ETV Bharat / state

ಸಕಾಲ ಯೋಜನೆ ಅಡಿ ಸೇರ್ಪಡೆಯಾಗಿರುವ ಸೇವೆಗಳ ಸಂಪೂರ್ಣ ವರದಿ

ಸರ್ಕಾರದ ಸೇವೆಗಳ ಬಗ್ಗೆ ನಾಗರಿಕರಿಗೆ ಮಾಹಿತಿ ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ಸಕಾಲ ಮಿಷನ್‌ನಿಂದ ರಾಜ್ಯ ಸರ್ಕಾರದ ಸೇವೆಗಳಿಗೆ ಸಂಬಂಧಪಟ್ಟಂತೆ ನಾಗರಿಕರು ಈ ಜಾಲತಾಣದಲ್ಲಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಬಹುದು. ಅಲ್ಲದೆ, ಈಗಾಗಲೇ ನೀಡಲಾಗಿರುವ ಉತ್ತರಗಳನ್ನು ವೀಕ್ಷಿಸಬಹುದು. ಈ ಯೋಜನೆಯನ್ನು 2012ರ ಏಪ್ರಿಲ್​ನಲ್ಲಿ ಪ್ರಾರಂಭಿಸಲಾಗಿದೆ..

author img

By

Published : Jun 29, 2021, 3:09 PM IST

ಸಕಾಲ ಯೋಜನೆ
ಸಕಾಲ ಯೋಜನೆ

ಬೆಂಗಳೂರು : ರಾಜ್ಯದ ನಾಗರಿಕರಿಗೆ ನಿಗದಿತ ಕಾಲಮಿತಿಯಲ್ಲಿ ಸರ್ಕಾರದ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ 2012ರ ಏಪ್ರಿಲ್​ನಲ್ಲಿ ಆರಂಭವಾದ "ಸಕಾಲ" ಯೋಜನೆಯಡಿ ಪ್ರಸ್ತುತ 101 ಇಲಾಖೆಗಳ 1,122 ಸೇವೆಗಳನ್ನು ಸೇರ್ಪಡೆ ಮಾಡಲಾಗಿದೆ.

ನಾಗರಿಕ ಸೇವಾ ಖಾತರಿ ಅಧಿನಿಯಮ (ಸಕಾಲ) ಎಂದರೇನು? : ರಾಜ್ಯದಲ್ಲಿ ಅನುಸೂಚಿಯಲ್ಲಿ ಉಲ್ಲೇಖಿಸಿದ ನಾಗರಿಕ ಸಂಬಂಧಿತ ಸೇವೆಗಳಿಗಾಗಿ ನಿಗದಿತ ಕಾಲದೊಳಗೆ ನಾಗರಿಕರಿಗೆ ಸೇವಾ ಖಾತರಿಯನ್ನು ಒದಗಿಸಲು 2011ರ ಡಿಸೆಂಬರ್​ನಲ್ಲಿ ಕರ್ನಾಟಕ ಸರ್ವಾನುಮತದಿಂದ ಅಂಗೀಕರಿಸಿದ ಒಂದು ಅಧಿನಿಯಮ ಇದಾಗಿದೆ.

ಹೇಗೆ ಸಹಾಯವಾಗುತ್ತದೆ? : ಈ ಅಧಿನಿಯಮವು, ಅಧಿನಿಯಮದಲ್ಲಿ ಹೇಳಲಾದ ನಾಗರಿಕ ಸೇವೆಗಳನ್ನು ನಿಗದಿತ ಕಾಲದೊಳಗೆ ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ನೀವು ಸೇವೆಯನ್ನು ಕೋರಿದಾಗ, ನೀವು ಸಕಾಲ ಸಂಖ್ಯೆಯೊಂದಿಗೆ ಹಿಂಬರಹವನ್ನು ಪಡೆಯುತ್ತೀರಿ. ಇದು, ಸೇವೆಗಾಗಿನ ನಿಮ್ಮ ಕೋರಿಕೆಯನ್ನು ನಿರ್ದಿಷ್ಟಪಡಿಸಿದ ದಿನಗಳೊಳಗಾಗಿ ಪರಿಶೀಲಿಸಲಾಗುತ್ತದೆ ಎಂಬ ಭರವಸೆಯನ್ನು ಖಚಿತಪಡಿಸುತ್ತದೆ.

ಸಕಾಲ ಸಂಖ್ಯೆಯೊಂದಿಗೆ ನೀವು ಈ ವೆಬ್ ಸೈಟ್​ನಲ್ಲಿ ನಿಮ್ಮ ಅರ್ಜಿಯ ಸ್ಥಿತಿಗತಿ ತಿಳಿಯಬಹುದು. ನೀವು ನಿಮ್ಮ ಮೊಬೈಲ್​ನಿಂದ ಎಸ್ಎಂಎಸ್ ಕಳುಹಿಸುವುದರ ಮೂಲಕವೂ ಸಹ ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಒಂದು ವೇಳೆ, ನಿಮ್ಮ ಅರ್ಜಿಯು ತಿರಸ್ಕೃತವಾದರೆ ಅಥವಾ ಸೇವೆಯನ್ನು ನಿಗದಿತ ಕಾಲದೊಳಗೆ ಒದಗಿಸದಿದ್ದರೆ, ನೀವು ನಿಮ್ಮ ಕುಂದುಕೊರತೆಗಳ ಪರಿಹಾರಕ್ಕಾಗಿ ಮುಂದಿನ ಅಧಿಕಾರಿಗೆ ಒಂದು ಮನವಿಯನ್ನು ಸಲ್ಲಿಸಬಹುದು.

ಸೇವೆಯನ್ನು ಪಡೆಯಲು ಕಾರ್ಯವಿಧಾನ : ಸೇವೆಯನ್ನು ಪಡೆದುಕೊಳ್ಳುವ ಕಾರ್ಯವಿಧಾನವು, ಸೇವೆಯಿಂದ ಸೇವೆಗೆ ವ್ಯತ್ಯಾಸವಿರುತ್ತದೆ. ಆದ್ದರಿಂದ ಸೇವೆಯನ್ನು ಪಡೆದುಕೊಳ್ಳುವ ಕಾರ್ಯವಿಧಾನದ ವಿವರಗಳಿಗೆ, ವೆಬ್‌ಸೈಟ್​ನ ಮುಖ್ಯಪುಟದಲ್ಲಿ ಲಭ್ಯವಿರುವ ನಮೂನೆಗಳು ಮತ್ತು ಕಾರ್ಯವಿಧಾನ ಎಂಬುದನ್ನು ಕ್ಲಿಕ್ ಮಾಡಿ ಕಾರ್ಯವಿಧಾನವನ್ನು ಮತ್ತು ನೀವು ನೋಡಲು ಇಚ್ಛಿಸುವಂಥ ಇಲಾಖೆ ಮತ್ತು ಸೇವೆಗಾಗಿ ಎಂಬುದನ್ನು ಆಯ್ಕೆಮಾಡಿ, ಸೇವೆ ದೊರೆಯುವ ಕಾರ್ಯವಿಧಾನವು ಪ್ರದರ್ಶನವಾಗುತ್ತದೆ.

ನೋಡಲ್ ಅಧಿಕಾರಿ ನೇಮಕ : ನೋಡಲ್ ಅಧಿಕಾರಿ (ಸಕ್ಷಮ ಅಧಿಕಾರಿ )ಯು ಸರ್ಕಾರದಿಂದ ನೇಮಿಸಲ್ಪಟ್ಟ ಒಬ್ಬ ಅಧಿಕಾರಿಯಾಗಿದ್ದು, ಅವರು ಸೇವೆಯಲ್ಲಿನ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಸೇವೆಯನ್ನು ಒದಗಿಸುವಲ್ಲಿ ತಪ್ಪು ಅಥವಾ ವಿಳಂಬ ಮಾಡಿದ ಸಾರ್ವಜನಿಕ ನೌಕರನಿಗೆ ಪರಿಹಾರಾತ್ಮಕ ವೆಚ್ಚವನ್ನು ವಿಧಿಸಲು ಅಧಿಕಾರ ಹೊಂದಿರತಕ್ಕದು. ಸಕ್ಷಮ ಅಧಿಕಾರಿಯು ಯಾವುದೇ ನಿಯೋಜಿತ ಅಧಿಕಾರಿ ನೀಡಿದ ಆದೇಶದ ವಿರುದ್ಧ ಸಲ್ಲಿಸುವ ಅಪೀಲನ್ನು ವಿಚಾರಣೆ ಮಾಡುವ ಅಧಿಕಾರವನ್ನು ಅವರು ಹೊಂದಿರುತ್ತಾರೆ.

ಸೇವೆಗಳಲ್ಲಿ ಯಾವುದೇ ಒಂದನ್ನಾಗಲೀ ಒದಗಿಸಲು ವಿಳಂಬವಾದರೆ ಅಥವಾ ತಪ್ಪಾದರೆ ಅಥವಾ ಸೇವೆಯನ್ನು ತಿರಸ್ಕರಿಸಿದರೆ, ಆಗ ನೀವು ಅರ್ಜಿಯನ್ನು ಸಲ್ಲಿಸಿದ ಸಮಯದಲ್ಲಿ ನೀವು ಪಡೆದ ಹಿಂಬರಹದ ಆಧಾರದ ಮೇಲೆ ನಿರ್ದಿಷ್ಟ ಕಾಲದೊಳಗೆ ಸಕ್ಷಮ ಪ್ರಾಧಿಕಾರಿಗೆ ಒಂದು ಅಪೀಲನ್ನು ಸಲ್ಲಿಸಬಹುದು. ಸಕ್ಷಮ ಪ್ರಾಧಿಕಾರಿಯು ನಿರ್ದಿಷ್ಟ ಕಾಲದೊಳಗೆ ಅಪೀಲನ್ನು ವಿಚಾರಣೆ ಮಾಡುವರು ಮತ್ತು ಕುಂದುಕೊರತೆಯನ್ನು ಪರಿಹರಿಸುವರು. ಸೇವೆಯನ್ನು ನಿಗದಿತ ಕಾಲದೊಳಗೆ ಒದಗಿಸಲು ವಿಫಲವಾದುದಕ್ಕಾಗಿ ನೀವು ಸಕ್ಷಮ ಪ್ರಾಧಿಕಾರಿಯಿಂದ ಪರಿಹಾರಾತ್ಮಕ ವೆಚ್ಚವನ್ನು ಕ್ಲೈಮ್​ ಮಾಡಬಹುದು. ನಿಯೋಜಿತ ಅಧಿಕಾರಿಯು ಅನುಚಿತ ವಿಳಂಬ ಮಾಡಿದರೆ, ನಿಯೋಜಿತ ಅಧಿಕಾರಿಯು ತಮ್ಮ ವೇತನದಿಂದ ಪರಿಹಾರಾತ್ಮಕ ವೆಚ್ಚ ಪಾವತಿಸಬೇಕಾಗುತ್ತದೆ.

ಇದನ್ನು ಓದಿ : COVID Vaccination: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಚಿವ ಸದಾನಂದ ಗೌಡರಿಂದ ಸಿಕ್ತು ಸಿಹಿ ಸುದ್ದಿ

ಸರ್ಕಾರದ ಸೇವೆಗಳ ಬಗ್ಗೆ ನಾಗರಿಕರಿಗೆ ಮಾಹಿತಿ ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ಸಕಾಲ ಮಿಷನ್‌ನಿಂದ ರಾಜ್ಯ ಸರ್ಕಾರದ ಸೇವೆಗಳಿಗೆ ಸಂಬಂಧಪಟ್ಟಂತೆ ನಾಗರಿಕರು ಈ ಜಾಲತಾಣದಲ್ಲಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಬಹುದು. ಅಲ್ಲದೆ, ಈಗಾಗಲೇ ನೀಡಲಾಗಿರುವ ಉತ್ತರಗಳನ್ನು ವೀಕ್ಷಿಸಬಹುದು. ಈ ಜಾಲತಾಣದಲ್ಲಿ ನಾಗರಿಕರು ಕೇಳುವ ಪ್ರಶ್ನೆಗಳಿಗೆ ವಿವಿಧ ಇಲಾಖೆಗಳಿಂದ ನೇಮಿಸಲ್ಪಟ್ಟಿರುವ ನೋಡಲ್ ಅಧಿಕಾರಿಗಳು ಉತ್ತರಿಸುತ್ತಾರೆ. ಮಾಹಿತಿ ಹಕ್ಕು ಅಧಿನಿಯಮಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳನ್ನು ಈ ವ್ಯವಸ್ಥೆ ಒಳಗೊಳ್ಳುವುದಿಲ್ಲ. ಈ ಸೇವೆಯನ್ನು 2021, ಮೇ 2ರಿಂದ ಪ್ರಾಯೋಗಿಕವಾಗಿ ಜಾರಿಗೆ ಬಂದಿದ್ದು, ಜೂನ್ 6ರ ವೇಳೆಗೆ 506 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ಹಾಗೂ 2,732 ನಾಗರಿಕರು ಈ ಉತ್ತರಗಳನ್ನು ವೀಕ್ಷಿಸಿದ್ದಾರೆ.

ಖಾತಾ ನೋಂದಣಿ ಸರಳೀಕರಣ : ವಸತಿ ಸಮುಚ್ಚಯದ ಖಾತಾ ನೋಂದಣಿಯನ್ನು ಸರ್ಕಾರ ಸರಳಗೊಳಿಸಿದೆ. 'ಸಕಾಲ' ಯೋಜನೆಯಡಿ ಈ ಸೌಲಭ್ಯ ದೊರೆಯಲಿದೆ. ವಸತಿ ಸಮುಚ್ಚಯದ ಯಾವುದೇ ನಿವಾಸಿ ಖಾತಾ ನೋಂದಣಿಗಾಗಿ ಅರ್ಜಿ ಸಲ್ಲಿಸಿದಲ್ಲಿ, ಆ ವಸತಿ ಸಮುಚ್ಚಯದ ಉಳಿದ ಎಲ್ಲ ಘಟಕಗಳಿಗೂ ಉಪ ಮುನ್ಸಿಪಲ್ ಸಂಖ್ಯೆಯ ಸೃಜನೆಗಾಗಿ ಒಂದೇ ಬಾರಿ ಕಡತ ಮಂಡಿಸಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯಲು ಸೂಚಿಸಲಾಗಿದೆ.

ಇದರಿಂದಾಗಿ ಮುಂದಿನ ದಿನಗಳಲ್ಲಿ ವಸತಿ ಸಮುಚ್ಚಯದ ಇತರೆ ಘಟಕಗಳ ಮಾಲೀಕರು ಖಾತಾ ನೋಂದಣಿಗಾಗಿ ಅರ್ಜಿ ಸಲ್ಲಿಸಿದ ವೇಳೆ, ಮತ್ತೊಮ್ಮೆ ಸಕ್ಷಮ ಪ್ರಾಧಿಕಾರದ ಅನುಮೋದನೆ ನಿರೀಕ್ಷಿಸದೆ ಈ ಹಿಂದೆ ಅನುಮೋದನೆಗೊಂಡ ಖಾತಾ ಉಪ ಮುನ್ಸಿಪಲ್ ಸಂಖ್ಯೆಯನ್ನು ನೀಡಿ ಸಕಾಲ ಕಾಲಮಿತಿಯಲ್ಲಿ ಸೇವೆಯನ್ನು ಒದಗಿಸಲು ಅವಕಾಶ ಸಿಗಲಿದೆ. ನಾಗರಿಕರು ವಸತಿ ಸಮುಚ್ಚಯದಲ್ಲಿ ನಿವೇಶನ ಖರೀದಿಸಿ ಖಾತಾ ನೋಂದಣಿಗಾಗಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಾರೆ.

ವಸತಿ ಸಮುಚ್ಚಯದಲ್ಲಿ 100 ಘಟಕಗಳಿದ್ದಲ್ಲಿ ಆ ಎಲ್ಲ ಘಟಕಗಳ ನಿವಾಸಿಗಳು ಒಂದೇ ಬಾರಿ ನೋಂದಣಿಗಾಗಿ ಅರ್ಜಿ ಸಲ್ಲಿಸಿದಲ್ಲಿ ಅಥವಾ ಒಟ್ಟು ಘಟಕಗಳ ಕನಿಷ್ಠ ಶೇ.50 ಘಟಕಗಳ ನಿವಾಸಿಗಳಾದರೂ ಅರ್ಜಿ ಸಲ್ಲಿಸಿದಲ್ಲಿ ಮಾತ್ರ ಸೇವೆಯನ್ನು ಒದಗಿಸುವುದಾಗಿ ತಿಳಿಸಿ ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ. ಆದರೆ, ಈ ರೀತಿ ಒಂದು ವಸತಿ ಸಮುಚ್ಚಯದ ಎಲ್ಲ ನಿವಾಸಿಗಳು ಒಂದೇ ಬಾರಿಗೆ ಖಾತಾ ನೋಂದಣಿಗಾಗಿ ಅರ್ಜಿ ಸಲ್ಲಿಸುವುದು ಸಾಧ್ಯವಿರುವುದಿಲ್ಲ. ಇದರಿಂದಾಗಿ ಖಾತಾ ನೋಂದಣಿ ಸೇವೆಗಾಗಿ ಅರ್ಜಿ ಸಲ್ಲಿಸುವ ನಾಗರಿಕನಿಗೆ ನೋಂದಾವಣಿ ಸಾಧ್ಯವಾಗದೆ ತೊಂದರೆಯಾಗುತ್ತಿತ್ತು. ಹಾಗಾಗಿ, ಇದೀಗ ಸುಲಭವಾಗುವಂತೆ ಸರ್ಕಾರ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯ ಖಾತಾ ಕೊಟೇಷನ್ ಪ್ರತಿ ಪಡೆಯುವಲ್ಲಿ ಇದ್ದ ಸಮಸ್ಯೆ ನೀಗಿಸಲಾಗಿದೆ. ಸಹಾಯಕ ಕಂದಾಯ ಅಧಿಕಾರಿಗಳು ಖಾತಾ ಕೊಟೇಷನ್ ಪ್ರತಿಯನ್ನು ಸರಿಯಾಗಿ ಸ್ಕ್ಯಾನ್ ಮಾಡದೆ, ಖಾಲಿ ಹಾಳೆ ಮತ್ತು ಬೇರೆಯವರ ಕೊಟೇಷನ್ ಪ್ರತಿಗಳನ್ನು ಅಪ್​ಲೋಡ್ ಮಾಡುತ್ತಿರುವ ಕುರಿತು ನಾಗರಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಖಾತಾ ಕೊಟೇಷನ್ ಪ್ರತಿ ಪರಿಶೀಲನೆಗೆ ಅವಕಾಶ ಮಾಡಲಾಗಿದೆ. ಇದರಿಂದ ತಪ್ಪಾಗಿ ಅಪ್ ಲೋಡ್ ಮಾಡಲಾದ ಉದ್ಭತ (ಕೊಟೇಷನ್) ಪ್ರಮಾಣ ಪತ್ರ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಬಹುದಾಗಿದೆ.

ವಿಶೇಷವಾಗಿ ಪ್ರತಿಯೊಂದು ಇಲಾಖಾ ಕಚೇರಿಯಲ್ಲೂ ಸಕಾಲ ಸೇವೆ ಪಡೆಯುವ ಕುರಿತು ಸಾರ್ವಜನಿಕರ ಗಮನಕ್ಕೆ ಬರುವಂತೆ ಫಲಕ ಹಾಕುವುದು ಕಡ್ಡಾಯವಾಗಿದ್ದು, ಸಕಾಲ ಸೇವೆಗಳು ಇರುವ ಕುರಿತಂತೆ ಇಲಾಖೆಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಹಾಗೆಯೇ ಸೇವೆಯ ವಿಳಂಬದ ಕುರಿತು ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆಯುವ ಕುರಿತು ಜಾಗೃತಿ ಮೂಡಿಸುವುದು ಇಲಾಖೆಗಳ ಕರ್ತವ್ಯವಾಗಿದೆ ಎಂದು ಸಕಾಲ ಯೋಜನೆ ಸಚಿವ ಎಸ್‌‌. ಸುರೇಶ್ ಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.