ಬೆಂಗಳೂರು: ಫೇಸ್ ಬುಕ್ನ ಮಾರ್ಕೆಟ್ ಪ್ಲೇಸ್ನಲ್ಲಿ ಇಂಡಿಯನ್ ಆರ್ಮಿ ಹೆಸರು ಹೇಳಿಕೊಂಡು ಮೋಸ ಮಾಡಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.
ಸಾಹಿಲ್ ಎಂಬಾತ ಫೇಸ್ ಬುಕ್ನಲ್ಲಿ ರಾಯಲ್ ಎನ್ಫೀಲ್ಡ್ ಮಾರಾಟಕ್ಕಿದೆ ಎಂದು ಜಾಹೀರಾತು ಹಾಕಿದ್ದ. ಅದರಲ್ಲಿ ತಾನು ಜಮ್ಮು ಕಾಶ್ಮೀರ ಪುಲ್ವಾಮಾದಲ್ಲಿ ಕೆಲಸ ಮಾಡುತ್ತಿದ್ದೇನೆ, ಹೀಗಾಗಿ ತನಗೆ ಈ ಬೈಕ್ ಅವಶ್ಯಕತೆ ಇಲ್ಲಾ. ಇದಕ್ಕಾಗಿ ಮಾರಾಟ ಮಾಡ್ತಿದಿನಿ ಎಂದು ಉಲ್ಲೇಖಿಸಿದ್ದ ಎನ್ನಲಾಗ್ತಿದೆ.
ಇದನ್ನ ನೋಡಿದ್ದ ಮಂಜುಗೌಡ ಎಂಬುವರು ಸಾಹಿಲ್ ಜೊತೆ ಮಾತುಕತೆ ನಡೆಸಿ, ಮೊದಲಿಗೆ 5 ಸಾವಿರ ನಂತರ 25 ಸಾವಿರ ಸೇರಿ ಒಟ್ಟು 1 ಲಕ್ಷದವರೆಗೆ ಹಣ ವರ್ಗಾವಣೆ ಮಾಡಿದ್ದರಂತೆ. ಆದರೆ ಸಾಹಿಲ್ ಬೈಕ್ನ್ನು ಕೊಡದೆ ಯಾಮಾರಿಸಿದ್ದಾನೆ.
ಸದ್ಯ ಮಂಜುಗೌಡ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು, ಸಾಹಿಲ್ ಯೋಧ ಎಂದು 300ಕ್ಕೂ ಹೆಚ್ಚು ಮಂದಿಯನ್ನ ಯಾಮಾರಿಸಿರುವುದು ತನಿಖೆಯಲ್ಲಿ ಬಯಲಾಗಿದೆ ಎಂದು ತಿಳಿದುಬಂದಿದೆ.