ETV Bharat / state

ವಾಚ್ ಪಾರ್ಕ್ ಸ್ಥಾಪನೆಗೆ ಸರ್ಕಾರದಿಂದ ಅಗತ್ಯ ನೆರವು: ಸಚಿವ ಡಾ ಸಿ ಎನ್ ಅಶ್ವತ್ಥ ನಾರಾಯಣ ಭರವಸೆ

ಬೆಂಗಳೂರಿನಲ್ಲಿ ಇಂಡಿಯಾ ಇಂಟರ್ ನ್ಯಾಷನಲ್ ಅಂಡ್ ಕ್ಲಾಕ್ ಫೇರ್​​ದಿಂದ ಪ್ರದರ್ಶನ - ಸಮಯ ಭಾರತಿ 2023 ಪ್ರದರ್ಶನಕ್ಕೆಐಟಿಬಿಟಿ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ ಸಿ ಎನ್ ಅಶ್ವತ್ಥ ನಾರಾಯಣ ಚಾಲನೆ - ವಿದ್ಯಾರ್ಥಿಗಳ ಕಲಿಕಾ ಕೌಶಲ ತರಬೇತಿಗೆ ಒತ್ತು - ರಾಜ್ಯದಲ್ಲಿ ಮಾನವ ಸಂಪನ್ಮೂಲ ಅಪಾರ ಎಂದು ಕೌಶಲಾಭಿವೃದ್ಧಿ ಸಚಿವ ಡಾ ಸಿ ಎನ್ ಅಶ್ವತ್ಥ ನಾರಾಯಣ ಸಂತಸ.

Samay Bharti 2023 show
ಸಮಯ ಭಾರತಿ 2023 ಪ್ರದರ್ಶನ
author img

By

Published : Jan 19, 2023, 9:42 PM IST

ಬೆಂಗಳೂರು: ಗಡಿಯಾರ ಉದ್ದಿಮಗೆ ಸಂಬಂಧಿಸಿದವರು ವಾಚ್ ಪಾರ್ಕ್ ಸ್ಥಾಪಿಸಲು ಮುಂದೆ ಬಂದರೆ, ಅವರಿಗೆ ರಾಜ್ಯ ಸರ್ಕಾರ ಎಲ್ಲ ಮೂಲ ಸೌಕರ್ಯ, ಅಗತ್ಯ ಸಹಕಾರ ನೀಡಲು ಸಿದ್ಧವಿದೆ ಎಂದು ಐಟಿಬಿಟಿ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ ಸಿ ಎನ್ ಅಶ್ವತ್ಥ ನಾರಾಯಣ ಗುರುವಾರ ಹೇಳಿದರು. ಇಂಡಿಯಾ ಇಂಟರ್ ನ್ಯಾಷನಲ್ ಅಂಡ್ ಕ್ಲಾಕ್ ಫೇರ್​​ದಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಮಯ ಭಾರತಿ - 2023 ಪ್ರದರ್ಶನದ ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯಮ ಸ್ಥಾಪಿಸಲು ಆಸಕ್ತಿ ಇರುವವರಿಗೆ ಸರ್ಕಾರ ಈಗ ತನ್ನೆಲ್ಲ ನಿಯಮಗಳನ್ನು ಸುಲಭಗೊಳಿಸಿದೆ ಎಂದರು.

ಉದ್ಯಮ ಸ್ಥಾಪನೆಗೆ ನಿಯಮ ಸರಳ: ಇಂದಿನ ದಿನಗಳಲ್ಲಿ ಉದ್ದಿಮೆದಾರರು ತಾವೇ ಉದ್ಯಮ ಪಾರ್ಕ್ ಸ್ಥಾಪಿಸಿ ನಿರ್ವಹಿಸಬಹುದು. ಇದಕ್ಕೆ ಬೇಕಾದ ಭೂಮಿ ಖರೀದಿ ಪ್ರಕ್ರಿಯೆ ಸೇರಿದಂತೆ ಮತ್ತಿತರ ಕಟ್ಟಳೆ ನಿಯಮಗಳನ್ನು ಈಗ ಸರಳಗೊಳಿಸಲಾಗಿದೆ ಎಂದು ವಿಶ್ವಾಸ ಮೂಡಿಸಿದರು. ಕೈಗಾರಿಕೆ ವಾತಾವರಣವನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಬಿಗಿ ನಿಯಮಗಳಿಗೆ ಬದಲಾಗಿ ಅನುಸರಿಸಲು ಸುಲಭವಾದ ನಿಯಮಾವಳಿಯನ್ನು ಜಾರಿಗೆ ತಂದಿದೆ. ಉದ್ದಿಮೆದಾರರು ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವ ಡಾ ಸಿ ಎನ್ ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟರು.

ದಶಕದ ಹಿಂದೆ ಪ್ರತಿಯೊಬ್ಬರ ಕೈಯಲ್ಲಿ ಗಡಿಯಾರಗಳು ರಾರಾಜಿಸುತ್ತಿದ್ದವು. ಅವಾಗ್ಗೆ ಗಡಿಯಾರಗಳು ಧರಿಸುವುದೇ ಒಂದು ಅಂತಸ್ತು ಆಗಿತ್ತು. ಮದುವೆ ಸಮಾರಂಭದಲ್ಲೂ ವರನಿಗೆ ಪ್ರಿಯವಾದ ವಾಚುಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದರು. ಆದರೆ, ಈಗ ಜಮಾನ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮನಸ್ಸಿಗೆ ಒಪ್ಪುವಂಥ ಗಡಿಯಾರ ಧರಿಸುವ ಆಸೆ : ಆದರೆ ತನ್ನ ಮನಸ್ಸಿಗೆ ಒಪ್ಪುವಂತಹ,ಫ್ಯಾಶನ್ ಆಗಿರುವ ಗಡಿಯಾರವನ್ನು ಧರಿಸಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ಆಧುನಿಕ ತಂತ್ರ ಬೆಳದಂತೆ ಹೊಸ ಮೋಡಿಯ ವಾಚ್​ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೊಸಮೋಡಿಯ ವಾಚ್​ ಧರಿಸುವುದು ಪ್ರತಿಯೊಬ್ಬರ ಹೆಬ್ಬಯಕೆ ಆಗಿದೆ. ಹೀಗಾಗಿ ಗಡಿಯಾರ ಉದ್ಯಮ ಸದಾ ಕಾಲ ಬೇಡಿಕೆಯಲ್ಲಿರುವ ಉದ್ಯಮ ಆಗಿ ಎಂದು ಆಶಯ ವ್ಯಕ್ತಡಿಸಿದರು.

ವಿದ್ಯಾರ್ಥಿಗಳ ಕಲಿಕಾ ಕೌಶಲ ತರಬೇತಿಗೆ ಒತ್ತು: ಸರ್ಕಾರವು ಈಗ ವಿದ್ಯಾರ್ಥಿಗಳ ಕಲಿಕೆ ಹಾಗೂ ಅವರಿಗೆ ಕೌಶಲ ತರಬೇತಿ ಇವೆರಡಕ್ಕೂ ಒಟ್ಟೊಟ್ಟಿಗೆ ಒತ್ತು ಕೊಡುತ್ತಿದೆ. ಕಲಿಕೆಯ ಬೇರೆ ಕೌಶಲ ಬೇರೆ ಎಂಬ ಪರಿಸ್ಥಿತಿ ಈಗ ಇಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಕೌಶಲವಿರುವ ವ್ಯಕ್ತಿಯನ್ನಾಗಿಸುವುದೇ ಸರ್ಕಾರದ ಗುರಿಯಾಗಿದೆ. ಹೀಗಾಗಿ ಗಡಿಯಾರ ಉದ್ಯಮಕ್ಕೆ ಅಗತ್ಯವಿರುವ ಕೌಶಲಯುಕ್ತ ಮಾನವ ಸಂಪನ್ಮೂಲವನ್ನು ಸರ್ಕಾರ ಒದಗಿಸಲಿದೆ ಎಂದು ನಾರಾಯಣ್ ಹೇಳಿದರು.

ಮಾನವ ಸಂಪನ್ಮೂಲ ಅಪಾರ : ಯುವಕರಿಗೆ ನಾನಾ ರೀತಿಯ ಕೌಶಲ ತರಬೇತಿಗಳನ್ನು ಸರ್ಕಾರ ಆದ್ಯತೆಯ ಮೇರೆಗೆ ಕೊಡುತ್ತಿದೆ. ಗಡಿಯಾರ ಉದ್ಯಮ ಸೇರಿದಂತೆ ಬೇಡಿಕೆಯಲ್ಲಿರುವ ಎಲ್ಲಾ ಉದ್ಯಮಗಳಿಗೂ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸುತ್ತಿದೆ.ಹೀಗಾಗಿ ರಾಜ್ಯದಲ್ಲಿ ಮಾನವ ಸಂಪನ್ಮೂಲ ಅಪಾರವಾಗಿದೆ ಎಂದು ತಿಳಿಸಿದರು.

ಗಡಿಯಾರು ವಿನ್ಯಾಸಗಳಿಗೆ ಮೆಚ್ಚುಗೆ:ಇದೇ ಸಂದರ್ಭದಲ್ಲಿ ಸಚಿವರು ಪ್ರದರ್ಶನಕ್ಕೆ ಇರಿಸಿರುವ ಹಲವಾರು ಬಗೆಯ ಗಡಿಯಾರಗಳನ್ನು ನೋಡಿ ವಿನ್ಯಾಸಗಳ ಹೊಸತನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಭಾಸ್ಕರ್ ಭಟ್ ಉದ್ಘಾಟಿಸಿದರು. ಗಡಿಯಾರ ಉದ್ಯಮದ ಹಿರಿಯರಾದ ಯಜ್ಞನಾರಾಯಣ, ಸಮಯ ಭಾರತಿ ಸಿಇಒ ಹೇಮಂತ್, ಟೈಟನ್ ಸಿಇಒ ಸುಪರ್ಣಾ, ದೀಪಕ್, ವಿನೋದ್ ಮತ್ತಿತರರು ಇದ್ದರು.

ಇದನ್ನೂಓದಿ:ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಿಂದ ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.