Gmail Smart Reply Feature: ತನ್ನ ಜನಪ್ರಿಯ ಇಮೇಲ್ ಸೇವೆ ಜಿಮೇಲ್‌ನಲ್ಲಿ ಗೂಗಲ್ ಹೊಸ ವೈಶಿಷ್ಟ್ಯವನ್ನು ತಂದಿದೆ. ಸಂದರ್ಭಕ್ಕೆ ತಕ್ಕಂತೆ ಉತ್ತರವನ್ನು ಕಳುಹಿಸಲು ಸ್ಮಾರ್ಟ್ ರಿಪ್ಲೈ ಸೌಲಭ್ಯ ಸೇರಿಸಲಾಗಿದೆ. ಇದರ ಸಹಾಯದಿಂದ ಉತ್ತರವನ್ನು ಕಳುಹಿಸುವುದು ಸುಲಭವಾಗುತ್ತದೆ.
ಸ್ಮಾರ್ಟ್ ರಿಪ್ಲೈ ಎಂದರೇನು?:
- Gmail ಸಾಮಾನ್ಯವಾಗಿ ಮೇಲ್‌ಗಳಿಗೆ ಪ್ರತ್ಯುತ್ತರಿಸಲು ಕೆಲವು ಸೂಚನೆಗಳನ್ನು ಪ್ರದರ್ಶಿಸುತ್ತದೆ.
- ಈ ವೈಶಿಷ್ಟ್ಯವನ್ನು 2017ರಲ್ಲಿ ಪರಿಚಯಿಸಲಾಗಿದೆ.
- ಆದರೆ ಈಗ ಅದಕ್ಕೆ AI ಸೌಲಭ್ಯವನ್ನು ಸೇರಿಸಿದೆ.
- ಇದು ನಿಮ್ಮ ಉತ್ತರವನ್ನು ಹೆಚ್ಚು ಸ್ಮಾರ್ಟ್ ಆಗಿ ಮಾಡುತ್ತದೆ.
ಬಳಸುವುದು ಹೇಗೆ?:
- ನೀವು ರಿಪ್ಲೈ ನೀಡಬಯಸುವ ಮೇಲ್‌ಗಳನ್ನು ಓಪನ್ ಮಾಡಿ ರಿಪ್ಲೈ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ AI ತಂತ್ರಜ್ಞಾನವು ನಿಮಗಾಗಿ ಹಲವು ಸಲಹೆಗಳನ್ನು ನೀಡುತ್ತದೆ.
- ಇದು ಮೇಲ್‌ನಲ್ಲಿರುವ ಎಲ್ಲ ಮಾಹಿತಿಯನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಪ್ರತ್ಯುತ್ತರಗಳನ್ನು ಸಿದ್ಧಪಡಿಸುತ್ತದೆ.
- ಸಮಂಜಸವಾದ ಸ್ಮಾರ್ಟ್, ಸರಿಯಾದ ತೀರ್ಮಾನದೊಂದಿಗೆ ಉತ್ತರಗಳನ್ನು ರಚಿಸುತ್ತದೆ ಮತ್ತು ಅವುಗಳನ್ನು ನಿಮಗೆ ತೋರಿಸುತ್ತದೆ.
- ನೀವು ಇಷ್ಟವಾದುದನ್ನು ಆಯ್ಕೆ ಮಾಡಬಹುದು ಮತ್ತು ಅವುಗಳನ್ನು ಪರಿಶೀಲಿಸಬಹುದು.
- ಒಂದು ವೇಳೆ ಏನಾದ್ರೂ ದೋಷ ಕಂಡುಬಂದರೆ, ತಿದ್ದಿದ ಬಳಿಕ ಕಳುಹಿಸಬಹುದಾಗಿದೆ.
ಹೊಸ ವೈಶಿಷ್ಟ್ಯ ಯಾವಾಗ ಲಭ್ಯ?:
- ಈ ವೈಶಿಷ್ಟ್ಯವು Android ಮತ್ತು iOS ಅನ್ನು ಸಪೋರ್ಟ್ ಮಾಡುತ್ತದೆ.
- ಪ್ರಸ್ತುತ, Google One AI ಪ್ರೀಮಿಯಂ ಜೊತೆಗೆ ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಿದೆ.
- ಶೀಘ್ರದಲ್ಲೇ ಎಲ್ಲ ಜಿಮೇಲ್ ಬಳಕೆದಾರರಿಗೆ ದೊರೆಯಲಿದೆ.
ಇದನ್ನೂ ಓದಿ: ಮಕ್ಕಳೆದುರು ಕುಳಿತು ಜೋರಾಗಿ ಪುಸ್ತಕ ಓದಿ: ಪೋಷಕರಿಗೆ ಸಂಶೋಧಕರ ಸಲಹೆ - Read Aloud With Young Kids