ಬೆಂಗಳೂರು: ಗೋಲ್ಡನ್ಸ್ಟಾರ್ ಗಣೇಶ ನಿರೂಪಣೆಯಲ್ಲಿ ಇಸ್ಮಾರ್ಟ್ ಶೋ ಎಂಬ ಕಾರ್ಯಕ್ರಮ ಜುಲೈ 16ಕ್ಕೆ ರಿಂದ ಪ್ರತಿ ಶನಿವಾರ ಭಾನುವಾರ ಸುವರ್ಣ ಸ್ಟಾರ್ನಲ್ಲಿ ಪ್ರಸಾರವಾಗಲಿದೆ. ಇಸ್ಮಾರ್ಟ್ ಜೋಡಿ ಶೋ ಬಗ್ಗೆ ಹೇಳಿರುವ ಗಣೇಶ್, ಕಿರುತರೆ ಶೋ ಗಳಿಂದಲೆ ನಿಮಗೆ ಪರಿಚಯವಾಗಿದ್ದ ನನ್ನನ್ನು ಬೆಳೆಸಿ ಇಂದು ಗೋಲ್ಡನ್ ಸ್ಟಾರ್ ಎಂಬ ಬಿರುದು ಕೊಟ್ಟಿದೀರಾ. ಅಂತಹ ಪ್ರೀತಿನ ಮತ್ತೆ ಸೆಲೆಬ್ರೇಟ್ ಮಾಡೋಕೆ ರೋಮ್ಯಾಂಟಿಕ್ ಜೋಡಿಗಳ ಜೊತೆ ಮನರಂಜನೆಯ ಮೋಡಿ ಮಾಡೋಕೆ ನಿಮ್ಮ ಮುಂದೆ ತರ್ತಿದೀನಿ ಇಸ್ಮಾರ್ಟ್ ಜೋಡಿ ಎಂದು ಹೇಳಿದ್ದಾರೆ.
ಅಲ್ಲದೇ ಇದರಲ್ಲಿ ಲವ್, ರೊಮ್ಯಾನ್ಸ್, ಎಂಟರ್‌ಟೈನ್‌ಮೆಂಟ್‌ಗೆ ಕೊರತೆ ಇರೋದಿಲ್ಲ ಎಂದು ಹೇಳಿ, ಪ್ರೇಕ್ಷಕರಿಗೆ ಕುತೂಹಲವನ್ನು ಹೆಚ್ಚಿಸಿದ್ದಾರೆ. ಇನ್ನೂ ಈ ಕಾರ್ಯಕ್ರಮಕ್ಕೆ ರಾಕ್ಲೈನ್ ಸ್ಟುಡಿಯೋದಲ್ಲಿ ಅದ್ದೂರಿ ವೆಚ್ಚದಲ್ಲಿ ಸೆಟ್ ಹಾಕಿದ್ದು, ಕಾರ್ಯಕ್ರಮದ ಚಿತ್ರೀಕರಣ ಮಾಡಲಾಗುತ್ತಿದೆ. ಇಸ್ಮಾರ್ಟ್ ಜೋಡಿ ಕಾರ್ಯಕ್ರಮದ ಶೀರ್ಷಿಕೆ ಗೀತೆಯನ್ನ ಆಲ್ ಓಕೆ ಆಲೋಕ್ ಕಂಪೋಸ್ ಮಾಡಿ ಹಾಡಿದ್ದಾರೆ.
ಈಗಾಗ್ಲೇ ರಿಲೀಸ್ ಆಗಿರೋ ಪ್ರೋಮೋದಲ್ಲಿ ಹಾಡು ಆಗ್ಲೇ ವೀಕ್ಷಕರ ಗಮನ ಸೆಳೆದಿದೆ. ಕನ್ನಡಿಗರಿಗೆ ಭರಪೂರ ಮನರಂಜನೆಯ ಇಸ್ಮಾರ್ಟ್ ಜೋಡಿ ಇದೇ ತಿಂಗಳ 16ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಅನೇಕ ಶೋಗಳನ್ನು ನಡೆಸಿಕೊಟ್ಟಿರುವ ಗಣೇಶ್ ಮತ್ತೊಮ್ಮೆ ಕಿರುತೆರೆಯಲ್ಲಿ ನಿರೂಪಕರಾಗಿ ಮಿಂಚಲಿದ್ದಾರೆ.
ಇದನ್ನೂ ಓದಿ: ಜುಲೈ 15ಕ್ಕೆ ರಾಜ್ಯಾದ್ಯಂತ 'ಪೆಟ್ರೋಮ್ಯಾಕ್ಸ್' ಸಿನಿಮಾ ಬಿಡುಗಡೆ