ETV Bharat / state

ಯುವಕನಿಗೆ ಚಾಕು ಇರಿದ ಬಿಎಸ್ಎಫ್ ಯೋಧ; ಸಿಸಿಟಿವಿಯಲ್ಲಿ ದೃಶ್ಯ ಸೆರೆ - young man stabbed by BSF Soldier - YOUNG MAN STABBED BY BSF SOLDIER

ಬೆಳಗಾವಿಯ ಸದಾಶಿವ ನಗರದಲ್ಲಿರುವ ಆಯಿ ಹೋಟೆಲ್‌ನಲ್ಲಿ ಬಿಎಸ್​ಎಫ್ ಯೋಧರೊಬ್ಬರು ಯುವಕನೊಬ್ಬನಿಗೆ ಚೂರಿ ಇರಿದಿರುವ ಘಟನೆ ಬೆಳಕಿಗೆ ಬಂದಿದೆ.

young-man-stabbed-by-bsf-soldier-in-belagavi
ಅಲ್ತಾಫ್ ಅನಿಲ್ ಚೌಗುಲೆ (ETV Bharat)
author img

By ETV Bharat Karnataka Team

Published : Sep 30, 2024, 8:48 PM IST

ಬೆಳಗಾವಿ : ಹೋಟೆಲ್‌ನಲ್ಲಿ ಕಿರಿಕ್ ಮಾಡಿದ ಯುವಕನಿಗೆ ಬಿಎಸ್ಎಫ್ ಯೋಧ ಚೂರಿ ಇರಿದಿರುವ ಘಟನೆ ಬೆಳಗಾವಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿಯ ಸದಾಶಿವ ನಗರದಲ್ಲಿರುವ ಆಯಿ ಹೋಟೆಲ್‌ನಲ್ಲಿ ಬಿಲ್ ಕೊಡುವ ವಿಚಾರಕ್ಕೆ ಒನರ್ ಹಾಗೂ ಕೆಲ ಯುವಕರ ಮಧ್ಯೆ ಸೆ. 24 ರಂದು ರಾತ್ರಿ 12 ಗಂಟೆ ಸುಮಾರಿಗೆ ಗಲಾಟೆ ನಡೆದಿದೆ‌. ಪಾರ್ಟಿ ಮಾಡಿ ಊಟಕ್ಕೆ ಎಂದು ಆಯಿ ಹೋಟೆಲ್‌ಗೆ ಇಲ್ಲಿನ ಗ್ಯಾಂಗ್‌ವಾಡಿಯ ನಾಲ್ವರು ಯುವಕರು ಹೋಗಿದ್ದರು. ಮೂವರು ಬಿಲ್ ಕೊಟ್ಟು, ಇನ್ನೋರ್ವ ಯುವಕನ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಈ ವೇಳೆ, ಹೋಟೆಲ್ ಮಾಲೀಕ ಹಾಗೂ ಗ್ಯಾಂಗ್‌ವಾಡಿ ಯುವಕರ ಮಧ್ಯೆ ಗಲಾಟೆ ಶುರುವಾಗಿದೆ.

ಕೆಲ ಹೊತ್ತಾದರೂ ಹೋಟೆಲ್ ಸಿಬ್ಬಂದಿ ಹಾಗೂ ಯುವಕರ ಮಧ್ಯೆ ವಾಗ್ವಾದ ನಿಂತಿಲ್ಲ. ಯುವಕರ ಕಿರಿಕಿರಿಗೆ ಬೇಸತ್ತು ಊಟಕ್ಕೆಂದು ಬಂದಿದ್ದ ಬಿಎಸ್ಎಫ್ ಯೋಧ ಗಲಾಟೆ ಮಧ್ಯ ಪ್ರವೇಶಿಸಿದ್ದಾರೆ. ಜೇಬಿನಲ್ಲಿದ್ದ ಚೂರಿಯಿಂದ ಯುವಕನ ಹೊಟ್ಟೆಗೆ ಇರಿದಿದ್ದಾರೆ.

ಗ್ಯಾಂಗ್‌ವಾಡಿಯ ಅಲ್ತಾಫ್ ಅನಿಲ್ ಚೌಗುಲೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಿಎಸ್ಎಫ್ ಯೋಧ ಪರಶುರಾಮ ರಾಮಗೊಂಡನವರ ಹಲ್ಲೆ ಮಾಡಿದವರು. ಯುವಕನಿಗೆ ಚೂರಿ ಇರಿದ ಬಿಎಸ್ಎಫ್ ಯೋಧನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇಲ್ಲಿನ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಅಲ್ತಾಫ್ ಸಂಬಂಧಿಕ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಬಿಎಸ್ಎಫ್ ಯೋಧನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು: ಪಾರ್ಕ್​ನಲ್ಲಿ ಪ್ರಿಯತಮೆ ಜೊತೆ ಕುಳಿತಿದ್ದ ವ್ಯಕ್ತಿಗೆ ಯುವತಿಯ ಸ್ನೇಹಿತನಿಂದ ಚಾಕು ಇರಿತ - STABBED ON A MAN

ETV Bharat Logo

Copyright © 2025 Ushodaya Enterprises Pvt. Ltd., All Rights Reserved.