ಬೆಂಗಳೂರು: ಪೋಷಕರು ಶಾಪಿಂಗಿಗೆ ಕರೆದುಕೊಂಡು ಹೊಗದಿದ್ದಕ್ಕೆ ಕೋಪಿಸಿಕೊಂಡ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶನಿವಾರ ಸಂಜೆ ಚಾಮರಾಜಪೇಟೆಯಲ್ಲಿ ನಡೆದಿದೆ. ವೈಶಾಲಿ ನೇಣಿಗೆ ಶರಣಾದ (11) ಬಾಲಕಿ.
ಏರಿಯಾದಲ್ಲಿನ ಹಬ್ಬದ ಹಿನ್ನೆಲೆ ಪೋಷಕರು 2 ದಿನಗಳ ಹಿಂದೆ ವೈಶಾಲಿಗೆ ಬಟ್ಟೆ ಕೊಡಿಸಿದ್ದರು. ಹೀಗಾಗಿ ಶನಿವಾರ ಆಕೆಯನ್ನು ಬಿಟ್ಟು ಉಳಿದಿಬ್ಬರು ಮಕ್ಕಳಿಗೆ ಬಟ್ಟೆ ಕೊಡಿಸಲು ಮುಂದಾಗಿದ್ದರು. ಆದರೆ, ತಾನು ಸಹ ಬರುವುದಾಗಿ ವೈಶಾಲಿ ಹಠ ಮಾಡಿದ್ದಳಂತೆ. ಶನಿವಾರ ಸಂಜೆ ಆಕೆಯನ್ನು ಮನೆಯಲ್ಲೇ ಬಿಟ್ಟು ಇನ್ನಿಬ್ಬರು ಮಕ್ಕಳ ಜೊತೆ ಬಟ್ಟೆ ಖರೀದಿಗೆ ಪೋಷಕರು ತೆರಳಿದ್ದರು.
ಇದರಿಂದ ಬೇಸರಗೊಂಡ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪೋಷಕರು ನೀಡಿದ ದೂರಿನನ್ವಯ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಸದ್ಯ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಈಡೇರದ ಬುಲೆಟ್ ಬೈಕ್ ಆಸೆ.. ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ತಲೆ ಬೋಳಿಸಿ ವಿಚ್ಛೇದನ ನೀಡಿದ ಪತಿ