ETV Bharat / state

ಅತ್ತ ಇ ಕಚೇರಿ ಕಡ್ಡಾಯ, ಇತ್ತ ಅಗತ್ಯವಿರುವ ಸ್ಕ್ಯಾನರ್ ಪೂರೈಸಲು ಸರ್ಕಾರ ಮೀನಾಮೇಷ!

author img

By

Published : Oct 1, 2022, 7:51 AM IST

ಸರ್ಕಾರ ಇ ಕಚೇರಿ ಜಾರಿಗೊಳಿಸಿದೆ. ಆದ್ರೆ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ.

ಇ ಕಚೇರಿ ಕಡ್ಡಾಯ
ಇ ಕಚೇರಿ ಕಡ್ಡಾಯ

ಬೆಂಗಳೂರು: ಸಾರ್ವಜನಿಕರಿಗೆ ಒದಗಿಸುವ ಮಾಹಿತಿಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯೊಂದಿಗೆ ಸರ್ಕಾರದ ಆಡಳಿತಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ಇಲಾಖೆಗಳಲ್ಲಿ ಇ ಕಚೇರಿ ಕಡ್ಡಾಯಗೊಳಿಸಲಾಗಿದೆ. ಇ-ಕಚೇರಿಯನ್ನೇನೋ ಕಡ್ಡಾಯಗೊಳಿಸಿದೆ ಆದರೆ ಅದಕ್ಕೆ ಬೇಕಾಗಿರುವ ಸ್ಕ್ಯಾನರ್ ಮತ್ತು ಪ್ರಿಂಟರ್​​ಗಳನ್ನು ಪೂರೈಸಲು ಸರ್ಕಾರ ಮರೆತಿದೆ.

ಮಾಹಿತಿ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರಲ್ಲಿ ಕರ್ನಾಟಕ ಸರ್ಕಾರ ಮುಂಚೂಣಿಯಲ್ಲಿದೆ. ಅದರ ನಿದರ್ಶನವಾಗಿ ಇ-ಆಡಳಿತ ಕೇಂದ್ರದ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ಎಲ್ಲಾ ಇಲಾಖೆಗಳಲ್ಲಿ ಇ ಕಚೇರಿಯನ್ನು ಕಡ್ಡಾಯಗೊಳಿಸಿದೆ.

2018ರಿಂದ ಇ-ಕಚೇರಿ ವ್ಯವಸ್ಥೆಯನ್ನು ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಕಡತಗಳ ತ್ವರಿತ ವಿಲೇವಾರಿ, ಸಮಯ ಉಳಿತಾಯ, ದಕ್ಷತೆ, ಪಾರದರ್ಶಕತೆ, ಹೊಣೆಗಾರಿಕೆ ಹೆಚ್ಚಳ ಜೊತೆಗೆ ಸಾರ್ವಜನಿಕರಿಗೆ ಸೇವೆಯನ್ನು ಬೇಗನೆ ನೀಡುವ ಉದ್ದೇಶದಿಂದ ಇ-ಕಚೇರಿಯನ್ನು ಜಾರಿಗೆ ತರಲಾಗಿದೆ. ಸಚಿವಾಲಯದ ಎಲ್ಲಾ ಸಚಿವರ ಕಚೇರಿಗಳಲ್ಲಿ ಇ-ಕಚೇರಿ ಕಡ್ಡಾಯವಾಗಿ ಜಾರಿಗೊಳಿಸಲು ನಿರ್ದೇಶನ ನೀಡಲಾಗಿದೆ. ಎಲ್ಲಾ ಪತ್ರ ವ್ಯವಹಾರ, ಅರ್ಜಿ ಸ್ವೀಕಾರ, ಅವುಗಳ ವಿಲೇವಾರಿಯನ್ನು ಇ-ಕಚೇರಿಯಡಿ ಕಡ್ಡಾಯವಾಗಿ ಮಾಡಬೇಕಾಗಿದೆ.

ಸ್ಕ್ಯಾನರ್ ಪ್ರಿಂಟರ್​​ಗಳ ಕೊರತೆ: ಇ-ಕಚೇರಿಯನ್ನೇನೋ ರಾಜ್ಯ ಸರ್ಕಾರ ಹಂತ ಹಂತವಾಗಿ ಜಾರಿಗೆ ತರುತ್ತಿದೆ. ಇ-ಕಚೇರಿಯನ್ನು ಕಡ್ಡಾಯಗೊಳಿಸಿ ಆದೇಶವನ್ನೂ ಹೊರಡಿಸಿದೆ. ಆದರೆ ವಿಪರ್ಯಾಸ ಅಂದರೆ ಸರ್ಕಾರ ಇ-ಕಚೇರಿಯ ಕಾರ್ಯನಿರ್ವಹಣೆಗೆ ಬೇಕಾಗಿರುವಷ್ಟು ಸ್ಕ್ಯಾನರ್ ಹಾಗೂ ಪ್ರಿಂಟರ್ ಪೂರೈಕೆ ಮಾಡಲು ವಿಫಲವಾಗಿದೆ.

ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಜೊತೆಗೆ ಸರ್ಕಾರಿ ನೌಕರರು ನಡೆಸಿದ ಸಭೆಯಲ್ಲಿ ಇ-ಕಚೇರಿ ಪದ್ಧತಿಗಾಗಿ ಸ್ಕ್ಯಾನರ್ ಹಾಗೂ ಪ್ರಿಂಟರ್​​ಗಳನ್ನು ಪೂರೈಕೆ ಮಾಡದೇ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಜುಲೈನಲ್ಲಿ ನಡೆದ ಸಭೆಯಲ್ಲಿ ಸಚಿವಾಲಯದ ನೌಕರರು, ಇ-ಆಫೀಸ್ ಪದ್ಧತಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಹಲವಾರು ಇಲಾಖೆಗಳಲ್ಲಿ ಅವಶ್ಯವಿರುವಷ್ಟು ಪ್ರಿಂಟರ್ ಹಾಗೂ ಸ್ಕ್ಯಾನರ್‌ಗಳನ್ನು ಒದಗಿಸಿಲ್ಲದಿರುವುದರಿಂದ ತ್ವರಿತಗತಿಯಲ್ಲಿ ಕಲಸಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿರುವುದಾಗಿ ಗಮನಕ್ಕೆ ತರಲಾಯಿತು.

ಪ್ರಿಂಟರ್, ಸ್ಕ್ಯಾನರ್ ಹಾಗೂ ಲೇಖನ ಸಾಮಗ್ರಿಗಳನ್ನು ಯಾವುದೇ ಅಡೆತಡೆಯಿಲ್ಲದ ಒದಗಿಸಲು ಅಗತ್ಯ ನಿರ್ದೇಶನವನ್ನು ನೀಡುವಂತೆ ಕೋರಿದ್ದರು.‌ ಈ ಸಂಬಂಧ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಗೆ ಮುಖ್ಯ ಕಾರ್ಯದರ್ಶಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಕಡತ ವಿಲೇವಾರಿ ವಿಳಂಬ: ಇ-ಕಚೇರಿ ಪದ್ಧತಿ ಅಳವಡಿಕೆಯಾದರೂ ಬಹುತೇಕ ಕಚೇರಿಗಳಲ್ಲಿ ಸ್ಕ್ಯಾನರ್ ಹಾಗೂ ಪ್ರಿಂಟರ್ ಪೂರೈಕೆ ಮಾಡದ ಪರಿಣಾಮ ಕಡತ ವಿಲೇವಾರಿಯೂ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇ-ಕಚೇರಿಯ ಮೂಲ ಉದ್ದೇಶ ಪಾರದರ್ಶಕತೆ ಹಾಗೂ ಆಡಳಿತಕ್ಕೆ ಚುರುಕು ಮುಟ್ಟಿಸುವುದಾಗಿದೆ‌. ಆದರೆ, ಇ-ಕಚೇರಿ ಪದ್ಧತಿಗೆ ಅಗತ್ಯ ಇರುವ ಸ್ಕ್ಯಾನರ್ ಹಾಗೂ ಪ್ರಿಂಟರ್​​ಗಳನ್ನು ಪೂರೈಕೆ ಮಾಡದೇ ಇರುವುದರಿಂದ ಸಿಬ್ಬಂದಿ ಪರದಾಡುವಂತಾಗಿದೆ. ಇದರಿಂದ ಸಕಲಾದಲ್ಲಿ ಕಡತ ವಿಲೇವಾರಿ ಮಾಡಲು ಸಾಧ್ಯಾವಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಹುತೇಕ ಎಲ್ಲಾ ಕಚೇರಿಗಳಲ್ಲಿ ಇ-ಕಚೇರಿ ಜಾರಿಗೊಳಿಸಲಾಗಿದೆ. ಆದರೆ, ಇ-ಕಚೇರಿಯಡಿ ಕಡತಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್​​ಗೆ ಅಪ್‌ಲೋಡ್ ಮಾಡಬೇಕಾಗಿದೆ‌. ಸ್ಕ್ಯಾನರ್​​ಗಳಿಲ್ಲದೆ ಇ-ಕಚೇರಿಯಡಿ ಕಾರ್ಯನಿರ್ವಹಣೆ ಕಷ್ಟ ಸಾಧ್ಯವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಕಡತಗಳ ಚಲನವಲನಗಳ ಸ್ಥಿತಿಗತಿ ತಿಳಿಯುವುದು ಕಷ್ಟಕರವಾಗುತ್ತಿದೆ.

(ಓದಿ: ಆಯುಧಪೂಜೆ ವೇಳೆ ರಾಸಾಯನಿಕಯುಕ್ತ ಬಣ್ಣಗಳ ಬಳಕೆ ನಿಷೇಧ.. ಕರ್ನಾಟಕ ಸರ್ಕಾರ ಆದೇಶ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.