ETV Bharat / state

ಆರೋಪಿ ಬಳಿ ಹಣಕ್ಕೆ ಬೇಡಿಕೆ ಪ್ರಕರಣ: ಬೆಂಗಳೂರಿನ ನಾಲ್ವರು ಪೊಲೀಸರ ಅಮಾನತು

ಆರೋಪಿಯಿಂದ ಹಣ ಪಡೆದ ಆರೋಪದ ಮೇಲೆ ಬೆಂಗಳೂರಿನ ವೈಟ್ ಫೀಲ್ಡ್ ಸಿಇಎನ್ ಪೊಲೀಸ್​ ಠಾಣೆಯ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

four-police-personnel-of-bengaluru-whitefield-cen-station-suspended
ಆರೋಪಿ ಬಳಿ ಹಣಕ್ಕೆ ಬೇಡಿಕೆ ಪ್ರಕರಣ: ಬೆಂಗಳೂರಿನ ನಾಲ್ವರು ಪೊಲೀಸರು ಅಮಾನತು
author img

By

Published : Aug 4, 2023, 12:03 PM IST

ಬೆಂಗಳೂರು : ಸೈಬರ್ ಅಪರಾಧ ಪ್ರಕರಣವೊಂದರ ಶಂಕಿತ ಆರೋಪಿಗಳಿಂದ 3.90 ಲಕ್ಷ ರೂ. ಹಣ ಲಂಚ ಪಡೆದ ಆರೋಪದ ಮೇಲೆ ಕೇರಳ ಪೊಲೀಸರಿಂದ ವಿಚಾರಣೆಗೊಳಗಾಗಿದ್ದ ನಗರದ ವೈಟ್ ಫೀಲ್ಡ್ ಸಿಇಎನ್ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇನ್ಸ್​ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್‌ಟೆಬಲ್​ಗಳಾದ ಶಿವಣ್ಣ, ವಿಜಯ್ ಕುಮಾರ್ ಹಾಗೂ ಕಾನ್ಸ್‌ಟೇಬಲ್ ಸಂದೇಶ್ ಅವರನ್ನು ಅಮಾನತು ಮಾಡಲಾಗಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್. ಗಿರೀಶ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಉದ್ಯೋಗದ ಹೆಸರಿನಲ್ಲಿ 26 ಲಕ್ಷ ರೂಪಾಯಿ ವಂಚಿಸಲಾಗಿದೆ ಎಂದು ಶ್ರೀಕಾಂತ್ ಎಂಬುವರು ಜೂನ್ 16ರಂದು ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಡಿಕೇರಿ ಮೂಲದ ಐಸಾಕ್ ಎಂಬಾತನ ಖಾತೆಗೆ ತನಿಖೆಯ ವೇಳೆ 10,000 ರೂ. ವರ್ಗಾವಣೆ ಆಗಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಐಸಾಕ್​ ವಿಚಾರಣೆ ವೇಳೆ ಬ್ಯಾಂಕ್ ಖಾತೆಯನ್ನು ರಾಜೇಶ್ ಎಂಬಾತನ ಪರವಾಗಿ ತೆರೆಯಲಾಗಿದೆ ಎಂಬುದನ್ನು ಅರಿತ ಪೊಲೀಸರು ಆತನ ವಿಚಾರಣೆ ನಡೆಸಿದ್ದರು.

ಕೇರಳ ಮೂಲದ ಪರೇಶ್ ಹಾಗೂ ನಿಶಾಂತ್ ಎಂಬಾತನ ಸೂಚನೆಯಂತೆ ಖಾತೆ ತೆರೆಯಲಾಗಿದೆ ಎಂದು ರಾಜೇಶ್ ತಿಳಿಸಿದ್ದ. ಅದರಂತೆ ಪರೇಶ್ ಹಾಗೂ ನಿಶಾಂತ್​​ನನ್ನ ವಿಚಾರಿಸಿದಾಗ, ವಂಚನೆಯ ಸೂತ್ರಧಾರ ಮಣಪ್ಪುರಂ ಮೂಲದ ನೌಶಾದ್ ಎಂಬುದು ತಿಳಿದು ಬಂದಿತ್ತು. ಜುಲೈ 31ರಂದು ವೈಟ್ ಫೀಲ್ಡ್ ಸಿಇಎನ್ ಠಾಣೆ ಇನ್ಸ್‌ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್‌ಟೇಬಲ್​ಗಳಾದ ವಿಜಯ್ ಕುಮಾರ್, ಶಿವಾನಿ, ಕಾನ್ಸ್‌ಟೇಬಲ್ ಸಂದೇಶ್ ನೇತೃತ್ವದ ತಂಡ ಕೇರಳಕ್ಕೆ ತೆರಳಿತ್ತು.

ಅದೇ ದಿನ ವೆಂಗಾರದಲ್ಲಿ ನೌಶಾದ್​​ನನ್ನು ವಶಕ್ಕೆ ಪಡೆದಿದ್ದ ತಂಡ, ಬಳಿಕ ನಿಖಿಲ್ ಹಾಗೂ ಅಖಿಲ್ ಎಂಬ ಇನ್ನಿಬ್ಬರು ಶಂಕಿತರನ್ನು ಎರ್ನಾಕುಲಂನ ಪಲ್ಲುರ್ತಿಯಲ್ಲಿ ವಶಕ್ಕೆ ಪಡೆದು ಸ್ಥಳೀಯ ಪೊಲೀಸ್​​ ಠಾಣೆಗೆ ಮಾಹಿತಿ ನೀಡಿತ್ತು. ಆಗಸ್ಟ್ 2ರಂದು ವೈಟ್ ಫೀಲ್ಡ್​ ಸಿಇಎನ್ ಪೊಲೀಸರ ತಂಡಕ್ಕೆ ಕರೆ ಮಾಡಿದ್ದ ಕೊಚ್ಚಿಯ ಕಲಂಸ್ಸೇರಿ ಠಾಣೆ ಪೊಲೀಸರು, ಆರೋಪಿ ಅಖಿಲ್ ಪರ ವಕೀಲರು ನೀಡಿದ ದೂರಿನಂತೆ ಆತನಿಂದ 3 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದರು.

ಕಲಂಸ್ಸೇರಿ ಠಾಣೆ ಪೊಲೀಸರು ಸುಮಾರು 10 ಗಂಟೆಗಳ ವಿಚಾರಣೆ ಬಳಿಕ ಕರ್ನಾಟಕದ ನಾಲ್ವರು ಪೊಲೀಸ್​ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ್ದಾರೆ. ಆಗಸ್ಟ್ 16ರಂದು ಪುನಃ ವಿಚಾರಣೆಗೆ ಹಾಜರಾಗುವಂತೆ ನಾಲ್ವರಿಗೂ‌ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬಂಧನಕ್ಕೆ ಹೋದ ವೇಳೆ ಲಂಚಕ್ಕೆ ಬೇಡಿಕೆ ಆರೋಪ.. ಕರ್ನಾಟಕದ ನಾಲ್ವರು ಪೊಲೀಸರ ವಿಚಾರಣೆ, ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.