ETV Bharat / state

ನೌಕರರ ಪಿಂಚಣಿ, ಗಳಿಕೆ ರಜೆ ನಗದೀಕರಣದ ಮೇಲಿನ ಬಡ್ಡಿದರ ಪರಿಷ್ಕರಣೆ

ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ನೌಕರರಿಗೆ ಅಥವಾ ಅವರು ಸೇವೆಯಲ್ಲಿರುವಾಗ ಮರಣ ಹೊಂದಿದ್ದಲ್ಲಿ ಮತ್ತು ನಿವೃತ್ತಿ ನಂತರ ಮರಣ ಹೊಂದಿದ್ದಲ್ಲಿ ಅವರ ಕುಟುಂಬಕ್ಕೆ ಲಭ್ಯವಾಗುವ ನಿವೃತ್ತಿ ವೇತನ/ಮರಣೋತ್ತರ ಸೌಲಭ್ಯಗಳಿಗೆ ವಾರ್ಷಿಕ ಶೇ.12 ರ ದರದಲ್ಲಿ ಷರತ್ತು ನಿಬಂಧನೆಗಳೊಂದಿಗೆ ಪಾವತಿಸಲು ಸರ್ಕಾರ ಆದೇಶಿಸಿದೆ.

ಸರ್ಕಾರ
ಸರ್ಕಾರ
author img

By

Published : Feb 24, 2022, 10:19 AM IST

ಬೆಂಗಳೂರು: ತಡವಾಗಿ ಪಾವತಿಯಾದ ಸರ್ಕಾರಿ ನೌಕರರ ಪಿಂಚಣಿ, ಉಪದಾನ ಹಾಗೂ ಗಳಿಕೆ ರಜೆ ನಗದೀಕರಣ ಇವುಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹೊಸ ಸರ್ಕಾರದ ಆದೇಶದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ನಿವೃತ್ತ ಸರ್ಕಾರಿ ನೌಕರರಿಗೆ ಅಥವಾ ಅವರು ಸೇವೆಯಲ್ಲಿರುವಾಗ ಮರಣ ಹೊಂದಿದ್ದಲ್ಲಿ ಮತ್ತು ನಿವೃತ್ತಿ ನಂತರ ಮರಣ ಹೊಂದಿದ್ದಲ್ಲಿ ಅವರ ಕುಟುಂಬಕ್ಕೆ ಲಭ್ಯವಾಗುವ ನಿವೃತ್ತಿ ವೇತನ/ಮರಣೋತ್ತರ ಸೌಲಭ್ಯಗಳಿಗೆ ವಾರ್ಷಿಕ ಶೇ.12 ರ ದರದಲ್ಲಿ ಷರತ್ತು ನಿಬಂಧನೆಗಳೊಂದಿಗೆ ಪಾವತಿಸಲು ಆದೇಶಿಸಲಾಗಿದೆ. ಜೊತೆಗೆ ಸರ್ಕಾರದ ಆದೇಶದಲ್ಲಿ ಸದರಿ ಬಡ್ಡಿ ದರವನ್ನು ಶೇ.8 ರ ದರದಲ್ಲಿ ಪರಿಷ್ಕರಿಸಿ ಆದೇಶಿಸಲಾಗಿದೆ ಎಂದು ತಿಳಿಸಲಾಗಿದೆ.

ಸರ್ಕಾರದ ಆದೇಶ
ಸರ್ಕಾರದ ಆದೇಶ

ಇತ್ತೀಚಿನ ವರ್ಷಗಳಲ್ಲಿ ಅನೇಕ ಕಾರಣಗಳಿಂದಾಗಿ ಆರ್ಥಿಕ ಕ್ಷೇತ್ರದಲ್ಲಿ ಬಡ್ತಿಯ ದರವು ಇಳಿಮುಖವಾಗಿರುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಯ ಮೇಲಿನ ಬಡ್ಡಿದರವು ಗರಿಷ್ಠ ಶೇ.5.4 ರಷ್ಟು ಹಾಗೂ ಜಿ.ಪಿ.ಎಫ್. ಬಡ್ಡಿದರವು ಶೇ.7.1 ರಷ್ಟಿರುತ್ತದೆ. ಈ ಹಿನ್ನೆಲೆಯಲ್ಲಿ ವಿಳಂಬವಾಗಿ ಪಾವತಿಸಲ್ಪಡುವ ನಿವೃತ್ತಿ/ಮರಣೋತ್ತರ ಸೌಲಭ್ಯಗಳ ಮೇಲೆ ನಿಗದಿಪಡಿಸಲಾದ ವಾರ್ಷಿಕ ಬಡ್ಡಿಯ ದರವನ್ನು ಪರಿಷ್ಕರಿಸಲು ತೀರ್ಮಾನಿಸಲಾಯಿತು. ವಿಳಂಬವಾಗಿ ಪಾವತಿಸಲ್ಪಡುವ ನಿವೃತ್ತಿ/ಮರಣೋತ್ತರ ಸೌಲಭ್ಯಗಳಿಗೆ ಹಾಲಿ ಚಾಲ್ತಿಯಲ್ಲಿರುವ ಬಡ್ಡಿಯ ದರವನ್ನು ವಾರ್ಷಿಕ ಶೇ. 8 ರಿಂದ ಶೇ. 5.4ಕ್ಕೆ ಇಳಿಸಿ ಪರಿಷ್ಕರಿಸುವುದು ಸಮಂಜಸವೆಂದು ನಿರ್ಧರಿಸಿ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ವಿಳಂಬವಾಗಿ ಪಾವತಿಸಲ್ಪಡುವ ನಿವೃತ್ತಿ/ಮರಣೋತ್ತರ ಸೌಲಭ್ಯಗಳ ಮೇಲೆ ಸರ್ಕಾರದ ಆದೇಶದ ಅನ್ವಯ ನೀಡುತ್ತಿದ್ದ ಶೇ.8 ರ ಬಡ್ಡಿದರವನ್ನು ಪರಿಷ್ಕರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಶೇ.5.4ರ ದರಕ್ಕೆ ನಿಗದಿಪಡಿಸಿ ಆದೇಶಿಸಲಾಗಿದೆ. ಈ ಸರ್ಕಾರಿ ಆದೇಶದ 22-02-2022ರ ಮೊದಲು ನಿವೃತ್ತಿ ಹೊಂದಿದ ನಿವೃತ್ತಿದಾರರ ನಿವೃತ್ತಿ ಸೌಲಭ್ಯಗಳು ಪಾವತಿಯಾಗದೇ ಉಳಿದಿದ್ದು ಅಥವಾ ಆ ನಂತರ ಪಾವತಿಯಾದ ನಿವೃತ್ತಿದಾರರ ನಿವೃತ್ತಿ ವೇತನ ಪ್ರಕರಣಗಳಲ್ಲಿ ಸರ್ಕಾರದ ಆದೇಶ ಅನ್ವಯವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.