ಬೆಂಗಳೂರು: ಅವಿಶ್ವಾಸ ಮಂಡನೆ ವಿಚಾರವಾಗಿ ನಿನ್ನೆಯೇ ಬಿಜೆಪಿ, ಜೆಡಿಎಸ್ನವರು ಸಭಾಪತಿಗಳಿಗೆ ಮನವಿ ಮಾಡಿದ್ದರು. ಆದರೆ, ಇಂದು ಚರ್ಚೆಗೆ ಆಸ್ಪದ ಕೊಡದೇ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಹಾಗೂ ಕಾಂಗ್ರೆಸ್ನ ಪರಿಷತ್ನ ಸದಸ್ಯರು ಗದ್ದಲ ಎಬ್ಬಿಸಿದ್ದಾರೆ. ಈ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ, ಸಭಾಪತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದೆ.
ನಿಯೋಗದ ಭೇಟಿ ಹಿನ್ನೆಲೆ ರಾಜಭವನದ ಸುತ್ತಮುತ್ತ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಮೂಲಕ ರಾಜಭವನದ ಕಡೆ ಹೊರಟ ನಿಯೋಗ, ನಂತರ ವಾಹನಗಳಲ್ಲಿ ರಾಜಭವನ ತಲುಪಿತು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವರಾದ ಆರ್. ಅಶೋಕ್, ಮಾಧುಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಜೆಡಿಎಸ್ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ರಾಜ್ಯಪಾಲರಿಗೆ ದೂರು ನೀಡಿ, ಮಾಧ್ಯಮಗಳಿಗೆ ಮಾಹಿತಿ ನೀಡಿದರು.
![ಬಿಜೆಪಿ-ಜೆಡಿಎಸ್ ನಿಯೋಗದಿಂದ ರಾಜ್ಯಪಾಲರ ಭೇಟಿ](https://etvbharatimages.akamaized.net/etvbharat/prod-images/kn-bng-02-rashok-governer-meet-complaint-upper-house-chairman-script-complaint-photos-ka10032_15122020173543_1512f_1608033943_587.jpg)
ಆರ್. ಅಶೋಕ್ ಮಾತನಾಡಿ, ಈ ಕೂಡಲೇ ಅಧಿವೇಶನ ಕರೆದು ರಾಜೀನಾಮೆ ಕೊಡಬೇಕು. ಕಾಂಗ್ರೆಸ್ ಅನಾಗರಿಕ ವರ್ತನೆ ಇವತ್ತು ಕಂಡು ಬಂದಿದೆ. ರಾಜ್ಯಪಾಲರು ಪರಿಶೀಲನೆ ಮಾಡಿ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ. ಜೆಡಿಎಸ್, ಬಿಜೆಪಿಯವರು ದೂರು ನೀಡಿದ್ದು, ಕ್ರಮಕೈಗೊಳ್ಳುತ್ತೇನೆ ಎಂದು ರಾಜ್ಯಪಾಲರು ಹೇಳಿದ್ದಾರೆ. ನಮಗೆ ನ್ಯಾಯ ಸಿಗುತ್ತೆ ಅನ್ನೋ ವಿಶ್ವಾಸ ಇದೆ ಎಂದರು.
![ಬಿಜೆಪಿ-ಜೆಡಿಎಸ್ ನಿಯೋಗದಿಂದ ರಾಜ್ಯಪಾಲರ ಭೇಟಿ:](https://etvbharatimages.akamaized.net/etvbharat/prod-images/kn-bng-02-rashok-governer-meet-complaint-upper-house-chairman-script-complaint-photos-ka10032_15122020173543_1512f_1608033943_1045.jpg)
ಕಾಂಗ್ರೆಸ್ನವರು ಬಹುಮತ ಕಳೆದುಕೊಂಡಿದ್ದಾರೆ ಅಂತ ವಿವರಿಸಿದ್ದೇವೆ. ಕಾನೂನು ಪ್ರಕಾರ ಈಗಾಗಲೇ ರಾಜೀನಾಮೆ ಕೊಡಬೇಕಿತ್ತು. 15 ದಿನದಲ್ಲಿ ರಾಜೀನಾಮೆ ಕೊಡಬೇಕು. ಹೊಸದಾಗಿ ಸಭಾಪತಿ ಆಯ್ಕೆ ನೆಡೆಯಬೇಕು ಎಂದರು. ಕಾಂಗ್ರೆಸ್ ಗೂಂಡಾ ವರ್ತನೆ ಬಗ್ಗೆ ರಾಜ್ಯಪಾಲರಿಗೆ ವಿವರವಾಗಿ ಹೇಳಿದ್ದೇವೆ. ಲಿಖಿತ ದೂರನ್ನು ನೀಡಿದ್ದು, ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ಹೇಳಿದ್ದಾರೆ ಎಂದು ಭೇಟಿಯ ಬಗ್ಗೆ ವಿವರಿಸಿದರು. 31 ಪರಿಷತ್ ಸದಸ್ಯರು ಇಂದು ರಾಜ್ಯಪಾಲರಿಗೆ ಕೊಟ್ಟ ದೂರಿನಲ್ಲಿ ಸಹಿ ಮಾಡಿದ್ದಾರೆ.
ಓದಿ:ವಿಧಾನ ಪರಿಷತ್ನಲ್ಲಿ ಹೈಡ್ರಾಮಾ: ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಧ್ಯೆ ಕಿತ್ತಾಟ