ETV Bharat / state

2ಸಿಗೆ ಒಕ್ಕಲಿಗ, 2ಡಿಗೆ ಲಿಂಗಾಯತ, ಇಡ್ಲ್ಯೂಎಸ್​ಗೆ ಮುಸ್ಲಿಂ: ಒಬಿಸಿ ಮೀಸಲಾತಿ ಮರು ವರ್ಗೀಕರಿಸಿ ಸರ್ಕಾರದ ಆದೇಶ - ಹೊಸ ಪ್ರವರ್ಗ ಸೃಜಿಸುವ ಶಿಫಾರಸ್ಸು

ರಾಜ್ಯದ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕಲ್ಪಿಸಿರುವ ಮೀಸಲಾತಿಯನ್ನು ಮರು ವರ್ಗೀಕರಿಸಿ ಸರ್ಕಾರ ಆದೇಶಿಸಿದೆ.

ವಿಧಾನಸೌಧ
ವಿಧಾನಸೌಧ
author img

By

Published : Mar 30, 2023, 4:22 PM IST

ಬೆಂಗಳೂರು: ಮೀಸಲಾತಿ ಹೋರಾಟಗಳಿಗೆ ಮಣಿದಿದ್ದ ರಾಜ್ಯ ಸರ್ಕಾರ ಇತ್ತೀಚೆಗೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಪ್ರವರ್ಗ 3ಎ ಮತ್ತು 3ಬಿಗೆ ಬದಲಾಗಿ 2ಸಿ ಮತ್ತು 2ಡಿ ಎಂದು ಹೊಸ ಪ್ರವರ್ಗ ಸೃಜಿಸಲು ಕೈಗೊಂಡಿದ್ದ ನಿರ್ಣಯದಂತೆ ಇಂದು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಅನುಸಾರ 3ಎ ಮತ್ತು 3ಬಿಯಲ್ಲಿ ಬರುತ್ತಿದ್ದ ಜಾತಿಗಳನ್ನು ಹೊಸ ಪ್ರವರ್ಗಗಳಾದ 2ಸಿ ಮತ್ತು 2ಡಿ ಅಡಿ ಸೇರ್ಪಡೆ ಮಾಡಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಪಂಚಮಸಾಲಿ ವೀರಶೈವ ಲಿಂಗಾಯತ, ಒಕ್ಕಲಿಗ, ಮರಾಠ ಹಾಗು ಇನ್ನಿತರೆ ಸಮುದಾಯಗಳು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಹಿಂದುಳಿದ ವರ್ಗಗಳ ಮರು ವರ್ಗೀಕರಣ ಹಾಗು ಮೀಸಲಾತಿಯನ್ನು ಹೆಚ್ಚಿಸಲು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿರುತ್ತದೆ.

ಸರ್ಕಾರವು ಈ ಸಮುದಾಯಗಳ ಕೋರಿಕೆಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗವನ್ನು ಕೋರಿದ್ದು, ಅದರಂತೆ ಆಯೋಗ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಕ್ಷೇತ್ರ ಅಧ್ಯಯನ ನಡೆಸಿ ಸಂಬಂಧಿಸಿದ ಸಮುದಾಯಗಳೊಂದಿಗೆ ಬಹಿರಂಗ ವಿಚಾರಣೆ ನಡೆಸಿ ಸಲ್ಲಿಸಿದ ಮಧ್ಯಂತರ ವರದಿಯಂತೆ 3ಎ ಪ್ರವರ್ಗದಲ್ಲಿದ್ದ ಒಕ್ಕಲಿಗ ಹಾಗು ಇತರ ಸಮುದಾಯಗಳು ಪ್ರವರ್ಗ 2ಸಿ ಎಂದು ಹೊಸ ಪ್ರವರ್ಗ ಸೃಜಿಸುವುದು ಹಾಗು 3ಬಿ ಪ್ರವರ್ಗದಲ್ಲಿದ್ದ ಪಂಚಮಸಾಲಿ, ಲಿಂಗಾಯತ, ವೀರಶೈವ ಹಾಗು ಇತರ ಸಮುದಾಯಗಳನ್ನು ಪ್ರವರ್ಗ 2ಡಿ ಎಂದು ಹೊಸ ಪ್ರವರ್ಗ ಸೃಜಿಸುವ ಶಿಫಾರಸು ಮಾಡಿತ್ತು.

ಇದನ್ನೂ ಓದಿ : 2ಬಿ ಮೀಸಲಾತಿ ರದ್ದು: ರಾಜ್ಯಪಾಲರಿಗೆ ದೂರು ನೀಡಲು ಎಎಪಿ ನಿರ್ಧಾರ

ಅದರಂತೆ ಹೊಸದಾಗಿ ಸೃಜಿಸುವ 2ಸಿ ಮತ್ತು 2ಡಿ ಮೀಸಲಾತಿಯನ್ನು ಹೆಚ್ಚಿಸುವ ಅವಕಾಶವನ್ನು ಈಗಾಗಲೇ ಅತ್ಯಂತ ಹಿಂದುಳಿದ ಪ್ರವರ್ಗ-1 ಮತ್ತು 2ಎಗೆ ಧಕ್ಕೆ ಹಾಗು ಬದಲಾವಣೆ ಆಗದಂತೆ ಕಟ್ಟುನಿಟ್ಟಾಗಿ ಪಾಲಿಸುವ ಹಾಗೂ ಮುಸ್ಲಿಂ ಸಮುದಾಯಕ್ಕೆ ಇಡಬ್ಲ್ಯುಎಸ್ ಪಟ್ಟಿಗೆ ಸೇರಿಸುವುದರಿಂದ 2ಬಿ ವರ್ಗದ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ರಕ್ಷಿಸಲಾಗಿದೆ ಎಂದು ಆದೇಶದಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ : 2ಬಿ ಮೀಸಲಾತಿ ರದ್ದು: ಸ್ವಾಮೀಜಿಗಳ ಮಧ್ಯೆ ಪ್ರವೇಶಕ್ಕೆ ಎಸ್‍ಡಿಪಿಐ ಒತ್ತಾಯ

ನೂತನ ಆದೇಶದ ಅನುಸಾರ ಪ್ರವರ್ಗ 1ಕ್ಕೆ ಶೇ. 4 ಮೀಸಲಾತಿ, ಪ್ರವರ್ಗ 2ಎಗೆ ಶೇ. 15 ರಷ್ಟು ಮೀಸಲಾತಿ, 2ಬಿ(ಶೂನ್ಯ), 2ಸಿ ಶೇ. 6, 2ಡಿ ಶೇ.7 ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ. ಆ ಮೂಲಕ ಒಬಿಸಿ ಸಮುದಾಯಕ್ಕೆ ಶೇ. 32 ರಷ್ಟು ಮೀಸಲಾತಿಯನ್ನು ಮರು ವರ್ಗೀಕರಣ ಮಾಡಲಾಗಿದೆ. ರಾಜ್ಯದ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕಲ್ಪಿಸಿರುವ ಮೀಸಲಾತಿಯನ್ನು ಮರು ವರ್ಗೀಕರಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : ಒಳಮೀಸಲಾತಿ ನ್ಯಾಯಸಮ್ಮತವಾಗಿದೆ, ಯಾರಿಗೂ ಅನ್ಯಾಯವಾಗಿಲ್ಲ: ಸಚಿವ ಪ್ರಭು ಚವ್ಹಾಣ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.