ETV Bharat / state

ಡಿಕೆಶಿಗೆ ಫುಲ್​ ಡಿಮ್ಯಾಂಡ್​, ಪ್ಲೀಸ್​ ನನ್ನ ಪರ ಪ್ರಚಾರ ಮಾಡಿ ಎಂದು ಅಭ್ಯರ್ಥಿ ದುಂಬಾಲು! - ಯಶವಂತಪುರ ಉಪಚುನಾವಣೆ

ಕನಿಷ್ಠ ಒಂದು ಗಂಟೆಯಾದರೂ ನನ್ನ ಪರ ಪ್ರಚಾರ ಮಾಡಿ ಎಂದು ಯಶವಂತಪುರ ಕಾಂಗ್ರೆಸ್​ ಅಭ್ಯರ್ಥಿ ಪಿ.ನಾಗರಾಜ್ ಡಿಕೆಶಿ ಬಳಿ ಮನವಿ ಮಾಡಿದ್ದಾರೆ.

ewde
ಡಿಕೆಶಿಗೆ ಫುಲ್​ ಡಿಮ್ಯಾಂಡ್​,ಪ್ಲೀಸ್​ ನನ್ನ ಪರ ಪ್ರಚಾರ ಮಾಡಿ ಎಂದು ಅಭ್ಯರ್ಥಿ ದುಂಬಾಲು!
author img

By

Published : Dec 3, 2019, 12:40 PM IST

ಬೆಂಗಳೂರು: ಯಶವಂತಪುರ ಕಾಂಗ್ರೆಸ್​ ಅಭ್ಯರ್ಥಿ ಪಿ.ನಾಗರಾಜ್ ಪ್ರಚಾರಕ್ಕೆ ಬರುವಂತೆ ಡಿ.ಕೆ.ಶಿವಕುಮಾರ್ ಗೆ ದುಂಬಾಲು ಬಿದ್ದಿದ್ದಾರೆ.

ಡಿಕೆಶಿಗೆ ಫುಲ್​ ಡಿಮ್ಯಾಂಡ್​,ಪ್ಲೀಸ್​ ನನ್ನ ಪರ ಪ್ರಚಾರ ಮಾಡಿ ಎಂದು ಅಭ್ಯರ್ಥಿ ದುಂಬಾಲು!
ಬಹಿರಂಗ ಪ್ರಚಾರಕ್ಕೆ ಇಂದು‌ ಕೊನೆಯ ದಿನವಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ಘಟಾನುಘಟಿ ನಾಯಕರನ್ನು ಕರೆಸಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಆದರೆ ಇತ್ತ ಕೈ ಅಭ್ಯರ್ಥಿ ಪಿ.ನಾಗರಾಜ್ ಪರ ಪ್ರಚಾರಕ್ಕಾಗಿ ಯಾವ ಹಿರಿಯ ಮುಖಂಡರೂ ಸಕ್ರಿಯವಾಗಿ ಅಖಾಡಕ್ಕೆ ಇಳಿದಿಲ್ಲ. ಈ ನಿಟ್ಟಿನಲ್ಲಿ ಒಕ್ಕಲಿಗ ನಾಯಕ ಡಿಕೆಶಿ‌ ಮೂಲಕ ಕೊನೆಯ ದಿನವಾದ ಇಂದಾದರೂ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಪಿ.ನಾಗರಾಜ್ ಹರಸಾಹಸ ಪಡುತ್ತಿದ್ದಾರೆ. ಈ ಸಂಬಂಧ ಡಿಕೆಶಿ ನಿವಾಸಕ್ಕೆ ಬೆಳ್ಳಂಬೆಳಗ್ಗೆ ಭೇಟಿ ನೀಡಿದ ಅಭ್ಯರ್ಥಿ ಪಾಳ್ಯ ನಾಗರಾಜ್, ನನ್ನ ಪರ ಪ್ರಚಾರಕ್ಕೆ ನೀವು ಬರಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ‌. ಡಿಕೆಶಿ ನಿವಾಸಕ್ಕೆ ತೆರಳಿ ಪ್ರಚಾರಕ್ಕೆ ಇಂದು‌ ಕೊನೆ ದಿನ ನೀವು ನನ್ನ ಪರ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ಆದರೆ ಕುಟುಂಬದ ಸಮೇತ ಐಟಿ ವಿಚಾರಣೆಗೆ ಹಾಜರಾಗಬೇಕಾಗಿರುವುದರಿಂದ ಪಿ.ನಾಗರಾಜ್ ಪರ ಡಿಕೆಶಿ ಪ್ರಚಾರಕ್ಕೆ ಹೋಗವುದು ಡೌಟ್​ ಎನ್ನಲಾಗಿದೆ. ಸಮಯ ಸಿಕ್ಕರೆ ಸಂಜೆಯೊಳಗೆ ಬಂದು ಹೋಗುತ್ತೇನೆ ಎಂದು ಡಿಕೆಶಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Intro:Body:KN_BNG_01_PNAGARAJ_DKSHIVKUMAR_SCRIPT_7201951

ಪ್ಲೀಸ್ ಸ್ವಲ್ಪ ಹೊತ್ತದರೂ ಬಂದು ನನ್ನ ಪರವಾಗಿ ಪ್ರಚಾರ ನಡೆಸಿ: ಡಿಕೆಶಿಗೆ ಯಶವಂತಪುರ ಅಭ್ಯರ್ಥಿ ನಾಗರಾಜ್ ದಂಬಾಲು!

ಬೆಂಗಳೂರು: ಯಶವಂತಪುರ ಕೈ ಅಭ್ಯರ್ಥಿ ಪಿ.ನಾಗರಾಜ್ ಪ್ರಚಾರಕ್ಕೆ ಬರುವಂತೆ ಡಿ.ಕೆ.ಶಿವಕುಮಾರ್ ಗೆ ದಂಬಾಲು ಬಿದ್ದಿದ್ದಾರೆ.

ಬಹಿರಂಗ ಪ್ರಚಾರಕ್ಕೆ ಇಂದು‌ ಕೊನೆಯ ದಿನವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ಘಟಾನುಘಟಿ ನಾಯಕರನ್ನು ಕರೆಸಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದೆ. ಆದರೆ ಇತ್ತ ಕೈ ಅಭ್ಯರ್ಥಿ ಪಿ.ನಾಗರಾಜ್ ಪರ ಪ್ರಚಾರಕ್ಕಾಗಿ ಯಾವ ಕೈ ಹಿರಿಯ ಮುಖಂಡರೂ ಸಕ್ರಿಯವಾಗಿ ಅಖಾಡಕ್ಕೆ ಇಳಿಯುತ್ತಿಲ್ಲ. ಈ ನಿಟ್ಟಿನಲ್ಲಿ ಒಕ್ಕಲಿಗ ನಾಯಕ ಡಿಕೆಶಿ‌ ಮೂಲಕ ಕೊನೆಯ ದಿನವಾದ ಇಂದಾದರೂ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಪಿ.ನಾಗರಾಜ್ ಹರಸಾಹಸ ಪಡುತ್ತಿದ್ದಾರೆ.

ಈ ಸಂಬಂಧ ಡಿಕೆಶಿ ನಿವಾಸಕ್ಕೆ ಬೆಳ್ಳಂಬೆಳಗ್ಗೆ ಭೇಟಿ ನೀಡಿದ ಅಭ್ಯರ್ಥಿ ಪಾಳ್ಯ ನಾಗರಾಜ್, ನನ್ನ ಪರ ಪ್ರಚಾರಕ್ಕೆ ನೀವು ಬರಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ‌.ಡಿಕೆಶಿ ನಿವಾಸಕ್ಕೆ ತೆರಳಿ ಪ್ರಚಾರಕ್ಕೆ ಇಂದು‌ ಕೊನೆ ದಿನ ನೀವು ನನ್ನ ಪರ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದ್ದಾರೆ.

ಕನಿಷ್ಠ ಒಂದು ಗಂಟೆಯಾದರು ಪ್ರಚಾರ ಮಾಡಿ ಹೋಗಿ ಎಂದು ಪಿ.ನಾಗರಾಜ್ ಡಿಕೆಶಿ ಬಳಿ ಮನವಿ ಮಾಡಿದ್ದಾರೆ. ನನ್ನ ಪರ ಪ್ರಭಾವಿ ಒಕ್ಕಲಿಗ ನಾಯಕ ಯಾರೂ ಬಂದು ಪ್ರಚಾರ ಮಾಡಿಲ್ಲ. ಕೊನೆದಿನವಾದ ಇಂದು ಒಂದು ಸ್ಥಳಕ್ಕಾದರೂ ಬಂದು ಪ್ರಚಾರ ಮಾಡಿ ಎಂದು‌ ಮನವಿ ಮಾಡಿದ್ದಾರೆ.

ಆದರೆ ಕುಟುಂಬದ ಸಮೇತ ಐಟಿ ವಿಚಾರಣೆಗೆ ಹಾಜರಾಗಬೇಕಾಗಿರುವುದರಿಂದ ಪಿ.ನಾಗರಾಜ್ ಪರ ಡಿಕೆಶಿ ಪ್ರಚಾರಕ್ಕೆ ಹೋಗವುದು ಕ್ಷೀಣ ಎನ್ನಲಾಗಿದೆ. ಸಮಯ ಸಿಕ್ಕರೆ ಸಂಜೆಯೊಳಗೆ ಬಂದು ಹೋಗುತ್ತೇನೆ ಎಂದು ಡಿಕೆಶಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.