ETV Bharat / state

ಇಂದಿನಿಂದ ಎರಡು ವಾರಗಳ ಕಾಲ ಜಂತುಹುಳ ನಿವಾರಣಾ ಮಾತ್ರೆ ವಿತರಣೆ : ಡಾ. ಸುಧಾಕರ್ - ಇಂದಿನಿಂದ ಜಂತುಹುಳ ನಿವಾರಣಾ ಮಾತ್ರೆ ವಿತರಣೆ,

ಇಂದಿನಿಂದ ಎರಡು ವಾರಗಳ ಕಾಲ ಜಂತುಹುಳ ನಿವಾರಣಾ ಮಾತ್ರೆ ವಿತರಣೆ ಮಾಡಲಾಗುವುದೆಂದು ಸಚಿವ ಸುಧಾಕರ್​ ಹೇಳಿದ್ದಾರೆ.

FREE ANIMAL PILL DISTRIBUTION, FREE ANIMAL PILL DISTRIBUTION from today, Minister Sudhakar, Minister Sudhakar news,  ಜಂತುಹುಳ ನಿವಾರಣಾ ಮಾತ್ರೆ ವಿತರಣೆ, ಇಂದಿನಿಂದ ಜಂತುಹುಳ ನಿವಾರಣಾ ಮಾತ್ರೆ ವಿತರಣೆ, ಸಚಿವ ಸುಧಾಕರ್​, ಸಚಿವ ಸುಧಾಕರ್​ ಸುದ್ದಿ,
ಸಚಿವ ಸುಧಾಕರ್
author img

By

Published : Apr 17, 2021, 3:17 AM IST

ಬೆಂಗಳೂರು : ನಗರದ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಪಾಕ್ಷಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಭಾಗಿಯಾಗಿ ಸಾಂಕೇತಿಕವಾಗಿ ಆಲ್ಬೆಂಡೋಜಲ್ ಮಾತ್ರೆ ವಿತರಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು..‌

ಇಂದಿನಿಂದ ಎರಡು ವಾರಗಳ ಕಾಲ ಜಂತುಹುಳ ನಿವಾರಣಾ ಮಾತ್ರೆ ವಿತರಣೆ ಮಾಡಲಾಗುತ್ತೆ. ಈ ಬಗ್ಗೆ ಮಾತನಾಡಿದ‌ ಸಚಿವ ಸುಧಾಕರ್, ಬೇರೆ ರಾಜ್ಯಗಳ ಮಾದರಿಯನ್ನು ಕೂಡಾ ಅಧ್ಯಯನ ಮಾಡ್ತಾ ಇದೀವಿ. ಇಲ್ಲಿ ಗಂಭೀರ ಕಾರ್ಯಕ್ರಮಗಳನ್ನು ತೆಗೆದುಕೊಂಡ್ರೆ ಆಗುವ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ಮಾಡ್ತಾ ಇದೀವಿ. ಸಿಎಂ ಕೂಡಾ ಎಲ್ಲಾ ವಿಚಾರಗಳನ್ನು ಗಮನಿಸುತ್ತಿದ್ದಾರೆ ಎಂದರು.

ನಾನು ಮೊದಲೇ ಹೇಳಿದ್ದೆ, ಎರಡನೇ ಅಲೆ ಬಹಳ ವೇಗವಾಗಿ ಹರಡುತ್ತದೆ ಅಂತ. ತಾಂತ್ರಿಕ ಸಲಹಾ ಸಮಿತಿ ಕೊಟ್ಟ ಸಲಹೆಗಳನ್ನು ಆಧರಿಸಿಯೇ ನಾವು ಕ್ರಮ ತೆಗೆದುಕೊಳ್ತೀವಿ. ತಾಂತ್ರಿಕ ಸಲಹಾ ಸಮಿತಿ ವೈಜ್ಞಾನಿಕ ವಾಗಿ ಅಧ್ಯಯನ ಮಾಡಿ ವರದಿ ಕೊಟ್ಟಿದಾರೆ. ವಿಪಕ್ಷಗಳು ಏನು ಸಲಹೆ ಕೊಡ್ತಾರೋ ನೋಡೋಣ. ಸಮಿತಿ ವರದಿ ಬಗ್ಗೆ ಈಗಲೇ ಏನೂ ಮಾತಾಡೋದು ಬೇಡ. ಇನ್ನೆರಡು ದಿನಗಳಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ತೀವಿ.. ಅಲ್ಲಿವರೆಗೂ ಸಮಿತಿ ವರದಿ ಬಗ್ಗೆ ಮಾತಾಡೋದು ಬೇಡ ಎಂದು ಹೇಳಿದರು.

ಸುಧಾಕರ್​ಗೆ ಬೇರೆ ಯಾರೂ ಸಹಕಾರ ಕೊಡ್ತಿಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ‘ಎಲ್ಲ ಸಚಿವರು ಕೂಡಾ ಸಹಕಾರ ಕೊಡ್ತಾ ಇದಾರೆ. ಇದರಲ್ಲಿ ರಾಜಕೀಯ ಬೆರೆಸುವುದು ಬೇಡ’ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.