ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ. ಸಿದ್ದರಾಮಯ್ಯ ಬಳಿ ಅಂದು ಪುಲಿಕೇಶಿ ನಗರದಿಂದ ಜನ ಬಂದಿರುವ ಬಗ್ಗೆ ಮಾತಾಡಿದ್ದಷ್ಟೇ. ಅದರ ಹೊರತಾಗಿ ನಾನು ಬೇರೇನೂ ಮಾತನಾಡಿಲ್ಲ.ನೋಟಿಸ್‌ಗೆ ಎರಡು ಮೂರು ದಿನದಲ್ಲಿ ಉತ್ತರಿಸುತ್ತೇನೆ ಎಂದು ಮಾಜಿ ಶಾಸಕ ಅಶೋಕ್ ಪಟ್ಟಣ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನನಗೆ ನೋಟಿಸ್ ನೀಡಿರುವ ವಿಚಾರ ಮಾಧ್ಯಮಗಳಿಂದ ಗೊತ್ತಾಗಿದೆ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಯುವ ಕಾಂಗ್ರೆಸ್ ಕಾಲದಿಂದಲೂ ಡಿ.ಕೆ ಶಿವಕುಮಾರ್ ನಾನು ಸ್ನೇಹಿತರು. ನನಗೆ ನೋಟಿಸ್ ಇನ್ನೂ ಬಂದಿಲ್ಲ. ನಾನೇನು ಅಂತಾ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಅಖಂಡ ಶ್ರೀನಿವಾಸ್ ಮೂರ್ತಿ ಹಾಗೂ ಅವರ ಹಿಂಬಾಲಕರು ಬಂದಿದ್ದರು. ಅವರು ಮಾತಾಡಿದ್ದನ್ನು ನಾನು ಹೇಳಿದೆ ಅಷ್ಟೇ. ಅದಕ್ಕೂ ನನಗೂ ಸಂಬಂಧ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಧಕ್ಕೆ ಮಾಡುವ ಕೆಲಸ ಮಾಡಿಲ್ಲ. ನಾನು ಈ ಪಾರ್ಟಿಯಲ್ಲಿ 40 ವರ್ಷದಿಂದ ಇದ್ದೇನೆ. ನೋಟಿಸ್ ಕೊಡುವ ಮುನ್ನ ನನ್ನುನ್ನು ಕೇಳಿ ಕೊಡಬಹುದಿತ್ತು. ನೋಟಿಸ್ ನನ್ನ ಕೈಗೆ ಬಂದ ತಕ್ಷಣ ಉತ್ತರ ಕೊಡುತ್ತೇನೆ ಎಂದರು.
ಮಾಧ್ಯಮಗಳೇ ಭೇದ ಭಾವ ಮಾಡ್ತಾ ಇದ್ದಾರೆ. ಅವರಿಗೊಂದು ನನಗೊಂದು ಅಂತಾ ಏನಿಲ್ಲ. ನನಗಷ್ಟೇ ನೋಟಿಸ್ ಕೊಟ್ಟಿದಾರೆ ಅನ್ನೋದು ಏನಿಲ್ಲ. ಎಲ್ಲರೂ ನಮಗೆ ಒಂದೇ. ಅದರಲ್ಲಿ ಭೇದ ಭಾವ ಏನಿದೆ?. ತಪ್ಪು ಗ್ರಹಿಕೆಯಿಂದ ನೋಟಿಸ್ ಕೊಟ್ಟಿರಬಹುದು. ಇಲ್ಲವೇ ಯಾವುದೋ ಒತ್ತಡದಿಂದ ನೋಟಿಸ್ ನೀಡಿದ್ದಾರೆ ಎನಿಸುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಒಂದು ಕುಟುಂಬ ಇದ್ದ ಹಾಗೆ. ಸಿದ್ದರಾಮಯ್ಯ, ಡಿಕೆಶಿ ನಾವೆಲ್ಲರೂ ಒಂದೇ ಕುಟುಂಬ. ನಮ್ಮಲ್ಲಿ ಸಣ್ಣಪುಟ್ಟ ಮನಸ್ತಾಪ ಇದೆ. ಅದನ್ನು ನಾವೇ ಸರಿಪಡಿಸಿಕೊಳ್ಳುತ್ತೇವೆ ಎಂದು ಅಶೋಕ್ ಪಟ್ಟಣ್ ತಿಳಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ-ಪಟ್ಟಣ್ ನಡುವಿನ ಪಿಸು ಮಾತಿನಿಂದ ಕಾಂಗ್ರೆಸ್ ಒಳ ಜಗಳ ಬೀದಿಗೆ : ಸಚಿವ ಆರ್.ಅಶೋಕ್