ETV Bharat / state

ಬಿಕ್ಕಿ ಬಿಕ್ಕಿ ಅತ್ತ ನಟಿ ಸಂಜನಾ ಗಲ್ರಾನಿ... ಒಂದೇ ಸಾಂತ್ವನ ಕೇಂದ್ರದಲ್ಲಿ ಸ್ಯಾಂಡಲ್​ವುಡ್ ನಟಿಯರು - drugs transport in sandalwood

ಮತ್ತೊಂದಡೆ ಸಂಜನಾ ಆರೋಗ್ಯದಲ್ಲಿ ಸದ್ಯ ಏರುಪೇರಾಗಿದೆ. ಈ ಮಧ್ಯೆ ಊಟಕ್ಕೆ ಏನು ಬೇಕು ಎಂದು ಕೇಳಿದಾಗ ಏನು ಬೇಡ ಎಂದು ಹೇಳಿದ್ದಾರೆ. ಈ ಇಬ್ಬರು ಮಾದಕ ವಸ್ತುಗಳ ಆರೋಪ ಎದುರಿಸುತ್ತಿರುವ ಕಾರಣ ಇಬ್ಬರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ನಾಳೆ (ಸೆ.9) ಕಳುಹಿಸಲಿದ್ದಾರೆ..

FSL investigate actors sanjan and ragini tomorrow
ಎಫ್​ಎಸ್​ಎಲ್​ ಕಚೇರಿಯಲ್ಲಿ ವಿಚಾರಣೆ
author img

By

Published : Sep 8, 2020, 7:37 PM IST

Updated : Sep 8, 2020, 8:16 PM IST

ಬೆಂಗಳೂರು : ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ತನಿಕಾಧಿಕಾರಿಗಳು ನ್ಯಾಯಾಲಯದ ಎದುರು ಹಾಜರು ಪಡಿಸುತ್ತಿದ್ದಂತೆ ಆಕೆ ಬಿಕ್ಕಿ ಬಿಕ್ಕಿ ಅತ್ತಿರುವ ಘಟನೆ ನಡೆದಿದೆ ಎಂದು ಸಿಸಿಬಿ ಉನ್ನತ ಮೂಲಗಳು ತಿಳಿಸಿವೆ.‌

ಎಫ್​ಎಸ್​ಎಲ್​ ಕಚೇರಿಯಲ್ಲಿ ನಟಿ ಸಂಜನಾ ಗಲ್ರಾನಿ ವಿಚಾರಣೆ

ನಟಿ ಸಂಜನಾಗೆ ಬಂಧನವಾಗುವ ಯಾವುದೇ ಸುಳಿವು ಕೂಡ ಇರಲಿಲ್ಲ. ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಬಹುದು ಎಂದುಕೊಂಡಿದ್ದರು. ಆದರೆ, ಸಿಸಿಬಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದು, ಕೊಂಚ ಆಘಾತ ಉಂಟು ಮಾಡಿದೆ. ಸದ್ಯ ನಟಿಯನ್ನು ಮಹಿಳಾ‌‌ ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ. ಇಲ್ಲಿಯೂ ಹೈಡ್ರಾಮಾ ನಡೆಯುವ ಸಾಧ್ಯತೆಗಳಿವೆ.

ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ನಡುವೇ ಹಲವು ಮನಸ್ಥಾಪಗಳಿವೆ ಎಂದು ತನಿಖಾಧಿಕಾರಿಗಳ ಎದುರು ಸಂಜನಾ ಹೇಳಿದ್ದಾರೆ. ಹೀಗಾಗಿ, ಐದು ಬೆಡ್​ಗಳಿರೋ ಒಂದೇ ಕೊಠಡಿಯಲ್ಲಿ ಇಬ್ಬರಿಗೂ ವ್ಯವಸ್ಥೆ ಮಾಡಲಾಗಿದೆ. ಇಬ್ಬರಲ್ಲಿ ಯಾರನ್ನು ಕಂಡರೂ ಯಾರಿಗೂ ಆಗಲ್ಲ. ಸದ್ಯ ಮಧ್ಯದ 3 ಬೆಡ್​ನಲ್ಲಿ ಮಹಿಳಾ ಪೊಲೀಸರಿದ್ದು, ಕೊನೆಯ ಬೆಡ್​ಗಳಲ್ಲಿ ರಾಗಿಣಿ ಮತ್ತು ಸಂಜನಾರನ್ನಿರಿಸಲಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಮಹಿಳಾಧಿಕಾರಿಗಳು ಹೆಚ್ಚು ಅಲರ್ಟ್ ಆಗಿದ್ದಾರೆ. ಮತ್ತೊಂದಡೆ ಸಂಜನಾ ಆರೋಗ್ಯದಲ್ಲಿ ಸದ್ಯ ಏರುಪೇರಾಗಿದೆ. ಈ ಮಧ್ಯೆ ಊಟಕ್ಕೆ ಏನು ಬೇಕು ಎಂದು ಕೇಳಿದಾಗ ಏನು ಬೇಡ ಎಂದು ಹೇಳಿದ್ದಾರೆ. ಈ ಇಬ್ಬರು ಮಾದಕ ವಸ್ತುಗಳ ಆರೋಪ ಎದುರಿಸುತ್ತಿರುವ ಕಾರಣ ಇಬ್ಬರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ನಾಳೆ (ಸೆ.9) ಕಳುಹಿಸಲಿದ್ದಾರೆ.

ನಟಿ ಸಂಜನಾ ಬಳಿ ಎರಡು ಮೊಬೈಲ್​, ಲ್ಯಾಪ್​ಟಾಪ್, ಟ್ಯಾಬ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಡಿವಾಳದ ಎಫ್​ಎಸ್​​ಎಲ್​ಗೆ ಕಳುಹಿಸಲಾಗಿದೆ. ನಾಳೆ ಮಡಿವಾಳದ ಎಫ್​ಎಸ್​ಎಲ್​ ಕಚೇರಿಯಲ್ಲಿ ವಿಚಾರಣೆ ನಡೆಸಲು ತೀರ್ಮಾನಿಸಿದ್ದಾರೆ. ಬೆಳಗ್ಗೆ 11ಗಂಟೆಗೆ ಮಡಿವಾಳದ ಎಫ್​ಎಸ್​ಎಲ್​ ಕಚೇರಿಯಲ್ಲಿ ವಿಚಾರಣೆ ನಡೆಯಲಿದ್ದು, ಇಬ್ಬರನ್ನು ಪ್ರತ್ಯೇಕವಾಗಿ ಪ್ರಶ್ನೆ ಕೇಳಲಾಗುತ್ತದೆ.

ರಾತ್ರಿ ಇಬ್ಬರೂ ಸಾಂತ್ವನ ಕೇಂದ್ರದಲ್ಲಿಯೇ ಇರಲಿದ್ದಾರೆ. ರಾಗಿಣಿಗಿಂತ ಸಂಜನಾ ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಸಿಸಿಬಿ ಉನ್ನತ ಮೂಲಗಳು ಮಾಹಿತಿ ನೀಡಿವೆ. ರಾಗಿಣಿ ಹಾಗೂ ಸಂಜನಾ ಈಗಾಗಲೇ ಬಂಧಿತರಾದ ಡ್ರಗ್ ಪೆಡ್ಲರ್ ಜೊತೆ ಹೆಚ್ಚಿನ ನಂಟು ಹೊಂದಿದ್ದು, ಮುಂದಿನ ವಿಚಾರಣೆ ನಾಳೆಯಿಂದ ಚುರುಕುಗೊಳ್ಳಲಿದೆ ಎನ್ನಲಾಗಿದೆ.

Last Updated : Sep 8, 2020, 8:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.