ETV Bharat / state

ಕುಡಿಯುವ ನೀರಿಗಾಗಿ ಹಣ ಬಿಡುಗಡೆ ಮಾಡಿದ ಸರ್ಕಾರ..! - Bangalore

ಬೇಸಿಗೆ ಬಿಸಿಲು ತೀವ್ರಗೊಳ್ಳುತ್ತಿರುವ ಬೆನ್ನಲ್ಲೆ ನೀರಿನ ಅಭಾವ ಉಂಟಾಗುವುದು ಸಹಜ. ಇದನ್ನು ಅರಿತುಕೊಂಡ ರಾಜ್ಯ ಸರ್ಕಾರ ತುರ್ತು ಕುಡಿಯುವ ನೀರಿನ ಪೂರೈಕೆಗಾಗಿ ಅನುದಾನ ಬಿಡುಗಡೆ ಮಾಡಿದೆ.

ಸಂಗ್ರಹ ಚಿತ್ರ
author img

By

Published : May 3, 2019, 8:10 AM IST

ಬೆಂಗಳೂರು : ತುರ್ತು ಕುಡಿಯುವ ನೀರಿನ ಪೂರೈಕೆಗಾಗಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ರಾಜ್ಯದ 30 ಜಿಲ್ಲೆಗಳ 176 ತಾಲೂಕುಗಳಿಗೆ ತಾಲೂಕುವಾರು ಒಟ್ಟು 33.45 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು, ಈ ಸಂಬಂಧ ಕೆಲವೊಂದು ನಿಬಂಧನೆಗಳನ್ನು ವಿಧಿಸಿದೆ.

ಹೀಗಿವೆ ನಿಬಂಧನೆಗಳು:

  • ತೀವ್ರ ಅನಿವಾರ್ಯವಿದ್ದಲ್ಲಿ ಮಾತ್ರ ಭೂ ವಿಜ್ಞಾನಿಗಳ ಸಲಹೆ ಮೇರೆಗೆ ಹೊಸ ಬೋರ್​ವೆಲ್​​ಗಳನ್ನು ಕೊರೆಸಿ ಆ ಬೋರ್​ವೆಲ್​ಗಳು ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು.
  • ಹೊಸ ಕೊಳವೆ ಬಾವಿಗಳನ್ನು ಕೊರೆಯುವ ಮುನ್ನ ಅದರ ಸ್ಥಳ ಮತ್ತು ಗುರುತಿಗಾಗಿ ಜಿಪಿಎಸ್​ ಸಿಸ್ಟಮ್​​ ಮೂಲಕ ಅಧಿಕೃತ ದಾಖಲೆ ಮಾಡುವುದರೊಂದಿಗೆ ಅದರ ಛಾಯಾಚಿತ್ರವನ್ನು ಕಾಮಗಾರಿಗೆ ಮುನ್ನ ಹಾಗೂ ನಂತರ ತೆಗೆದು ಗಾಂಧಿ ಸಾಕ್ಷಿ ಕಾಯಕದಲ್ಲಿ ದಾಖಲಿಸಬೇಕು.
  • ಕ್ರಿಯಾ ಯೋಜನೆಯನ್ನು ಆಯಾ ಜಿಲ್ಲಾ ಪಂಚಾಯತ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಟಾಸ್ಕ್​ ಫೋರ್ಸ್ ನಿಯಾಮವಳಿಯಂತೆ ಅನುಮೋದಿಸಿದ್ದು, ಈಗ ಒದಗಿಸಿರುವ ಅನುದಾನದ ಮಿತಿಯೊಳಗೆ ತುರ್ತು ಕಾಮಗಾರಿಗಳನ್ನು ಸ್ಥಳೀಯ ಅಗತ್ಯತೆಗೆ ಆಧರಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮೂಲಕ ಅನುಷ್ಠಾನಗೊಳಿಸಬೇಕು.

ಈ ಎಲ್ಲ ನಿಬಂಧನೆಗಳನ್ನು ವಿಧಿಸಿರುವ ರಾಜ್ಯ ಸರ್ಕಾರ, ನೀರಿನ ಅಭಾವ ನೀಗಿಸುವ ನಿಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

Intro:ಬೆಂಗಳೂರು : ತುರ್ತು ಕುಡಿಯುವ ನೀರಿನ ಪೂರೈಕೆಗಾಗಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.
ರಾಜ್ಯದ 30 ಜಿಲ್ಲೆಗಳ 176 ತಾಲೂಕುಗಳಿಗೆ ತಾಲೂಕುವಾರು ಒಟ್ಟು 33.45 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು, ಈ ಸಂಬಂಧ ಕೆಲವೊಂದು ನಿಬಂಧನೆಗಳನ್ನು ವಿಧಿಸಿದೆ.
Body:ತೀವ್ರ ಅನಿವಾರ್ಯವಿದ್ದಲ್ಲಿ ಮಾತ್ರ ಭೂ ವಿಜ್ಞಾನಿಗಳ ಸಲಹೆ ಮೇರೆಗೆ ಹೊಸ ಬೋರ್ ವೆಲ್ ಗಳನ್ನು ಕೊರೆಸಿ ಆ ಬೋರ್ ವೆಲ್ ಗಳು ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು.
ಹೊಸ ಕೊಳವೆ ಬಾವಿಗಳನ್ನು ಕೊರೆಯುವ ಮುನ್ನ ಅದರ ಸ್ಥಳ ಮತ್ತು ಗುರುತಿಗಾಗಿ ಜಿಪಿಎಸ್ ಸಿಸ್ಟ್ಂ ಮೂಲಕ ಅಧಿಕೃತ ದಾಖಲೆ ಮಾಡುವುದರೊಂದಿಗೆ ಅದರ ಛಾಯಾಚಿತ್ರವನ್ನು ಕಾಮಗಾರಿಗೆ ಮುನ್ನ ಹಾಗೂ ನಂತರ ತೆಗೆದು ಗಾಂಧಿ ಸಾಕ್ಷಿ ಕಾಯಕದಲ್ಲಿ ದಾಖಲಿಸಬೇಕು. ಕ್ರಿಯಾ ಯೋಜನೆಯನ್ನು ಆಯಾ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಟಾಸ್ಕ್ ಫೋರ್ಸ್ ನಿಯಾಮವಳಿಯಂತೆ ಅನುಮೋದಿಸಿದ್ದು, ಈಗ ಒದಗಿಸಿರುವ ಅನುದಾನದ ಮಿತಿಯೊಳಗೆ ತುರ್ತು ಕಾಮಗಾರಿಗಳನ್ನು ಸ್ಥಳೀಯ ಅಗತ್ಯತೆ ಆಧರಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮೂಲಕ ಅನುಷ್ಠಾನಗೊಳಿಸಬೇಕೆಂದು ಆದೇಶಿಸಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.