ETV Bharat / state

ಚುನಾವಣಾ ಬಾಂಡ್ ಕೇಸ್: ನಿರ್ಮಲಾ ಸೀತಾರಾಮನ್ ಸೇರಿ ಇತರ ಬಿಜೆಪಿ ನಾಯಕರ ವಿರುದ್ಧ ತನಿಖೆಗೆ ಹೈಕೋರ್ಟ್‌ ತಡೆ - Election Bond Case - ELECTION BOND CASE

ಚುನಾವಣಾ ಬಾಂಡ್‌ಗಳ ಮೂಲಕ ಹಣ ವಸೂಲಿ ಮಾಡಿದ ಆರೋಪದ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇತರ ನಾಯಕರ ವಿರುದ್ಧ ತನಿಖೆಗೆ ಹೈಕೋರ್ಟ್ ಸೋಮವಾರ ತಡೆ ನೀಡಿದೆ.

ಹೈಕೋರ್ಟ್‌, ನಿರ್ಮಲಾ ಸೀತಾರಾಮನ್
ಹೈಕೋರ್ಟ್‌, ನಿರ್ಮಲಾ ಸೀತಾರಾಮನ್ (ETV Bharat)
author img

By ETV Bharat Karnataka Team

Published : Sep 30, 2024, 8:46 PM IST

Updated : Sep 30, 2024, 8:59 PM IST

ಬೆಂಗಳೂರು: ಚುನಾವಣಾ ಬಾಂಡ್‌ಗಳ ಮೂಲಕ ಹಣ ವಸೂಲಿ ಮಾಡಿದ ಆರೋಪದ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಸೇರಿದಂತೆ ಮತ್ತಿತರರ ವಿರುದ್ಧ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.

ಸಾಮಾಜಿಕ ಕಾರ್ಯಕರ್ತ ಆದರ್ಶ ಅಯ್ಯರ್ ಸಲ್ಲಿಸಿದ್ದ ದೂರಿನ ಸಂಬಂಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ನಳಿನ್​ ಕುಮಾರ್ ಕಟೀಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೇ, ದೂರುದಾರ ನಷ್ಟ ಅನುಭವಿಸಿಲ್ಲ ಎಂಬ ಅಂಶವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ ಪ್ರಕರಣ ಮುಂದುವರೆದಲ್ಲಿ ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಲಿದೆ ಎಂದು ಪೀಠ ತಿಳಿಸಿದ್ದು, ಮುಂದಿನ ವಿಚಾರಣೆವರೆಗೂ ಪ್ರಕರಣದ ತನಿಖೆಗೆ ತಡೆ ನೀಡಿ ಆದೇಶ ಹೊರಡಿಸಿದೆ.

ಅರ್ಜಿಯಲ್ಲಿ ಏನಿದೆ?: ನಿರ್ದಿಷ್ಟ ಆರೋಪಗಳಿಲ್ಲದೇ ಅಥವಾ ಯಾವುದೇ ತಪ್ಪನ್ನು ಉಲ್ಲೇಖಿಸದೇ ದಾಖಲಿಸಿರುವ ಆಕ್ಷೇಪಾರ್ಹ ದೂರು ರದ್ದು ಮಾಡಬೇಕು. ಚುನಾವಣಾ ಬಾಂಡ್ ಯೋಜನೆ ಮತ್ತು ಅದಕ್ಕೆ ಸಂಬಂಧಿತ ಶಾಸನಬದ್ಧ ತಿದ್ದುಪಡಿಗಳು ಜಾರಿಯಲ್ಲಿದ್ದಾಗ ಅದು ಕಾನೂನಿನ ಅನ್ವಯ ಸಿಂಧುವಾಗಿತ್ತು. ಜಾರಿಯಲ್ಲಿದ್ದ ಕಾನೂನಿನನ್ವಯ ಸಾರ್ವಜನಿಕ ಸೇವಕರು ಕ್ರಮ ಕೈಗೊಂಡಿದ್ದರೆ ಅದನ್ನು ಕ್ರಿಮಿನಲ್ ಆರೋಪದಲ್ಲಿ ನೋಡಲಾಗುವುದಿಲ್ಲ.

ಕಾಯಿದೆ ಜಾರಿಯಲ್ಲಿದ್ದಾಗ ಯಾರೇ ಕ್ರಮಕೈಗೊಂಡಿದ್ದರೂ ಅದು ನೇರವಾಗಿ ಕ್ರಿಮಿನಲ್ ಪ್ರಕ್ರಿಯೆಗೆ ನೇರ ಸಂಬಂಧ ಹೊಂದಿರದಿದ್ದರೆ ಎಫ್‌ಐಆರ್ ದಾಖಲಾಗುವುದಿಲ್ಲ. ಅರ್ಜಿದಾರರ ವಿರುದ್ಧ ಆರೋಪಿಸಿರುವ ಅಪರಾಧಗಳನ್ನು ಅನ್ವಯಿಸಲು ಯಾವುದೇ ಆರೋಪಗಳಿಲ್ಲ. ರಾಜಕೀಯ ದುರುದ್ದೇಶದಿಂದ ಅರ್ಜಿದಾರರ ವರ್ಚಸ್ಸಿಗೆ ಹಾನಿ ಮಾಡಲು ಪ್ರಕರಣ ದಾಖಲಿಸಲಾಗಿದೆ.

ಆರೋಪಿತ ಅಪರಾಧಕ್ಕೂ, ದೂರುದಾರರಿಗೂ ಯಾವುದೇ ಸಂಬಂಧ ಇಲ್ಲದಿರುವಾಗ ಸೆಕ್ಷನ್ 383/384ರ ಅಡಿ ಸುಲಿಗೆ ಆರೋಪ ಮಾಡಲಾಗದು. ಪ್ರಕರಣದಲ್ಲಿ ಯಾವುದೇ ಸಂಬಂಧ ಹೊಂದಿರದ ವ್ಯಕ್ತಿ ಸೆಕ್ಷನ್ 383ರ ಅಡಿ ದೂರನ್ನು ನಿರ್ವಹಿಸಲಾಗದು. ಇಂಥ ಮಹತ್ವದ ವಿಚಾರವನ್ನು ಪರಿಗಣಿಸಲು ವಿಫಲವಾಗಿರುವ ಮ್ಯಾಜಿಸ್ಟ್ರೇಟ್ ಅವರು ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದಾರೆ. ಈ ಕ್ರಿಯೆಯು ದೋಷಪೂರಿತವಾಗಿರುವುದರಿಂದ ಆದೇಶ ವಜಾ ಮಾಡಬೇಕು ಎಂದು ಕೋರಲಾಗಿದೆ.

2019 ರಿಂದ 2023ರ ಅವಧಿಯಲ್ಲಿ ಚುನಾವಣಾ ಬಾಂಡ್ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. 2024ರ ಫೆಬ್ರವರಿ 15 ರಂದು ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ಅಸಾಂವಿಧಾನಿಕ ಎಂದು ಘೋಷಿಸುವವರೆಗೂ ಆರ್‌ಬಿಐ ಕಾಯಿದೆ ಸೆಕ್ಷನ್ 31 (3) ಅಡಿ ಸಂಸತ್ ಜಾರಿಗೊಳಿಸಿದ್ದ ಯೋಜನೆ ಚಾಲ್ತಿಯಲ್ಲಿತ್ತು. ಹೀಗಾಗಿ, ಇದನ್ನು ಅಪರಾಧ ಎನ್ನಲಾಗದು. ಅರ್ಜಿದಾರರ ಸಾರ್ವಜನಿಕ ಸೇವಕರಾಗಿದ್ದು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಇಲ್ಲದೇ ಎಫ್‌ಐಆರ್ ಮಾಡಲು ಅನುಮತಿಸುವ ಮೂಲಕ ಮ್ಯಾಜಿಸ್ಟ್ರೇಟ್ ಅವರು ವಿವೇಚನಾರಹಿತವಾಗಿ ನಡೆದುಕೊಂಡಿದ್ದಾರೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಮುಡಾ ಕೇಸ್​ನಲ್ಲಿ ಇ.ಡಿ. ಪ್ರವೇಶ: ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಸ್​ ದಾಖಲಿಸಿದ ಕೇಂದ್ರ ತನಿಖಾ ಸಂಸ್ಥೆ - ED entry in muda case

Last Updated : Sep 30, 2024, 8:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.