ETV Bharat / state

ವಾಮಮಾರ್ಗದಲ್ಲಿ ವಿದೇಶಿಯರು ಸೇರಿ ಆರೋಪಿಗಳಿಗೂ ಪಾಸ್ ಪೋರ್ಟ್: ಅಕ್ರಮ ಜಾಲ ಪತ್ತೆ ಹಚ್ಚಿದ ಖಾಕಿ

ಅಪರಾಧ ಹಿನ್ನೆಲೆ ಇರುವ ಆರೋಪಿಗಳು ಹಾಗೂ ವಿದೇಶಿಯರಿಗೆ ಅಕ್ರಮವಾಗಿ ಪಾಸ್ ಪೋರ್ಟ್ ಮಾಡುತ್ತಿದ್ದ ಜಾಲವನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಐವರು ವಿದೇಶಿಯರು ಸೇರಿ‌ ಒಟ್ಟು 9 ಮಂದಿ‌ ಆರೋಪಿಗಳನ್ನು ಬಂಧಿಸಲಾಗಿದೆ.

ಅಕ್ರಮ ಜಾಲ ಪತ್ತೆ ಹಚ್ಚಿದ ಖಾಕಿ
ಅಕ್ರಮ ಜಾಲ ಪತ್ತೆ ಹಚ್ಚಿದ ಖಾಕಿ
author img

By

Published : Nov 9, 2022, 4:00 PM IST

ಬೆಂಗಳೂರು: ಆಧಾರ್ ಕಾರ್ಡ್, ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ (ಟಿಸಿ) ಸೇರಿದಂತೆ ಇನ್ನಿತರ ದಾಖಲಾತಿಗಳನ್ನ ನಕಲಿಯಾಗಿ ಸೃಷ್ಟಿಸಿ, ಅಪರಾಧ ಹಿನ್ನೆಲೆ ಇರುವ ಆರೋಪಿಗಳು ಹಾಗೂ ವಿದೇಶಿಯರಿಗೆ ಅಕ್ರಮವಾಗಿ ಪಾಸ್ ಪೋರ್ಟ್ ಮಾಡುತ್ತಿದ್ದ ಜಾಲವನ್ನ ಬೆಂಗಳೂರು ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅಕ್ರಮ ಜಾಲದಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದ ಐವರು ವಿದೇಶಿಯರು ಸೇರಿ‌ ಒಟ್ಟು 9 ಮಂದಿ‌ ಆರೋಪಿಗಳನ್ನು ಬಂಧಿಸಲಾಗಿದೆ. ಅಕ್ರಮ ಮಾರ್ಗದಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದ, ಶ್ರೀಲಂಕಾ ಪ್ರಜೆಗಳಾದ ಸೆಲ್ವಿ, ರವಿಕುಮಾರ್, ಮಣಿವೇಲು, ಶೀಜು, ವಿಶಾಲ್ ನಾರಾಯಣ್, ಅಮೀನ್ ಸೇಟ್ ಬಂಧಿತ ಆರೋಪಿಗಳಾಗಿದ್ದಾರೆ.

ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ನಾಲ್ವರು ಆರೋಪಿಗಳ ಬಂಧನ: ಇವರಿಗೆ ಪಾಸ್​​ಪೋರ್ಟ್ ಮಾಡಿಕೊಡುತ್ತಿದ್ದ ಬೆಂಗಳೂರು ಹಾಗೂ ಮಂಗಳೂರು ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖಾ ದೃಷ್ಟಿಯಿಂದ ಈ ಹಂತದಲ್ಲಿ ಆರೋಪಿಗಳ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಆರೋಪಿಗಳ ಪೈಕಿ ಪ್ರಕರಣದ ಎರಡನೇ ಆರೋಪಿ ಪಾಸ್​​​ಪೋರ್ಟ್ ಬ್ರೋಕರ್ ಆಗಿದ್ದಾರೆ. ಭಾರತಿನಗರ, ಪುಲಕೇಶಿನಗರ, ಜಯನಗರ ಹಾಗೂ ಬೆಂಗಳೂರು ಗ್ರಾಮಾಂತರ‌ ಪೊಲೀಸ್ ಠಾಣೆಗಳಲ್ಲಿ‌ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾನೆ‌‌‌.

ಇದನ್ನೂ ಓದಿ: ಬೆಂಗಳೂರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸೈಟ್‌ ಮಾರುತ್ತಿದ್ದ ಜಾಲ ಪತ್ತೆ: ಎಂಟು ಆರೋಪಿಗಳ ಬಂಧನ

ಪಾಸ್ ಪೋರ್ಟ್, ಚಾಲನ ಪರವಾನಗಿ ಸೇರಿದಂತೆ ನಕಲಿ ದಾಖಲಾತಿ ಇರುವವರಿಗೆ ಗಾಳ ಹಾಕುತ್ತಿದ್ದ ಆರೋಪಿಗಳು‌ ಡ್ಯಾಕುಮೆಂಟ್ಸ್ ಇಲ್ಲದಿದ್ದರೂ ಪಾಸ್ ಪೋರ್ಟ್ ಮಾಡಿಸಿಕೊಡುವುದಾಗಿ ಹೇಳಿ ಬೆಂಗಳೂರಿನಲ್ಲಿ ಆಧಾರ್ ಕಾರ್ಡ್, ಅಂಕಪಟ್ಟಿ, ವಿಳಾಸಪತ್ರ ಸೇರಿದಂತೆ ಎಲ್ಲ ದಾಖಲಾತಿಗಳನ್ನು ಫೋರ್ಜರಿ ಮಾಡುತ್ತಿದ್ದರು. ಅಲ್ಲದೇ ಅವರಿಂದ ಸಾವಿರಾರು ರೂಪಾಯಿ ಹಣ ಪಡೆದು ಪಾಸ್​​​ಪೋರ್ಟ್ ಕೇಂದ್ರಕ್ಕೆ ಹೋಗಿ ದಾಖಲಾತಿಗಳನ್ನ ಅಸಲಿ ಎಂಬಂತೆ ಬಿಂಬಿಸುತ್ತಿದ್ದರು.

ಇಬ್ಬರು ಪೊಲೀಸರು ಸಸ್ಪೆಂಡ್​​: ಪೊಲೀಸ್​​ ವೇರಿಫಿಕೇಷನ್ ವೇಳೆಯಲ್ಲಿಯೂ ನಕಲಿ ರೆಂಟಲ್ ಅಗ್ರಿಮೆಂಟ್ ಸೃಷ್ಟಿಸಿ, ಅಪರಿಚಿತರ ಮನೆಯನ್ನೇ ತಮ್ಮ ಮನೆಯೆಂದು ಸುಳ್ಳು ಹೇಳಿ ಯಾಮಾರಿಸುತ್ತಿದ್ದರು. ಸೂಕ್ತ ತಪಾಸಣೆ ನಡೆಸದೇ ನಿರ್ಲಕ್ಷ್ಯ ತೋರಿದ್ದ ಇಬ್ಬರು ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ವಿದೇಶಿಯರಿಗೆ ಸುಲಭವಾಗಿ ಸಿಗುತಿತ್ತು ಪಾಸ್​ಪೋರ್ಟ್: ವ್ಯವಸ್ಥಿತ ಜಾಲದಿಂದ ಶ್ರೀಲಂಕಾ ಪ್ರಜೆಗಳನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು ಬೆಂಗಳೂರಿಗೆ ಬಂದರೆ ಸುಲಭವಾಗಿ ಪಾಸ್ ಪೋರ್ಟ್ ಮಾಡಿಸಿಕೊಡುವುದಾಗಿ ಹೇಳಿ ಕರೆಯಿಸಿಕೊಂಡಿದ್ದರು. ಶ್ರೀಲಂಕಾದಲ್ಲಿನ ರಾಜಕೀಯ ಅಸ್ಥಿರತೆ ಹಿನ್ನೆಲೆ ವಾಮಾಮಾರ್ಗದಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಒಮ್ಮೆ ಶ್ರೀಲಂಕಾಕ್ಕೆ ಹೋಗಿ ನಂತರ ಸೌದಿ ಅರೆಬೀಯಾಗೆ ಹೋಗಲು ಬಂಧಿತ ವಿದೇಶಿ ಪ್ರಜೆಗಳು ಸಿದ್ಧತೆ ನಡೆಸಿಕೊಂಡಿದ್ದರು.

ಕೊಲೆ‌, ದರೋಡೆ ಆರೋಪಿಗಳಿಗೂ ಪಾಸ್ ಪೋರ್ಟ್: ಕೇವಲ ವಿದೇಶಿಯರಿಗೆ ಮಾತ್ರವಲ್ಲದೆ ಅಪರಾಧ ಹಿನ್ನೆಲೆ ಇರುವ ಕುಖ್ಯಾತ ಕ್ರಿಮಿನಲ್​ಗಳಿಗೂ ವೀಸಾ ಮಾಡಿಸಿಕೊಳ್ಳುತ್ತಿದ್ದ ಆರೋಪಿಗಳು ಚಿಕ್ಕಮಗಳೂರು ಮೂಲದ 36 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕಳ್ಳನಿಗೂ ಪಾಸ್ ಪೋರ್ಟ್ ಮಾಡಿಸಿದ್ದರು. ಜೊತೆಗೆ ಕೊಲೆ, ದರೋಡೆ ಪ್ರಕರಣದ ಮೂವರು ಆರೋಪಿಗಳು ಸಹ ವಾಮಾಮಾರ್ಗವಾಗಿ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದರು. ಇದುವರೆಗೂ 50ಕ್ಕಿಂತ ಹೆಚ್ಚು ಪಾಸ್ ಪೋರ್ಟ್ ಮಾಡಿಸಿಕೊಂಡಿರುವ ಮಾಹಿತಿ ದೊರೆತಿದ್ದು, ತನಿಖೆಯನ್ನು ತೀವ್ರಗೊಳಿಸಿರುವುದಾಗಿ ಆಯುಕ್ತರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.