ETV Bharat / state

ಮನೆ ಕೊಡಿಸುವುದಾಗಿ ಹಣ ಪಡೆದು ಅರ್ಚಕನಿಂದ ಪಂಗ'ನಾಮ' - ದೇವಸ್ಥಾನ ಅರ್ಚಕನಿಂದ ವಂಚನೆ

ಮನೆ ಕೊಡಿಸುವುದಾಗಿ ಹಣ ಪಡೆದು ದೇವಸ್ಥಾನದ ಅರ್ಚಕ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಪೊಲೀಸ್ ಅಧಿಕಾರಿಯ ಸಹೋದರ ಸೋಗಿನಲ್ಲಿ ವಂಚನೆ ಮಾಡಿದ್ದಾನೆ.

Fraud by priest
ಅರ್ಚಕನಿಂದ ದೋಖಾ
author img

By

Published : Jul 26, 2021, 10:14 AM IST

Updated : Jul 26, 2021, 10:55 AM IST

ಬೆಂಗಳೂರು : ಆತ ನಗರದ ಪ್ರಸಿದ್ದ ಆಂಜನೇಯಸ್ವಾಮಿ ದೇವಾಲಯದ ಅರ್ಚಕ. ದೇವರ ದರ್ಶನಕ್ಕೆ ಬರುವ ಜನರೊಂದಿಗೆ ಬಣ್ಣ ಬಣ್ಣದ ಮಾತನಾಡಿ ಮರಳು ಮಾಡುತ್ತಿದ್ದ ಈತ, ನಿಮಗ್ ಸೈಟ್ ಬೇಕಾ, ಮನೆ ಬೇಕಾ ನಾನು ಮಾಡಿಸಿಕೊಡುತ್ತೇನೆ ಎಂದು ಅಮಾಯಕರಿಂದ ಹಣ ಪೀಕುತ್ತಿದ್ದ. ಇದೀಗ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿ ತಲೆಮರೆಸಿಕೊಂಡಿದ್ದಾನೆ.

ವಂಚನೆಗೊಳಗಾದ ಬಾಲಾಜಿಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಅರ್ಚಕ ಮಂಜುನಾಥ್ ಸೇರಿದಂತೆ ನಾಲ್ವರ ವಿರುದ್ಧ ಸುಬ್ರಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಂಜುನಾಥ್ ಅಲಿಯಾಸ್ ಮಹಾಬಲ ಮೂಲತಃ ಚನ್ನಪಟ್ಟಣದವನಾಗಿದ್ದು, ನಗರದ ಉತ್ತರಹಳ್ಳಿ ಆಂಜನೇಯ ದೇವಾಲಯದಲ್ಲಿ ಅರ್ಚಕನಾಗಿದ್ದ. ದೇವರ ಮುಂದೆ ಕೂತು ಕಷ್ಟ ಹೇಳಿಕೊಳ್ಳುವ ಭಕ್ತರನ್ನೇ ಟಾರ್ಗೆಟ್ ಮಾಡುತ್ತಿದ್ದ ಮಂಜುನಾಥ್, ಪೊಲೀಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ನಮ್ಮ ಅಣ್ಣ. ನಿಮ್ಮಗೆಲ್ಲ ಆಶ್ರಯ ಯೋಜನೆಯಲ್ಲಿ ಮನೆ ಕೊಡ್ತಿಸ್ತೀನಿ ಅಂತ ಜನರಿಂದ ಹಣ ಪಡೆದು ವಂಚಿಸಿದ್ದಾನೆ.

ಉತ್ತರಹಳ್ಳಿ ಸುಬ್ರಹ್ಮಣ್ಯಪುರ ಸುತ್ತಮುತ್ತಲಿನ ಐವತ್ತಕ್ಕೂ ಹೆಚ್ಚು ಜನರಿಂದ ಈತ ತಲಾ ಐವತ್ತರಿಂದ ಒಂದೂವರೆ ಲಕ್ಷದವರೆಗೂ ಹಣ ಪಡೆದಿದ್ದಾನೆ ಎನ್ನಲಾಗಿದೆ.

ಸಭೆ ಸಮಾರಂಭಗಳಲ್ಲಿ ರಾಜಕಾರಣಿಗಳು, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಅರ್ಚಕ ಮಂಜುನಾಥ್ ಫೋಟೋ ಕ್ಲಿಕ್ಕಿಸಿಕೊಳ್ತಿದ್ದ. ಪ್ರಭಾವಿಗಳ ಜೊತೆಯಲ್ಲಿರುವ ಫೋಟೊ ತೋರಿಸಿ ಆಶ್ರಯ ಯೋಜನೆಯಲ್ಲಿ ಮನೆ ಕೊಡಿಸುತ್ತೇನೆ ಎಂದು ಜನರನ್ನು ಮರಳು ಮಾಡುತ್ತಿದ್ದ.

ಬಹುತೇಕ ಜನರಿಗೆ ಈತ ರವಿ ಡಿ. ಚನ್ನಣ್ಣನವರ್ ನನ್ನ ಸ್ವಂತ ಸಹೋದರ ಅಂತ ಹೇಳಿ ನಂಬಿಸಿದ್ದ. ಜನರ ಮುಂದೆ ಸುಮ್ಮನೇ ಐಪಿಎಸ್ ಅಧಿಕಾರಿಗಳಿಗೆ ಹಾಗೂ ಮಂತ್ರಿಗಳಿಗೆ ಫೋನ್ ಮಾಡಿ ಮಾತನಾಡುವ ತರಹ ನಟಿಸಿ ನಂಬಿಕೆ ಹುಟ್ಟಿಸುತ್ತಿದ್ದ.

ಓದಿ : ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಮಿನಲ್ಸ್ ಮನೆಗಳ ಮೇಲೆ ದಾಳಿ: 74 ಆರೋಪಿಗಳು ವಶಕ್ಕೆ

ಈ ಬಗ್ಗೆ ಸಿಐಡಿ ಎಸ್ಪಿ ರವಿ ಡಿ. ಚನ್ನಣ್ಣನವರ ಅವರನ್ನು ಕೇಳಿದರೆ, ಅಯ್ಯೊ ದೇವರೇ, ಈ ಬಗ್ಗೆ ನನಗೆ ಗೊತ್ತೇ ಇಲ್ಲ. ನನ್ನ ಜೊತೆಗಿನ ಫೋಟೋ ನಾನು ಈ ಹಿಂದೆ ಮೈಸೂರು ಎಸ್ಪಿ ಆಗಿದ್ದಾಗ ನನ್ನ ಕಚೇರಿಯಲ್ಲಿ ತೆಗೆಸಿಕೊಂಡಿರುವಂತಹದ್ದು. ಕೂಡಲೇ ಆರೋಪಿಯನ್ನು ಬಂಧಿಸುವಂತೆ ಇನ್ಸ್​ಪೆಕ್ಟರ್​ಗೆ ತಿಳಿಸುತ್ತೇನೆ ಎಂದಿದ್ದಾರೆ.

ಸದ್ಯ ಆರೋಪಿ ಅರ್ಚಕನಿಂದ ಮೋಸ ಹೋಗಿರುವ ಉತ್ತರಹಳ್ಳಿ ಸುಬ್ರಹ್ಮಣ್ಯಪುರ ಏರಿಯಾದ ಜನ ಪೊಲೀಸ್ ಠಾಣೆಯಲ್ಲಿ ಒಬ್ಬೊಬ್ಬರಾಗಿ ಬಂದು ದೂರು ನೀಡುತ್ತಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 420 ಅಡಿ ದೂರು ದಾಖಲಾಗುತ್ತಿದ್ದಂತೆ, ಉತ್ತರಹಳ್ಳಿಯ ಬಾಡಿಗೆ ಮನೆಯನ್ನು ಖಾಲಿ ಮಾಡಿಕೊಂಡು ಅರ್ಚಕ ಬೆಂಗಳೂರಿನಿಂದ ಕಾಲ್ಕಿತ್ತಿದ್ದಾನೆ.

Last Updated : Jul 26, 2021, 10:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.