ದೇವನಹಳ್ಳಿ: ದುಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದ ಪ್ರಯಾಣಿಕರು ತಮ್ಮ ಒಳ ಉಡುಪಿನಲ್ಲಿ ಚಿನ್ನದ ಸರ ಮತ್ತು ಐ ಫೋನ್ಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಪ್ರಕರಣವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರನ್ನು ತಪಾಸಣೆ ನಡೆಸುವ ಸಮಯದಲ್ಲಿ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಸಾಗಿಸಲೆತ್ನಿಸಿದ ಚಿನ್ನದ ಸರ ಮತ್ತು 4 ಐ ಫೋನ್, 12 ಪ್ರೋ ಪತ್ತೆ ಮಾಡಿದ್ದಾರೆ. ಆರೋಪಿ ತನ್ನ ಒಳ ಉಡುಪಿನಲ್ಲಿ ಮರೆಮಾಚಿ 16.86 ಲಕ್ಷ ಮೌಲ್ಯದ 349.21 ಗ್ರಾಂ ತೂಕದ ಕಚ್ಛಾ ಚಿನ್ನದ ಸರ ಮತ್ತು ದಾಖಲೆಗಳಿಲ್ಲದ 2.55 ಲಕ್ಷ ರೂ. ಮೌಲ್ಯದ ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೆರಡು ಪ್ರಕರಣ:
ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬೇರೆ ಇಬ್ಬರು ಪ್ರಯಾಣಿಕರು ಮರೆಮಾಚಿ ಗಟ್ಟಿ ರೂಪದ ಚಿನ್ನ ಕಳ್ಳಸಾಗಿಸುತ್ತಿದ್ದ ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 21.39 ಲಕ್ಷ ರೂ. ಮೌಲ್ಯದ 456.60 ಗ್ರಾಂ ತೂಕದ ಗಟ್ಟಿ ರೂಪದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಪೊಲೀಸರ ಭದ್ರತೆ ಮಧ್ಯೆಯೂ ಬಸ್ ಮೇಲೆ ಕಲ್ಲು ತೂರಾಟ
ಮತ್ತೊಂದು ಪ್ರಕರಣದಲ್ಲಿ 16.26 ಲಕ್ಷ ಮೌಲ್ಯದ 456.6 ಗ್ರಾಂ ತೂಕದ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ.