ETV Bharat / state

ಹಬ್ಬದ ಎಫೆಕ್ಟ್.. ನಗರದಲ್ಲಿ ಎಲ್ಲೆಂದರಲ್ಲಿ ಕಸ.. ವಿಲೇವಾರಿಗೆ ಮಳೆ ಅಡ್ಡಿ.. - ಆಯುಧಪೂಜೆ

ಪಾಲಿಕೆ ಸಿಬ್ಬಂದಿ ಮಳೆಯಲ್ಲೇ ಭೇಟಿ ನೀಡಿ ತ್ಯಾಜ್ಯ ತೆರವುಗೊಳಿಸುತ್ತಿದ್ದಾರೆ. ಹಲವೆಡೆ ತ್ಯಾಜ್ಯವನ್ನು ಕಾಂಪ್ಯಾಕ್ಟರ್​ನಲ್ಲಿ ತುಂಬಿ ನಿಲ್ಲಿಸಲಾಗಿದೆ. ಆದರೆ, ಲ್ಯಾಂಡ್‌ಫಿಲ್‌ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ತೆಗೆದುಕೊಂಡು ಹೋಗಲು ಮಳೆ ಅಡ್ಡಿಯಾಗಿದೆ. ಭಾನುವಾರದ ಹೊತ್ತಿಗೆ ತ್ಯಾಜ್ಯ ವಿಲೇವಾರಿ ಆಗಲಿದೆ..

ಹಬ್ಬದ ಎಫೆಕ್ಟ್
ಹಬ್ಬದ ಎಫೆಕ್ಟ್
author img

By

Published : Oct 16, 2021, 10:50 PM IST

ಬೆಂಗಳೂರು : ಆಯುಧ ಪೂಜೆ ಹಾಗೂ ವಿಜಯ ದಶಮಿ ಹಿನ್ನೆಲೆ ನಗರದಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚು ತ್ಯಾಜ್ಯ ಸೃಷ್ಟಿಯಾಗಿದೆ. ಈ ಮಧ್ಯೆ ಮಳೆ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ತಲೆದೋರಿದೆ.

ತ್ಯಾಜ್ಯ ವಿಲೇವಾರಿ ಪಾಲಿಕೆಗೂ ತಲೆನೋವಾಗಿ ಪರಿಣಮಿಸಿದೆ. ಹಬ್ಬದ ಹಿನ್ನೆಲೆ ಸುತ್ತಲಿನ ಗ್ರಾಮಾಂತರ ಪ್ರದೇಶಗಳಿಂದ ಬಾಳೆಕಂದು, ಮಾವನ ಎಲೆ, ಬೂದು ಕುಂಬಳಕಾಯಿ ಸಾಕಷ್ಟು ಪ್ರಮಾಣದಲ್ಲಿ ಬಂದಿತ್ತು. ಶುಕ್ರವಾರ ಸಂಜೆಯಾಗುತ್ತಿದ್ದಂತೆ ರೈತರು, ವ್ಯಾಪಾರಿಗಳು ತಂದಿರುವ ವಸ್ತುಗಳನ್ನು ಮಾರಾಟದ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದರು.

ಕಸ ವಿಲೇವಾರಿಗೆ ಮಳೆ ಅಡ್ಡಿ

ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತ್ಯಾಜ್ಯ ತೆರವಿಗೆ ಅಡ್ಡಿಯಾಗಿದೆ. ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರಂ, ಮಡಿವಾಳ, ಕೆ.ಆರ್‌.ಪುರ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಹೆಚ್ಚಾದ ತ್ಯಾಜ್ಯ ಕಂಡು ಬಂದಿದೆ.

ಪಾಲಿಕೆ ಅಧಿಕಾರಿಗಳ ಸ್ಪಷ್ಟನೆ

ಪಾಲಿಕೆ ಸಿಬ್ಬಂದಿ ಮಳೆಯಲ್ಲೇ ಭೇಟಿ ನೀಡಿ ತ್ಯಾಜ್ಯ ತೆರವುಗೊಳಿಸುತ್ತಿದ್ದಾರೆ. ಹಲವೆಡೆ ತ್ಯಾಜ್ಯವನ್ನು ಕಾಂಪ್ಯಾಕ್ಟರ್​ನಲ್ಲಿ ತುಂಬಿ ನಿಲ್ಲಿಸಲಾಗಿದೆ. ಆದರೆ, ಲ್ಯಾಂಡ್‌ಫಿಲ್‌ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ತೆಗೆದುಕೊಂಡು ಹೋಗಲು ಮಳೆ ಅಡ್ಡಿಯಾಗಿದೆ. ಭಾನುವಾರದ ಹೊತ್ತಿಗೆ ತ್ಯಾಜ್ಯ ವಿಲೇವಾರಿ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಯುಧ ಪೂಜೆ ಹಾಗೂ ವಿಜಯದಶಮಿ ಹಿನ್ನೆಲೆ ಎರಡೂ ದಿನಗಳಲ್ಲಿ ಸುಮಾರು 6,200 ರಿಂದ 6,500 ಟನ್‌ ತ್ಯಾಜ್ಯ ಸೃಷ್ಟಿಯಾಗಿದೆ. ಇವುಗಳ ತೆರವಿಗೆ ನಗರದಾದ್ಯಂತ ಅಂದಾಜು 591 ಕಾಂಪ್ಯಾಕ್ಟರ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.