ್‌ಗಳಿಗೆ ನಾಮಪತ್ರ ಸಲ್ಲಿಕೆ ಇಲ್ಲ
  • ಫಲಿತಾಂಶದ ನಿರೀಕ್ಷೆಯಲ್ಲಿ 7,187 ಅಭ್ಯರ್ಥಿಗಳು
  • ಮತ‌ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್

08:18 December 30

ಮತ ಎಣಿಕೆ ಕಾರ್ಯ ಆರಂಭ
ಮತ ಎಣಿಕೆ ಕಾರ್ಯ ಆರಂಭ

ಬಳ್ಳಾರಿ‌:

  • 8 ಗಂಟೆಯಿಂದ ಆರಂಭವಾದ ಮತ ಎಣಿಕೆ
  • ಅಭ್ಯರ್ಥಿ ಮತ್ತು‌ ಪೊಲೀಸರ ಮಧ್ಯೆ ವಾಗ್ವಾದ
  • ಕೌಂಟಿಂಗ್ ಸೆಂಟರ್ ಒಳಗೆ ಹೋಗಲು ಅಭ್ಯರ್ಥಿಗಳ ಪರದಾಟ
  • ಸಾಮಾಜಿಕ ಅಂತರ ಗಾಳಿಗೆ ತೂರಿದ ಅಭ್ಯರ್ಥಿಗಳು ಮತ್ತು ಅಧಿಕಾರಿಗಳು

08:18 December 30

ಮತ ಎಣಿಕೆ ಕೇಂದ್ರದಲ್ಲಿ ಸಾಮಾಜಿಕ ಅಂತರ ಮಾಯ

ಸಾಮಾಜಿಕ ಅಂತರ ಮಾಯ
ಸಾಮಾಜಿಕ ಅಂತರ ಮಾಯ

ತುಮಕೂರು: ಮತ ಎಣಿಕೆ ಆರಂಭವಾಗಿದ್ದು, ಗ್ರಾಮ ಪಂಚಾಯತ್​ ಮತ ಎಣಿಕೆ ಕೇಂದ್ರದ ಬಳಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ್ದಾರೆ.

08:05 December 30

ಬೀದರ್ ಜಿಲ್ಲೆಯಲ್ಲಿ ಮತ ಎಣಿಕೆ ಆರಂಭ

ಬೀದರ್ ಜಿಲ್ಲೆಯಲ್ಲಿ ಐದು ಕಡೆಯಲ್ಲಿ ಮತ ಎಣಿಕೆ ಆರಂಭವಾಗಿದೆ. ಬೀದರ್, ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ್, ಔರಾದ್ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಶುರುವಾಗಿದ್ದು, ಮತ ಎಣಿಕೆ ಕೇಂದ್ರದ ಮುಂದೆ ಬೆಂಬಲಿತ ಅಭ್ಯರ್ಥಿಗಳು ಜಮಾಯಿಸಿದ್ದಾರೆ.

07:55 December 30

ಚಾಮರಾಜನಗರ:

ಗ್ರಾಪಂ ಚುನಾವಣೆಯ ಮತ ಎಣಿಕೆ
ಗ್ರಾಪಂ ಚುನಾವಣೆಯ ಮತ ಎಣಿಕೆ

ಚಾಮರಾಜನಗರ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಡೆದಿದ್ದ ಗ್ರಾಪಂ ಚುನಾವಣೆಯ ಮತ ಎಣಿಕೆ ಕಾರ್ಯ ಈಗಷ್ಟೇ ಆರಂಭವಾಗಿದ್ದು, ಸಂಜೆ 4 ರ ಹೊತ್ತಿಗೆ ಹಳ್ಳಿ ಸಮರದ ಸ್ಪಷ್ಟ ಚಿತ್ರಣ ತಿಳಿದು ಬರಲಿದೆ.

07:33 December 30

ಧಾರವಾಡ ಗ್ರಾಮ ಪಂಚಾಯತ್​ ಚುನಾವಣೆಯ ಸಂಕ್ಷಿಪ್ತ ಮಾಹಿತಿ:

ಧಾರವಾಡ:  

  • ಧಾರವಾಡ ತಾಲೂಕಿನ ಗ್ರಾಮ ಪಂಚಾಯತಿಗಳು: 34
  • ಒಟ್ಟು ಚುನಾವಣಾ ಮತಕ್ಷೇತ್ರಗಳು:185
  • ಒಟ್ಟು ಸದಸ್ಯ ಸ್ಥಾನಗಳು: 533
  • ಅವಿರೋಧ ಆಯ್ಕೆ: 30
  • ಒಟ್ಟು ಸ್ಪರ್ಧಾಳುಗಳು: 1602

ಅಳ್ನಾವರ ತಾಲೂಕು:  

  • ಅಳ್ನಾವರ ತಾಲೂಕಿನ ಗ್ರಾಮ ಪಂಚಾಯಿತಿಗಳು: 4
  • ಒಟ್ಟು ಚುನಾವಣಾ ಮತಕ್ಷೇತ್ರಗಳು:16
  • ಒಟ್ಟು ಸದಸ್ಯ ಸ್ಥಾನಗಳು: 47
  • ಅವಿರೋಧ ಆಯ್ಕೆ:  1
  • ಚುನಾಯಿಸಬೇಕಾದ ಸ್ಥಾನಗಳ ಸಂಖ್ಯೆ: 46
  • ಒಟ್ಟು ಸ್ಪರ್ಧಾಳುಗಳು: 156

ಕಲಘಟಗಿ ತಾಲೂಕು:

  • ಕಲಘಟಗಿ ತಾಲೂಕಿನ  ಗ್ರಾಮ ಪಂಚಾಯಿತಿಗಳು: 27
  • ಒಟ್ಟು ಚುನಾವಣಾ ಮತಕ್ಷೇತ್ರಗಳು:127
  • ಒಟ್ಟು ಸದಸ್ಯ ಸ್ಥಾನಗಳು: 340
  • ಅವಿರೋಧ ಆಯ್ಕೆ:  17
  • ಒಟ್ಟು ಸ್ಪರ್ಧಾಳುಗಳು: 989

ಹುಬ್ಬಳ್ಳಿ ತಾಲೂಕು:

  • ಹುಬ್ಬಳ್ಳಿ ತಾಲೂಕಿನ ಗ್ರಾಮ ಪಂಚಾಯಿತಿಗಳು: 26
  • ಒಟ್ಟು ಚುನಾವಣಾ ಮತಕ್ಷೇತ್ರಗಳು:127
  • ಒಟ್ಟು ಸದಸ್ಯ ಸ್ಥಾನಗಳು: 373
  • ಅವಿರೋಧ ಆಯ್ಕೆ: 24
  • ಚುನಾಯಿಸಬೇಕಾದ ಸ್ಥಾನಗಳ ಸಂಖ್ಯೆ: 349
  • ಒಟ್ಟು ಸ್ಪರ್ಧಾಳುಗಳು: 1036

ಕುಂದಗೋಳ ತಾಲೂಕು:

  • ಕುಂದಗೋಳ ತಾಲೂಕಿನ ಗ್ರಾಮ ಪಂಚಾಯಿತಿಗಳು: 23
  • ಒಟ್ಟು ಚುನಾವಣಾ ಮತಕ್ಷೇತ್ರಗಳು: 117
  • ಒಟ್ಟು ಸದಸ್ಯ ಸ್ಥಾನಗಳು: 346
  • ಅವಿರೋಧ ಆಯ್ಕೆ:  21
  • ಚುನಾಯಿಸ ಬೇಕಾದ ಸ್ಥಾನಗಳ ಸಂಖ್ಯೆ:  325
  • ಒಟ್ಟು ಸ್ಪರ್ಧಾಳುಗಳು: 1081

ನವಲಗುಂದ:  

  • ನವಲಗುಂದ ತಾಲೂಕಿನ ಗ್ರಾಮ ಪಂಚಾಯಿತಿಗಳು: 14
  • ಒಟ್ಟು ಚುನಾವಣಾ ಮತಕ್ಷೇತ್ರ: 69
  • ಒಟ್ಟು ಸದಸ್ಯ ಸ್ಥಾನಗಳು: 204
  • ಅವಿರೋಧ ಆಯ್ಕೆ: 19
  • ಒಟ್ಟು ಸ್ಪರ್ಧಾಳುಗಳು: 538

ಅಣ್ಣಿಗೇರಿ:

  • ಅಣ್ಣಿಗೇರಿ ತಾಲೂಕಿನ ಗ್ರಾಮ ಪಂಚಾಯಿತಿಗಳು: 8
  • ಒಟ್ಟು ಚುನಾವಣಾ ಮತಕ್ಷೇತ್ರ: 35
  • ಒಟ್ಟು ಸದಸ್ಯ ಸ್ಥಾನಗಳು: 109
  • ಅವಿರೋಧ ಆಯ್ಕೆ: 4
  • ಚುನಾಯಿಸ ಬೇಕಾದ ಸ್ಥಾನಗಳ ಸಂಖ್ಯೆ: 105
  • ಒಟ್ಟು ಸ್ಪರ್ಧಾಳುಗಳು: 319

06:43 December 30

ಮತ ಎಣಿಕೆ ಆರಂಭ

ಮತ ಎಣಿಕೆ ಕೇಂದ್ರಗಳತ್ತ ಬರುತ್ತಿರುವ ಸಿಬ್ಬಂದಿ

  • ಮತ ಎಣಿಕೆ ಕೇಂದ್ರಗಳಿಗೆ ‌ಬರುತ್ತಿರುವ ಸಿಬ್ಬಂದಿ
  • ರಾಯಚೂರು ಜಿಲ್ಲೆಯ 7 ಕಡೆಗಳಲ್ಲಿ ನಡೆಯುತ್ತಿರುವ ಮತ ಎಣಿಕೆ ಕಾರ್ಯ
  • ಒಟ್ಟು 172 ಗ್ರಾಮ ಪಂಚಾಯತ್​ಗಳಿಗೆ ನಡೆದ ಚುನಾವಣೆ
  • ಜಿಲ್ಲೆಯಲ್ಲಿ 417 ಸದಸ್ಯರು ಅವಿರೋಧ ಆಯ್ಕೆ
  • 7,598 ಅಭ್ಯರ್ಥಿಗಳ ಹಣೆ ಬರಹ ಇಂದು ಪ್ರಕಟ
  • 73 ಕೊಠಡಿಗಳಲ್ಲಿ ಮತ ಎಣಿಕೆಗೆ ಸಿದ್ಧತೆ
  • ಮತ ಎಣಿಕೆಗಾಗಿ 1,383 ಸಿಬ್ಬಂದಿ ನಿಯೋಜನೆ

ಅಥಣಿ:

  • ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ 1,735 ಮಂದಿ ಭವಿಷ್ಯ ಇಂದು ನಿರ್ಧಾರ
  • 651 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆ
  • ಮತ ಏಣಿಕೆ ಕಾರ್ಯಕ್ಕೆ ಕ್ಷಣಗಣನೆ
  • ಮತ ಎಣಿಕೆ ಕೇಂದ್ರದ ಸುತ್ತಲು 144 ಜಾರಿ

ಮೊದಲ ಮತ್ತು ಎರಡನೇ ಹಂತದಲ್ಲಿ ಗ್ರಾಮ ಪಂಚಾಯತ್​​ ಚುನಾವಣೆ ಯಶಸ್ವಿಯಾಗಿ ಮುಗಿದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಈ ಮೂಲಕ ಒಟ್ಟು 2,22,814 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

Last Updated : Dec 30, 2020, 10:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.