ETV Bharat / state

ಬಿಬಿಎಂಪಿ ಆನ್​ಲೈನ್ ಸೇವೆಗೆ ಸರ್ಕಾರದ ಆದೇಶ... ಆನ್​ಲೈನ್ ಮೂಲಕವೇ ಮಂಜೂರಾಗಲಿವೆ ಅರ್ಜಿಗಳು - bbmp online service

ಈಗಾಗಾಲೇ ಬಿಬಿಎಂಪಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್​​ ಅಂಗವಾಗಿ ಆನ್​ಲೈನ್ ಮೂಲಕ ಕೆಲ ಸೇವೆಗಳನ್ನು ನಿಡುತ್ತಿದೆ. ಆದರೆ ಕೋವಿಡ್ ಇರುವ ಹಿನ್ನೆಲೆ ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಆನ್​ಲೈನ್ ಮೂಲಕ ಅರ್ಜಿಗಳ ಸಲ್ಲಿಕೆ ನಿರ್ವಹಣೆಯನ್ನು ಕಡ್ಡಾಯಗೊಳಿಸಲು ಸರ್ಕಾರ ಸೂಚಿಸಿದೆ.

bbmp
bbmp
author img

By

Published : Oct 7, 2020, 9:28 AM IST

ಬೆಂಗಳೂರು: ಕೊರೊನಾ ಹರಡುವುದನ್ನು ತಪ್ಪಿಸಲು ಬಿಬಿಎಂಪಿಯ ಎಲ್ಲಾ ಸೇವೆಗಳನ್ನು ಆನ್​ಲೈನ್ ಮೂಲಕವೇ ನಿರ್ವಹಿಸಬೇಕೆಂದು ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ ನಿರ್ದೇಶನ ನೀಡಿದೆ.

ಈಗಾಗಾಲೇ ಬಿಬಿಎಂಪಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್​ ಅಂಗವಾಗಿ ಆಸ್ತಿ ತೆರಿಗೆ ಪಾವತಿ, ವಾಣಿಜ್ಯ ಪರವಾನಗಿ ನವೀಕರಣ, ಕಟ್ಟಡ ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪತ್ರ, ಇ-ಆಸ್ತಿ ಪತ್ರ ಸೇರಿದಂತೆ ಹಲವು ಸೇವೆಗಳನ್ನು ಆನ್​ಲೈನ್ ಮಾಡಿದೆ.

government orders online drvice of bbmp
ಸರ್ಕಾರದ ಆದೇಶ

ಆದರೆ ಕೋವಿಡ್ ಇರುವ ಹಿನ್ನೆಲೆ ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಆನ್​ಲೈನ್ ಮೂಲಕ ಅರ್ಜಿಗಳ ಸಲ್ಲಿಕೆ ನಿರ್ವಹಣೆಯನ್ನು ಕಡ್ಡಾಯಗೊಳಿಸಲು ಸೂಚಿಸಿದೆ. ಭೌತಿಕ ಸಂಪರ್ಕ ಇಲ್ಲದೆ, ಆನ್​ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ, ಅನುಮೋದನೆಗೆ ಸೂಚಿಸಿದೆ. ಪ್ರತೀ ಸೇವೆಗೂ ಶುಲ್ಕವನ್ನು ನಿಗದಿ ಮಾಡಲಾಗಿದ್ದು, ಆನ್​ಲೈನ್ ಮೂಲಕವೇ ಪಾವತಿಗೆ ಸೂಚಿಸಲಾಗಿದೆ.

government orders online drvice of bbmp
ಸರ್ಕಾರದ ಆದೇಶ

ಜೊತೆಗೆ ಅರ್ಜಿ ಮಂಜೂರು ಮಾಡಲು ಗಡುವು ನೀಡಲಾಗಿದ್ದು, ಆ ಗಡುವಿನೊಳಗೆ ಮಂಜೂರು ಮಾಡದಿದ್ದರೆ ಅರ್ಜಿಗಳು ಸ್ವಯಂ ಅನುಮೋದನೆಗೊಳ್ಳಲಿವೆ. ಕಟ್ಟಡ ನಿರ್ಮಿಸುವವರು ಅರ್ಜಿ ಸಲ್ಲಿಸಿದ ಕೇವಲ 30 ದಿನದೊಳಗೆ ನಕ್ಷೆ ಮಂಜೂರು ಮಾಡಬೇಕು. 7 ದಿನಗಳ ಗಡುವಿನಲ್ಲಿ ಕಟ್ಟಡ ಮುಕ್ತಾಯದ ದೃಢೀಕರಣ ಪತ್ರ ನೀಡಬೇಕು. ಹಾಗೂ 15 ದಿನದೊಳಗೆ ವಾಸ ಯೋಗ್ಯ ಪ್ರಮಾಣಪತ್ರ ನೀಡಬೇಕು. ಈ ಗಡುವಿನೊಳಗೆ ಮಂಜೂರಾತಿ ಹಗೂ ದೃಢೀಕರಣ ಪತ್ರ ನೀಡದಿದ್ದರೆ ಸಲ್ಲಿಕೆಯಾದ ಅರ್ಜಿ ಸ್ವಯಂ ಅನುಮೋದನೆಗೊಳ್ಳತ್ತದೆ. ಗಡುವಿನೊಳಗೆ ಕೆಲಸ ಮುಗಿಸದಿದ್ದಲ್ಲಿ ಅಧಿಕಾರಿಗಳು ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

government orders online drvice of bbmp
ಸರ್ಕಾರದ ಆದೇಶ

ನಿವೇಶನದ ಮೇಲಿನ ತೆರಿಗೆ, ರಸ್ತೆ ಅಗೆಯಲು ಅನುಮತಿಯನ್ನು ಆನ್​ಲೈನ್ ಮೂಲಕವೇ ಮಾಡಿ, ರಸ್ತೆ ಅಗೆದ ನಂತರ ಪುನರ್ ನಿರ್ಮಾಣದ ಬಗ್ಗೆ ಸ್ಥಳ ಪರಿಶೀಲನೆ ಮಾಡಬೇಕು. ಆಹಾರಕ್ಕೆ ಸಬಂಧಿಸಿದಂತೆ ಹೋಟೆಲ್, ಆಹಾರ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದ ಉದ್ದಿಮೆಗೆ ನಿರಪೇಕ್ಷಣಾ ಪತ್ರ, ಹಾಸ್ಟೆಲ್, ಪಿಜಿ, ಪ್ಲೇ ಸ್ಕೂಲ್​​ಗಳಿಗೆ ಮಂಜೂರಾತಿ, ಆಡಿಟೋರಿಯಂ, ಮನರಂಜನಾ ಕೇಂದ್ರಗಳಿಗೆ ಪರವಾನಗಿ ಸಹ ಆನ್​ಲೈನ್ ಮಾಡಲು ಸೂಚಿಸಲಾಗಿದೆ.

ಆನ್​ಲೈನ್​ನಲ್ಲಿ ಸಲ್ಲಿಕೆಯಾಗುವ ಅರ್ಜಿ ಭರ್ತಿ ವಿಚಾರದಲ್ಲಿ ಗೊಂದಲಗಳಿದ್ರೆ ಅರ್ಜಿದಾರರಿಗೆ ಸ್ಪಷ್ಟವಾಗಿ ತಿಳಿಸಬೇಕು. ಅನಗತ್ಯವಾಗಿ ನಿರಾಕರಿಸುವಂತಿಲ್ಲ ಎಂದು ಹೇಳಲಾಗಿದೆ. ಈಗಾಗಲೇ ಇರುವಂತೆ ಹೊಸದಾಗಿ ಉದ್ದಿಮೆ ಆರಂಭಿಸಲು ಹಾಗೂ ಪರವಾನಗಿ ನವೀಕರಣವನ್ನು ಆನ್​ಲೈನ್ ಮೂಲಕವೇ ಐದು ವರ್ಷ ಅವಧಿ ಇರುವಂತೆ ನವೀಕರಣ ಮಾಡಿಕೊಡಲು ಬಿಬಿಎಂಪಿಗೆ ನಿರ್ದೇಶನ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.