ಬೆಂಗಳೂರು : ಗೋವಿಂದಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಅನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಂತಾರಾಷ್ಟ್ರೀಯ ಮಟ್ಟದಿಂದ ಡ್ರಗ್ಸ್ ತಂದು ನಗರದಾದ್ಯಂತ ಸರಬರಾಜು ಮಾಡುತ್ತಿದ್ದ ಎನ್ನಲಾಗುತ್ತಿದೆ.

ನಗರದಲ್ಲಿದ್ದ ಡ್ರಗ್ಸ್ ಜಾಲವನ್ನು ಮಟ್ಟ ಹಾಕಲು ಪಣ ತೊಟ್ಟ ಬೆಂಗಳೂರು ಪೊಲೀಸರು, ಸಿಲಿಕಾನ್ ಸಿಟಿಯಲ್ಲಿರುವ ಡ್ರಗ್ಸ್ ಪೆಡ್ಲರ್‌ಗಳ ಬೆನ್ನು ಬಿದ್ದು ಪೆಡ್ಲರ್ಗಳಿಗಾಗಿ ಹುಡುಕಾಟ ನಡೆಸಿದ್ದರು. ಇಂದು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 1ಲಕ್ಷ 20 ಸಾವಿರ ಮೌಲ್ಯದ ಮಾದಕ ಮಾತ್ರೆಗಳು, 9 ಗ್ರಾಂ ಕೊಕೇನ್ ಸೇರಿದಂತೆ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ದಾಖಲಾತಿ ಪರಿಶೀಲಿಸದೆ ಮನೆ ಬಾಡಿಗೆ ನೀಡಿದ್ದ ಮಾಲೀಕನ ವಿರುದ್ಧ ಕೂಡ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ರಾಜ್ಯದಲ್ಲಿ SSLC ಪರೀಕ್ಷೆ ಸುಸೂತ್ರ: ಶೇ. 99.64 ವಿದ್ಯಾರ್ಥಿಗಳು ಹಾಜರು