ಬೆಂಗಳೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳನ್ನು 24 ಗಂಟೆಯಾದರೂ ಹಿಡಿದಿಲ್ಲ. ನಾಲ್ಕೈದು ಗಂಟೆಯಲ್ಲಿ ಹಿಡಿದು ಸದೆ ಬಡಿಬೇಕಿತ್ತು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ಹೊರ ಹಾಕಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣ ನಡೆದು 24 ಗಂಟೆ ಕಳೆದ್ರೂ ಆರೋಪಿಗಳ ವಿರುದ್ಧ ಕ್ರಮವಿಲ್ಲ ಕೈಗೊಂಡಿಲ್ಲ. ಅಪರಾಧಿಗಳು ಯಾರು ಅಂತ ಗೊತ್ತಿಲ್ಲ ಅಂದ್ರೆ ಅದು ಬೇರೆ, ಯಾರು ಅಂತ ಗೊತ್ತಿದ್ದರೂ ಕ್ರಮ ಆಗಿಲ್ಲ ಅಂದ್ರೆ ತಪ್ಪು ಸಂದೇಶ ಹೋಗುತ್ತದೆ ಎಂದರು.
ಗೃಹ ಸಚಿವರು ಹೊಸಬರಿರಬಹುದು. ಆದರೆ, ಪೊಲೀಸ್ ಅಧಿಕಾರಿಗಳಿಗೆ ಹೆಚ್ಚಿನ ಅನುಭವ ಇದೆ. ಇಂತಹವರನ್ನು ಸೆದೆ ಬಡೆಯಬೇಕು. ಸಣ್ಣ ಪುಟ್ಟ ಆರೋಪಿಗಳ ಕಾಲಿಗೆ ಗುಂಡು ಹೊಡೆಯುತ್ತಾರೆ. ಗ್ಯಾಂಗ್ರೇಪ್ ಮಾಡಿದವರಿಗೆ ಪೊಲೀಸ್ ಅವರು ಮನಸು ಮಾಡಿದರೆ ನಾಲ್ಕೈದು ಗಂಟೆಯಲ್ಲಿ ಹಿಡಿಯಬಹುದು. ಆದಷ್ಟು ಬೇಗ ಪೊಲೀಸರು ಆರೋಪಿಗಳನ್ನು ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಓದಿ: Mysore Gangrape ಪ್ರಕರಣ: ಪೊಲೀಸರಿಗೆ 34 ಸಾಕ್ಷ್ಯಗಳು ದೊರೆತಿವೆ ಎಂದ ಮಹಿಳಾ ಆಯೋಗದ ಅಧ್ಯಕ್ಷೆ
ಓದಿ : Mysuru Gangrape case: ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಡಿಜಿಪಿಗೆ ಪತ್ರ ಬರೆದ ರಾ.ಮಹಿಳಾ ಆಯೋಗ