ETV Bharat / state

ಲೀ. ಪೆಟ್ರೋಲ್‌ನ ₹18ಗೆ ಕೊಡಬಹುದು, ಮೋದಿ ಬೆಲೆ ಏರಿಕೆ ನಿಯಂತ್ರಿಸುತ್ತಿಲ್ಲ- ಉಗ್ರಪ್ಪ ವಾಗ್ದಾಳಿ

ಶೇ.69 ರಷ್ಟು ತೆರಿಗೆಯನ್ನು ಪೆಟ್ರೋಲ್-ಡೀಸೆಲ್ ಮೇಲೆ ವಿಧಿಸುವ ಮೂಲಕ ವಿಶ್ವದಲ್ಲಿಯೇ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸಿರುವ ರಾಷ್ಟ್ರವಾಗಿಸಿದ್ದಾರೆ. ಈಗಿನ ಕಚ್ಚಾತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಇದೆ. ಈಗಿನ ದರಕ್ಕೆ ಹೋಲಿಸಿದರೆ ಪ್ರತಿ ಲೀಟರ್ ಪೆಟ್ರೋಲ್ ಅನ್ನು 18 ರೂಪಾಯಿಗೆ ನೀಡಬಹುದು. ಇವರಿಗೆ ದೇಶದ ಜನತೆ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕಿಡಿಕಾರಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ
ಮಾಜಿ ಸಂಸದ ವಿ.ಎಸ್.ಉಗ್ರಪ್ಪ
author img

By

Published : Jun 9, 2020, 9:16 PM IST

ಬೆಂಗಳೂರು: ಅಧಿಕಾರಕ್ಕೆ ಬಂದ ಆರಂಭದಲ್ಲಿ 100 ದಿನದಲ್ಲಿ ಇಂಧನ ಹಾಗೂ ದಿನ ನಿತ್ಯದ ಬಳಕೆ ವಸ್ತುಗಳು ಬೆಲೆ ಇಳಿಕೆ ಮಾಡುವ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ವಿಫಲರಾಗಿದ್ದಾರೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆರೋಪಿಸಿದರು.

ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಅಂದು ಆಡಿದ ಮಾತನ್ನು ಇಂದು ಉಳಿಸಿಕೊಳ್ಳುವಲ್ಲಿ ಮೋದಿ ವಿಫಲರಾಗಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲಗಳ ಬೆಲೆ ಕಡಿಮೆ ಆಗಿದ್ದರೂ ಭಾರತದಲ್ಲಿ ಮಾತ್ರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ. ಶೇ.69ರಷ್ಟು ತೆರಿಗೆಯನ್ನು ಪೆಟ್ರೋಲ್-ಡೀಸೆಲ್ ಮೇಲೆ ವಿಧಿಸುವ ಮೂಲಕ ವಿಶ್ವದಲ್ಲಿಯೇ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸಿರುವ ರಾಷ್ಟ್ರವಾಗಿಸಿದ್ದಾರೆ. ಈಗಿನ ಕಚ್ಚಾತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಇದೆ. ಈಗಿನ ದರಕ್ಕೆ ಹೋಲಿಸಿದ್ರೆ ಪ್ರತಿ ಲೀಟರ್ ಪೆಟ್ರೋಲ್‌ನ 18 ರೂಪಾಯಿಗೆ ನೀಡಬಹುದು. ಇವರಿಗೆ ದೇಶದ ಜನತೆ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.

ಮೋದಿ ಸರ್ಕಾರದ ವಿರುದ್ಧ ಗುಡುಗಿದ ಮಾಜಿ ಸಂಸದ ವಿ ಎಸ್ ಉಗ್ರಪ್ಪ..

ಕೊರೊನಾ ಸಂದರ್ಭದಲ್ಲಿಯೂ ಕಳೆದ ಎರಡು ದಿನಗಳಿಂದ ನಿರಂತರವಾಗಿ ಇಂಧನ ಬೆಲೆ ಹೆಚ್ಚಾಗುತ್ತಿದೆ. ತೆರಿಗೆ ಮೇಲೆ ತೆರಿಗೆ ಭಾರ ಹೊರಿಸಲಾಗುತ್ತಿದೆ. ಆದರೆ, ಸ್ವರ್ಗವನ್ನೇ ಕೆಳಗಿಳಿಸಿದ ರೀತಿ ಮೋದಿ ಮಾತನಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾದ್ರೆ ಇತರೆ ವಸ್ತುಗಳ ಬೆಲೆಯೂ ಕಡಿಮೆ ಆಗಲಿದೆ. ನರೇಂದ್ರ ಮೋದಿಗೆ ಬದ್ಧತೆ ಇದ್ದರೆ ಬೆಲೆ ಕಡಿಮೆ ಮಾಡಲಿ ಎಂದು ಸವಾಲು ಹಾಕಿದರು.

ಡಿಕೆಶಿ ಪದಗ್ರಹಣ ವಿಚಾರ : ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಮಾರ್ಚ್ 11ರಂದು ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಅಧಿಕಾರ ಹಸ್ತಾಂತರ ಕಾರ್ಯಕ್ರಮ ಈವರೆಗೂ ಆಗಿರಲಿಲ್ಲ. ಎರಡು ಸಾರಿ ಮುಂದೂಡಲಾದ ನಂತರ ಇದೀಗ ಜೂನ್ 14ನೇ ತಾರೀಕಿಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕೊರೊನಾ ಹಿನ್ನೆಲೆ ಕೇಂದ್ರದ ಮಾರ್ಗಸೂಚಿ ಇರುವ ಕಾರಣ ಸಮಾರಂಭ ನಡೆಸಿರಲಿಲ್ಲ. ಇದೀಗ ರಾಜ್ಯದ 6200 ಗ್ರಾಮ ಪಂಚಾಯತ್‌, ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ವ್ಯಾಪ್ತಿಯ 8000 ಸ್ಥಳಗಳಲ್ಲಿ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ.

ತಂತ್ರಜ್ಞಾನವನ್ನು ಬಳಸಿ ವಿಡಿಯೋ ಮೂಲಕ ಕಾರ್ಯಕ್ರಮ ಮಾಡಲು ನಿರ್ಧಾರ ಮಾಡಿದ್ದೇವೆ. ಈ ಹಿಂದೆ ಎರಡು ಸಾರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಬರೆದಿದ್ದೆವು. ಮಾರ್ಗಸೂಚಿ ಪ್ರಕಾರವೇ ಕಾರ್ಯಕ್ರಮ ನಡೆಸುತ್ತೇವೆ ಎಂದು ಕೇಳಿದ್ದೆವು. ಆದರೆ, ಅವರಿಂದ ಇದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಈಗಲೂ ಮನವಿ ಮಾಡಿದ್ದು, ಇದಕ್ಕೆ ಸಮ್ಮತಿ ಸಿಕ್ಕಿಲ್ಲ. ಆದರೆ, ಈ ಮಧ್ಯೆ ಚಿಕ್ಕಬಳ್ಳಾಪುರದಲ್ಲಿ ಸಚಿವರಾದ ಡಾ. ಕೆ ಸುಧಾಕರ್ ಹಾಗೂ ಎಸ್ ಟಿ ಸೋಮಶೇಖರ್ ಮಾತನಾಡಿದ್ದು, ಕೊರೊನಾ ಮುಗಿದ ನಂತರ ಕಾರ್ಯಕ್ರಮ ಮಾಡಿದ್ರೆ ಆಗಲ್ವಾ ಎಂದು ಕೇಳಿದ್ದಾರೆ. ಸಮಾರಂಭ ನಡೆಸಲು ನಮಗೆ ಒಪ್ಪಿಗೆ ಕೊಡುವುದು ಮುಖ್ಯಮಂತ್ರಿಗಳಾ ಅಥವಾ ಸಚಿವರುಗಳಾ ಅನ್ನೋ ಅನುಮಾನ ಬರುತ್ತಿದೆ.

ಈಗಾಗಲೇ ಈ ಸಮಾರಂಭ ನಡೆಯುವುದಕ್ಕೆ ಅನುಮತಿ ನಿರಾಕರಿಸುವಂತೆ ಬಿಜೆಪಿಯಲ್ಲಿ ಕೆಲ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ನಮಗೆ ಲಭಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನೀವೇನೇ ಪ್ರಯತ್ನ ಮಾಡಿದ್ರೂ ಈ ರಾಜ್ಯದ ಜನ ಬುದ್ಧವಂತರಿದ್ದಾರೆ. ಬಿಹಾರ, ಪಶ್ಚಿಮ ಬಂಗಾಳದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ನೀಡಲಾಗಿದೆ. ಆದರೆ, ರಾಜ್ಯದಲ್ಲಿ ಯಾಕೆ ಅನುಮತಿ ನಿರಾಕರಿಸಲಾಗುತ್ತಿದೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಎದ್ದು ಕಾಣುತ್ತಿದೆ. ರಾಜಕೀಯ ನಿಂತ ನೀರಲ್ಲ, ಅಧಿಕಾರ ಇವತ್ತು ಇರುತ್ತೆ ನಾಳೆ ಹೋಗುತ್ತೆ. ಕೂಡಲೇ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಎಂದರು.

ಮಾರ್ಚ್ 8ರಂದು ರಾಜ್ಯದಲ್ಲಿ ಕೇವಲ ಒಂದು ಪ್ರಕರಣ ಇತ್ತು. ಈಗ ಅದು 5000 ಗಡಿ ದಾಟಿದೆ. ಇಂದು ದೇಶದಲ್ಲಿ ಪ್ರಕರಣಗಳು 2.68 ಲಕ್ಷದ ಗಡಿ ದಾಟಿದೆ. ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಲು ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಯಡಿಯೂರಪ್ಪನವರ ನಿರ್ಲಕ್ಷವೇ ಕಾರಣ. ಹೀಗಾಗಿ ಎಲ್ಲರೂ ಕೊರೊನಾ ಜೊತೆ ಬದುಕುವ ಕಾಲ ಬಂದಿದೆ ಎಂದು ಕಿಡಿ ಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.