ಬೆಂಗಳೂರು: ಮಾಜಿ ಸಚಿವರೊಬ್ಬರ ರಾಸಲೀಲೆ ಪ್ರಕರಣ ಸಂಬಂಧ ಸಿಡಿಯಲ್ಲಿನ ಯುವತಿ ವಿಡಿಯೋ ಬಿಟ್ಟ ಬೆನ್ನಲ್ಲೇ ಆಕೆಯ ಕುಟುಂಬಸ್ಥರು ಎಸ್ಐಟಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಂಟರ್ನಲ್ಲಿ ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಎಂಬ ಮಾಹಿತಿ ಲಭ್ಯವಾಗಿದೆ. ಯುವತಿ ಪೋಷಕರು ಹಾಗೂ ಸಹೋದರರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗುತ್ತಿದೆ. ಮಗಳ ಇತ್ತೀಚಿನ ವಿಡಿಯೋಗಳ ಬಗ್ಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.. ಈ ವಿಡಿಯೋ ನಿಮ್ಮ ಮಗಳದ್ದೇನಾ ? ನಿಮ್ಮ ಮಗಳು ನಿಮಗೆ ಕೊನೆಯ ಬಾರಿ ಯಾವಾಗ ಕಾಲ್ ಮಾಡಿದ್ದು ? ನಿನ್ನೆ ಹೊರಬಂದ ಆಡಿಯೋ ನಿಮ್ಮ ಮತ್ತು ನಿಮ್ಮ ಮಗಳದ್ದೇನಾ ? ಯಾವಾಗ ನೀವು ಮಾತನಾಡಿದ್ದು ? ನಿಮಗೆ ರಕ್ಷಣೆ ಬಗ್ಗೆ ನಿಮ್ಮ ಮಗಳು ಮಾತನಾಡಿದ್ದಾರೆ ? ಪೊಲೀಸ್ ರಕ್ಷಣೆ ಬೇಕು ಎಂದಾದಲ್ಲಿ ಮನವಿ ಕೊಡಿ, ಸೂಕ್ತ ರಕ್ಷಣೆ ಕೊಡ್ತೀವಿ ಎಂದು ಎಸ್ಐಟಿ ಪೊಲೀಸರು ಯುವತಿಯ ಪೋಷಕರಿಗೆ ಅಭಯ ನೀಡಿದ್ದಾರೆ ಎನ್ನಲಾಗಿದೆ.
ಕೊಲೆ ಬೆದರಿಕೆ ಇರುವ ಹಿನ್ನೆಲೆ ವಿಚಾರಣೆ ಮುಗಿದ ಬಳಿಕ ಆಡುಗೋಡಿ ಟೆಕ್ನಿಕಲ್ ಸೆಂಟರ್ನಲ್ಲಿ ಯುವತಿ ಪೋಷಕರು ಇರಲು ವ್ಯವಸ್ಥೆ ಮಾಡಲಾಗಿದೆ. ನಾಲ್ಕನೇ ಬಾರಿ ಯುವತಿ ಮಾಡಿದ ವಿಡಿಯೋದಲ್ಲಿ ನನ್ನ ಕುಟುಂಬಸ್ಥರು ಸುರಕ್ಷಿತರಾಗಿದ್ದರೆ ಹಾಗೂ ಬೆಂಗಳೂರಿನಲ್ಲಿ ಇದ್ದರೆ ಮಾತ್ರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಳು. ಈ ಹಿನ್ನೆಲೆ ಎಸ್ಐಟಿ ಅಧಿಕಾರಿಗಳು ಯುವತಿ ಕುಟುಂಬಸ್ಥರನ್ನು ಕರೆಸಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.