ETV Bharat / state

ಕಾಲೇಜುಗಳಲ್ಲಿ ಕ್ಲಸ್ಟರ್ ಕೇಸ್‌ಗಳು, ಕಂಟೇನ್ಮೆಂಟ್ ಝೋನ್​ಗಳನ್ನು ನಿರ್ಮಿಸಿ ಕೋವಿಡ್ ನಿಯಂತ್ರಣ : ಗೌರವ್ ಗುಪ್ತಾ - ಗಣೇಶ ಹಬ್ಬ ಆಚರಣೆ

ಮುಖ್ಯಮಂತ್ರಿ ನೇತೃತ್ವದಲ್ಲಿ ಈಗಾಗಲೇ ಒಂದು ಸುತ್ತಿನ ಸಭೆ ನಡೆದಿದೆ. ಕೋವಿಡ್ ಯಾವಾಗ ಬೇಕಾದ್ರೂ ಉಲ್ಬಣವಾಗಬಹುದು. ಮುನ್ನೆಚ್ಚರಿಕಾ ಕ್ರಮ ಅವಶ್ಯಕತೆ ಇದೆ..

gaurav guptagaurav gupta
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ
author img

By

Published : Sep 5, 2021, 3:26 PM IST

ಬೆಂಗಳೂರು : ಬೆಂಗಳೂರಿನ ಕಾಲೇಜುಗಳಲ್ಲಿ ಹೆಚ್ಚು ಕೋವಿಡ್​ ಪ್ರಕರಣಗಳು ಕಂಡು ಬಂದಿವೆ. ಈ ಹಿನ್ನೆಲೆ ಬಿಬಿಎಂಪಿ ಕಂಟೇನ್​ಮೆಂಟ್​ ಝೋನ್​ಗಳನ್ನು ರಚಿಸಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

ಶಿಕ್ಷಕರ ದಿನಾಚರಣೆ ಅಂಗವಾಗಿ ನಗರದ ಟೌನ್ ಹಾಲ್‌ನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ನಾಗೇಶ್, ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತರು ಗೌರವ್ ಗುಪ್ತಾ ಚಾಲನೆ ನೀಡಿದರು.

ಸಮಾರಂಭದ ಬಳಿಕ ನಗರದಲ್ಲಿ ಗಣೇಶೋತ್ಸವ ಹಾಗೂ ಹೆಚ್ಚುತ್ತಿರುವ ಕೋವಿಡ್ ಸಂಖ್ಯೆ ಬಗ್ಗೆ ಮಾತನಾಡಿದ ಬಿಬಿಎಂಪಿ ಚೀಫ್ ಕಮಿಷನರ್ ಗೌರವ್ ಗುಪ್ತಾ, ಮುಖ್ಯಮಂತ್ರಿ ನೇತೃತ್ವದಲ್ಲಿ ಈಗಾಗಲೇ ಒಂದು ಸುತ್ತಿನ ಸಭೆ ನಡೆದಿದೆ. ಕೋವಿಡ್ ಯಾವಾಗ ಬೇಕಾದ್ರೂ ಉಲ್ಬಣವಾಗಬಹುದು. ಮುನ್ನೆಚ್ಚರಿಕಾ ಕ್ರಮ ಅವಶ್ಯಕತೆ ಇದೆ ಎಂದ್ರು.

ಗಣೇಶ ವಿಸರ್ಜನೆಗೆ ಮೊಬೈಲ್ ಟ್ಯಾಂಕರ್ : ಯಾವುದೇ ಧರ್ಮದವರಾದರೂ ಸರಳವಾಗಿ ಆಚರಣೆ ಮಾಡಬೇಕು. ಮನೆ ಒಳಗೆ ಗಣೇಶ ಪ್ರತಿಷ್ಠಾಪನೆ ಮಾಡಬೇಕು ಎಂದರು. ದೇವಸ್ಥಾನಗಳಲ್ಲಿ ಗಣೇಶ ಮೂರ್ತಿ ಕೂರಿಸಲು ಸರ್ಕಾರ ಅನುಮತಿ ನೀಡಿದೆ‌‌, ಸಾರ್ವಜನಿಕ ಸ್ಥಳಗಳ ನಿರ್ಬಂಧ ಹಾಕಲಾಗಿದೆ. ಮನೆಗಳಲ್ಲಿ ಕೂರಿಸುವ ಗಣೇಶ ವಿಸರ್ಜನೆಗೆ ಮೊಬೈಲ್ ಟ್ಯಾಂಕರ್​ಗಳಲ್ಲಿ ವಿಸರ್ಜನೆ ವ್ಯವಸ್ಥೆ ಮಾಡಲಾಗಿದೆ. ಈ ನಿಬಂಧನೆಗಳನ್ನು ಪುನರ್ ಪರಿಶೀಲಿಸುವ ವಿಚಾರವಾಗಿ ಇವತ್ತು ಮತ್ತೊಂದು ಸುತ್ತಿನ ಸಭೆ ಇದೆ ಎಂದರು.‌

ಎರಡು ಕಾಲೇಜುಗಳಲ್ಲಿ ಕ್ಲಸ್ಟರ್ ಕೇಸ್‌ಗಳು : ಕಾಲೇಜುಗಳಲ್ಲಿ ದಾಖಲಾಗುತ್ತಿರುವ ಕೋವಿಡ್ ಕೇಸ್‌ಗಳ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಎರಡು ಕಾಲೇಜುಗಳಲ್ಲಿ ಕ್ಲಸ್ಟರ್ ಕೇಸ್‌ಗಳು ದಾಖಲಾಗಿವೆ. ದಾಸರಹಳ್ಳಿಯ ಹಾಗೂ ಮಹಾದೇವಪುರ ನರ್ಸಿಂಗ್ ಕಾಲೇಜ್​ನಲ್ಲಿ ಅತೀ ಹೆಚ್ಚು ಪ್ರಕರಣ ಕಂಡು ಬಂದಿವೆ. ಕಂಟೇನ್ಮೆಂಟ್ ಝೋನ್​ಗಳನ್ನು ನಿರ್ಮಿಸಿ ಕೋವಿಡ್ ಕಂಟ್ರೋಲ್​ಗೆ ಶ್ರಮಿಸಲಾಗುತ್ತಿದೆ ಎಂದ್ರು. ಹೋಮ್ ಗಾರ್ಡ್​, ಮಾರ್ಷಲ್, ಪೊಲೀಸರು ಸಮಯೋಚಿತವಾಗಿ ಕೆಲಸ ನಿರ್ವಹಣೆ ಮಾಡ್ತಿದ್ದಾರೆ ಎಂದರು.

ಇನ್ನು, 6-8ನೇ ತರಗತಿಗಳು ನಾಳೆಯಿಂದ ಆರಂಭವಾಗುತ್ತಿವೆ. ರಾಜ್ಯಕ್ಕೆ ಹೋಲಿಸಿದ್ರೆ ಬಿಬಿಎಂಪಿ ಶಾಲೆಗಳ ಸಂಖ್ಯೆ ಕಡಿಮೆ ಇದೆ. ಶಿಕ್ಷಣ ಇಲಾಖೆ ಯಾವೆಲ್ಲ ಆದೇಶಗಳನ್ನು ನೀಡುತ್ತೋ ಅದೇ ನಿಯಮಗಳನ್ನು ನಾವು ಬಿಬಿಎಂಪಿ ಶಾಲೆಗಳಲ್ಲಿ ಅಳವಡಿಕೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.