ನೆಲಮಂಗಲ(ಬೆಂಗಳೂರು ಗ್ರಾಮಾಂತರ): ಓಲಾಗೆ ಕಾರುಗಳನ್ನು ಬುಕ್ ಮಾಡಿ ಸಿಟಿ ಔಟ್ ಸೈಡ್‌ಗೆ ಕರೆದುಕೊಂಡು ಬಂದು ಚಾಲಕನಿಗೆ ಬೆದರಿಸಿ ಕಾರು ಕದ್ದು, ಫೈನಾನ್ಸ್ ಕಂಪನಿ ಸೀಜ್ ವಾಹನಗಳು ಅಂಥ ಹೇಳಿ ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ವೊಂದನ್ನು ಮಾದನಾಯಕನಹಳ್ಳಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರು ಕದಿಯುವ ಗ್ಯಾಂಗ್ನ ಆರೋಪಿಗಳಾದ ಸಂತೋಷ್, ಭರತ್ ರಾವ್, ಗೌಡ, ವಿಷ್ಣು, ಜ್ಞಾನೇಶ್ ಬಂಧಿತರು. ಬೆಂಗಳೂರಿನ ವಿವಿಧೆಡೆ ವಾಸಿಸುತ್ತಿದ್ದ ಈ ಗ್ಯಾಂಗ್ ಈ ಹಿಂದೆ ಅಪರಾಧ ಕೃತ್ಯವೊಂದರಲ್ಲಿ ಜೈಲಿನಲ್ಲಿ ಪರಿಚಯವಾದ ಬಳಿಕ ಮತ್ತೆ ದರೋಡೆಗೆ ಇಳಿದಿದ್ದರು.
ಸಿನಿಮಿಯಾ ಸ್ಟೈಲ್ ದರೋಡೆ: ಸಿನಿಮಿಯಾ ಸ್ಟೈಲ್‌ನಲ್ಲಿ ದರೋಡೆ ಮಾಡಲು ಪ್ಲಾನ್ ಮಾಡಿ ಎಂಜಿ ರೋಡ್‌ನಿಂದ ಓಲಾ ಬುಕ್ ಮಾಡಿದ್ದಾರೆ. ಬುಕ್ಕಿಂಗ್ ಆದ ಬಳಿಕ ಚೇತನ್ ಎಂಬುವರನ್ನು ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಪಿಕ್ ಅಪ್ ಮಾಡಿದ ಬಳಿಕ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಅಂಚೆ ಪಾಳ್ಯಗೆ ಕರೆದುಕೊಂಡು ಬಂದಿದ್ದಾರೆ. ಇಲ್ಲಿಗೆ ಬರುತ್ತಿದ್ದಂತೆ ಚಾಲಕ ಚೇತನ್‌ಗೆ ಹಿಂಬದಿಯಿಂದ ಕುತ್ತಿಗೆ ಬಿಗಿದು ಕಾರು ನಿಲ್ಲಿಸುವಂತೆ ಹೇಳಿ ಆತನ ಕೈಕಾಲು ಕಟ್ಟಿ ಹಾಕಿ ಹಿಂಬದಿ ಸೀಟಿಗೆ ಹಾಕಿದ್ದಾರೆ. ನಂತರ ರಾಹುತ್ತನಹಳ್ಳಿಗೆ ಕರೆತಂದು ಆತನನ್ನ ಕಾರಿನಿಂದ ಇಳಿಸಿ ಪರಾರಿಯಾಗಿದ್ದಾರೆ.
ಕದ್ದು ವಾಹನಗಳನ್ನುಹೊರರಾಜ್ಯಗಳಿಗೆ ಮಾರಾಟ :ಆರೋಪಿಗಳು ಕದ್ದ ಕಾರುಗಳ ನಂಬರ್ ಬದಲಾಯಿಸಿ ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದರು. ಇವೆಲ್ಲಾ ಲಾಕ್ ಡೌನ್ ನಲ್ಲಿ ಸೀಝ್ ಆಗಿರುವ ಕಾರುಗಳು, ಡಾಕ್ಯುಮೆಂಟ್ ಸ್ವಲ್ಪ ದಿನ ತಡವಾಗುತ್ತೆ ಎಂದು ನಂಬಿಸಿ, ಮಾರಾಟ ಮಾಡುತ್ತಿದ್ದರಂತೆ. ಟವರ್ ಲೊಕೇಷನ್ ಆಧರಿಸಿ ಈ ಮೂರು ಜನರ ಗ್ಯಾಂಗ್ ಅನ್ನು ಬೆಂಗಳೂರಿನ ವಿವಿಧೆಡೆ ಮಾದನಾಯಕನಹಳ್ಳಿ ಪೊಲೀಸರು ಅರೆಸ್ಟ್ ಮಾಡಿ, ಬಂಧಿತರಿಂದ 25 ಲಕ್ಷ ಮೌಲ್ಯದ 3 ಕಾರು ಕೃತ್ಯಕ್ಕೆ ಬಳಸಿದ್ದ ಮೊಬೈಲ್ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತ್ತೊಂದು ಕಳ್ಳತನ ಪ್ರಕರಣ:ಮತ್ತೊಂದು ಪ್ರಕರಣದಲ್ಲಿ ಆಟೊ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ವಿಷ್ಣು ಹಾಗೂ ಜ್ಞಾನೇಶ್‌ನನ್ನು ತಿಪಟೂರಿನಲ್ಲಿ ಬಂಧಿಸಿ ಜೈಲಿಗಟ್ಟಿದ್ದಾರೆ. ಎರಡು ಘಟನೆಗಳಿಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
25 ಲಕ್ಷ ಮೌಲ್ಯದ ವಸ್ತು ವಶ:ಈ ಪ್ರಕರಣದ ಪ್ರಮುಖ ಆರೋಪಿ ಸಂತೋಷ, ಭರತರಾವ್, ಗೌಡ ಬಿ ಆರ್ ಇವರು ಮೂರು ಜನ ಹಿರಿಯೂರಿನವರು. ಇವರು ಬೆಂಗಳೂರಿನಲ್ಲಿ ವಾಸವಿದ್ದು, ಇವರ ವಿರುದ್ಧ ಮೂರು ಪ್ರಕರಣಗಳಿವೆ. ನಂತರ ಕಾರುಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಿ, ಫೈನಾನ್ಸ್ ಕಂಪನಿ ಜಪ್ತಿ ಮಾಡಿದ್ದ ವಾಹನಗಳಿವು, ನಂತರ ಡಾಕ್ಯುಮೆಂಟ್ಸ್ ಕೋಡ್ತೇವೆ ಎಂದು ಆಂಧ್ರ ಪ್ರದೇಶದ ಕಲ್ಯಾಣದುರ್ಗದಲ್ಲಿ ಮಾರಾಟ ಮಾಡಿದ್ದರು.
ಇನ್ನೊಂದು ಕಾರನ್ನು ಚಳಕೇರಿ ಸಮೀಪ ಬಿಟ್ಟು ಹೋಗಿದ್ದರು. ಈ ಆರೋಪಿಗಳಿಂದ ಮೂರು ಕಾರು ಹಾಗೂ 3 ಬೈಕುಗಳನ್ನು ವಶಕ್ಕೆ ಪಡೆದಿದ್ದೇವೆ. ಅವರಿಂದ ಮೂರು ಕಾರು ಹಾಗೂ 3 ಬೈಕು, ಎರಡು ಮೊಬೈಲ್ ಸೇರಿದಂತೆ ಒಟ್ಟು 25 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಮಾದನಾಯಕನಹಳ್ಳಿ ಪೊಲೀಸರ್ ತಂಡ ಯಶಸ್ವಿಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಇದನ್ನೂಓದಿ:ಕಬ್ಬಡಿ ಪೋಸ್ಟರ್ನಲ್ಲಿ ಗ್ಯಾಂಗ್ಸ್ಟರ್ ಛೋಟಾ ರಾಜನ್ ಫೋಟೋ: 6 ಮಂದಿ ಬಂಧನ