ETV Bharat / state

ಸ್ಪೀಕರ್​​​​ ತೀರ್ಮಾನದ ಮೇಲೆ ನಿಂತಿದೆ ದೋಸ್ತಿ ಸರ್ಕಾರದ ಭವಿಷ್ಯ!

ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ, ಸ್ವೀಕರ್​ ಅಂಗಳದಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಚೆಂಡು ಇದೆ. ಅವರ ತೀರ್ಮಾನದಲ್ಲಿ ಸರ್ಕಾರದ ಭವಿಷ್ಯ ಅಡಗಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಸ್ವೀಕರ್
author img

By

Published : Jul 6, 2019, 7:18 PM IST

ಬೆಂಗಳೂರು: 14 ಮಂದಿ ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಸ್ವೀಕರ್​ ತೆಗೆದುಕೊಳ್ಳುವ ತೀರ್ಮಾನದ ಮೇಲೆ ದೋಸ್ತಿ ಸರ್ಕಾರದ ಭವಿಷ್ಯ ಅಡಗಿದೆ.

ಕಾಂಗ್ರೆಸ್​ ಹಾಗೂ ಜೆಡಿಎಸ್​ನ 14 ಮಂದಿ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದು, ಇವರ ರಾಜೀನಾಮೆ ಅಂಗೀಕಾರ ಅಥವಾ ತಿರಸ್ಕರಿಸುವ ತೀರ್ಮಾನ ವಿಧಾನಸಭಾ ಅಧ್ಯಕ್ಷರಿಗಿದೆ. ಅತೃಪ್ತ ಶಾಸಕರ ರಾಜೀನಾಮೆಯನ್ನು ತಕ್ಷಣ ಸ್ವೀಕರ್​ ಅವರು ಅಂಗೀಕರಿಸಿದರೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಅಲ್ಪಮತಕ್ಕೆ ಕುಸಿದು ಸರ್ಕಾರ ಪತನವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಕರ್ನಾಟಕ ವಿಧಾನಮಂಡಲ ನೀತಿ-ನಿಯಮಗಳ (202/2) ಪ್ರಕಾರ ಶಾಸಕರು ಸ್ವಹಸ್ತಾಕ್ಷರದಲ್ಲಿ ಬರೆದ ರಾಜೀನಾಮೆ ಪತ್ರವನ್ನು ಸ್ವೀಕರ್​ ಕೈಗೆ ಖುದ್ದು ನೀಡಬೇಕು. ಅಂತಹ ಸಂದರ್ಭದಲ್ಲಿ ರಾಜೀನಾಮೆ ನೀಡುವ ಸಕಾರಣದ ಮೇಲೆ ವಿಧಾನಸಭಾ ಅಧ್ಯಕ್ಷರು ತಕ್ಷಣವೇ ರಾಜೀನಾಮೆ ಅಂಗೀಕರಿಸಲು ಅವಕಾಶವಿದೆ.

ಒಂದು ವೇಳೆ ಶಾಸಕರು ಸ್ವೀಕರ್​ ಅವರನ್ನು ಭೇಟಿಯಾಗದೆ ಬೇರೊಬ್ಬರ ಮೂಲಕ ಸ್ವೀಕರ್​ ಕಚೇರಿಗೆ ತಲುಪಿಸಿದ ಸಂದರ್ಭದಲ್ಲಿ ಶಾಸಕರು ರಾಜೀನಾಮೆಯನ್ನು ಯಾವ ಕಾರಣಕ್ಕೆ ನೀಡಿದ್ದಾರೆ. ಸ್ವಇಚ್ಛೆಯಿಂದ ನೀಡಿದ್ದಾರೋ ಅಥವಾ ಒತ್ತಡಕ್ಕೆ ನೀಡಿದ್ದಾರೋ ಎಂಬುವುದರ ಬಗ್ಗೆ ಸ್ವೀಕರ್​ ಅವರು ತಮ್ಮದೇ ಆದ ರೀತಿಯಲ್ಲಿ ತನಿಖೆ ನಡೆಸಿ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವ ಇಲ್ಲವೇ ತಿರಸ್ಕರಿಸುವ ಅಧಿಕಾರವನ್ನು ಹೊಂದಿದ್ದಾರೆ.

ಸ್ವೀಕರ್​ ಅವರಿಗೆ ಶಾಸಕರು ರಾಜೀನಾಮೆ ಪತ್ರವನ್ನು ನೇರವಾಗಿ ಕೊಡದೆ ಇದ್ದ ಪಕ್ಷದಲ್ಲಿ ಯಾವುದೇ ಕಾಲಮಿತಿಯಿಲ್ಲದೆ ರಾಜೀನಾಮೆ ಅಂಗೀಕರಿಸುವ ಅಥವಾ ತಿರಸ್ಕರಿಸುವ ಕುರಿತು ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಸಭಾಧ್ಯಕ್ಷರಿಗಿರಲಿದೆ. 14 ಮಂದಿ ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣದಲ್ಲಿ ವಿಧಾನಸಭಾ ಅಧ್ಯಕ್ಷರು ರಾಜೀನಾಮೆಗೆ ಕಾರಣ ತಿಳಿದುಕೊಂಡು ತಮಗೆ ಬೇಕಾದ ಕಾಲಾವಕಾಶದಲ್ಲಿ ನಿರ್ಧಾರ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ.

ಸ್ವೀಕರ್​ ಅವರ ತೀರ್ಮಾನ ವಿಳಂಬವಾದರೆ ಸಿಕ್ಕ ಕಾಲಾವಕಾಶದಲ್ಲಿ ಮೈತ್ರಿ ಪಕ್ಷಗಳ ನಾಯಕರಿಗೆ ಅತೃಪ್ತರ ಮನವೊಲಿಸಿ ರಾಜೀನಾಮೆಯನ್ನು ಹಿಂದಕ್ಕೆ ಪಡೆಯಲು ಒತ್ತಡ ಹಾಕಬಹುದಾಗಿದೆ. ಸ್ವೀಕರ್​ ರಮೇಶ್​ ಕುಮಾರ್​ ಅವರು ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಮಂಗಳವಾರ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದರಿಂದ ಅತೃಪ್ತರ ಮನವೊಲಿಕೆಗೆ ಸಾಕಷ್ಟು ಕಾಲಾವಕಾಶ ಮೈತ್ರಿ ಸರ್ಕಾರ ನಾಯಕರಿಗೆ ದೊರೆಯಲಿದೆ.

ದೋಸ್ತಿ ಪಕ್ಷಗಳ ನಾಯಕರಿಗೆ ಇದು ಅಮೂಲ್ಯ ಸಮಯವಾಗಿದ್ದು, ಅತೃಪ್ತರ ಮನವೊಲಿಸಿ ರಾಜೀನಾಮೆ ವಾಪಸ್​ ಪಡೆಯುವಲ್ಲಿ ಯಶಸ್ವಿಯಾದರೆ ಸರ್ಕಾರ ಸೇಫ್​​. ಇಲ್ಲವಾದಲ್ಲಿ ಮೈತ್ರಿ ಸರ್ಕಾರ ಪತನ ಖಚಿತ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು, ಸ್ವೀಕರ್​ ಅಂಗಳದಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಚೆಂಡು ಇದೆ. ಅವರ ತೀರ್ಮಾನದಲ್ಲಿ ಸರ್ಕಾರದ ಭವಿಷ್ಯ ಅಡಗಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

Intro:nullBody:ಸ್ವೀಕರ್​ ತೀರ್ಮಾನದ ಮೇಲೆ ನಿಂತಿರುವ ದೋಸ್ತಿ ಸರ್ಕಾರದ ಭವಿಷ್ಯ
ಬೆಂಗಳೂರು: 14 ಮಂದಿ ಅತೃಪ್ತರ ಶಾಸಕರ ರಾಜೀನಾಮೆ ಪತ್ರವನ್ನು ಸ್ವೀಕರ್​ ತೆಗೆದುಕೊಳ್ಳುವ ತೀರ್ಮಾನದ ಮೇಲೆ ದೋಸ್ತಿ ಸರ್ಕಾರದ ಭವಿಷ್ಯ ಅಡಗಿದೆ.
ಕಾಂಗ್ರೆಸ್​ ಹಾಗೂ ಜೆಡಿಎಸ್​ನ 14 ಮಂದಿ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದು, ಇವರ ರಾಜೀನಾಮೆ ಅಂಗೀಕಾರ ಅಥವಾ ತಿರಸ್ಕರಿಸುವ ತೀರ್ಮಾನ ವಿಧಾನಸಭಾ ಅಧ್ಯಕ್ಷರಿಗಿದೆ. ಅತೃಪ್ತ ಶಾಸಕರ ರಾಜೀನಾಮೆಯನ್ನು ತಕ್ಷಣ ಸ್ವೀಕರ್​ ಅವರು ರಾಜೀನಾಮೆ ಅಂಗೀಕರಿಸಿದರೆ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಸರ್ಕಾರ ಅಲ್ಪಮತಕ್ಕೆ ಕುಸಿದು ಸರ್ಕಾರ ಪತನವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಕರ್ನಾಟಕ ವಿಧಾನಮಂಡಲ ನೀತಿ-ನಿಯಮಗಳ (202/2) ಪ್ರಕಾರ ಶಾಸಕರು ಸ್ವಹಸ್ತಾಕ್ಷರದಲ್ಲಿ ಬರೆದ ರಾಜೀನಾಮೆ ಪತ್ರವನ್ನು ಸ್ವೀಕರ್​ ಕೈಗೆ ಖುದ್ದು ನೀಡಬೇಕು. ಅಂತಹ ಸಂದರ್ಭದಲ್ಲಿ ರಾಜೀನಾಮೆ ನೀಡುವ ಸಕಾರಣ ಮನವರಿಕೆಯಾಗಲಿ ವಿಧಾನಸಭಾ ಅಧ್ಯಕ್ಷರ ತಕ್ಷಣವೇ ರಾಜೀನಾಮೆ ಅಂಗೀಕರಿಸಲು ತಕ್ಷಣ ಅವಕಾಶವಿದೆ.
ಒಂದು ವೇಳೆ ಶಾಸಕರು ಸ್ವೀಕರ್​ ಅವರನ್ನು ಭೇಟಿಯಾಗದೆ ಬೇರೊಬ್ಬರ ಮೂಲಕ ಸ್ವೀಕರ್​ ಕಚೇರಿಗೆ ತಲುಪಿಸಿದ ಸಂದರ್ಭದಲ್ಲಿ ಶಾಸಕರು ರಾಜೀನಾಮೆಯನ್ನ ಯಾವ ಕಾರಣಕ್ಕೆ ನೀಡಿದ್ದಾರೆ, ಸ್ವಹಿಚ್ಚೆಯಿಂದ ನೀಡಿದ್ದಾರೋ ಅಥವಾ ಒತ್ತಡಕ್ಕೆ ನೀಡಿದ್ದಾರೋ ಎಂಬುವುದರ ಬಗ್ಗೆ ಸ್ವೀಕರ್​ ಅವರು ತಮ್ಮದೇ ಆದ ರೀತಿಯಲ್ಲಿ ತನಿಖೆ ನಡೆಸಿ ಶಾಸಕರ ರಾಜೀನಾಮೆಯನ್ನ ಅಂಗೀಕರಿಸುವ ಇಲ್ಲವೇ ತಿರಸ್ಕರಿಸುವ ಅಧಿಕಾರವನ್ನು ಹೊಂದಿದ್ದಾರೆ.
ಸ್ವೀಕರ್​ ಅವರಿಗೆ ಶಾಸಕರು ರಾಜೀನಾಮೆ ಪತ್ರವನ್ನು ನೇರವಾಗಿ ಕೊಡದೆ ಇದ್ದ ಪಕ್ಷದಲ್ಲಿ ಯಾವುದೇ ಕಾಲಮಿತಿಯಿಲ್ಲದೆ ರಾಜೀನಾಮೆ ಅಂಗೀಕರಿಸುವ ಅಥವಾ ತಿರಸ್ಕರಿಸುವ ಕುರಿತು ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಸಭಾಧ್ಯಕ್ಷಗಿರಲಿದೆ. 14 ಮಂದಿ ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣದಲ್ಲಿ ವಿಧಾನಸಭಾ ಅಧ್ಯಕ್ಷರು ರಾಜೀನಾಮೆಗೆ ಕಾರಣ ತಿಳಿದುಕೊಂಡು ತಮಗೆ ಬೇಕಾದ ಕಾಲಾವಕಾಶದಲ್ಲಿ ನಿರ್ಧಾರ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಸ್ವೀಕರ್​ ಅವರ ತೀರ್ಮಾನ ವಿಳಂಬವಾದರೆ ಸಿಕ್ಕ ಕಾಲಾವಕಾಶದಲ್ಲಿ ಮೈತ್ರಿ ಪಕ್ಷಗಳ ನಾಯಕರಿಗೆ ಅತೃಪ್ತರ ಮನವೊಲಿಸಿ ರಾಜೀನಾಮೆಯನ್ನ ಹಿಂದಕ್ಕೆ ಪಡೆಯಲು ಒತ್ತಡ ಹಾಕಬಹುದಾಗಿದೆ.
ಸ್ವೀಕರ್​ ರಮೇಶ್​ ಕುಮಾರ್​ ಅವರು ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಮಂಗಳವಾರ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದರಿಂದ ಅತೃಪ್ತ ಮನವೊಲಿಕೆಗೆ ಸಾಕಷ್ಟು ಕಾಲಾವಕಾಶ ಮೈತ್ರಿ ಸರ್ಕಾರ ನಾಯಕರಿಗೆ ದೊರೆಯಲಿದೆ. ದೋಸ್ತಿ ಪಕ್ಷಗಳ ನಾಯಕರಿಗೆ ಇದು ಅಮೂಲ್ಯ ಸಮಯವಾಗಿದ್ದು ಅತೃಪ್ತರ ಮನವೊಲಿಸಿ ರಾಜೀನಾಮೆ ವಾಪಸ್​ ಪಡೆಯುವಲ್ಲಿ ಯಶಸ್ವಿಯಾದರೆ ಸರ್ಕಾರ ಸೇಫ್​​.. ಇಲ್ಲವಾದಲ್ಲಿ ಮೈತ್ರಿ ಸರ್ಕಾರ ಪತನ ಖಚಿತ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ಸ್ವೀಕರ್​ ಅಂಗಳದಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಚೆಂಡು ಇದೆ. ಅವರ ತೀರ್ಮಾನ ಸರ್ಕಾರದ ಭವಿಷ್ಯ ಅಡಗಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.
Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.