ಬೆಂಗಳೂರು : ಹೆಚ್ಚು ಬಡ್ಡಿ ಹಣ ನೀಡುವುದಾಗಿ ನಂಬಿಸಿ ಗ್ರಾಹಕರಿಂದ ಹೂಡಿಕೆ ಮಾಡಿ ಮೋಸ ಮಾಡುವ ಕಂಪನಿಗಳು ನಗರದಲ್ಲಿ ಹೆಚ್ಚಾಗಿವೆ. ಐಎಂಎ, ಆ್ಯಂಬಿಡೆಂಟ್ ಕಂಪನಿಗಳ ಮಾದರಿ ಮತ್ತೊಂದು ಕಂಪನಿಯು ಗ್ರಾಹಕರಿಗೆ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಗಿರಿನಗರದ ಪದ್ಮಿನಿ ಬಲರಾಮನ್ ಎಂಬುವರು ನೀಡಿದ ದೂರಿನ ಮೇರೆಗೆ ತಮಿಳುನಾಡು ಮೂಲದ ವಿಶ್ವಪ್ರಿಯ ಫೈನಾನ್ಷಿಯಲ್ ಅಂಡ್ ಸೆಕ್ಯೂರಿಟೀಸ್ ಪ್ರೈ.ಲಿ.ಕಂಪನಿಯ ಮುಖ್ಯಸ್ಥ ಆರ್.ಸುಬ್ರಮಣಿಯನ್,ಆರ್.ನಾರಾಯಣ್,ರಾಜಾ ರತ್ನಮ್ ಸೇರಿದಂತೆ ಏಳು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತಮಿಳುನಾಡು ಮೂಲದ ಕಂಪನಿ 2012ರಲ್ಲಿ ಎಂಜಿರಸ್ತೆಯ ಮಿತ್ತಲ್ ಟವರ್ನಲ್ಲಿ ಶಾಖೆ ತೆರೆದಿತ್ತು. ಹಣ ಠೇವಣಿ ಇಟ್ಟರೆ ಶೇ.10.47ರಷ್ಟು ಬಡ್ಡಿ ಕೊಡುವುದಾಗಿ ಹೂಡಿಕೆದಾರರಿಗೆ ಆಮಿಷ ತೋರಿಸಿತ್ತು.
ಓದಿ:ಇಬ್ಬರು ಮಕ್ಕಳ ಕೊಲೆಗೈದು, ಆತ್ಮಹತ್ಯೆಗೆ ಶರಣಾದ ತಂದೆ
ಮಹಿಳೆಯರನ್ನು ಗುರಿಯಾಗಿಸಿಕೊಂಡು ಏಜೆಂಟ್ಗಳಿಂದ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿಕೊಳ್ಳುತ್ತಿತ್ತು. ಈಗ ಅವಧಿ ಮೀರಿದ್ರೂ ಬಡ್ಡಿ ನೀಡದೆ ಹಾಗೂ ಅಸಲು ನೀಡದೆ ವಂಚಿಸಿದ್ದಾರೆ. ಸುಮಾರು 300 ಕೋಟಿ ರೂಪಾಯಿ ವಂಚಿಸಿರುವ ಸಾಧ್ಯತೆಯಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುವುದಾಗಿ ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.