ಬೆಂಗಳೂರು: ನಗರದ ಲಾಲ್ಬಾಗ್ ಹಾಪ್ ಕಾಮ್ಸ್ ವತಿಯಿಂದ ಪ್ರತಿ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ ಆಯೋಜಿಸಲಾಗುತ್ತೆ. ಈ ಬಾರಿಯೂ ಹಣ್ಣುಗಳ ಮೇಳ ಆಯೋಜಿಸಲಾಗಿದ್ದು, ತೋಟಗಾರಿಕಾ ಇಲಾಖೆ ಸಚಿವ ಆರ್.ಶಂಕರ್ ಉದ್ಘಾಟಿಸಿದರು.
ರೈತರಿಗೆ ನೆರವಾಗುವ ಸಲುವಾಗಿ ಪ್ರತಿ ಬಾರಿ ಹಣ್ಣುಗಳ ಮೇಳ ಆಯೋಜಿಸಲಾಗುತ್ತೆ. ಮೇಳದಲ್ಲಿ ಹತ್ತಕ್ಕೂ ಹೆಚ್ಚು ಬಗೆಯ ದ್ರಾಕ್ಷಿ ಹಾಗೂ ಐದಕ್ಕೂ ಹೆಚ್ಚು ಬಗೆಯ ಕಲ್ಲಂಗಡಿ ಹಣ್ಣುಗಳ ಪ್ರದರ್ಶನದ ಜೊತೆಗೆ ಮಾರಾಟ ಮಾಡಲಾಗುತ್ತದೆ.
ಓದಿ : ಎಲ್ಲ ಜಿಲ್ಲೆಗಳಲ್ಲಿ ಸಕಾಲ ಸಪ್ತಾಹ ಕಡ್ಡಾಯ: ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಸುರೇಶ್ ಕುಮಾರ್
ಕೋವಿಡ್ ಹಿನ್ನೆಲೆ ಈ ಬಾರಿ ರೈತರಿಗೆ ಹಾಗೂ ಗ್ರಾಹಕರಿಗೆ ಪ್ರತಿ ಹಣ್ಣಿನ ಮೇಲೆ ಶೇ. 10ರಷ್ಟು ರಿಯಾಯಿತಿ ಕೂಡ ನೀಡಲಾಗಿದೆ. ಇನ್ನು ಹಣ್ಣುಗಳ ಕ್ರೇಟ್‌ಗಳ ಬೆಲೆ ಕೂಡ ಹೆಚ್ಚಾಗಿದ್ದು, ರೈತರಿಗೆ ಮಾತ್ರ ಕಡಿಮೆ ದರದಲ್ಲಿ ಕ್ರೇಟ್‌ಗಳನ್ನು ಮಾರಾಟ ಮಾಡಲಾಗ್ತಿದೆ. ಮೇಳ ಉದ್ಘಾಟಿಸಿದ ಸಚಿವ ಶಂಕರ್, ಸಾಂಕೇತಿಕವಾಗಿ ರೈತರಿಗೆ ಕ್ರೇಟ್ ನೀಡಿದರು.