ETV Bharat / state

ತಯಾರಕರಿಗಿಲ್ಲ ಗಣೇಶ ‌ಹಬ್ಬದ ಸಂಭ್ರಮ : ಮೂರ್ತಿಗಳು ಮಾರಾಟವಾಗದೆ ವ್ಯಾಪಾರಿಗಳು ಕಂಗಾಲು - ಮೂರ್ತಿಗಳು ಮಾರಾಟವಾಗದೆ ವ್ಯಾಪಾರಿಗಳು ಕಂಗಾಲು

ಒಂದು ಕಡೆ ಕೋವಿಡ್​ ಭಯ, ಮತ್ತೊಂಡೆದೆ ಸರ್ಕಾರ ಕಠಿಣ​ ರೂಲ್ಸ್​​​​​ ತಯಾರಕರ ವ್ಯಾಪಾರದ ಮೇಲೆ ಕರಿಛಾಯೆ ಮೂಡಿಸಿದೆ. ಸಾಲಸೋಲ ಮಾಡಿ ತಯಾರಕರು ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಸಿದ್ಧ ಮಾಡಿ ವ್ಯಾಪಾರವಿಲ್ಲದೆ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಬಾರಿ ಹೆಚ್ಚಾಗಿ ವಿಗ್ರಹಗಳ ಮಾರಾಟ ಆಗದೆ ಮಾವಳ್ಳಿ, ಹೆಬ್ಬಾಳ, ಪಾಟರಿಟೌ‌ನ್ ಮತ್ತು ನಗರದ ಹಲವೆಡೆ ಮೂರ್ತಿಗಳು ಗೋಡಾನ್​ನಲ್ಲಿಯೇ ಉಳಿದಿವೆ..

Ganesh idol makers are facing financial problem
ತಯಾರಕರಿಗಿಲ್ಲ ಗಣೇಶ ‌ಹಬ್ಬದ ಸಂಭ್ರಮ
author img

By

Published : Sep 11, 2021, 9:46 PM IST

Updated : Sep 11, 2021, 9:51 PM IST

ಬೆಂಗಳೂರು : ಗಣೇಶ ಹಬ್ಬ ಅಂದರೆ ದೊಡ್ಡ ದೊಡ್ಡ ಮೂರ್ತಿಗಳು, ಡಿಜೆಸೌಂಡ್​​, ಸಾಂಸ್ಕೃತಿಕ ಕಾರ್ಯಕ್ರಮ, ಅದ್ದೂರಿ ಮೆರವಣಿಗೆ ಕಣ್ಮುಂದೆ ಬರುತ್ತವೆ. ಆದರೆ, ಕಳೆದೆರಡು ವರ್ಷಗಳಿಂದ ಕೊರೊನಾ ಇದಕ್ಕೆಲ್ಲಾ ಬ್ರೇಕ್​​ ಹಾಕಿ ಸರಳವಾಗಿ ಹಬ್ಬ ಆಚರಣೆ ಮಾಡುವಂತೆ ಮಾಡಿದೆ.

ಮೂರ್ತಿಗಳು ಮಾರಾಟವಾಗದೆ ವ್ಯಾಪಾರಿಗಳು ಕಂಗಾಲು

ಕಳೆದೆರಡು ವರ್ಷದಿಂದ ಎಲ್ಲಾ‌ ಕೊರೊನಾ ಇಡೀ ದೇಶದಾದ್ಯಂತ ಪರಿಣಾಮ ಬೀರಿದ್ದು, ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇದರಿಂದ ಯಾವ ಹಬ್ಬವನ್ನೂ ಅದ್ದೂರಿಯಾಗಿ ಆಚರಿಸಲು ಆಗಿಲ್ಲ. ಈ ಸಾರಿಯೂ ಸರ್ಕಾರದ ಕೆಲ ಷರತ್ತುಗಳನ್ನು ವಿಧಿಸಿ ಹಬ್ಬ ಆಚರಣೆಗೆ ಅನುವು ಮಾಡಿಕೊಟ್ಟಿತ್ತು. ಆದರೆ, ಕೊರೊನಾ ಭಯದಿಂದ ಜನತೆ ತಮ್ಮ ಮನೆಗಳಲ್ಲೇ ಸರಳವಾಗಿ ಹಬ್ಬ ಆಚರಿಸಿದ್ದಾರೆ.

ಸರ್ಕಾರದ ನಿಯಮ, ಕೊರೊನಾ ಭಯ : ಒಂದು ಕಡೆ ಕೋವಿಡ್​ ಭಯ, ಮತ್ತೊಂಡೆದೆ ಸರ್ಕಾರ ಕಠಿಣ​ ರೂಲ್ಸ್​​​​​ ತಯಾರಕರ ವ್ಯಾಪಾರದ ಮೇಲೆ ಕರಿಛಾಯೆ ಮೂಡಿಸಿದೆ. ಸಾಲಸೋಲ ಮಾಡಿ ತಯಾರಕರು ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಸಿದ್ಧ ಮಾಡಿ ವ್ಯಾಪಾರವಿಲ್ಲದೆ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಬಾರಿ ಹೆಚ್ಚಾಗಿ ವಿಗ್ರಹಗಳ ಮಾರಾಟ ಆಗದೆ ಮಾವಳ್ಳಿ, ಹೆಬ್ಬಾಳ, ಪಾಟರಿಟೌ‌ನ್ ಮತ್ತು ನಗರದ ಹಲವೆಡೆ ಮೂರ್ತಿಗಳು ಗೋಡಾನ್​ನಲ್ಲಿಯೇ ಉಳಿದಿವೆ.

ಅಲ್ಪಪ್ರಮಾಣದ ಮೂರ್ತಿಗಳ ಮಾರಾಟ : ಗಣೇಶ ಹಬ್ಬಕ್ಕೆಂದೆ ತಯಾರಕರೊಬ್ಬರು ಸುಮಾರು 2000ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ತಯಾರಿಸಿದ್ದರು. ಆದರೆ‌, ಈ ಬಾರಿ ಕೇವಲ 500 ಮೂರ್ತಿಗಳು ಮಾತ್ರ ಮಾರಾಟವಾಗಿವೆ. ಹಲವು ತಯಾರಕರದ್ದು ಇದೇ ಗೋಳು.

ಇನ್ನು ಉಳಿದ‌ ಗಣೇಶ ಮೂರ್ತಿಗಳನ್ನು ತಯಾರಕರು ಕರಗಿಸಿ ಆ ಮಣ್ಣನ್ನು ಒಣಗಿಸಿ ಪುಡಿ ಮಾಡಿ, ಸ್ವಚ್ಛಗೊಳಿಸುತ್ತಾರೆ. ಮುಂದಿನ‌ ವರ್ಷದ ಹಬ್ಬಕ್ಕೆ ಗಣೇಶ್ ಮೂರ್ತಿ ತಯಾರಿಸಲು ಆಗ ಇದೇ ಮಣ್ಣನ್ನು ಉಪಯೋಗಿಸುತ್ತಾರೆ.

ದೊಡ್ಡ ಗಾತ್ರದ ಮೂರ್ತಿಗಳಿಗೆ ಬೇಡಿಕೆ ಹೆಚ್ಚು : ಸರ್ಕಾರ ನಿಗದಿಪಡಿಸಿದ ನಾಲ್ಕು ಅಡಿ ಎತ್ತರದ ಮೂರ್ತಿಗಳನ್ನು ಪಡೆಯಲು ಜನ ಮುಗಿಬಿದ್ದರು. ಆದರೆ, ಸಣ್ಣ ಪ್ರಮಾಣದ ಒಂದೆರಡು ಅಡಿ ಎತ್ತರದ ಮೂರ್ತಿಗಳನ್ನು ಕೇಳುವವರೆ ಇರಲಿಲ್ಲ. ವ್ಯಾಪಾರ ಮಾಡುತ್ತಿದ್ದವರು ಸಹ ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳನ್ನು ಕೊಳ್ಳಲು ಬರಲೇ ಇಲ್ಲ ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸಿದರು.

ಪರಿಹಾರಕ್ಕೆ ಆಗ್ರಹ : ಈ ಬಾರಿ ವ್ಯಾಪಾರ ಚೆನ್ನಾಗಿ ಆಗಲಿದೆ ಎಂಬ ಆಶಯ ಹೊಂದಿದ್ದ ವಿಗ್ರಹ ತಯಾರಕರ ಕುಟುಂಬಗಳು ನಷ್ಟ ಅನುಭವಿಸಿದ್ದು, ಜೀವನ ನಡೆಸಲು ಹಣವಿಲ್ಲದೆ ಕಂಗಾಲಾಗಿದ್ದಾರೆ. ಹೀಗಾಗಿ, ವಿಗ್ರಹ ತಯಾರಕರು ಸರ್ಕಾರ ಪರಿಹಾರ ಘೋಷಣೆ ಮಾಡುವಂತೆ ಮನವಿ ಮಾಡಿದ್ದಾರೆ.

ಓದಿ: ವಯಸ್ಸು ತಡೆಯಲಾರದ ಆತುರಗೇಡಿ ಮದುವೆ ಮಾಡ್ತಿಲ್ವೆಂದು ಅಪ್ಪನಿಗೆ ಕೊಡಲಿ ಬೀಸಿದ್ದ.. ತಂದೆನೂ ಮನುಷ್ಯ ಅಲ್ವೇನ್ರೀ..

Last Updated : Sep 11, 2021, 9:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.