ETV Bharat / state

ನಡೆಯುತ್ತಲೇ ಊರು ಸೇರುವ ಯತ್ನದಲ್ಲಿ ಅಸುನೀಗಿದ ಗಂಗಮ್ಮ: ಪರಿಹಾರಕ್ಕೆ ಸಿಎಂ ಸೂಚನೆ - sindanuru

ಲಾಕ್​ಡೌನ್​ ಘೋಷಣೆಯಾದ ಬಳಿಕ ತಮ್ಮ ತಾಯ್ನಾಡಿಗೆ ತೆರಳಲು ಕೂಲಿ ಕಾರ್ಮಿಕರು ಪರದಾಡುವಂತಾಗಿತ್ತು. ಕೆಲವರು ಎಲ್ಲಿಯೂ ತೆರಳಲಾಗದೇ ಮನೆಯಿಂದ ಹೊರಗೆ ಉಳಿದಿದ್ದಾರೆ. ಇನ್ನು ಲಾಕ್​ಡೌನ್​ ವೇಳೆ ಕಾಲ್ನಡಿಯಲ್ಲಿಯೇ ಹುಟ್ಟೂರು ಸೇರುವ ಹಂಬಲದಲ್ಲಿ ಹೊರಟಿದ್ದ ಗಂಗಮ್ಮ ಎಂಬುವರು ದಾರಿ ಮಧ್ಯದಲ್ಲೇ ಅಸುನೀಗಿದ್ದಾರೆ.

Gangamma who died in trying to reach his native by walk: CM  promise to remedy
ನಡೆಯುತ್ತಲೇ ಊರು ಸೇರುವ ಯತ್ನದಲ್ಲಿ ಅಸುನೀಗಿದ ಗಂಗಮ್ಮ: ಪರಿಹಾರಕ್ಕೆ ಸಿಎಂ ಸೂಚನೆ
author img

By

Published : Apr 7, 2020, 11:08 PM IST

ಬೆಂಗಳೂರು: ಲಾಕ್​ಡೌನ್ ಸಂದರ್ಭದಲ್ಲಿ ಹುಟ್ಟೂರಿಗೆ ನಡೆದುಕೊಂಡೇ ಹೊರಟ ಗಂಗಮ್ಮ ಎಂಬ ಸಿಂಧನೂರಿನ ಮಹಿಳೆ ಮಾರ್ಗ ಮಧ್ಯದಲ್ಲಿ ಅಸುನೀಗಿರುವುದು ಅತ್ಯಂತ ದುರದೃಷ್ಟಕರ ಹಾಗೂ ನೋವಿನ ಸಂಗತಿ. ಈ ಬಗ್ಗೆ ಪರಿಶೀಲಿಸಿ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

cm bsy tweet
ಸಿಎಂ ಬಿ.ಎಸ್​​​​​.ಯಡಿಯೂರಪ್ಪ ಟ್ವೀಟ್​​​

ಇದು ಸಂಕಷ್ಟದ ಸಮಯ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 2 ಸಾವಿರ ರೂಪಾಯಿ ನೆರವು ನೀಡಲಾಗಿದೆ. ಇದಲ್ಲದೆ, ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರ ಒದಗಿಸಲು ದಾಸೋಹ ಸಹಾಯವಾಣಿ 155214 ಸಂಖ್ಯೆ ಸ್ಥಾಪಿಸಲಾಗಿದೆ. ಕಾರ್ಮಿಕರಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಯಾರೂ ಹತಾಶರಾಗಬೇಡಿ, ನಿಮ್ಮ ನೆರವಿಗೆ ಸರ್ಕಾರವಿದೆ. ಸರ್ಕಾರದ ಸೂಚನೆಗಳನ್ನು ಪಾಲಿಸಿ. ತೊಂದರೆಗಳಿದ್ದಲ್ಲಿ ಸಹಾಯವಾಣಿಯನ್ನು ಸಂಪರ್ಕಿಸಿ ಎಂದು ಸಿಎಂ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.