ಬೆಂಗಳೂರು: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ 13ನೇ ದಿನವೂ ಮುಂದುವರಿದಿದೆ. ನೌಕರರ ಹಾಗೂ ಸರ್ಕಾರದ ಜಗ್ಗಾಟದಲ್ಲಿ ಖಾಸಗಿ ಬಸ್ಗಳ ದರ್ಬಾರ್ ಮುಂದುವರೆದಿದೆ. ಇತ್ತ ಮೆಜೆಸ್ಟಿಕ್ ನಲ್ಲಿ ಸಾರಿಗೆ ನೌಕರರಿಗೂ ಖಾಸಗಿ ಬಸ್ಗಳ ಚಾಲಕರ ನಡುವೆ ಮಾತಿನ ಚಕಮಕಿ ನಡೆದ ಘಟನೆಯು ನಡೆದಿದೆ. ಸಾರಿಗೆ ಬಸ್ಗಳ ಮೇಲೆ ಕಲ್ಲುತೂರಾಟಗಳು ನಡೆಯುತ್ತಿದ್ದು, ಸದ್ಯ ಎಫ್ ಐ ಆರ್ ದಾಖಲು ಮಾಡಲಾಗಿದೆ.
ಇಲ್ಲಿ ತನಕ 174 ಜನರ ಮೇಲೆ ಎಫ್ ಐಆರ್ ದಾಖಲು ಮಾಡಿದ್ದರೆ, ಇದರಲ್ಲಿ 411 ಸಿಬ್ಬಂದಿ ಭಾಗಿಯಾಗಿದ್ದಾರೆ. ಹಾಗೆ 95 ಜನರನ್ನ ಬಂಧಿಸಲಾಗಿದ್ದು, 109 ಬಸ್ಗಳಿಗೆ ಹಾನಿಯಾಗಿದೆ. ಇಂದು ಮಧ್ಯಾಹ್ನ 1 ಗಂಟೆಯವರೆಗೆ ಕೆ ಎಸ್ ಆರ್ ಟಿಸಿ 2267 ಬಸ್, ಬಿಎಂಟಿಸಿಯ 786 , ಎನ್ಇಕೆಆರ್ಟಿಸಿ- 813 , ಎನ್ ಡಬ್ಲ್ಯೂ ಕೆಆರ್ಟಿಸಿ 812 ಬಸ್ಗಳು ಸಂಚರಿಸಿವೆ.
ಒಟ್ಟಾರೆ 4,677 ಬಸ್ಗಳು ಕಾರ್ಯಾಚರಣೆ ನಡೆಸಿವೆ. ಇದರೊಂದಿಗೆ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಖಾಸಗಿ ಬಸ್ಗಳು ರಸ್ತೆಗೆ ಇಳಿದಿವೆ. ಸದ್ಯ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಾರಿಗೆ ನೌಕರರ ಮುಷ್ಕರದ ಬಿಸಿಯನ್ನ ಜನರು ಅನುಭವಿಸಬೇಕಿದೆ..
ಮುಷ್ಕರದ ಮಧ್ಯೆ 7000ಕ್ಕೂ ಹೆಚ್ಚು ಬಸ್ಸುಗಳ ಸಂಚಾರ:
ನಾಲ್ಕು ನಿಗಮಗಳಿಂದ ನಿತ್ಯ ಸಾವಿರಾರು ಬಸ್ಗಳು ಸಂಚಾರ ಮಾಡುತ್ತಿದ್ದು, ಇದರ ಜೊತೆಗೆ ಖಾಸಗಿ ಬಸ್ಗಳ ಸಂಚಾರವೂ ಇರುವುದರಿಂದ ನೌಕರ ಮುಷ್ಕರಕ್ಕೆ ಸರ್ಕಾರ ಬಗ್ಗದೇ ತಟಸ್ತವಾಗಿದೆ. ಕೋವಿಡ್ ಕಾರಣಕ್ಕೆ ಜನರ ಓಡಾಟವೂ ನಗರದಲ್ಲಿ ಕಡಿಮೆ ಆಗಿದ್ದು, ಅದಷ್ಟು ತಮ್ಮ ಸ್ವಂತ ವಾಹನಗಳನ್ನೇ ಬಳಸುತ್ತಿದ್ದಾರೆ.
ಬಸ್ಗಳ ಓಡಾಟದ ಅಂಕಿ - ಅಂಶ
7-4-2021 - 236
8-4-2021 - 456
9-4-2021 - 855
10-4-2021- 1626
11-4-2021- 2663
12-4-2021- 2784
13-4-2021- 2445
14-4-2021- 2767
15-4-2021- 4283
16-4-2021- 5644
17-4-2021- 7031
18-4-2021- 7,502