ಬೆಂಗಳೂರು: ಕೊರೊನಾ ಲಾಕ್ಡೌನ್ ನಡುವೆ ಯಾರೇ ರಾಜ್ಯ ಪ್ರವೇಶ ಮಾಡಿದರೂ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಕಡ್ಡಾಯ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ. ವಿದೇಶ ಹಾಗೂ ಹೊರ ರಾಜ್ಯದಿಂದ ಬರುವ ಕೆಲ ವರ್ಗಕ್ಕೆ ಕೇವಲ ಹೋಂ ಕ್ವಾರಂಟೈನ್ ಗೆ ಅಧಿಕೃತವಾಗಿ ಅನುಮತಿ ನೀಡಿದ್ದು, ಸರ್ಕಾರ ತಪ್ಪು ಹೆಜ್ಜೆ ಇಡುತ್ತಿದೆಯಾ ಎನ್ನುವ ಅನುಮಾನ ಹುಟ್ಟುಹಾಕಿದೆ.
ಹೌದು, ಮಾರ್ಚ್ 8 ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟ ದಿನ. ವಿದೇಶದಿಂದ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಹೋಂ ಕ್ವಾರಂಟೈನ್ಗೆ ಸೂಚನೆ ನೀಡಿ ಕಳುಹಿಸಲಾಗುತ್ತಿತ್ತು. ಆರಂಭದ ದಿನದಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಪರಿಕಲ್ಪನೆಯನ್ನು ಮಾಡಿಯೇ ಇರಲಿಲ್ಲ. ಆದರೆ ಆಗೆಲ್ಲಾ ಹೋಂ ಕ್ವಾರಂಟೈನ್ ಪಾಲನೆ ಸರಿಯಾಗಿ ಮಾಡಲಿಲ್ಲ, ಸ್ನೇಹಿತರನ್ನು ಭೇಟಿ ಅಲ್ಲಿ ಇಲ್ಲಿ ಓಡಾಟ ನಡೆಸಿದ್ದರು. ವಿದೇಶದಿಂದ ಹಿಂದಿರುಗಿ ಕೆಲದಿನಗಳ ನಂತರ ಸೋಂಕು ಕಾಣಿಸಿಕೊಳ್ಳಲು ಶುರುವಾಯಿತೋ ಆಗ ಪ್ರಾಥಮಿಕ ಸಂಪರ್ಕಿತರ ಹುಡುಕಾಟದ ವೇಳೆ ಹೋಂ ಕ್ವಾರಂಟೈನ್ ಪಾಲನೆ ಮಾಡದ ವಿಷಯ ದೃಢಪಟ್ಟಿತ್ತು. ಅಷ್ಟರಲ್ಲಾಗಲೇ ಸೋಂಕು ರಾಜ್ಯದಲ್ಲಿ ಬಹುದೂರ ಸಾಗಿತ್ತು. ನಂತರ ಮೈಸೂರು ಘಟನೆ, ತಬ್ಲಿಘಿ, ಅಜ್ಮೀರ್ ಹೀಗೆ ಕೊರೊನಾ ಬಹುತೇಕ ರಾಜ್ಯದ ಇಡೀ ಭಾಗವನ್ನೇ ಆವರಿಸಿಕೊಂಡಿದೆ.
ಈಗ ಮತ್ತೆ ಅಂತಹದ್ದೇ ತಪ್ಪು ನಿರ್ಧಾರಕ್ಕೆ ಸರ್ಕಾರ ಮುಂದಾಗಿರುವಂತಿದೆ. ಅನಿವಾಸಿಗಳನ್ನು ಮರಳಿ ರಾಜ್ಯಕ್ಕೆ ಕರೆತರುವ ಕಾರ್ಯ ಆರಂಭಗೊಂಡಿದ್ದು, ಬಂದ ಎಲ್ಲರೂ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಇರಬೇಕು ಎನ್ನುವ ನಿಯಮ ರೂಪಿಸಲಾಗಿತ್ತು. ಆದರೆ, ಈಗ ಅದರಲ್ಲಿ ಬದಲಾವಣೆ ಮಾಡಿದ್ದು, ಗರ್ಭಿಣಿಯರಿಗೆ, 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೂ 10ವರ್ಷದೊಳಗಿನ ಮಕ್ಕಳಿಗೆ ಹಾಗೂ ಕ್ಯಾನ್ಸರ್, ಸ್ಟ್ರೋಕ್, ಕಿಡ್ನಿ ಸಮಸ್ಯೆ ಹೀಗೆ ತೀರಾ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಗೆ ವಿನಾಯಿತಿ ನೀಡಿ ಆದೇಶಿಸಲಾಗಿದೆ.
ಇದಾಗಿ ಎರಡು ಮೂರು ದಿನದಲ್ಲೇ ಹೊರ ರಾಜ್ಯದಿಂದ ಬರುವವರಿಗೂ ಕೂಡ ಇದೇ ರೀತಿಯ ವಿನಾಯಿತಿ ನೀಡುವ ಆದೇಶ ಹೊರಡಿಸಲಾಗಿದೆ. ಇದೀಗ ರೈಲುಗಳ ಮೂಲಕ ರಾಜ್ಯಕ್ಕೆ ಬರುತ್ತಿರುವ ಕೆಲವರು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಗೆ ವಿನಾಯಿತಿ ಪಡೆದು ಹೋಂ ಕ್ವಾರಂಟೈನ್ ಗೆ ಹೋಗುತ್ತಿದ್ದಾರೆ.
ಪುಟ್ಟ ಮಕ್ಕಳು ಹಾಗು ವಯಸ್ಸಾದವರು ಕೊರೊನಾ ಸೋಂಕಿಗೆ ಬೇಗ ಸಿಲುಕಲಿದ್ದಾರೆ. ಅಲ್ಲದೇ ಹಿರಿಯ ನಾಗರಿಕರಿಗೆ ಸಾರಿ ಐಎಲ್ಐ ನಂತಹ ಸಮಸ್ಯೆ ಕೋವಿಡ್ ಗೆ ರಹದಾರಿ ಮಾಡಿಕೊಡಲಿದೆ, ಥರ್ಮಲ್ ಸ್ಕ್ರೀನಿಂಗ್ ಹಾಗೂ ವೈದ್ಯಕೀಯ ತಪಾಸಣೆ ನಡೆಸಿ ರೋಗ ಲಕ್ಷಣ ಇಲ್ಲ ಎಂದು ಖಚಿತಪಡಿಸಿಕೊಂಡು ಹೋಂ ಕ್ವಾರಂಟೈನ್ ಗೆ ಕಳಿಸಿದರೂ ಕೂಡ ಕೆಲ ದಿನಗಳ ನಂತರ ಅವರಲ್ಲಿ ಕೊರೊನಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿಂದೆ ವಿದೇಶದಿಂದ ಬಂದವರಲ್ಲಿ ಇದೇ ರೀತಿಯಾಗಿ ಕೆಲ ದಿನಗಳ ನಂತರವೇ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಇದೀಗ ಅಂತಹದ್ದೇ ಸಾಧ್ಯತೆ ಇದ್ದು ಒಂದೊಮ್ಮೆ ಹೋಂ ಕ್ವಾರಂಟೈನ್ ನಲ್ಲಿ ಇರುವವರಿಗೆ ಕೊರೊನಾ ಕಾಣಿಸಿಕೊಂಡರೆ ಮತ್ತೊಂದು ರೀತಿಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುವುದು ಖಚಿತ.
ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಿಂದ ವಿನಾಯಿತಿ ಪಡೆದು ಹೋಂ ಕ್ವಾರಂಟೈನ್ ಗೆ ಒಳಗಾಗುವವರ ಮಾಹಿತಿಯನ್ನು ವಾಚ್ , ಮೊಬೈಲ್ ಆ್ಯಪ್ನಲ್ಲಿ ಎಂಟ್ರಿ ಮಾಡಲಾಗುತ್ತದೆ. ಅದರ ಮೂಲಕ ಮಾಹಿತಿ ಪಡೆಯುವುದು, ಆಶಾ ಕಾರ್ಯಕರ್ತೆಯರ ಮೂಲಕ ಮಾನಿಟರಿಂಗ್, ಫೋನ್ ಮಾಡಿ ವಿಚಾರಿಸುವುದು, ಅವರ ಮನೆಗೆ ಹೋಂ ಕ್ವಾರಂಟೈನ್ ಬೋರ್ಡ್ ಹಾಕಲಾಗುತ್ತದೆ. ಆದರೂ ಇದರಿಂದ ಕ್ವಾರಂಟೈನ್ ನಿಯಮ ಉಲ್ಲಂಘನೆ ಸಾಧ್ಯತೆ ಮತ್ತು ಅವಕಾಶ ಹೆಚ್ಚಾಗಿದೆ.
ಇನ್ನು ಮಕ್ಕಳನ್ನು ಮನೆಯಲ್ಲಿ ಇರಿಸುವುದು ಹೇಗೆ, ವೃದ್ಧರನ್ನು ಸಂಭಾಳಿಸುವುದು ಸಾಧ್ಯವೇ? ಆರೋಗ್ಯ ಸಮಸ್ಯೆ ಇರುವವರು ವೈದ್ಯಕೀಯ ಪರೀಕ್ಷೆಗೆ ಹೋಗಬೇಕು. ಇದರ ಜೊತೆಗೆ ಗರ್ಭಿಣಿಯರು ಅವರದ್ದೇ ಆದ ಲೈಫ್ ಸ್ಟೈಲ್ ಪಾಲನೆ, ವೈದ್ಯಕೀಯ ಸೇವೆ ಪಡೆಯುವುದು ಅವಶ್ಯಕವಾಗಿದೆ ಇಂತಹ ಸಮಯದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೊರೊನಾದ ಮತ್ತೊಂದು ಅವತಾರ ರಾಜ್ಯವನ್ನು ಕಾಡದೇ ಬಿಡದು.
ಸರ್ಕಾರ ಹಾಗೂ ಆರೋಗ್ಯ ಇಲಾಖೆ ಈ ವಿಷಯದಲ್ಲಿ ಮೈ ಮರೆಯದೇ ಅನಿವಾಸಿ ಹಾಗೂ ಹೊರರಾಜ್ಯದಿಂದ ಬಂದು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ವಿನಾಯಿತಿ ಪಡೆದು ಹೋಂ ಕ್ವಾರಂಟೈನ್ ನಲ್ಲಿ ಇರುವವರ ಬಗ್ಗೆ ಹದ್ದಿನ ಕಣ್ಣಿಡಬೇಕಿದೆ, ಸ್ವಲ್ಪವೂ ಎಚ್ಚರ ತಪ್ಪದೇ ಕ್ವಾರಂಟೈನ್ ಅವದಿ ಮುಗಿಯುವವರೆಗೂ ಪರಿಸ್ಥಿತಿ ನಿಭಾಯಿಸಬೇಕಿದೆ.
ಕೆಲ ವರ್ಗಕ್ಕೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ನಿಂದ ವಿನಾಯಿತಿ ಘೋಷಣೆ: ತಪ್ಪು ಹೆಜ್ಜೆ ಇಡ್ತಿದೆಯಾ ಸರ್ಕಾರ? - ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಕಡ್ಡಾಯ ನಿಯಮ
ಕೊರೊನಾ ಲಾಕ್ಡೌನ್ ನಡುವೆ ರಾಜ್ಯಕ್ಕೆ ಬರುವವರಿಗೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಕಡ್ಡಾಯ ನಿಯಮದಲ್ಲಿ ಸಡಿಲಿಕೆ ಮಾಡಿರುವುದು ಕೊರೊನಾ ಮತ್ತಷ್ಟು ಉಲ್ಬಣಿಸಲು ಕಾರಣವಾಗಬಹುದು ಎಂಬ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು: ಕೊರೊನಾ ಲಾಕ್ಡೌನ್ ನಡುವೆ ಯಾರೇ ರಾಜ್ಯ ಪ್ರವೇಶ ಮಾಡಿದರೂ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಕಡ್ಡಾಯ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ. ವಿದೇಶ ಹಾಗೂ ಹೊರ ರಾಜ್ಯದಿಂದ ಬರುವ ಕೆಲ ವರ್ಗಕ್ಕೆ ಕೇವಲ ಹೋಂ ಕ್ವಾರಂಟೈನ್ ಗೆ ಅಧಿಕೃತವಾಗಿ ಅನುಮತಿ ನೀಡಿದ್ದು, ಸರ್ಕಾರ ತಪ್ಪು ಹೆಜ್ಜೆ ಇಡುತ್ತಿದೆಯಾ ಎನ್ನುವ ಅನುಮಾನ ಹುಟ್ಟುಹಾಕಿದೆ.
ಹೌದು, ಮಾರ್ಚ್ 8 ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟ ದಿನ. ವಿದೇಶದಿಂದ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಹೋಂ ಕ್ವಾರಂಟೈನ್ಗೆ ಸೂಚನೆ ನೀಡಿ ಕಳುಹಿಸಲಾಗುತ್ತಿತ್ತು. ಆರಂಭದ ದಿನದಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಪರಿಕಲ್ಪನೆಯನ್ನು ಮಾಡಿಯೇ ಇರಲಿಲ್ಲ. ಆದರೆ ಆಗೆಲ್ಲಾ ಹೋಂ ಕ್ವಾರಂಟೈನ್ ಪಾಲನೆ ಸರಿಯಾಗಿ ಮಾಡಲಿಲ್ಲ, ಸ್ನೇಹಿತರನ್ನು ಭೇಟಿ ಅಲ್ಲಿ ಇಲ್ಲಿ ಓಡಾಟ ನಡೆಸಿದ್ದರು. ವಿದೇಶದಿಂದ ಹಿಂದಿರುಗಿ ಕೆಲದಿನಗಳ ನಂತರ ಸೋಂಕು ಕಾಣಿಸಿಕೊಳ್ಳಲು ಶುರುವಾಯಿತೋ ಆಗ ಪ್ರಾಥಮಿಕ ಸಂಪರ್ಕಿತರ ಹುಡುಕಾಟದ ವೇಳೆ ಹೋಂ ಕ್ವಾರಂಟೈನ್ ಪಾಲನೆ ಮಾಡದ ವಿಷಯ ದೃಢಪಟ್ಟಿತ್ತು. ಅಷ್ಟರಲ್ಲಾಗಲೇ ಸೋಂಕು ರಾಜ್ಯದಲ್ಲಿ ಬಹುದೂರ ಸಾಗಿತ್ತು. ನಂತರ ಮೈಸೂರು ಘಟನೆ, ತಬ್ಲಿಘಿ, ಅಜ್ಮೀರ್ ಹೀಗೆ ಕೊರೊನಾ ಬಹುತೇಕ ರಾಜ್ಯದ ಇಡೀ ಭಾಗವನ್ನೇ ಆವರಿಸಿಕೊಂಡಿದೆ.
ಈಗ ಮತ್ತೆ ಅಂತಹದ್ದೇ ತಪ್ಪು ನಿರ್ಧಾರಕ್ಕೆ ಸರ್ಕಾರ ಮುಂದಾಗಿರುವಂತಿದೆ. ಅನಿವಾಸಿಗಳನ್ನು ಮರಳಿ ರಾಜ್ಯಕ್ಕೆ ಕರೆತರುವ ಕಾರ್ಯ ಆರಂಭಗೊಂಡಿದ್ದು, ಬಂದ ಎಲ್ಲರೂ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಇರಬೇಕು ಎನ್ನುವ ನಿಯಮ ರೂಪಿಸಲಾಗಿತ್ತು. ಆದರೆ, ಈಗ ಅದರಲ್ಲಿ ಬದಲಾವಣೆ ಮಾಡಿದ್ದು, ಗರ್ಭಿಣಿಯರಿಗೆ, 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೂ 10ವರ್ಷದೊಳಗಿನ ಮಕ್ಕಳಿಗೆ ಹಾಗೂ ಕ್ಯಾನ್ಸರ್, ಸ್ಟ್ರೋಕ್, ಕಿಡ್ನಿ ಸಮಸ್ಯೆ ಹೀಗೆ ತೀರಾ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಗೆ ವಿನಾಯಿತಿ ನೀಡಿ ಆದೇಶಿಸಲಾಗಿದೆ.
ಇದಾಗಿ ಎರಡು ಮೂರು ದಿನದಲ್ಲೇ ಹೊರ ರಾಜ್ಯದಿಂದ ಬರುವವರಿಗೂ ಕೂಡ ಇದೇ ರೀತಿಯ ವಿನಾಯಿತಿ ನೀಡುವ ಆದೇಶ ಹೊರಡಿಸಲಾಗಿದೆ. ಇದೀಗ ರೈಲುಗಳ ಮೂಲಕ ರಾಜ್ಯಕ್ಕೆ ಬರುತ್ತಿರುವ ಕೆಲವರು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಗೆ ವಿನಾಯಿತಿ ಪಡೆದು ಹೋಂ ಕ್ವಾರಂಟೈನ್ ಗೆ ಹೋಗುತ್ತಿದ್ದಾರೆ.
ಪುಟ್ಟ ಮಕ್ಕಳು ಹಾಗು ವಯಸ್ಸಾದವರು ಕೊರೊನಾ ಸೋಂಕಿಗೆ ಬೇಗ ಸಿಲುಕಲಿದ್ದಾರೆ. ಅಲ್ಲದೇ ಹಿರಿಯ ನಾಗರಿಕರಿಗೆ ಸಾರಿ ಐಎಲ್ಐ ನಂತಹ ಸಮಸ್ಯೆ ಕೋವಿಡ್ ಗೆ ರಹದಾರಿ ಮಾಡಿಕೊಡಲಿದೆ, ಥರ್ಮಲ್ ಸ್ಕ್ರೀನಿಂಗ್ ಹಾಗೂ ವೈದ್ಯಕೀಯ ತಪಾಸಣೆ ನಡೆಸಿ ರೋಗ ಲಕ್ಷಣ ಇಲ್ಲ ಎಂದು ಖಚಿತಪಡಿಸಿಕೊಂಡು ಹೋಂ ಕ್ವಾರಂಟೈನ್ ಗೆ ಕಳಿಸಿದರೂ ಕೂಡ ಕೆಲ ದಿನಗಳ ನಂತರ ಅವರಲ್ಲಿ ಕೊರೊನಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿಂದೆ ವಿದೇಶದಿಂದ ಬಂದವರಲ್ಲಿ ಇದೇ ರೀತಿಯಾಗಿ ಕೆಲ ದಿನಗಳ ನಂತರವೇ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಇದೀಗ ಅಂತಹದ್ದೇ ಸಾಧ್ಯತೆ ಇದ್ದು ಒಂದೊಮ್ಮೆ ಹೋಂ ಕ್ವಾರಂಟೈನ್ ನಲ್ಲಿ ಇರುವವರಿಗೆ ಕೊರೊನಾ ಕಾಣಿಸಿಕೊಂಡರೆ ಮತ್ತೊಂದು ರೀತಿಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುವುದು ಖಚಿತ.
ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಿಂದ ವಿನಾಯಿತಿ ಪಡೆದು ಹೋಂ ಕ್ವಾರಂಟೈನ್ ಗೆ ಒಳಗಾಗುವವರ ಮಾಹಿತಿಯನ್ನು ವಾಚ್ , ಮೊಬೈಲ್ ಆ್ಯಪ್ನಲ್ಲಿ ಎಂಟ್ರಿ ಮಾಡಲಾಗುತ್ತದೆ. ಅದರ ಮೂಲಕ ಮಾಹಿತಿ ಪಡೆಯುವುದು, ಆಶಾ ಕಾರ್ಯಕರ್ತೆಯರ ಮೂಲಕ ಮಾನಿಟರಿಂಗ್, ಫೋನ್ ಮಾಡಿ ವಿಚಾರಿಸುವುದು, ಅವರ ಮನೆಗೆ ಹೋಂ ಕ್ವಾರಂಟೈನ್ ಬೋರ್ಡ್ ಹಾಕಲಾಗುತ್ತದೆ. ಆದರೂ ಇದರಿಂದ ಕ್ವಾರಂಟೈನ್ ನಿಯಮ ಉಲ್ಲಂಘನೆ ಸಾಧ್ಯತೆ ಮತ್ತು ಅವಕಾಶ ಹೆಚ್ಚಾಗಿದೆ.
ಇನ್ನು ಮಕ್ಕಳನ್ನು ಮನೆಯಲ್ಲಿ ಇರಿಸುವುದು ಹೇಗೆ, ವೃದ್ಧರನ್ನು ಸಂಭಾಳಿಸುವುದು ಸಾಧ್ಯವೇ? ಆರೋಗ್ಯ ಸಮಸ್ಯೆ ಇರುವವರು ವೈದ್ಯಕೀಯ ಪರೀಕ್ಷೆಗೆ ಹೋಗಬೇಕು. ಇದರ ಜೊತೆಗೆ ಗರ್ಭಿಣಿಯರು ಅವರದ್ದೇ ಆದ ಲೈಫ್ ಸ್ಟೈಲ್ ಪಾಲನೆ, ವೈದ್ಯಕೀಯ ಸೇವೆ ಪಡೆಯುವುದು ಅವಶ್ಯಕವಾಗಿದೆ ಇಂತಹ ಸಮಯದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೊರೊನಾದ ಮತ್ತೊಂದು ಅವತಾರ ರಾಜ್ಯವನ್ನು ಕಾಡದೇ ಬಿಡದು.
ಸರ್ಕಾರ ಹಾಗೂ ಆರೋಗ್ಯ ಇಲಾಖೆ ಈ ವಿಷಯದಲ್ಲಿ ಮೈ ಮರೆಯದೇ ಅನಿವಾಸಿ ಹಾಗೂ ಹೊರರಾಜ್ಯದಿಂದ ಬಂದು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ವಿನಾಯಿತಿ ಪಡೆದು ಹೋಂ ಕ್ವಾರಂಟೈನ್ ನಲ್ಲಿ ಇರುವವರ ಬಗ್ಗೆ ಹದ್ದಿನ ಕಣ್ಣಿಡಬೇಕಿದೆ, ಸ್ವಲ್ಪವೂ ಎಚ್ಚರ ತಪ್ಪದೇ ಕ್ವಾರಂಟೈನ್ ಅವದಿ ಮುಗಿಯುವವರೆಗೂ ಪರಿಸ್ಥಿತಿ ನಿಭಾಯಿಸಬೇಕಿದೆ.
TAGGED:
qurantine issue in karnataka