ETV Bharat / state

ಶಿಕ್ಷಣ ಇಲಾಖೆಯ ಭ್ರಷ್ಟಚಾರ ನೋಡಿ ಸರ್ಕಾರಕ್ಕೆ ನಾಚಿಗೆ ಆಗುತ್ತೋ ಇಲ್ಲವೋ:ಅರುಣ್ ಶಹಾಪುರ ಕಿಡಿ - ಶಿಕ್ಷಣ ಇಲಾಖೆ

ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಚಾರ ಹೆಚ್ಚಾಗಿದ್ದು ಸರ್ಕಾರಕ್ಕೆ ನಾಚಿಗೆ ಆಗುತ್ತೋ ಇಲ್ಲವೋ ನಮಗಂತೂ ನಾಚಿಕೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ
author img

By

Published : Jun 27, 2019, 8:59 PM IST

ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಚಾರ ಹೆಚ್ಚಾಗಿದ್ದು ಸರ್ಕಾರಕ್ಕೆ ನಾಚಿಗೆ ಆಗುತ್ತೋ ಇಲ್ಲವೋ ನಮಗಂತೂ ನಾಚಿಕೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಕಿಡಿಕಾರಿದ್ದಾರೆ.

ಶಾಸಕರ‌ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಪಿಯು ಮಂಡಳಿ‌ ಸತ್ತು ಹೋಗಿದೆ, ವರ್ಗಾವಣೆ ಬಗ್ಗೆ ಯಾರು ನಿರ್ಣಯ ಕೈಗೊಳ್ಳಬೇಕು ಎನ್ನುವುದೇ ಗೊತ್ತಿಲ್ಲ. ಪ್ರಭಾರ ಆಯುಕ್ತ ಜಾಫರ್ ಪರೀಕ್ಷೆಗಳನ್ನು ಮಾಡಿ ಮುಗಿಸುತ್ತಿದ್ದಾರೆ. ಹೊಸ‌ ಕಾಲೇಜುಗಳಿಗೆ ಅನುಮತಿ,‌ಇರುವ ಕಾಲೇಜುಗಳ ಸೀಟು ಹೆಚ್ಚಿಸಲು ಅನುಮತಿ,ಹೆಚ್ಚುವರಿ ವಿಭಾಗ, ಹೊಸ ಕಾಂಬಿನೇಷನ್​ಗೆ ಅನುಮತಿ ಕೋರಿ ಬಂದಿರುವ ಕಡತಗಳು ಧೂಳು ಹಿಡಿಯುತ್ತಿವೆ ಕೂಡಲೇ ಈ ಕಡತಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ
ಅಧಿಕಾರಿಗಳು ಹೇಳಿದರು ಎಂದು ಸಚಿವರು ನಿರ್ಧಾರ ಕೈಗೊಳ್ಳಲು ಹೋಗಬಾರದು. ಈಗ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಪ್ರತಿಕ್ರಿಯೆ ನೀಡುವುದು ಬೇಡ. ಇಲಾಖೆಯಲ್ಲಿ ಸವಾಲು ಬಹಳ ಇವೆ, ಹಾಗಾಗಿ ಮೊದಲು‌ ಇಲಾಖೆಯನ್ನು ಅರ್ಥ ಮಾಡಿಕೊಳ್ಳಬೇಕು ನಂತರ ದೆಹಲಿ,ಕೇರಳ‌ಕ್ಕೆ ಹೋಗಿ ಅಧ್ಯಯನ ಮಾಡಿ ಇಲ್ಲಿ‌ ಜಾರಿಗೊಳಿಸಿ ಎಂದರು.ಪದವಿ ಪೂರ್ವ ಶಿಕ್ಷಣ ಮಂಡಳಿ ಪ್ರಭಾರಿಗಳ ಆಡಳಿತದಲ್ಲಿದ್ದು, ಪಿಯು ಮಂಡಳಿ ಆಯುಕ್ತ ಜಾಫರ್ ಪ್ರಭಾರ ಜವಾಬ್ದಾರಿ ಹೊತ್ತಿದ್ದಾರೆ. ಅವರ ಅಧೀನದಲ್ಲಿ ಬರುವ ನಾಲ್ಕು ಜಂಟಿ ನಿರ್ದೇಶಕರು ಪ್ರಭಾರ ಜವಾಬ್ದಾರಿ ವಹಿಸಿದ್ದು,36 ಸಹಾಯಕ ನಿರ್ದೇಶಕರಲ್ಲಿ 28 ಸಹಾಯಕ ನಿರ್ದೇಶಕರು ಪ್ರಭಾರಿ,1341 ಪ್ರಿನ್ಸಿಪಾಲರಲ್ಲಿ 721 ಪ್ರಿನ್ಸಿಪಾಲ್ ಪ್ರಭಾರಿಯಾಗಿದ್ದು, 3471 ಉಪನ್ಯಾಸಕರ ಹುದ್ದೆ ಖಾಲಿ ಇದೆ. ಇದರಿಂದ ನಮಗೆ ನಾಚಿಕೆಯಾಗುತ್ತಿದೆ ಎಂದು ರಾಜ್ಯ ಸಕರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Intro:wrap

Body:wrap

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.