ETV Bharat / state

ರಾಜ್ಯ ಬೊಕ್ಕಸ ತುಂಬಿಸಲು ಬಿಡಿಎ ಕಸರತ್ತು: ಆದಾಯ ಸಂಗ್ರಹದ ಯೋಜನೆ ಎಷ್ಟು ಗೊತ್ತಾ?

ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟವನ್ನು ಎದುರಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೊರೆ ಹೋಗಿದ್ದು, ಕಾರ್ನರ್​ ಸೈಟ್​ಗಳ ಮಾರಾಟಕ್ಕೆ ಮುಂದಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

author img

By

Published : Apr 19, 2020, 7:31 PM IST

Government thinking on BDA site sale
ಆದಾಯ ಸಂಗ್ರಹದ ಯೋಜನೆ ಎಷ್ಟು ಗೊತ್ತಾ?

ಬೆಂಗಳೂರು: ಕೋವಿಡ್-19ನಿಂದ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆದಾಯದ ಸಂಗ್ರಹಕ್ಕೆ ಈಗ ನಾನಾ ಮಾರ್ಗಗಳನ್ನು ಹುಡುಕುತ್ತಿದೆ.

Government thinking on BDA site sale
ಆದಾಯ ಸಂಗ್ರಹಕ್ಕೆ ಬಿಡಿಎನತ್ತ ಸರ್ಕಾರದ ಚಿತ್ತ

ಅತಿ ಹೆಚ್ಚಿನ ಆದಾಯ ಸಂಗ್ರಹಕ್ಕಾಗಿ ಬಿಡಿಎ ಮೇಲೆ ಕಣ್ಣಿಟ್ಟಿದೆ. ಸರ್ಕಾರದ ಬಹುಪಾಲು ಬೊಕ್ಕಸ ತುಂಬಿಸುವ ಆದಾಯ ಬಿಡಿಎ ಮೇಲಿದೆ. ಅದಕ್ಕಾಗಿ ಬಿಡಿಎ ಮೂಲಕ ಸಂಪನ್ಮೂಲ ಕ್ರೋಢೀಕರಣ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ.

30 ಸಾವಿರ ಕೋಟಿ ಸಂಗ್ರಹಕ್ಕಾಗಿ ಬಿಡಿಎ ಕಸರತ್ತು: ಕೊರೊನಾ ಲಾಕ್‌ಡೌನ್ ಹಿನ್ನೆಲೆ ರಾಜ್ಯದ ಆರ್ಥಿಕ ಸ್ಥಿತಿಗತಿ ಪಾತಾಳಕ್ಕೆ ಇಳಿದಿದೆ‌. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 25ರಿಂದ 30 ಸಾವಿರ ಕೋಟಿ ರೂಪಾಯಿ ಸಂಗ್ರಹಕ್ಕೆ ಮುಂದಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 12,000 ಬಿಡಿಎ ಕಾರ್ನರ್ ಸೈಟ್​ಗಳನ್ನು ಹರಾಜು ಹಾಕಲು ಮುಂದಾಗಿದೆ. ಆ ಮೂಲಕ ಸುಮಾರು 15 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಯೋಜನೆ ಇದೆ. ಆದರೆ, ಅಷ್ಟು ಪ್ರಮಾಣದ ಕಾರ್ನರ್ ನಿವೇಶನ ಇಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಅದೇ ರೀತಿ ಬಿಡಿಎ ತನ್ನ ಬಡಾವಣೆ ಮತ್ತು ಬಿಡಿಎ ಅನುಮೋದಿತ ಬಡಾವಣೆಗಳಲ್ಲಿನ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಿ, ದೊಡ್ಡ ಪ್ರಮಾಣದ ಆದಾಯ ಕ್ರೋಢೀಕರಣಕ್ಕೆ ಮುಂದಾಗಿದೆ.

ಈಗಾಗಲೇ ಬಿಡಿಎ 72 ಸಾವಿರ ಅಕ್ರಮ ಕಟ್ಟಡಗಳನ್ನು ಗುರುತಿಸಿದೆ. ಈ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಮೂಲಕ ಆದಾಯ ಸಂಗ್ರಹಕ್ಕೆ ನಿರ್ಧರಿಸಿದೆ. ಮಾರ್ಗಸೂಚಿ ದರದ ಆಧಾರದಲ್ಲಿ ಅಕ್ರಮ ಕಟ್ಟಡದ ಮೇಲೆ ದುಪ್ಪಟ್ಟು ದಂಡ ವಿಧಿಸಲು ಯೋಚಿಸಲಾಗಿದೆ. ಇದರಿಂದ ದಂಡದ ಪ್ರಮಾಣವನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಒಂದು ಮೂಲದ ಪ್ರಕಾರ 30/40 ಜಾಗದ ನಿವೇಶನಗಳ ಮೇಲೆ ಮಾರ್ಗಸೂಚಿ ದರದ 75%ರಷ್ಟು ದಂಡ ವಿಧಿಸುವ ಚಿಂತನೆ ಇದೆ. ಇನ್ನು ಇದಕ್ಕಿಂತ ದೊಡ್ಡ ವಿಸ್ತೀರ್ಣದ ನಿವೇಶನಗಳಿಗೆ ಶೇ.100 ದಂಡ ವಿಧಿಸುವ ಪ್ರಸ್ತಾಪ ಇದೆ ಎಂದು ಅಧಿಕಾರಿಗಳು ತಿಳಿಸಿದರು.

ಇದರ ಜೊತೆಗೆ ನೂರಾರು ಬಿಡಿಎ ಅಪಾರ್ಟ್‌ಮೆಂಟ್​ಗಳು ಖಾಲಿ ಇದ್ದು, ಅವುಗಳನ್ನೂ ಮಾರಾಟ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಲು ಬಿಡಿಎ ಚಿಂತನೆ ನಡೆಸಿದೆ. ಸುಮಾರು ಶೇಕಡಾ 50-60 ಬಿಡಿಎ ಅಪಾರ್ಟ್‌ಮೆಂಟ್ ಖಾಲಿ ಇವೆ‌. ಈ‌ ನಿಟ್ಟಿನಲ್ಲಿ ದರ ಕಡಿತಗೊಳಿಸಿ ಅಪಾರ್ಟ್​ಮೆಂಟ್​ಗಳನ್ನು ಮಾರಾಟ ಮಾಡಲೂ ಬಿಡಿಎ ಚಿಂತನೆ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.