ETV Bharat / state

ಅಲೆಮಾರಿ ಹಾಗೂ ಬುಡಕಟ್ಟು ಸಮುದಾಯಗಳಿಗೆ ಹೆಚ್ಚಿನ ಆದ್ಯತೆ: ಸಿಎಂ ಬಿಎಸ್​ವೈ

author img

By

Published : Jan 4, 2020, 12:55 PM IST

ಗಾಂಧಿ ಭವನದಲ್ಲಿ ಕರ್ನಾಟಕ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ದೀಪ ಬೆಳಗಿಸುವ ಮೂಲಕ ಮಹಿಳಾ ಘಟಕ ಕಾರ್ಯಕ್ರಮವನ್ನ ಸಿಎಂ ಯಡಿಯೂರಪ್ಪ ಉದ್ಘಾಟಿಸಿದರು.

giving-greater-attention-to-the-tribal-communities
ಸಿಎಂ ಯಡಿಯೂರಪ್ಪ

ಬೆಂಗಳೂರು: ಗಾಂಧಿ ಭವನದಲ್ಲಿ ಕರ್ನಾಟಕ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ದೀಪ ಬೆಳಗಿಸುವ ಮೂಲಕ ಮಹಿಳಾ ಘಟಕ ಕಾರ್ಯಕ್ರಮವನ್ನ ಸಿಎಂ ಯಡಿಯೂರಪ್ಪ ಉದ್ಘಾಟಿಸಿದರು.

ಸಿಎಂ ಯಡಿಯೂರಪ್ಪ

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಯಡಿಯೂರಪ್ಪ, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯವನ್ನು ಮುಖ್ಯವಾಹಿನಿಗೆ ತರಬೇಕಿದೆ. ಮಹಿಳಾ ಘಟಕ ಉದ್ಘಾಟನೆ ಆಗಿರೋದು ಸಂತೋಷ ಆಗಿದೆ. ಅಲೆಮಾರಿ ಸಮುದಾಯ ಕೆಲವೊಂದು ಕಾರಣಗಳಿಂದಾಗಿ ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಅಲೆಮಾರಿ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಹಿಂದೆ ಸಿಎಂ ಆಗಿದ್ದಾಗ ನಾನು 25 ಕೋಟಿ ಅನುದಾನ ನೀಡಿದ್ದೆ. ಈ ಬಾರಿಯ ಬಜೆಟ್‌ನಲ್ಲಿ ಇನ್ನೂ ಹೆಚ್ಚಿನ ಅನುದಾನ ಮೀಸಲಿಡುತ್ತೇನೆ. ಈ ಸಮುದಾಯದ ಅಭ್ಯುದಯಕ್ಕೆ ವಿಶೇಷ ಕಾರ್ಯಕ್ರಮಗಳನ್ನ ರೂಪಿಸುತ್ತೇನೆ. ವಿಶೇಷ ಕಾರ್ಯಕ್ರಮ, ಒಂದೆಡೆ ನೆಲೆ ನಿಲ್ಲಲು ಈ‌ ಸಮುದಾಯಗಳಿಗೆ ವಸತಿ ವ್ಯವಸ್ಥೆಗೆ ಕ್ರಮ, ಉತ್ತಮ ಶಿಕ್ಷಣ, ಉದ್ಯೋಗ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಸಮುದಾಯಗಳ ಕಲ್ಯಾಣ ಮತ್ತು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಆರ್.ಇದಾತೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Intro:Body:ಅಲೆಮಾರಿ ಹಾಗು ಬುಡಕಟ್ಟು ಜನಾಂಗಗಳಿಗೆ ಹೆಚ್ಚು ಆಧ್ಯತೆ ನೀಡುತ್ತವೆ ಸಿಎಂ ಯಡಿಯೂರಪ್ಪ!!

ಅಲೆಮಾರಿಗಳ ಸಮಸ್ಯೆ ಮತ್ತು ಪರಿಹಾರೋಪಾಯಗಳು ಸಮಾಲೋಚನಾ ಸಮಾರಂಭಕ್ಕೆ , ಸಿ ಎಂ ಬಿ ಎಸ್ ಯಡಿಯೂರಪ್ಪರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು..ಬೆಂಗಳೂರಿನ ಗಾಂಧಿಭವನದಲ್ಲಿ ಕರ್ನಾಟಕ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಯಿತು..ದೀಪ ಬೆಳಗಿಸುವ ಮೂಲಕ ,ಮಹಿಳಾ ಘಟಕ ಕಾರ್ಯಕ್ರಮವನ್ನ ಸಿ ಎಂ ಯಡಿಯೂರಪ್ಪ ಉದ್ಘಾಟಿಸಿದ್ರು..ಸಿಎಂ ಯಡಿಯೂರಪ್ಪಗೆ ,ಡಿಸಿಎಂ ಗೋವಿಂದ ಕಾರಜೋಳ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಅಲೆಮಾರಿ ಅರೆ ಅಲೆಮಾರಿ ಮತ್ತು ವಿಮುಕ್ತ ಸಮುದಾಯಗಳ ಕಲ್ಯಾಣ ಮತ್ತು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ ಆರ್ ಇದಾತೆ, ಸೇರಿದಂತೆ ಸಾಕಷ್ಟು ಗಣ್ಯರು ಉಪಸ್ಥಿತರಿದ್ದರು..ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿ ಸಿ ಎಂ ಯಡಿಯೂರಪ್ಪ, ಅಲೆಮಾರಿ, ಅರೆ ಅಲೆಮಾರಿ ಜನಾಂಗವನ್ನು ಮುಖ್ಯ ವಾಹಿನಿಗೆ ತರಬೇಕಿದೆ,ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ,ಮಹಿಳಾ ಘಟಕ ಉದ್ಘಾಟನೆ ಆಗಿರೋದು ಸಂತೋಷ ಆಗಿದೆ.ಇನ್ನು ಕೆಲವೊಂದು ಕಾರಗಳಿಂದಾಗಿ ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರೋದು ಗಮನಕ್ಕೆ ಬಂದಿದೆ..ಹೀಗಾಗಿ ಅಲೆಮಾರಿ ಜನಾಂಗವನ್ನ, ಮುಖ್ಯ ವಾಹಿನಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ..ಹಿಂದೆ ಸಿಎಂ ಆಗಿದ್ದಾಗ ನಾನು 25 ಕೋಟಿ ಅನುದಾನ ನೀಡಿದ್ದೆ,ಈ ಬಾರಿಯ ಬಜೆಟ್‌ನಲ್ಲಿ ಇನ್ನೂ ಹೆಚ್ಚಿನ ಅನುದಾನ ಮೀಸಲಿಡುತ್ತೇನೆ,ಈ ಸಮುದಾಯ ಅಭ್ಯುದಯಕ್ಕೆ ವಿಶೇಷ ಕಾರ್ಯಕ್ರಮಗಳನ್ನ ರೂಪಿಸುತ್ತೇನೆ,ಈ ಬಜೆಟ್ ನಲ್ಲಿ ಹೆಚ್ಚು ಅನುದಾನ ಮೀಸಲು,ಈ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ, ವಿಶೇಷ ಕಾರ್ಯಕ್ರಮ,ಒಂದೆಡೆ ನೆಲೆ ನಿಲ್ಲಲು ಈ‌ಜನಾಂಗಗಳಿಗೆ ವಸತಿ ವ್ಯವಸ್ಥೆಗೆ ಕ್ರಮ,ಉತ್ತಮ ಶಿಕ್ಷಣ, ಉದ್ಯೋಗ ಕಲ್ಪಿಸಲು ಸರ್ಕಾರ ಬದ್ದವಾಗಿದೆ ಅಂತಾ ಯಡಿಯೂರಪ್ಪ ಹೇಳಿದ್ದಾರೆ..Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.