ಬೆಂಗಳೂರು: ನಗರದ ಗ್ರೀನ್ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಫ್ರೀಡಂ ಫ್ರಮ್ ಕೆಮಿಕಲ್ಸ್ ಸಾವಯವ ಮೇಳಕ್ಕೆ ನಟಿ ರೂಪಿಕಾ ಚಾಲನೆ ನೀಡಿದರು.
ಆಗಸ್ಟ 15ರಿಂದ ಶುರುವಾಗಿರುವ ಈ ಕಾರ್ಯಕ್ರಮವು ಆ.18ರವರೆಗೆ ನಡೆಯಲಿದ್ದು, ಒಂದು ಕಡೆ ಸಂಗೀತ ಸುಧೆ ಮತ್ತೊಂದೆಡೆ ಸಾವಯವ ಉತ್ಪನ್ನಗಳ ಮಾರಾಟ ಹಾಗೂ ಸಾವಯವ ಆಹಾರವನ್ನು ಸೇವಿಸುವ ಅವಕಾಶ ಕಲ್ಪಿಸಿಕೊಡಲಾಗಿದೆ. ಜನರು ರಾಸಾಯನಿಕಗಳಿಂದ ದೂರ ಸರಿದು ನೈಸರ್ಗಿಕ ವಸ್ತುಗಳನ್ನು ಮತ್ತು ಸಾವಯವ ಆಹಾರ ಪದಾರ್ಥಗಳನ್ನು ದಿನನಿತ್ಯ ಬಳಸುವಂತೆ ಪ್ರೋತ್ಸಾಹಿಸುವುದು ಈ ಮೇಳದ ಉದ್ದೇಶವಾಗಿದೆ.
ಮಹಿಳೆಯರೇ ತಯಾರಿಸುವಂತಹ ರಾಸಾಯನಿಕ ರಹಿತ ನೈಸರ್ಗಿಕ ಉತ್ಪನ್ನಗಳಾದ ಸೌಂದರ್ಯವರ್ಧಕಗಳು, ಕೈಮಗ್ಗ ಮತ್ತು ನೈಸರ್ಗಿಕ ಕೈಮಗ್ಗ ಸೀರೆ ಮತ್ತಿತರ ವಸ್ತುಗಳು ಸಾಬೂನು, ಚಾಕ್ಲೆಟ್, ಮಸಾಲ ಪದಾರ್ಥ, ಕೈಚೀಲಗಳು, ಅಷ್ಟೇ ಅಲ್ಲದೇ ದೇಸಿ ಬೀಜಗಳು ಮತ್ತು ಸ್ಥಳೀಯ ಜಾತಿಯ ಹಲವು ಬಗೆಯ ಸಸ್ಯಗಳು ಇಲ್ಲಿ ಲಭ್ಯವಿದೆ. ಮಧ್ಯವರ್ತಿಗಳಿಲ್ಲದೆ ಉತ್ಪಾದಕರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವಂತೆ ಈ ಮೇಳದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಈ ವೇಳೆ ನಟಿ ರೂಪಿಕಾ ಮಾತಾನಾಡಿ, ಕೆಮಿಕಲ್ ಫ್ರೀ ಆಗುವಂತ ನಾವು ಹೆಜ್ಜೆ ಹಾಕಬೇಕಿದೆ. ನಾವೆಲ್ಲರೂ ಕೆಮಿಕಲ್ ಹಾಗೂ ಪ್ಲಾಸ್ಟಿಕ್ಗೆ ಎಷ್ಟು ಅಂಟಿಕೊಂಡಿದ್ದೇವೆ ಎಂಬುದನ್ನ ನೋಡಬೇಕಿದೆ. ಈ ಮೇಳ ನಿಜಕ್ಕೂ ಎಲ್ಲರಿಗೂ ಪ್ರಯೋಜನವಾಗಲಿದೆ. ಎಲ್ಲರೂ ಬನ್ನಿ ಎಂದು ಸಲಹೆ ನೀಡಿದರು.